ಜೀವನವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ- ಎಂ.ಪಿ.ವೀಣಾ ಮಹಾಂತೇಶ್
1 min read
ಜೀವನವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ- ಎಂ.ಪಿ.ವೀಣಾ ಮಹಾಂತೇಶ್
ಹರಪನಹಳ್ಳಿ:ಜ – 1 ,ಜೀವನವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ ಖಂಡಿತವಾಗಿಯೂ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದು ಕೆಪಿಸಿಸಿ ವಕ್ತಾರರಾದ ಎಂ.ಪಿ.ವೀಣಾ ಮಹಾಂತೇಶ್ ಹೇಳಿದರು.
ಪಟ್ಟಣದ ಭಂಗಿ ಬಸಪ್ಪ ಪಿಯು ವಿಜ್ಞಾನ ಕಾಲೇಜ್ ಮೈದಾನದಲ್ಲಿನೂತನ ವರ್ಷಾಚರಣೆಗೆ ಮಹಿಳೆಯರಿಗಾಗಿ ರಂಗೋಲಿ, ಲೆಮನ್ ಅಂಡ್ ಸ್ಪೂನ್, ಮ್ಯೂಸಿಕಲ್ ಚೇರ್, ಬ್ಯಾಸ್ಕೆಟ್ಟಾಗೆ ಬಾಲ್ ಹಾಗೂ ಫಿಲ್ ದ ವಾಟರ್ ಬಕೇಟ್ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರ ಅಭಿವೃದ್ದಿಯೇ ಸಮೂದಾಯದ ಅಭಿವೃದ್ದಿಯಾಗಿದ್ದು. ದಂಗೆಯಿಂದ ದೇಶಕ್ಕೆ ಸ್ವಾತಂತ್ರ ಸಿಕ್ಕ ಹಾಗೆ ಮಹಿಳೆಯರು ಇನ್ನು ಸಮಾನತೆ ದಕ್ಕಿಸಿಕೊಳ್ಳಬೇಕಿದೆ. ಹೆಣ್ಣು ಭೋಗದ ವಸ್ತುವಲ್ಲ, ಅಡುಗೆಯ ಯಂತ್ರವಲ್ಲ. ಅವರೊಂದು ವಚನ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರು ಕುಟುಂಬ ಮತ್ತು ದೇಶದ ಬೆಳಕು ಹೆಣ್ಣು, ಪುರುಷ ಮತ್ತು ಮಹಿಳೆಯರಿಗೆ ಸಮಾನತೆಯಿದ್ದರೆ ಮಾತ್ರ ಪ್ರಪಂಚದ ಉಳಿವು ಎಂದರು.
ಇಗಾಲೇ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ವತಿಯಿಂದ ಅನೇಕ ಅರೋಗ್ಯ ಶಿಬಿರಗಳನ್ನು ಅಯೋಜಿಸಿದ್ದವೆ. ಶೈಕ್ಷಣಿಕವಾಗಿ ಪಟ್ಟಣದ ಸರ್ಕಾರಿ ಶಾಲೆಗಳು ಸೇರಿದಂತೆ ತಾಲ್ಲೂಕಿನ ವಿವಿಧ 11 ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ನವೀಕರಿಸಲು ಹಾಗೂ ೩ ಶಾಲೆಗಳ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ಹಾಗೂ ಅವಶ್ಯವಾದ ಚಿಕಿತ್ಸೆ ನೀಡಲಿದೆ ಈಗಾಗಲೇ ಪಟ್ಟಣದ ಕುರಬಗೇರಿಯ ಸರ್ಕಾರಿ ಶಾಲೆಯ ಶೌಚಾಲಯವನ್ನು ನವೀಕರಿಸಲಾಗಿದೆ. ತಿಮ್ಮಲಾಪುರ, ದುಗ್ಗಾವತಿ ಹಾಗೂ ಚಿರಸ್ಥಹಳ್ಳಿ ಶಾಲೆಗಳ ಶೌಚಾಲಯ ನವೀಕರಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.
ಜ.9,8 ಹಾಗೂ 10 ರಂದು ಲೈಯನ್ಸ್ ಕ್ಲಬ್ ಹಾಗೂ ಸಮಾಜ ಮುಖಿ ಟ್ರಷ್ಟ್ಗಳ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಬಾಲಕೀಯರ ಫ್ರೌಢಶಾಲೆಯ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆಯ ಶಿಬಿರ. ಅಲ್ಲದೇ ತೆಲಗಿ ಹಾಗೂ ಹಲುವಾಗಲು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರವನ್ನು ನಡೆಸಲಿದ್ದೇವೆ. ಅವಶ್ಯವಿದ್ದವರಿಗೆ ಉಚಿತ ಕನ್ನಡಕ ಹಾಗೂ ಔಷದೋಪಚಾರಗಳನ್ನು ಸಹ ಕಲ್ಪಿಸಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ, ಕೆಪಿಸಿಸಿ ಮೂಲಭೂತ ಹಕ್ಕುಗಳ ಮಾಹಿತಿ ವಿಭಾಗದ ಜಿಲ್ಲಾ ಉಪಾದ್ಯಕ್ಷ ಸಿದ್ದಲಿಂಗನಗೌಡ, ಗಾಯಿತ್ರಮ್ಮ, ನೇತ್ರಾವತಿ, ರಾಜನಾಯ್ಕ್, ಬಿ.ಖಲಂದರ್, ನಾಗರಾಜ ಸಾಸ್ವೀಹಳ್ಳಿ, ಶಿವರಾಜ, ಮಂಜಣ್ಣ, ಕೊರಚರಹಟ್ಟಿ ರಮೇಶ್, ಬಾಗಳಿ ಜಯಪ್ಪ, ಪ್ರವೀಣ, ದಾದಾಪೀರ್, ಮನೋಜ್, ದ್ವಾರಕೀಶ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.