Vijayanagara Express

Kannada News Portal

ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

1 min read

ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಹರಪನಹಳ್ಳಿ:ಡಿ -30 , ತಾಲೂಕಿನ ವಿವಿಧೆಡೆ ಶಾಸಕ ಗಾಲಿ ಕರುಣಾಕರ ರೆಡ್ಡಿಯವರು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.

ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು,
ಕಂಚಿಕೇರಿ ಗ್ರಾಮದ ಶ್ರೀಕೊಡಿಸಿದ್ದೇಶ್ವರ ದೇವಸ್ಥಾನದ ಹತ್ತಿರದಲ್ಲಿ ರಸ್ತೆ ನಿರ್ಮಾಣ, ರಾಗಿಮಾಸಲವಾಡ ಕೋಡಿ ತಾಂಡ ರಸ್ತೆ ಯಿಂದ ನಾಗಲಾಪುರ ಶಂಕರನಹಳ್ಳಿ ರಸ್ತೆ ಕಾಮಗಾರಿ ಭೂಮಿ ಪೂಜೆ ,ಕಡತಿ – ನoದ್ಯಾಲ ಕ್ಯಾಂಪ್ ನಿಂದ ಮತ್ತೂರು ಗ್ರಾಮದವರೆಗೆ ರಸ್ತೆ ಕಾಮಗಾರಿ ಭೂಮಿ ಪೂಜೆ ,ಮತ್ತೂರು ಗ್ರಾಮದಿಂದ ನಿಟ್ಟೂರು ಗ್ರಾಮದ ವರೆಗೆ ರಸ್ತೆ ಕಾಮಗಾರಿ ಭೂಮಿ ಪೂಜೆ,ಹಲುವಾಗಲು ಗ್ರಾಮದಿಂದ ಕುಂಚುರು ಕೆರೆ ಸೇರುವ ರಸ್ತೆ ಕಾಮಗಾರಿ ಭೂಮಿ ಪೂಜೆ ,ಅರಸನಾಳು ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿ ಭೂಮಿಪೂಜೆ,ಕೆ ಕಲ್ಲಹಳ್ಳಿ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿ ಭೂಮಿಪೂಜೆ ,ಕೆ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹೈ ಸ್ಕೂಲ್ ಶಾಲಾ ಕೊಠಡಿ ಕಾಮಗಾರಿ ಉದ್ಘಾಟನೆ ಮಾಡಿದರು ಕೆ ಕಲ್ಲಹಳ್ಳಿ ಗ್ರಾಮದ ಕ್ಷೇಮ ಕೇಂದ್ರ ಕಟ್ಟಡ ಕಾಮಗಾರಿ ಉದ್ಘಾಟನೆ ಮಾಡಿದರು ಹಂಪಾಪುರ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಬಂಡ್ರಿ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿ ಭೂಮಿಪೂಜೆ , ಕಾನಹಳ್ಳಿ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿ ಭೂಮಿಪೂಜೆ ,ಹರಪಹಳ್ಳಿ ತಾಲೂಕಿನ 26ನೇ ವಾರ್ಡ್ ನಲ್ಲಿ ಹೊಸ ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ಉದ್ಯಾನವನ ಅಭಿವೃದ್ಧಿ ಕಾಮಗಾರಿ ಪೂಜೆಗಳನ್ನು ನೆರವೇರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಇಂದು ಒಟ್ಟು 3.80 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ,4.20 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ,40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೆರೆ ಏರಿ ಅಭಿವೃದ್ಧಿ ಕಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಲಾಯಿತು ಎಂದು ಹೇಳಿದರು.


ಈ ಸಂದರ್ಭದಲ್ಲಿಮುಖಂಡರಾದ , ರೆಡ್ಡಿ,ಟಿ.ಶಿವಾನಂದಪ್ಪ ,ರೇವಣಸಿದ್ದಪ್ಪ ವಕೀಲರು, ಕೆಂಗಳ್ಳಿ ಪ್ರಕಾಶ್ ವಕೀಲರು,ಆರ್ ಲೋಕೇಶ್ ಬಸವರಾಜ್ ಇಂಜಿನಿಯರ್, ಸಣ್ಣನೀರಾವರಿ ಇಲಾಖೆಯ ರಮೇಶ್ ಇಂಜಿನಿಯರ್, ಮುಖಂಡರಾದ ,ಕಂಚಿಕೇರಿ ಕರಡಿ ಈರಣ್ಣ,ಮಾಳ್ಗಿ ಕೆಂಚಪ್ಪ, ಮತ್ತೂರು ಮಂಜುನಾಥ್, ಎಸ್ ತಿರುಪತಿ ಪೂಜಾರ್ ಮಹೇಶ್,ಮಾಚಿಹಳ್ಳಿ ಮಲ್ಲೇಶ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

 

 

 

Leave a Reply

Your email address will not be published. Required fields are marked *