Vijayanagara Express

Kannada News Portal

ಕಣ್ಣು ಕಿವಿ ಇಲ್ಲದ ಆಡಳಿತ ಪುರಸಭೆಯಲ್ಲಿದೆ – ಎಂ ವಿ ಅಂಜಿನಪ್ಪ ಆರೋಪ

1 min read

ಕಣ್ಣು ಕಿವಿ ಇಲ್ಲದ ಆಡಳಿತ ಪುರಸಭೆಯಲ್ಲಿದೆ – ಎಂ ವಿ ಅಂಜಿನಪ್ಪ ಆರೋಪ

ಹರಪನಹಳ್ಳಿ: ಜ – 18 ,ಕಣ್ಣು ಕಿವಿ ಇಲ್ಲದ ಆಡಳಿತ ಈ ಬಾರಿ ಪುರಸಭೆಯಲ್ಲಿದೆ ಎಂದು ಪುರ‌ಭೆ ಹಿರಿಯ ಸದಸ್ಯ ಎಂ ವಿ ಅಂಜಿನಪ್ಪ ಆರೋಪ ಮಾಡಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಲಾಠಿ ದಾದಾಪೀರ್ ರವರ ಅಭಿನಂದನಾ ಅರ್ಪಿಣೆ ಉದ್ದೇಶದಿಂದ
ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ದೇಶದಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದ ಒಂದಿಲ್ಲ ಒಂದು ಗೊಂದಲಗಳು ಸೃಷ್ಟಿಯಾಗುತ್ತಿವೆ ಅಭಿವೃದ್ಧಿ ಎನ್ನುವುದು ಬಿಜೆಪಿಯವರಿಗೆ ಬೇಡವಾಗಿದೆ, ಕೇವಲ ಹಲಾಲ್ ಕಟ್, ಕೇಸರಿ ,ಹಿಜಾಬ್ ಮುಂತಾದ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದೆ ಯುವಕರ ನಿರುದ್ಯೋಗದ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು ಹರಪನಹಳ್ಳಿ ಪುರಸಭೆಯಲ್ಲಿ ನಾನು ಈಗ ನಾಲ್ಕನೆ ಬಾರಿ ಸದಸ್ಯ ನಾಗಿ ಆಯ್ಕೆಯಾಗಿದ್ದೇನೆ ಈಗಿರುವ ಆಡಳಿತವನ್ನು ನಾನು ಯಾವ ಅವಧಿಯಲ್ಲಿಯೂ ನೋಡಿಲ್ಲ , ಪ್ರಸ್ತುತ ನಡೆಸುತ್ತಿರುವ ಅಧ್ಯಕ್ಷರು ಒಬ್ಬರಿಲ್ಲ ಅನೇಕ ಜನರಿದ್ದಾರೆ ಎಂದರು ಅಲ್ಲದೆ 40% ಕಮಿಷನ್ ಮಾದರಿಯ ಕಾಮಗಾರಿಗಳು ಪಟ್ಟಣದಲ್ಲಿ ನಡೆಯುತ್ತಿದೆ ಒಂದೇ ಕಾಮಗಾರಿಗೆ ಎರಡೆರಡು ಅನುದಾನಗಳು ಬಳಕೆಯಾಗುತ್ತದೆ ಎಂದು ಅಧ್ಯಕ್ಷರ ನಡೆ ವಿರುದ್ಧ ಹರಿಹಾಯ್ದರು.

ಪುರಸಭೆ ಹಿರಿಯ ಸದಸ್ಯ ಡಿ ಅಬ್ದುಲ್ ರಹಿಮಾನ್ ವಕೀಲರು ಮಾತನಾಡಿ ಎಲ್ಲಾ ಪಕ್ಷಗಳಲ್ಲೂ ಸಣ್ಣಪುಟ್ಟ ವ್ಯತ್ಯಾಸಗಳು ಸರ್ವೇ ಸಾಮಾನ್ಯ ನಮ್ಮಲ್ಲಿಯೂ ಅಂತ ವ್ಯತ್ಯಾಸಗಳಿವೆ ಅವುಗಳನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರಲ್ಲದೆ ಪುರಸಭೆಯಲ್ಲಿ ಅನುದಾನವನ್ನು ಅವಶ್ಯಕತೆ ಇರುವ ಕಡೆ ಹಾಕುತ್ತಿಲ್ಲ ಅನುದಾನ ಅಂಚಿಕೆಯಲ್ಲೂ ಸಾಕಷ್ಟು ತಾರತಮ್ಯವನ್ನು ಅಧ್ಯಕ್ಷರು ಮಾಡುತ್ತಿದ್ದಾರೆ ಜಿಲ್ಲಾಧಿಕಾರಿಗಳು ಪುರಸಭೆಯಲ್ಲಿ ಒಪ್ಪಿಗೆಯನ್ನು ಪಡೆದು ರಿಜಿಲೇಷನ್ ಪಾಸ್ ಮಾಡಿ ಕೊಡಿ ಎಂದು ಆದೇಶಿಸಿದ್ದರು ಅವರ ಮಾತಿಗೂ ಕವಡೆಕಾಸಿನ ಕಿಮ್ಮತ್ತನ್ನು ನೀಡುತ್ತಿಲ್ಲ ಇದರಿಂದಾಗಿ ಪುರಸಭೆಯಲ್ಲಿ ಯಾವ ರೀತಿಯ ನಿರ್ಲಕ್ಷದ ಆಡಳಿತ ನಡೆಯುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.

ಈ ವೇಳೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಲಾಠಿ ದಾದಾಪೀರ್ ಮಾತನಾಡಿ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ಹಿರಿಯ ಮುಖಂಡರಾದ ಸಿದ್ದರಾಮಯ್ಯ, ಸಲೀಂ ಅಹ್ಮದ್, ಅಬ್ದುಲ್ ಜಬ್ಬಾರ್ ಸಾಬ್ ಹಾಗೂ ಪರೋಕ್ಷವಾಗಿ ಕಾರಣಕರ್ತರಾವರೆಲ್ಲರಿಗೂ ಅಭಿನಂದಿಸುತ್ತೇನೆ ಮತ್ತು ನನಗೆ ಸದಾ ಸಹಕಾರ ನೀಡುತ್ತಿರುವ ಸ್ಥಳೀಯ ಮುಖಂಡರಿಗೂ ಅಭಿನಂದಿಸುತ್ತೇನೆ ಎಂದು ಹೇಳಿದರು.

ಪುರಸಭಾ ಸದಸ್ಯ ಟಿ ವೆಂಕಟೇಶ್ , ಉಭೇದುಲ್ಲ, ಕಾಂಗ್ರೆಸ್ ನ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಮಜೀದ್ .ಎನ್ ,ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಉದ್ದಾರ ಗಣೇಶ್,ಗೊಂಗಡಿ ನಾಗರಾಜ್, ಮುಖಂಡರಾದ ಎಲ್ ಮಂಜ್ಯನಾಯ್ಕ್, ಈಶ್ವರ ಜಿ ,ಮತ್ತೂರು ಬಸವರಾಜ್, ಘಾಟಿನಾ ಬಸಪ್ಪ, ಹೆಚ್ ಶಿವರಾಜ್, ವಾಸೀಮ್.ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *