ಪಟ್ಟಣದ ವಿವಿಧೆಡೆ ಹಂದಿಗಳನ್ನು ಹಿಡಿದು ಸ್ಥಳಾಂತರ
1 min read- ಪಟ್ಟಣದ ವಿವಿಧೆಡೆ ಹಂದಿಗಳನ್ನು ಹಿಡಿದು ಸ್ಥಳಾಂತರ
ಹರಪನಹಳ್ಳಿ: ಡಿ- 14 ,ಪಟ್ಟಣದ ವಿವಿಧೆಡೆ ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಲಾಯಿತು.
ಪಟ್ಟಣದ ಕುರುಬರಗೇರಿ,ಅಗಸನಕಟ್ಟೆ, ಸುಣಗಾರಗೇರಿ, ಕಾಶೀಮಠ, ಬಡಾವಣೆ ಗಳಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ ಎಂದು ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಅಲ್ಲದೆ ದಿನಪತ್ರಿಕೆ ಗಳಲ್ಲಿ ಹಂದಿಗಳ ಹಾವಳಿ ಬಗ್ಗೆ ವರದಿಯಾಗಿತ್ತು ಆದುದರಿಂದ ಪುರಸಭೆ ಅಧಿಕಾರಿಗಳು ಹಂದಿಯ ಮಾಲೀಕರಿಗೆ ಹಂದಿಗಳನ್ನು ಸ್ಥಳಾಂತರ ಮಾಡಲು ಲಿಖಿತವಾಗಿ ಸೂಚನಾಪತ್ರವನ್ನು ನೀಡಿ ಸೂಚಿಸಿದ್ದರು ಆ ಕಾರಣಕ್ಕಾಗಿ ಬುಧುವಾರ ಹಂದಿಯ ಮಾಲಿಕರು ಪಟ್ಟಣದ ವಿವಿಧೆಡೆ ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಿದ್ದಾರೆ .
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷ ಹಾರಾಳ್ ಹೆಚ್ ಎಂ ಅಶೋಕ್ ಕಳೆದ ಹದಿನೈದು ದಿನಗಳಲ್ಲಿ ನಾಲ್ಕು ಲೋಡ್ ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಲಾಗಿದೆ ಹಂತ ಹಂತವಾಗಿ ಪಟ್ಟಣದಲ್ಲಿರುವ ಎಲ್ಲಾ ಹಂದಿಗಳನ್ನು ಕಡ್ಡಾಯವಾಗಿ ಸ್ಥಳಾಂತರ ಮಾಡಲೇಬೇಕು ಎಂದು ಹಂದಿಯ ಮಾಲಿಕರಿಗೆ ನೋಟಿಸ್ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಹಂದಿಯ ಮಾಲಿಕರು, ಪುರಸಭೆಯ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಹಾಗೂ ಸಿಬ್ಬಂದಿ ಹಾಜರಿದ್ದರು.