September 18, 2024

Vijayanagara Express

Kannada News Portal

ಭಾರತವನ್ನು ಒಗ್ಗೂಡಿಸಲು ,ಭಾರತ್ ಜೋಡೋ ಪಾದಯಾತ್ರೆ – ಎಂ ಪಿ ಲತಾ ಮಲ್ಲಿಕಾರ್ಜುನ

1 min read

ಭಾರತವನ್ನು ಒಗ್ಗೂಡಿಸಲು ,ಭಾರತ್ ಜೋಡೋ ಪಾದಯಾತ್ರೆ – ಎಂ ಪಿ ಲತಾ ಮಲ್ಲಿಕಾರ್ಜುನ

ಹರಪನಹಳ್ಳಿ: ಡಿ – 17 ,ಭಾರತವನ್ನು ಒಗ್ಗೂಡಿಸಲು ಭಾರತ್ ಜೋಡೋ ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರು ಹಮ್ಮಿಕೊಂಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಪಿ ಲತಾ ಮಲ್ಲಿಕಾರ್ಜುನ ಹೇಳಿದರು.


ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಮಾಡುವ ಮೂಲಕ 100ನೇ ದಿನದ ಸಂಭ್ರಮದ ಅಂಗವಾಗಿ ಪ್ರವಾಸಿ ಮಂದಿರ ವೃತ್ತದಲ್ಲಿ ಆರಂಭವಾದ ಪಂಜಿನ ಮೆರವಣಿಗೆ ಕೊಟ್ಟೂರು ವೃತ್ತ, ತೆಗ್ಗಿನ ಮಠ ಸರ್ಕಾರಿ ಬಸ್ ನಿಲ್ದಾಣದ ಮೂಲಕ ಇಜಾರಿ ಶಿರಸಪ್ಪ ವೃತ್ತ ಹಳೆ ಬಸ್ ನಿಲ್ದಾಣ ಪುನಃ ಪ್ರವಾಸಿ ಮಂದಿರ ವೃತ್ತದಲ್ಲಿ ಜಯಘೋಷ ಕೂಗುವ ಮೂಲಕ ಸಮಾಪ್ತಿ ಮಾಡಲಾಯಿತು.

ಈ ವೇಳೆ ಮಾತನಾಡಿದ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಪಿ ಲತಾ ಮಲ್ಲಿಕಾರ್ಜುನ ರವರು ರಾಹುಲ್ ಗಾಂಧಿಯವರು ದೇಶವನ್ನು ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆಯನ್ನು ಆರಂಭಿಸಿದ್ದಾರೆ ಪಾದಯಾತ್ರೆಯನ್ನು ಆರಂಭಿಸಿ ಇಂದಿಗೆ 100 ದಿನಗಳಾಗಿವೆ ಇಂದು ರಾಜಸ್ಥಾನದ ಗ್ರಾಮವೊಂದರಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಕನ್ಯಾಕುಮಾರಿಯಿಂದ ಆರಂಭಿಸಿದ ಪಾದಯಾತ್ರೆ ಇಂದು ನೂರು ದಿನಗಳನ್ನು ಪೂರೈಸಿದೆ ಆ ಕಾರಣಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ರಾಹುಲ್ ಗಾಂಧಿಯವರನ್ನು ಲಘುವಾಗಿ ಪರಿಗಣಿಸಿದ್ದು ಅವರನ್ನು ಪಪ್ಪು ಎಂದು ಗೆಲಿ ಮಾಡಿದೆ ಆದರೆ ರಾಹುಲ್ ಗಾಂಧಿಯವರು ಸುಮಾರು 9 ರಾಜ್ಯಗಳಲ್ಲಿ ಪಾದಯಾತ್ರೆಗಳನ್ನು ಮಾಡುವ ಮೂಲಕ ದೇಶದ ಉದ್ದಗಲಕ್ಕೂ ಸಂಚರಿಸಿ ಜನರ ಕಷ್ಟ ಸುಖಗಳನ್ನು ಆಲಿಸುತ್ತಿದ್ದಾರೆ ಜನರು ಅನುಭವಿಸುತ್ತಿರುವ ಭವಣೆಗಳನ್ನು ಅವರು ಕಣ್ಣಾರೆ ನೋಡುತ್ತಿದ್ದಾರೆ ಕೇಂದ್ರ ಸರ್ಕಾರ ವಿಧಿಸಿರುವ ದುಬಾರಿ ಮಟ್ಟದ ತೆರಿಗೆ ಜಿಎಸ್‌ಟಿ ಡೀಸೆಲ್ ಪೆಟ್ರೋಲ್ ದರದಲ್ಲಿ ಹೆಚ್ಚಳ ನೋಟ್ ಬ್ಯಾನ್ ಮುಂತಾದ ಅವೈಜ್ಞಾನಿಕವಾದಂತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬೆಲೆ ಏರಿಕೆಯನ್ನು ಮಾಡಿ ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆದಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ರಾಹುಲ್ ಗಾಂಧೀಜಿಯವರು ದೇಶವನ್ನು ಒಗ್ಗೂಡಿಸಲು ಈ ಪಾದಯಾತ್ರೆಯನ್ನು ಆರಂಭಿಸಿದ್ದಾರೆ ಎಂದರಲ್ಲದೆ ಕೇಂದ್ರ ಸರ್ಕಾರದ ನೀತಿಗಳ ಮೇಲೆ ವಾಗ್ದಾಳಿ ನಡೆಸಿದ ಅವರು ಕೇಂದ್ರ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿ ಮಾಡದೆ ಕೇವಲ ಭಾಷಣ ಮಾಡತೊಡಗಿದ್ದಾರೆ ತಾವು ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದ ನರೇಂದ್ರ ಮೋದಿಯವರು ಯುವಕರಿಗೆ ಉದ್ಯೋಗಗಳನ್ನು ನೀಡುವಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿಫಲವಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ, ಕಲ್ಲಳ್ಳಿ ಗೋಣೆಪ್ಪ , ಹುಲಿಕಟ್ಟಿ ಚಂದ್ರಪ್ಪ, ಉದಯಶಂಕರ್,ಕಂಚಿಕೇರಿ ಕೆ ಕೆಂಚಪ್ಪ,ಡಿ.ಮಾರುತಿ , ನಿಟ್ಟೂರು ಬಿ ಮಲ್ಲಿಕಾರ್ಜುನ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್,  ಯುವ ಕಾಂಗ್ರೆಸ್ ನ ಚೀಗಟೇರಿ ವಿಭಾಗದ ಅಧ್ಯಕ್ಷ ಶಿವರಾಜ್  ಜೋಗಪ್ಳ ಬಸವರಾಜಪ್ಪ, ಟಿ ನಾಗರಾಜ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *