Vijayanagara Express

Kannada News Portal

ಭೋವಿ ಕಾಲೋನಿಯ ಅಭಿವೃದ್ಧಿಗೆ ನಾನು ಸದಾಸಿದ್ದ – ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ

1 min read

 

ಭೋವಿ ಕಾಲೋನಿಯ ಅಭಿವೃದ್ಧಿಗೆ ನಾನು ಸದಾಸಿದ್ದ – ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ

 

ಹರಪನಹಳ್ಳಿ: ಡಿ – 21 ,ಭೋವಿ ಕಾಲೋನಿಯ ಅಭಿವೃದ್ಧಿಗೆ ನಾನು ಸದಾ ಸಿದ್ಧನಿದ್ದೇನೆ ಎಂದು 27 ನೇ ವಾರ್ಡ್ ನ ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ ಹೇಳಿದರು.


ಪಟ್ಟಣದ 27 ನೇ ವಾರ್ಡ್ ನ ಗಾಜೀಕೇರಿ ವ್ಯಾಪ್ತಿಯಲ್ಲಿ ಬರುವ ಭೋವಿ ಕಾಲೋನಿಯಲ್ಲಿ ನಾಮಫಲಕ ಅನಾವರಣ ಮಾಡಿ ಮಾತನಾಡಿದ ಅವರು ಈ ಭಾಗದಲ್ಲಿ ಭೋವಿ ಜನಾಂಗದ ಸುಮಾರು 40 ಮನೆಗಳಿವೆ ಆ ಸಮಾಜದ ಮುಖಂಡರು ನನ್ನ ಬಳಿ ಬಂದು ನಮ್ಮ ಕಾಲೋನಿಯಲ್ಲಿ ನಮ್ಮ ಸಮಾಜದ ನಾಮಫಲಕ ಅನಾವರಣ ಮಾಡಬೇಕು ಎಂದು ಕೇಳಿಕೊಂಡರು ಅದಕ್ಕೆ ನಾನು ನನ್ನ ‌ಸ್ವಂತ ಖರ್ಚಿನಲ್ಲಿ ನಾಮಫಲಕ ಮಾಡಿಸಿಕೊಡಲು ತುಂಬು ಹೃದಯದಿಂದ ಒಪ್ಪಿಕೊಂಡು ಅದರಂತೆ ನಾನು ಇಂದು ಅದರ ಉದ್ಘಾಟನೆ ಮಾಡಿರುತ್ತೇನೆ.

ಈ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಅಲ್ಲದೆ ಸಮಾಜದ ಅಭಿವೃದ್ಧಿಗೆ , ಸೇವೆಗೆ ಸದಾ ನಾನು ಜೊತೆಗೆ ಇರುತ್ತೇನೆ ಎಂದು ಹೇಳಿದರು.


ಈ ವೇಳೆ ಭೋವಿ ಸಮಾಜದ ಮುಖಂಡ ವಿನೋದ್ ವಿ ಪಿರಂಗಿ ಮಾತನಾಡಿ 27 ನೇ ವಾರ್ಡ್ ನ ಸದಸ್ಯರಾದ ದ್ಯಾಮಜ್ಜಿ ರೊಕ್ಕಪ್ಪ ನಮ್ಮ ಸಮಾಜದ ನಾಮಫಲಕವನ್ನು ಉದ್ಘಾಟನೆ ಮಾಡಲು ನಮ್ಮ ಜೊತೆಗೆ ಸಹಕರಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ ಅಲ್ಲದೆ ಈ ಭಾಗದಲ್ಲಿ ಕುಡಿಯುವ ನೀರು, ಚರಂಡಿ ನಿರ್ಮಾಣ,ಸಿ ಸಿ ರಸ್ತೆ ನಿರ್ಮಾಣ,ಬೀದಿ ದೀಪದ ವ್ಯವಸ್ಥೆಯನ್ನು ಮಾಡಿದ್ದಾರೆ ಅದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಸಮಾಜದ ಮುಖಂಡರಾದ ನಾಗರಾಜ್, ವೆಂಕಟೇಶ್, ಮಾತನಾಡಿದರು.

ಈ ಸಂದರ್ಭದಲ್ಲಿ ವಿನೋದ್ , ಕೋರಿಶೆಟ್ಟಿ ರಾಘವೇಂದ್ರ,ರಾಮಪ್ಪ, ಭೋವಿ ಚಂದ್ರಪ್ಪ, ಪಿರಂಗಿ ವಿಕ್ರಮ್, ವೆಂಕಟೇಶ್, ದ್ಯಾಮಜ್ಜಿ ನಾಗಪ್ಪ, ಶಿವರಾಜ್, ಮಂಜುನಾಥ್, ರಾಜೇಶ್,ದ್ಯಾಮಜ್ಜಿ ಗೋವಿಂದ, ಕೆಂಗಳ್ಳಿ ಹನುಮಂತಪ್ಪ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *