Vijayanagara Express

Kannada News Portal

ಜ್ಞಾನ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುತ್ತದೆ ಎಂಪಿ ವೀಣಾ ಮಾಂತೇಶ್

1 min read

ಜ್ಞಾನ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುತ್ತದೆ ಎಂಪಿ ವೀಣಾ ಮಾಂತೇಶ್

 

ಹರಪನಹಳ್ಳಿ : ಜ -20 , ಜ್ಞಾನ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುತ್ತದೆ ಎಂದು ಎಂಪಿ ವೀಣಾ ಮಹಾಂತೇಶ್ ಹೇಳಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕಿನಲ್ಲಿ ಟೈಲರಿಂಗ್ ತರಬೇತಿಯನ್ನು ಪಡೆದ ಸುಮಾರು 2000 ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ನೀಡುವ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು ಈ ವೇಳೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಎಂಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಸಹಯೋಗದಲ್ಲಿ 1500 ರಿಂದ 2000 ಮಹಿಳೆಯರಿಗೆ ಟೈಲರಿಂಗ್ ತರಬೇತಿಯನ್ನು ಕೊಡಿಸಲಾಗಿದೆ ಇದನ್ನು ಮುಂದೆಯೂ ಸಹ ಇಂತಹ ಅನೇಕ ಸಮಾಜ ಸೇವೆ ಕಾರ್ಯಕ್ರಮಗಳನ್ನು ನೀಡಲು ನಾನು ಹುಚ್ಚು ಕಳಗಿದ್ದೇನೆ ಮುಂದೊಂದು ದಿನ ತಾಲೂಕಿನ ಜನರು ನನಗೆ ಆಶೀರ್ವಾದವನ್ನು ಮಾಡಿದರೆ ಹರಪನಹಳ್ಳಿ ಪಟ್ಟಣದಲ್ಲಿ ಗಾರ್ಮೆಂಟ್ಸ್ ಗುಡಿ ಕೈಗಾರಿಕೆ ಯನ್ನು ತೆರೆದು ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡಲು ಸಹಾಯ ಮಾಡುತ್ತೇನೆ ಎಂದರು. ನಾನು ಕೇವಲ ಸಮಾಜ ಸೇವೆ ಕೆಲಸಗಳನ್ನು ಅಷ್ಟೇ ಮಾಡಲು ತಾಲೂಕಿಗೆ ಬಂದಿಲ್ಲ ರಾಜಕೀಯ ಸೇವೆಯನ್ನು ಸಹ ಬಯಸಿ ತಾಲೂಕಿಗೆ ಬಂದಿದ್ದೆ ಆರಂಭದಲ್ಲಿ ನನಗೆ ಅನೇಕ ಅವಮಾನಗಳು ನೋವುಗಳು ಉಂಟಾದವು ನಂತರ ಜನರು ನನಗೆ ಪ್ರೀತಿ ವಿಶ್ವಾಸವನ್ನು ನೀಡಿ ನನ್ನನ್ನು ಪ್ರೋತ್ಸಾಹಿಸಿದ್ದಾರೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಾನು ಮಹಿಳೆಯರಿಗೆ ತರಬೇತಿಯನ್ನು ನೀಡಲು ಸಾಕಷ್ಟು ಶ್ರಮವಹಿಸಿದ್ದೇನೆ ಅಷ್ಟೇ ಅಲ್ಲ ನನ್ನ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಅನೇಕರು ಸಹಕಾರ ನೀಡಿದ್ದಾರೆ ಎಂದರು ಸತತವಾಗಿ ನಾಲ್ಕು ವರ್ಷಗಳ ಕಾಲ ಸಮಾಜ ಸೇವೆ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇಂದು ಜನರು ಸೇರಿದ್ದಾರೆ ಈ ಜನರು ನನಗೆ ನೀಡಿದ ಸ್ನೇಹ ಪ್ರೀತಿಗೆ ಆಭಾರಿಯಾಗಿದ್ದೇನೆ ಇದರ ಮುಂದೆ ಸಂಪತ್ತು ಹಣ ಮುಖ್ಯವಲ್ಲ ಜನರ ನೀಡಿದ ಈ ಪ್ರೀತಿ ವಿಶ್ವಾಸ ಬಹುದೊಡ್ಡದು ಎಂದು ಹೇಳಿದರು.

ನಿವೃತ್ತ ಶಿಕ್ಷಕಿ ಹರಪನಹಳ್ಳಿಯ ದಾನಚಿಂತಾಮಣಿ ಲಲಿತಮ್ಮ
ಮಾತನಾಡಿ ತಾಲೂಕಿನಾದ್ಯಂತ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯೆ ಕವಿತಾ ವಾಗೀಶ್,ಗಾಯತ್ರಮ್ಮ,ಕಂಚಿಕೇರಿ ಲಿಂಗರಾಜ್, ಸಿದ್ದೇಶ್ ಎಂ, ಬಣಕಾರ ನಾಗರಾಜ್, ಸಿದ್ದಲಿಂಗೌಡ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *