ಹರಪನಹಳ್ಳಿ ಜೆಡಿಎಸ್ ಪಕ್ಷದ ಟಿಕೆಟ್ ಗಾಗಿ ಬೇಲ್ದಾರ್ ಭಾಷಾ ಅರ್ಜಿ
1 min readಹರಪನಹಳ್ಳಿ ಜೆಡಿಎಸ್ ಪಕ್ಷದ ಟಿಕೆಟ್ ಗಾಗಿ ಬೇಲ್ದಾರ್ ಭಾಷಾ ಅರ್ಜಿ
ಹರಪನಹಳ್ಳಿ: ಜೆಡಿಎಸ್ ಪಕ್ಷದ ಟಿಕೆಟ್ ಗಾಗಿ
ಬೇಲ್ದಾರ್ ಭಾಷಾ ಸಾಹೇಬ್ ರವರು ಪಕ್ಷದ ವರಿಷ್ಠರಾದ ಸಿ ಎಂ ಇಬ್ರಾಹಿಂ ರನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿರುತ್ತೇನೆ ಎಂದು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ಪಟ್ಟಣದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಬ್ಬರಾದ ಬೇಲ್ದಾರ್ ಭಾಷಾ ರವರು ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಯಾಗಿದ್ದು ಅದಕ್ಕಾಗಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುತ್ತಾರೆ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಸಿ ಎಂ ಇಬ್ರಾಹಿಂ ರವರು ಪಕ್ಷದ ಬಲವರ್ಧನೆಗೆ ತಾಲೂಕಿನಲ್ಲಿ ದುಡಿಯಿರಿ ನಿಮ್ಮ ಸೇವೆಯನ್ನು ಗುರುತಿಸಿ ಪಕ್ಷವು ಖಂಡಿತ ನಿಮಗೆ ಉತ್ತಮ ಸ್ಥಾನಮಾನ ನೀಡುತ್ತದೆ ತಾವು ಪಕ್ಷದ ಟಿಕೆಟ್ ಆಕಾಂಕ್ಷಿ ಯಾಗಿದ್ದೀರಿ , ನಾನು ವರಿಷ್ಠರೊಂದಿಗೆ ಮತ್ತು ಸ್ಥಳೀಯ ಜೆಡಿಎಸ್ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಸಾಮಾಜಿಕ ನ್ಯಾಯದಡಿಯಲ್ಲಿ ಈ ಬಾರಿ ಟಿಕೆಟ್ ನ್ನು ಸೂಕ್ತ ವ್ಯಕ್ತಿಗೆ ನೀಡಲಾಗುವುದು ಈಗಾಗಲೇ ರಾಜ್ಯಾದ್ಯಂತ ಅನೇಕ ತಾಲೂಕುಗಳ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದೇವೆ ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳಿಸಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ನಾನು ಕಳೆದ ಅನೇಕ ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ ನಾನು ತಾಲೂಕಿನ ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಭಾಂದವ್ಯವನ್ನು, ಒಡನಾಟವನ್ನು ಹೊಂದಿದ್ದೇನೆ ಈ ಬಾರಿ ನಮ್ಮ ತಾಲೂಕಿನ ಜನರು ಸ್ಥಳೀಯ ಅಭ್ಯರ್ಥಿ ಗಳು ಶಾಸಕರಾಗಬೇಕು ಎಂಬ ಧ್ವನಿಯನ್ನು ಎತ್ತಿದ್ದಾರೆ ಹಾಗಾಗಿ ನಾನು ಅಭ್ಯರ್ಥಿಯಾಗಿದ್ದೇನೆ ಏಕೆಂದರೆ ಪ್ರತಿ ಬಾರಿಯೂ ಹೊರಗಿನಿಂದ ಬಂದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುತ್ತಾರೆ ಈ ರೀತಿಯಾಗುವುದರಿಂದ ನಮ್ಮ ತಾಲೂಕಿನ ಕೆಲಸಗಳು ಆಗುತ್ತಿಲ್ಲ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುತ್ತದೆ ಎಂದು ಪರೀತಪಿಸುತ್ತಿದ್ದಾರೆ ಪ್ರತಿ ಬಾರಿಯೂ ಇಂತಹದ್ದೇ ತಪ್ಪು ನಡೆದು ಹೋಗಿರುತ್ತದೆ ಈ ಕ್ಷೇತ್ರವು ಸಾಮಾನ್ಯ ಕ್ಷೆತ್ರವಾದ ಮೇಲೆ ಕೇವಲ ಹೊರಗಿನ ವ್ಯಕ್ತಿಗಳನ್ನು ಗೆಲ್ಲಿಸುವುದು ನಮ್ಮ ದೌರ್ಭಾಗ್ಯವಾಗಿದೆ ಈಗ ಜನರು ತಮ್ಮ ತಪ್ಪಿನ ಅರಿವನ್ನು ತಿದ್ದಿಕೊಳ್ಳಲು ಮನಸ್ಸು ಮಾಡಿದ್ದಾರೆ ಹಾಗಾಗಿ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜನರು ಈ ಬಾರಿ ಜೆಡಿಎಸ್ ಜೊತೆ ಕೈಜೋಡಿಸುತ್ತಾರೆ ಎಂಬ ನಂಬಿಕೆ ನನಗಿದೆ ಹಾಗಾಗಿ ಈ ಬಾರಿ ಹರಪನಹಳ್ಳಿಯಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರುವುದು ಖಚಿತ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ ಎಂದರು.
ಅಲ್ಲದೆ ತಾಲೂಕಿನಲ್ಲಿ ಪಕ್ಷದ ಸಂಘಟನೆಗೆ ತಯಾರಿ ನಡೆಸಿದ್ದು ಜನಸಂಪರ್ಕ ಕಚೇರಿ ತೆರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸುದ್ದಿಗಾರರು ಸರ್ ಕಳೆದ ಬಾರಿ ಅರಸಿಕೇರಿಯ ಎನ್ ಕೊಟ್ರೇಶ್ ರವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸುಮಾರು 38 ಸಾವಿರ ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ಮೂರನೇ ಅತಿ ಹೆಚ್ಚು ಮತಗಳನ್ನು ಗಳಿಸಿ ಪರಾಭವಗೊಂಡಿದ್ದರು ಈಗ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ ಹೀಗಿದ್ದಾಗ ತಾವು ಗೆಲುವಿಗೆ ಯಾವ ತಂತ್ರಗಾರಿಕೆಯನ್ನು ಹೆಣೆಯುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತವನ್ನು ಜನರು ತಿರಸ್ಕರಿಸಿದ್ದಾರೆ, ಇವುಗಳಿಂದ ಹೊರಬರಲು ಇಚ್ಛೆ ಪಡುತ್ತಿದ್ದಾರೆ ರಾಷ್ಟ್ರೀಯ ಪಕ್ಷಗಳ ಗೊಂದಲದಿಂದ ಜನ ರೋಸಿ ಹೋಗಿದ್ದಾರೆ ಈ ಸಮಯದಲ್ಲಿ ಜೆಡಿಎಸ್ ಗೆ ತಾಲೂಕಿನಲ್ಲಿ ಉತ್ತಮ ಭವಿಷ್ಯವಿದೆ ನಮ್ಮ ಪಕ್ಷದಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ ನಮ್ಮ ಪಕ್ಷವನ್ನು ಸಂಘಟಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಹರಪನಹಳ್ಳಿ ಕ್ಷೇತ್ರದಲ್ಲಿ ಗೆಲ್ಲಿಸುವ ಭರವಸೆ ನಮಗಿದೆ ಆ ಕಾರಣಕ್ಕಾಗಿಯೇ ನಮ್ಮ ಕಾರ್ಯಕರ್ತರು ಹಗಲಿರಲು ಶ್ರಮಪಟ್ಟು ಜನಸಾಮಾನ್ಯರಿಗೆ ರಾಷ್ಟ್ರೀಯ ಪಕ್ಷಗಳ ಗೊಂದಲಗಳನ್ನು ಮನವರಿಕೆ ಮಾಡುತ್ತಿದ್ದಾರೆ ಹರಪನಹಳ್ಳಿಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಚಿತ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು .