Vijayanagara Express

Kannada News Portal

ಪುರಸಭೆ ಅಧ್ಯಕ್ಷರಿಂದ ಬೀದಿಬದಿ ಘನತ್ಯಾಜ್ಯ ಸಂಗ್ರಹ ಡಬ್ಬಗಳ ಪರಿಶೀಲನೆ

1 min read

ಪುರಸಭೆ ಅಧ್ಯಕ್ಷರಿಂದ ಬೀದಿಬದಿ ಘನತ್ಯಾಜ್ಯ ಸಂಗ್ರಹ ಡಬ್ಬಗಳ ಪರಿಶೀಲನೆ

 

ಹರಪನಹಳ್ಳಿ:ಜ – 24 , ಪುರಸಭೆ ಅಧ್ಯಕ್ಷ ಹಾರಾಳ್ ಹೆಚ್ ಎಂ ಅಶೋಕ್ ರವರು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದಲ್ಲಿ  ಅಳವಡಿಸಿರುವ  ಹಸಿಕಸ ಮತ್ತು ಒಣಕಸ  ಡಬ್ಬಿಗಳನ್ನು ಪರಿಶೀಲನೆ ನಡೆಸಿದರು.

 

ಪಟ್ಟಣದ ಸೌಂದರ್ಯಕರಣ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಒಣಕಸ ಮತ್ತು ಹಸಿಕಸವನ್ನು ಬೇರ್ಪಡಿಸಿ  ಕಸವನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿಲೆವಾರಿ ಮಾಡಲು 14 ನೇ ಹಣಕಾಸು ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ,ಒಟ್ಟು52 ಕಡೆ ಡಬ್ಬಿಗಳನ್ನು ಪಟ್ಟಣದ ವಾಣಿಜ್ಯ ಮಳಿಗೆಗಳ ಮುಂಭಾಗ, ದೇವಸ್ಥಾನದ ಮುಂದೆ, ಶಾಲಾ ಕಾಲೇಜುಗಳ ಆವರಣದಲ್ಲಿ ಅಳವಡಿಸಲಾಗಿದ್ದು ಇವುಗಳನ್ನು ಇಂದು ಪುರಸಭೆ ಅಧ್ಯಕ್ಷ ಹಾರಾಳ್ ಹೆಚ್ ಎಂ ಅಶೋಕ್ ಪರಿಶೀಲನೆ ನಡೆಸಿ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಆರು ತಿಂಗಳಿಂದ ಪಟ್ಟಣದ ಸೌಂದರ್ಯ ಕಾರಣಕ್ಕೆ ಹೆಚ್ಚು ಒತ್ತು ನೀಡಿದ್ದು ಅಲ್ಲದೆ ಎಲ್ಲೇಂದರಲ್ಲಿ ಕಸವನ್ನು ರಸ್ತೆಯಲ್ಲಿ ಬಿಸಾಡುವುದುನ್ನ ನಿರ್ಬಂಧಿಸಲಾಗಿದೆ ಆಹಾಗಿ ಕಸವನ್ನು ಕಡ್ಡಾಯವಾಗಿ ಪುರಸಭೆ ವತಿಯಿಂದ ಅಳವಡಿಸಲಾಗಿರುವ ಡಬ್ಬದಲ್ಲಿ ಹಾಕುವ ಮೂಲಕ ಪಟ್ಟಣದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪುರಸಭೆ ವತಿಯಿಂದ ಬೀದಿ ನಾಟಕಗಳನ್ನು ಮಾಡುವುದರ ಮೂಲಕ ಹಾಗೂ ಆಟೋಗಳಲ್ಲಿ ಜನತೆಗೆ ತಿಳಿಸುವ ಮೂಲಕ ಎಲ್ಲೇಂದರಲ್ಲಿ ಮಲಮೂತ್ರವಿಸರ್ಜನೆ ಮಾಡದಂತೆ ಪಟ್ಟಣದ ಸೌಂದರ್ಯವನ್ನು ಹಾಳು ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಜಾಕೀರ್ ಸರ್ಕವಾಸ್ ರಾಮಣ್ಣ, ಹಾಜರಿದ್ದರು.

Leave a Reply

Your email address will not be published. Required fields are marked *