ಅಶ್ವಥ್ ನಾರಾಯಣರವರ ಹೇಳಿಕೆ ಖಂಡಿಸಿ ಪೋಲಿಸ್ ರಿಗೆ ದೂರು
1 min readಅಶ್ವಥ್ ನಾರಾಯಣರವರ ಹೇಳಿಕೆ ಖಂಡಿಸಿ ಪೋಲಿಸ್ ರಿಗೆ ದೂರು
ಹರಪನಹಳ್ಳಿ: ಫ್ರೆ – 17, ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ ಇವರು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕುರಿತು ನೀಡಿರುವ ಪ್ರಚೋದನಕಾರಿ ಹೇಳಿಕೆಯನ್ನು ಖಂಡಿಸಿ ಕೊಲೆ ಪ್ರಚೋದನೆ ಯತ್ನ ಆರೋಪದಡಿಯಲ್ಲಿ ಅಶ್ವತ್ ನಾರಾಯಣ ರವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಹಾಗೂ ಸಚಿವರನ್ನು ಕೂಡಲೇ ಬಂಧಿಸುವಂತೆ ಕಾಂಗ್ರೆಸ್ ಮುಖಂಡರು ಪೊಲೀಸರಿಗೆ ದೂರನ್ನು ಸಲ್ಲಿಸಿದರು.
ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಶ್ರೀ ಅಶ್ವಥ್ ನಾರಾಯಣ್ ರವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ಆದ ಶ್ರೀಯುತ ಸಿದ್ದರಾಮಯ್ಯರವರನ್ನು ಕುರಿತು ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನವರನ್ನು ಸಹ ಹೊಡೆದು ಹಾಕಬೇಕು ಎಂದು ಪ್ರಚೋದನಾಕಾರಿ ಮತ್ತು ಅವಹೇಳನಕಾರಿ ಹೇಳಿಕೆ ನೀಡಿರುವುದು ಬಹಳ ಖಂಡನೀಯವಾಗಿರುತ್ತದೆ ರಾಜ್ಯದ ಪ್ರತಿಯೊಬ್ಬ ಪ್ರಜೆಗಳ ಜೀವ ,ಆಸ್ತಿ ರಕ್ಷಣೆ ಮುಂತಾದ ಹಕ್ಕುಗಳನ್ನು ರಕ್ಷಣೆ ಮಾಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಇದರ ಅರಿವೇ ಇಲ್ಲದಂತೆ ಜವಾಬ್ದಾರಿಯತವಾದ ಸ್ಥಾನದಲ್ಲಿ ಇದ್ದಂತ ಸಚಿವರು ಇಂತಹ ಅಸಂವಿಧಾನಿಕವಾದಂತ ಶಬ್ದಗಳನ್ನು ಬಳಸಿ ಸಮಾಜದ ಸ್ವಾಸ್ಥ್ಯ ಹಾಳುಮಾಡಿ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿಸುವ ಮಾತುಗಳನ್ನಾಡಿದ್ದು ಅಶ್ವತ್ ನಾರಾಯಣ್ ರವರು ಕಾನೂನು ವಿರೋಧಿ ಸ್ವಯಂ ಹೇಳಿಕೆ ನೀಡಿರುವುದರಿಂದ ಇವರ ಮೇಲೆ ಕೊಲೆ ಪ್ರಚೋದನೆಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಸಚಿವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನ ಮೂಲಕ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಮುಖಂಡರಾದ ಎಚ್ ಕೆ ಹಾಲೇಶ್, ಶಶಿಧರ್ ಪೂಜಾರ್ , ಎಂ ಎನ್ ಪ್ರಮೋದ್, ಪುರಸಭೆ ಸದಸ್ಯರಾದ ಜಾಕಿರ್ ಸರ್ಕಾವಾಸ್, ಜೆ ಭರತೇಶ, ಮುಖಂಡರಾದ ಶ್ರೀಕಾಂತ್ ,ಗಿಡ್ಡಳ್ಳಿ ನಾಗರಾಜ್ ,ಶೃಂಗಾರ ತೋಟದ ಬಸವರಾಜ್, ಆಲದಹಳ್ಳಿ ಷಣ್ಮುಖಪ್ಪ ,ತಿಪ್ಪನಹಳ್ಳಿ ತಿಮ್ಮಪ್ಪ,ಶಿವು,ಮುತ್ತಿಗೆ ಜಂಬಣ್ಣ, ಸೇರಿದಂತೆ ಮುಂತಾದವರು ಹಾಜರಿದ್ದರು.