September 18, 2024

Vijayanagara Express

Kannada News Portal

ತೆಗ್ಗಿನಮಠದ ಸೇವಾ ಸಾಮ್ರಾಟ ಚಂದ್ರಶೇಖರಯ್ಯನವರ ಅಮೃತ ಮಹೋತ್ಸವ

1 min read

ವಿಶೇಷ ವರದಿ ಪಟ್ನಾಮದ ವೆಂಕಟೇಶ್

ತೆಗ್ಗಿನಮಠದ ಸೇವಾ ಸಾಮ್ರಾಟ ಚಂದ್ರಶೇಖರಯ್ಯನವರ ಅಮೃತ ಮಹೋತ್ಸವ

ಹರಪನಹಳ್ಳಿ : ಪಟ್ಟಣದ ಶಿಕ್ಷಣ ಸೇವೆ ಖ್ಯಾತಿ ಪಡೆದಿರುವ ತೆಗ್ಗಿನ ಮಠದ ಆಡಳಿತಾಧಿಕಾರಿಯಾದ ಟಿ ಎಂ ಚಂದ್ರಶೇಖರಯ್ಯನವರ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಔಷಧ ಮಹಾವಿದ್ಯಾಲಯದ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು .

ಟಿಎಂ ಚಂದ್ರಶೇಖರಯ್ಯ ಅವರು ಎಂದರೆ ಒಂದು ಸಂಪನ್ಮೂಲ ವ್ಯಕ್ತಿ ಇದ್ದಂತೆ , ಅವರ ಬದುಕು ಅತ್ಯಂತ ಧೀಮಂತವಾದದು ಬಡತನದಲ್ಲಿ ಹುಟ್ಟಿದರೂ ಇಂದು ಶ್ರೀಮಂತವಾದ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿರುವುದು ಅವರ ಸಾಧನೆಗೆ ಹಿಡಿದ ಕೈ ಗನ್ನಡಿಯಾಗಿದೆ .

ಹೂವಿನಹಡಗಲಿ ತಾಲೂಕಿನ ನಾಗತಿಬಸಪುರ ಗ್ರಾಮಕ್ಕೆ ಸಂಬಂಧಿಸಿದಪಟ್ಟ ಚಂದ್ರಮೌಳೇಶ್ವರ ಸ್ವಾಮಿಯವರ ಕಿರಿಯ ಸಹೋದರರಾದ ಟಿ ಎಂ ಚಂದ್ರಶೇಖರಯ್ಯನವರು ತೆಗ್ಗಿನ ಮಠದ ಏಳ್ಗೆಗೆ ಸಾಕಷ್ಟು ಶ್ರಮಿಸಿದ್ದಾರೆ 1969 ರಲ್ಲಿ ಸ್ಥಾಪನೆಯಾದ ತೆಗ್ಗಿನಮಠ ಸಂಸ್ಥಾನವನ್ನು ಕ್ರಾಂತಿಯೋಪಾದಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸುಮಾರು 8 ಜಿಲ್ಲೆಗಳಲ್ಲಿ 65 ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಅಲ್ಲದೆ ಇಂದಿಗೂ ಸಹ ಶ್ರೀ ಮಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ದಾಸೋಹದ ಮಠವನ್ನು ಅಕ್ಷರ ಮಠ ಮಾಡಿದ ಅಂತಕರುಣಿ ಚಂದ್ರಶೇಖರಯ್ಯ

ಆರಂಭದಲ್ಲಿ ತೆಗ್ಗಿನ ಮಠದಲ್ಲಿ ಪ್ರತಿದಿನ ದಾಸೋಹವನ್ನು ನಡೆಸಲಾಗುತ್ತಿತ್ತು ಸಮಾಜದ ಸೇವೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನೆಡೆಯುತ್ತಿದ್ದವು ಆರಂಭಿಕ ಶ್ರೀಗಳಾದ ಚಂದ್ರಮೌಳೇಶ್ವರ ಸ್ವಾಮಿಯವರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಆರಂಭಿಸಿದರು ಇದಕ್ಕೆ ಸಂಸ್ಥೆಗಳನ್ನು ಬೆಳೆಸಲು ಹೆಗಲಿಗೆ ಹೆಗಲು ಕೊಟ್ಟು ಸುಮಾರು 65 ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ಶ್ರೀ ಮಠಕ್ಕೆ ಲಾಭದ ಜೊತೆಗೆ ಹೆಸರನ್ನು ತರಲು ಕ್ರಿಯಾಶೀಲ ಮನಸ್ಸಿನ ಚಂದ್ರಶೇಖರಯ್ಯನವರೆ ಪ್ರಮುಖ ಕಾರಣಕರ್ತರಾಗಿದ್ದಾರೆ.


ತೆಗ್ಗಿನ ಮಠದ ತೇಜಸ್ವಿ ಚಂದ್ರಶೇಖರಯ್ಯ

ಸಾಧಾರಣವಾಗಿದ್ದ ತೆಗ್ಗಿನ ಮಠವನ್ನು ಪ್ರತಿಷ್ಠಿತ ಮಠಗಳಲ್ಲೊಂದನ್ನಾಗಿ ರಾಜ್ಯಾದ್ಯಂತ ಹೆಸರು ಮಾಡಿದ ಕೀರ್ತಿ ಕಾರ್ಯದರ್ಶಿ ಚಂದ್ರಶೇಖರಯ್ಯನವರಿಗೆ ಸಲ್ಲುತ್ತದೆ ಅಂತರ್ ಜಿಲ್ಲೆಗಳಲ್ಲಿ ಶ್ರೀ ಮಠದ ವಿವಿಧ ಕೊರ್ಸುಗಳ ಸಂಸ್ಥೆಗಳು ಹೆಸರು ಮಾಡಲು ಚಂದ್ರಶೇಖರಯ್ಯನವರು ಮಾಡಿದ ಪರಿಶ್ರಮವೇ ಕಾರಣ.

ಬಯಲು ನಾಡಿಗೆ ಬಂದ ಶಿಕ್ಷಣದ ಭಗೀರಥ

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕು ಹೈದರಾಬಾದ್ ಕರ್ನಾಟಕದ ಪ್ರದೇಶವಾಗಿದ್ದು ಇಂದಿನ ಕಾಲದಿಂದಲೂ ಈ ಬಯಲು ಭೂಮಿಯು ಬರದ ನಾಡು ಎಂದೇ ಹೇಳಲಾಗುತ್ತಿತ್ತು ಈ ಭಾಗದಲ್ಲಿ ನೀರಾವರಿ ವ್ಯವಸ್ಥೆಗಳಾಗಲಿ ಕೈಗಾರಿಕೆಗಳಾಗಲಿ , ಅಥವಾ ಆರ್ಥಿಕವಾದಂತ ಸೌಲಭ್ಯಗಳಾಗಲಿ ‌ ಇರಲಿಲ್ಲ ,ಇನ್ನೂ ಈ ಭಾಗದ ಉದ್ಯಮಿಗಳು ಅಷ್ಟಕಷ್ಟೇ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಅನುಕೂಲಸ್ಥರಾಗಿರಲಿಲ್ಲ ಇಂಥ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಗಳಾದ ಚಂದ್ರಮೌಳೇಶ್ವರ ಸ್ವಾಮಿಗಳು ಶಿಕ್ಷಣ ಸಂಸ್ಥೆಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಆದರೆ ಆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋದ ಕೀರ್ತಿಯು ತೆಗ್ಗಿನ ಮಠದ ಕಾರ್ಯದರ್ಶಿಗಳಾದ ಚಂದ್ರಶೇಖರ್ಯ್ಯನವರಿಗೆ ಸಲ್ಲುತ್ತದೆ .

ದಣಿವರಿಯದ ಕಾಯಕ ಜೀವಿ

ಚಂದ್ರಶೇಖರಯ್ಯ ಎನ್ನುವ ಇವರು ಸದಾ ಒಂದಿಲ್ಲೊಂದು ಕಾಯಕದಲ್ಲಿ ತೊಡಗಿರುವುದು ಕಂಡುಬರುತ್ತದೆ ಸದಾ ಅವರು ಕ್ರಿಯಾಶೀಲ ವ್ಯಕ್ತಿ ಸೃಜನಾತ್ಮಕತೆಯನ್ನು ಹೊಂದಿದಂತವರು ಯಾವುದೇ ಕ್ಷೇತ್ರದಲ್ಲಾಗಲಿ ಯಾವ ವಿಷಯವನ್ನು ಮಾತಾಡುತ್ತಾ, ಅವರ ಜೊತೆ ಚರ್ಚೆಗೆ ಇಳಿದರೆ ಆ ಕ್ಷೇತ್ರದ ಬಗ್ಗೆ ಸಾಕಷ್ಟು ಪರಿಣಿತೆಯನ್ನು ಹೊಂದಿದವರಿಗಿಂತಲೂ ಉತ್ತಮವಾಗಿ ವಿಷಯವನ್ನು ಮಾತನಾಡಬಲ್ಲವರು ಇದರರ್ಥ ಆಳವಾದ ಚಿಂತನೆ ಕಠಿಣವಾದ ಪರಿಶ್ರಮ ಸಾಕಷ್ಟು ಅದ್ಯಾಯನವನ್ನು ಮಾಡುವಲ್ಲಿ ಚಂದ್ರಶೇಖರಯ್ಯನವರು ಎತ್ತಿದ ಕೈ ಯಾವ ವಿಷಯವನ್ನಾದರೂ ಸರಾಗವಾಗಿ ಚರ್ಚಿಸಬಲ್ಲ ಯಾವುದೇ ತಾಂತ್ರಿಕ ಶಿಕ್ಷಣವಿರಲಿ ಯಾವುದೇ ಉದ್ಯಮದ ವ್ಯವಸ್ಥೆ ಇರಲಿ ಮುಂತಾದ ಇನ್ನಿತರ ಯಾವುದೇ ವಿಷಯಗಳ ಬಗ್ಗೆ ಮಾತನಾಡಿದರೂ ಸಹ ಆ ವಿಷಯದ ಬಗ್ಗೆ ಸಾಕಷ್ಟು ಚರ್ಚಿಸುವ ಸಾಮರ್ಥ್ಯವನ್ನು ಹೊಂದಿದವರಾಗಿದ್ದಾರೆ ಈ ರೀತಿಯಾದ ಪ್ರಾವಿಣ್ಯತೆಯನ್ನು ಹೊಂದಿರುವುದರಿಂದಲೇ ಇವರನ್ನು ಕೆಲವು ಸ್ಥಳೀಯರು ಸ್ಥಳೀಯ ವಿಶ್ವವಿದ್ಯಾಲಯವಿದ್ದಂತೆ ಎಂದೂ ಸಹ ಕರೆಯುತ್ತಾರೆ .

ಶಿಕ್ಷಣ ( ಜೀವನ) ಸಾರ್ಥಕ ಚಂದ್ರಶೇಖರಯ್ಯ

ಪ್ರತಿಯೊಬ್ಬರು ತಮ್ಮ ತಮ್ಮ ಜೀವನದಲ್ಲಿ ಅಂದುಕೊಂಡಿರುವುದನ್ನು ಎಲ್ಲವುಗಳನ್ನು ಸಾಧಿಸಲು ಸಾಧ್ಯವಿಲ್ಲ ಸಾಕಷ್ಟು ಯೋಜನೆಗಳನ್ನು ಆಸೆಗಳನ್ನು ಕನಸುಗಳನ್ನು ಪ್ರತಿಯೊಬ್ಬರು ಕಾಣುವುದು ಸಹಜ ಕೆಲವರು ತಮಗೆ ಕೈಗೆಟಕುವ ರೀತಿಯಲ್ಲಿ ಸಾಮರ್ಥ್ಯಕ್ಕನುಗುಣವಾಗಿ ಕನಸನ್ನು ಕಂಡರೆ ಮತ್ತೆ ಕೆಲವರು ಹಗಲುಗನಸನ್ನು ಕಾಣುತ್ತಿರುತ್ತಾರೆ. ಇಂತಹ ಎಷ್ಟೊ ಜನರ ಆಸೆ ಕನಸುಗಳು ಅರ್ಧಕರ್ಧ ಈಡೇರುತ್ತವೆ. ಇನ್ನು ಕೆಲವರು ಅವು ಯಾವುಗಳನ್ನೂ ಈಡೇರಿಸಿಕೊಳ್ಳುವುದಿಲ್ಲ ಹೀಗೆ ಯಾರೊಬ್ಬರೂ ಪರಿಪೂರ್ಣತೆಯನ್ನು ಪಡೆದುಕೊಳ್ಳುವುದಿಲ್ಲ ಆದರೆ ಚಂದ್ರಶೇಖರಯ್ಯನವರು ಮಾತ್ರ ತಾವು ಜೀವನದಲ್ಲಿ ಅಂದುಕೊಂಡವುಗಳನ್ನು ಪ್ರತಿಯೊಂದು ಮಾಡಿದ್ದೇನೆ ನನ್ನ ಬದುಕಿನಲ್ಲಿ ಮಾಡದೆ ಉಳಿದಿರುವ ಬಾಕಿ ಕೆಲಸ ಯಾವುದೂ ಇಲ್ಲ ಎಂದು ತಮ್ಮ ಸಹಚರರೊಂದಿಗೆ ಹಂಚಿಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ ಮತ್ತು ಖುಷಿಯ ವಿಚಾರ ಏಕೆಂದರೆ ಎಲ್ಲಾ ಆಸೆ ಕನಸುಗಳು ಈಡೇರಿದಂತೆಲ್ಲ ಮತ್ತೆ ಬೇರೆ ಬೇರೆ ಕನಸುಗಳು ಆಸೆಗಳು ಚಿಗುರೊಡೆದು ಅವುಗಳನ್ನು ಅಪೂರ್ಣ ಮಾಡಿಕೊಂಡು ಕೊರಗುವುದು ಸಹಜ ಆದರೆ ಇವರ ಬದುಕಿನಲ್ಲಿ ತಾವು ಅಂದುಕೊಂಡಿರುವುದನ್ನು ಪೂರ್ತಿಯಾಗಿ ನಾನು ಮಾಡಿದ್ದೇನೆ ಎಂದು ಹೇಳುತ್ತಿರುತ್ತಾರೆ ಎಂದು ಹೇಳಲಾಗುತ್ತದೆ.

ಈ ಎಲ್ಲಾ ಸಾಧನೆಯ ಗುಟ್ಟೇನು ಈ ಮಟ್ಟಕ್ಕೆ ಬಂದಿದ್ದಾದರೂ ಹೇಗೆ ದುಡಿಮೆಗೆ ಏನಾದರೂ ಮಾಡಿಕೊಂಡು ಮುಂದೆ ಬರಬೇಕಾದರೆ ಹೇಗೆ ಸಾಧ್ಯ ಎಂದು ಯಾರಾದರೂ ಯುವಕರು ಪ್ರಶ್ನೆಯನ್ನು ಕೇಳಿದರೆ ಅವರು ಹೀಗೆ ಉತ್ತರಿಸುತ್ತಾರೆ ಕಸ ಹೊಡೆಯುವ ಕೆಲಸ ಸಿಕ್ಕರು ಖುಷಿಪಟ್ಟು ಅದನ್ನು ಮಾಡು ಮುಂದೊಂದು ದಿನ ನಿನ್ನ ಬದುಕಿಗೆ ಅದೇ ದಾರಿದೀಪವಾಗುವುದು ಯಾವುದೇ ಕೆಲಸವಾಗಲಿ, ಸಣ್ಣದು ದೊಡ್ಡದು ಮೇಲು ಕೀಳು ಎಂದು ಲಘುವಾಗಿ ಪರಿಗಣಿಸಬಾರದು ಅಥವಾ ಆಹಾಂಕಾರ ಪಡಬಾರದು ಪ್ರತಿಯೊಂದು ಕೆಲಸ ಕರ್ತವ್ಯಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದ್ದೆಇರುತ್ತೆ ಅದನ್ನು ಕಠಿಣ ಪರಿಶ್ರಮದೊಂದಿಗೆ ಪ್ರಾಮಾಣಿಕವಾಗಿ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ತಾನಾಗಿನೆ ತನ್ನ ಬದುಕನ್ನು ಬದಲಿ ಮಾಡಿಕೊಳ್ಳಬಹುದು ಎಂದು ನುಡಿಯುತ್ತಾರೆ.

ಹೀಗೆ ತೆಗ್ಗಿನ ಮಠ ಮಹಾಸಂಸ್ಥಾನದ ಕಾರ್ಯದರ್ಶಿಯೂ, ಆಡಳಿತಾಧಿಕಾರಿಯೂ ಆಗಿರುವ ಟಿಎಂ ಚಂದ್ರಶೇಖರಯ್ಯನವರು ಅಸಾಧಾರಣ ವ್ಯಕ್ತಿತ್ವವನ್ನು ,ಸಾಧನಾ ಮನೋಭಾವವನ್ನು, ಜ್ಞಾನದ ಬುತ್ತಿಯನ್ನು ಹೊಂದಿದ್ದಾರೆ ಇವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಹೊಂದಿದವರು ಶಿಕ್ಷಣ ಅಷ್ಟೇ ಅಲ್ಲದೆ ಕಲೆ ಸಾಹಿತ್ಯ ಸಂಸ್ಕೃತಿ ಯಲ್ಲೂ ಅಪಾರ ಪರಿಣಿತಿ ಹೊಂದಿದ್ದಾರೆ
ಅಲ್ಲದೆ ಪರಿಣಿತಿ ಹೊಂದಿದ ಆರ್ಥಿಕ ತಜ್ಞರಾಗಿದ್ದ ಕಾರಣದಿಂದಾಗಿಯೇ ಮಠದ ಆರ್ಥಿಕ ಸಫಲತೆಗೆ ಬಲಬಂದಿತ್ತು.
ಇವರ ಬಗ್ಗೆ ಎಷ್ಟೇ ಹೇಳಿದರು ಕಡಿಮೆಯಾಗುತ್ತದೆ ಸತತವಾಗಿ 55 ವರ್ಷಗಳ ಕಾಲ ಮಠದ ಸೇವೆಯನ್ನ ಮಾಡಿ ಸಾಧನೆಯ ಸಾರ್ಥಕತೆಯನ್ನು ಮೆರೆದು 75 ವಸಂತಗಳನ್ನ ಪೂರೈಸಿ ಈ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾರ್ಯಕ್ರಮದ ವೇದಿಕೆಯಲ್ಲಿ ಕಣ್ಣಂಚಿನಲ್ಲಿ ನೀರ ತುಂಬಿಕೊಂಡು ಮಾತಾಡೆ ತಡವರಿಸಿದ್ದು ಅವರ ಮೃದು ಮನಸ್ಸಿನ ಭಾವನೆಯನ್ನು ತಿಳಿಸುತ್ತದೆ ಮತ್ತು ಇನ್ನು ಕೆಲಸ ಮಾಡುವ ಹುರುಪು, ಮನಸ್ಸು ಇದ್ದರೂ ವಯಸ್ಸು ಆಗಿರುವುದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಲ್ಲ ಎಂಬ ಯೋಚನೆಯನ್ನು ಮಾಡುತ್ತ ಭವಿಷ್ಯ ಅವರ ಕಣ್ಣಂಚಿನಲ್ಲಿ ತೇವವಾಗಿರಬಹುದು ಇವರಿಗೆ ಈ ಭಾಗದ ನಾಗರಿಕರು,ಇವರ ಗೆಳೆಯ ವರ್ಗದವರು ಈ ಸಂಸ್ಥಾನದ ಸಂಸ್ಥೆಯಲ್ಲಿ ಓದಿದ ಶಿಷ್ಯ ವರ್ಗದವರು,ಬಂದು ಮಿತ್ರರು ಪ್ರೀತಿ ಪೂರ್ವಕವಾದ ಶುಭವನ್ನು ಕೋರಿ ಹಾರೈಸಿ ಪ್ರೀತಿಯ ಮಳೆಯನ್ನೇ ವೇದಿಕೆಯಲ್ಲಿ ಸುರಿಸಿದರು.

 

 

Leave a Reply

Your email address will not be published. Required fields are marked *