ಬಿಜೆಪಿ ಟಿಕೆಟ್ ಆಕಾಂಕ್ಷಿ ವೈ ಡಿ ಅಣ್ಣಪ್ಪನವರ ಹುಟ್ಟುಹಬ್ಬ: ರಕ್ತದಾನ ಶಿಬಿರ, ಹಣ್ಣು ಬ್ರೆಡ್ ವಿತರಣೆ
1 min readಬಿಜೆಪಿ ಟಿಕೆಟ್ ಆಕಾಂಕ್ಷಿ ವೈ ಡಿ ಅಣ್ಣಪ್ಪನವರ ಹುಟ್ಟುಹಬ್ಬ: ರಕ್ತದಾನ ಶಿಬಿರ, ಹಣ್ಣು ಬ್ರೆಡ್ ವಿತರಣೆ
ಹರಪನಹಳ್ಳಿ: ಡಿ -29 , ತಾಲೂಕಿನ ವಿವಿಧ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪನವರ ಪುತ್ರ ಯೋಗನರಸಿಂಹ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ, ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಅಕಾಂಕ್ಷಿ ಯಾದ ವೈ.ಡಿ.ಅಣ್ಣಪ್ಪನವರ 43 ನೇ ಹುಟ್ಟು ಹಬ್ಬದ ಪ್ರಯುಕ್ತ ಅರಸಿಕೇರಿಯಲ್ಲಿ
ರಕ್ತದಾನ ಶಿಬಿರ ಹಾಗೂ ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೇಡ್ ವಿತರಿಸಲಾಯಿತು.
ಈ ವೇಳೆ ವೈ.ಡಿ.ಅಣ್ಣಪ್ಪ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷ ಪ್ರಶಾಂತ ಪಟೀಲ್ ಮಾತನಾಡಿ ವೈ.ಡಿ.ಅಣ್ಣಪ್ಪರವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಗ್ರಾಪಂ ಸದಸ್ಯರಾಗಿ, ವಿಎಸ್‌ಎಸ್‌ಎನ್ ನಿರ್ದೇಶಕರಾಗಿ, ಯೋಗನರಸಿಂಹ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾಗಿ ತಾಲೂಕಿನಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಿರುವ ವೈ.ಡಿ.ಅಣ್ಣಪ್ಪನವರು 2023 ರ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದರು, ತಾಲೂಕಿನ ಸ್ಥಳೀಯ ಮನೆಮಗನಾದ ವೈ.ಡಿ ಅಣ್ಣಪ್ಪನವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದರೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜನರು ಆಶೀರ್ವಾದ ಮಾಡುವರು ಎಂಬ ನಂಬಿಕೆ ನಮಗಿದೆ , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಅವಕಾಶಗಳು ಸಿಗುತ್ತವೆ ಎಂಬುದಕ್ಕೆ ಅಣ್ಣಪ್ಪನವರ ತಂದೆಯಾದ ಬಳ್ಳಾರಿ ಸಂಸದ ವೈ ದೇವೇಂದ್ರಪ್ಪನವರೇ ಸಾಕ್ಷಿಯಾಗಿದ್ದಾರೆ ಇದು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿರುವ ಹಕ್ಕಾಗಿದೆ ಎಂದು ಹೇಳಿದರು.
ಹರಪನಹಳ್ಳಿಯಲ್ಲಿ ಪ್ರತಿಬಾರಿಯೂ ಹೊರಗಿನಿಂದ ಬಂದ ಅಭ್ಯರ್ಥಿಗಳನ್ನೇ ಗೆಲ್ಲಿಸುವುದಾಗಿದೆ ಈ ಬಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂಬ ಕೂಗು ತಾಲೂಕಿನಾದ್ಯಂತ ಭುಗಿಲೆದ್ದಿದೆ ಅದು ಈ ಬಾರಿಯ ಚುನಾವಣೆಯಲ್ಲಿ ಫಲಿತಾಂಶ ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಧ್ಯಪಕ ವೈ.ಡಿ.ರಂಗನಾಥ, ನ್ಯಾಯವಾದಿ ವೈ.ಟಿ.ಕೊಟ್ರೇಶ್, ಆಲ್ ಇಂಡಿಯಾ ಬಾಧಷಹಾ ಕಿಚ್ಚ ಸುದೀಪ್ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಹಾದಿಮನಿ ಸಂತೋಷ, ಮುಖಂಡರುಗಳಾದ ಜೆ. ಪರುಶುರಾಮ,ಸಲೀಂ, ಲಕ್ಷö್ಮಣ, ಮಹಾಂತೇಶ, ಗಿರೀಶ, ಮಾರುತಿ, ಜೆ.ಪರಶುರಾಮ, ಶಶಿಕುಮಾರ, ನವೀನ್, ಕೆ.ಮಹೇಶ್, ಚಂದ್ರಪ್ಪ,ಯೊಗೇಶ, ಡಾ. ಶಂಕ್ರನಾಯ್ಕ, ವ್ಯವಸ್ಥಾಪಕ. ವೆಂಕಟೇಶ ಬಾಗಲರ್, ದಾದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.