Vijayanagara Express

Kannada News Portal

ಹರಪನಹಳ್ಳಿ ಪಟ್ಟಣದ ಹೊಂಡದಂತ ತೆಗ್ಗು ಗುಂಡಿ ರಸ್ತೆಗಳಿಗೆ ಮುಕ್ತಿ ಯಾವಾಗ ?

1 min read

ಹರಪನಹಳ್ಳಿ ಪಟ್ಟಣದ ಹೊಂಡದಂತ ತೆಗ್ಗು ಗುಂಡಿ ರಸ್ತೆಗಳಿಗೆ ಮುಕ್ತಿ ಯಾವಾಗ ?

 

ವಿಶೇಷ ವರದಿ ಪಟ್ನಾಮದ ವೆಂಕಟೇಶ್ ಹರಪನಹಳ್ಳಿ .

ಹರಪನಹಳ್ಳಿ: ಫ್ರೆ – 16 ,ಹರಪನಹಳ್ಳಿ ಪಟ್ಟಣದ ಹೊಂಡದಂತ ಗುಂಡಿ ಗುಂಡಿ ರಸ್ತೆಗಳಿಗೆ ಮುಕ್ತಿ ಯಾವಾಗ ಎಂದು ಜನರು ಜನಪ್ರತಿನಿಧಿಗಳಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಹೌದು ,ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಕರುಣಾಕರ ರೆಡ್ಡಿಯವರ ನಿರ್ಲಕ್ಷ್ಯ ಮತ್ತು ಕಳಪೆ ಕಾಮಗಾರಿ ಹಾಗೂ ತಾಲೂಕಿನ ಅಭಿವೃದ್ಧಿ ಬಗ್ಗೆ ಅವರಿಗಿರುವ ನಿರಾಸಕ್ತಿಯಿಂದ ತಾಲೂಕಿನ ಗ್ರಾಮಗಳ ರಸ್ತೆಗಳಿರಲಿ ತಾಲೂಕು ಆಡಳಿತ ಕೇಂದ್ರವಾದ ಹರಪನಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಗುಂಡಿ ಬಿದ್ದು ಹೊಂಡಗಳು ನಿರ್ಮಾಣವಾಗಿ ರಸ್ತೆಗಳು ಹಾಳಾಗಿ ಹೋಗಿವೆ .

ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹಿಡಿದು ಮಹಾರಾಜ ಸೋಮಶೇಖರ ನಾಯಕ ವೃತ್ತದವರೆಗೆ ಇರುವ ರಸ್ತೆ ರಂಪಾಟ ನೋಡಿದರೆ ಗೊತ್ತಾಗುತ್ತದೆ ಶಾಸಕರು ಹರಪನಹಳ್ಳಿ ತಾಲೂಕಿನ ಹಾಗೂ ಪಟ್ಟಣದ  ಅಭಿವೃದ್ಧಿ ಎಷ್ಟರಮಟ್ಟಿಗೆ ಮಾಡಿರಬಹುದು ಎಂದು .

ಹರಪನಹಳ್ಳಿ ತಾಲೂಕು ಬಯಲು ಸೀಮೆಯ ನಾಡು, ಇಲ್ಲಿಯ ಜನರು ಬಹುತೇಕ ಕೃಷಿಯನ್ನು ಅವಲಂಬಿಸಿದ್ದಾರೆ ಆರು ತಿಂಗಳು ಕೃಷಿ ಚಟುವಟಿಕೆ ಮುಗಿಸಿದ ನಂತರ ದೊರದ ಬೆಂಗಳೂರು, ಮಂಗಳೂರು, ಮತ್ತು ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಗಳಿಗೆ ಹಾಗೂ ಉಡುಪಿ ಮುಂತಾದ ಕಡೆಗಳಲ್ಲಿ ದುಡಿದು ತುತ್ತು ಹೊತ್ತಿನ ಚೀಲ ತುಂಬಿಸಿಕೊಳ್ಳಲು ಹೊಲಸೆ ಹೋಗುತ್ತಾರೆ ಇದನ್ನು ಮನಗಂಡಿದ್ದಂತ ಮಾಜಿ ಶಾಸಕ ದಿವಂಗತ ಎಂಪಿ ರವೀಂದ್ರರವರು ಈ ಭಾಗದಲ್ಲಿ ರೈತಾಪಿ ಜನರಿಗೆ ದುಡಿಯುವ ಕೈಗಳಿಗೆ ಕೆಲಸ ಸಿಗುವಂತಾಗಬೇಕಾದರೆ ನೀರಾವರಿ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕು ಎಂದು ಪಣತೊಟ್ಟಿದ್ದರು ಅದರಂತೆ ತಾಲೂಕಿನ ಸುಮಾರು 60 ಕೆರೆಗಳಿಗೆ ನೀರು ತುಂಬಿಸುವುದರಿಂದ ನೀರಾವರಿ ಸೌಲಭ್ಯವನ್ನು ರೈತರು ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಆ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದರು.

ಇಂದಿಗೂ ಆ ಯೋಜನೆಯು ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿರುವುದನ್ನು ನೋಡುತ್ತಿದ್ದೇವೆ ,ಅಲ್ಲದೆ ತುಂಗಭದ್ರ ನದಿ ತಾಲೂಕಿನಲ್ಲಿ ಹರಿದು ಹೋಗಿದ್ದರೂ ಕೂಡ ಕುಡಿಯುವ ನೀರಿಗಾಗಿ ಬೇಸಿಗೆ ಸಂದರ್ಭದಲ್ಲಿ ನೀರಿಗೆ ತೊಂದರೆ ಆಗುತ್ತದೆ ಎಂದು ದೂರ ದೃಷ್ಟಿ ಹೊಂದಿದ್ದ ಧೀಮಂತ ನಾಯಕ ಎಂ ಪಿ ರವೀಂದ್ರರವರು ಯೋಜನೆ ಹಳೆಯದಾಗಿದ್ದರೂ ಅದಕ್ಕೆ ಮರುಜೀವ ಕೊಟ್ಟು ಕಾಯಕಲ್ಪ ಮಾಡಲು ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದರು ಅದು ಇಂದಿಗೂ ಕೇವಲ ಕಡತಗಳಲ್ಲಿಯೇ, ಕಚೇರಿಗಳಲ್ಲಿಯೇ ಬಿಲ್ ಪಾವತಿಯಾಗುತ್ತಿದೆ ಕಾಮಗಾರಿ ಮಾತ್ರ ಕುಳಿತಲ್ಲಿಯೇ ಕುಂತಂತಿದೆ ಈ ಎಲ್ಲವುಗಳಿಗೂ ಶಾಸಕರ ಇಚ್ಛಾಶಕ್ತಿ ಅಲ್ಲದೆ ಮತ್ತಿನ್ನೇನು ಬೇಕಿದೆ ಎನ್ನುವುದಂತು ಸತ್ಯ .

ಈ ಭಾಗದಲ್ಲಿ ಗಣಿಗಾರಿಕೆಯಾಗಲಿ, ಕೈಗಾರಿಕೆಗಳಾಗಲಿ ಇಲ್ಲದಿರುವುದು ಎಲ್ಲರಿಗೂ ತಿಳಿದೇ ಇದೆ ಆ ಕಾರಣಕ್ಕಾಗಿ ಜನರು ದೂರದ ಊರುಗಳಿಗೆ ಹೊಲಸೆ ಹೋಗಿ ದುಡಿಯುವುದನ್ನು ತಪ್ಪಿಸಲು ಯಶಸ್ವಿಯಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸುಬಹುದಿತ್ತು ಅದು ಸಹ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅರ್ಧಂಬರ್ಧ ಸಕಾರ ಗೊಳ್ಳುತ್ತಿದೆ.

ಗ್ರಾಮೀಣ ಭಾಗದ ಅನೇಕ ರಸ್ತೆಗಳನ್ನು ನಿರ್ಮಿಸಲು ಸಾಕಷ್ಟು ಅನುದಾನ ಬಿಡುಗಡೆ ಆದರೂ ಸಹ ರಸ್ತೆಗಳು ಮಾತ್ರ ತೆಗ್ಗು ಗುಂಡಿ ಗುಂಡಿ ಬಿದ್ದು ಹೊಂಡಗಳು ನಿರ್ಮಾಣವಾಗಿ ಜನರು ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ, ಶಾಸಕ ಕರುಣಾಕರ ರೆಡ್ಡಿ ಅವರಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ ಇದರಿಂದಾಗಿ ಶಾಸಕರಿಗೆ ನಮ್ಮ ತಾಲೂಕಿನ ಅಭಿವೃದ್ಧಿ ಬಗ್ಗೆ ಅವರಿಗೆ ಆಸಕ್ತಿ ಇರುವುದಿಲ್ಲ ಎಂದೇ ಜನರು ಹೇಳುತ್ತಿದ್ದಾರೆ.

ಪಕ್ಕದ ತಾಲೂಕುಗಳಾದ ಹಗರಿಬೊಮ್ಮನಹಳ್ಳಿ, ಜಗಳೂರು, ಹರಿಹರ ,ಹೂವಿನಹಡಗಲಿ ತಾಲೂಕಿನ ಅಭಿವೃದ್ಧಿಗೆ ಹೋಲಿಸಿದರೆ ಹರಪನಹಳ್ಳಿ ತಾಲೂಕಿನ ಅಭಿವೃದ್ಧಿ ಏನು ಇರುವುದಿಲ್ಲ ರಸ್ತೆಗಳ ಗೊಳಂತೂ ಹೇಳತೀರದು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಕರುಣಾಕರ ರೆಡ್ಡಿಗೆ ಇಷ್ಟೊಂದು ನಿರ್ಲಕ್ಷ್ಯ ಏಕೆ ಎಂಬ ಪ್ರಶ್ನೆ ತಾಲೂಕಿನ ಜನರನ್ನು ಕಾಡದೇ ಇರದು ಮುಂದಿನ ಐದು ವರ್ಷಗಳ ಅವಧಿಯಲ್ಲಾದರೂ ನಮ್ಮ ತಾಲೂಕಿನ ರಸ್ತೆಗಳು ಸುಧಾರಣೆ ಮತ್ತು ಅಭಿವೃದ್ಧಿ ಕಂಡರೆ  ತಾಲೂಕಿನ ಜನತೆಗೆ ಅದಕ್ಕಿಂತ ದೊಡ್ಡ ಭಾಗ್ಯವೇನಿದೆ ಎಂದರೆ ತಪ್ಪಾಗಲಾರದು.

 

ಅದೇನೇ ಇರಲಿ ಶಾಸಕ ಕರುಣಾಕರ ರೆಡ್ಡಿ ಅವರು ಐದು ವರ್ಷಗಳ ಅವಧಿಯಲ್ಲಿ ಬಂದರು ಹೋದರು ಆದರೆ ತಾಲೂಕಿನ ಅಭಿವೃದ್ಧಿಗೆ ಮಾತ್ರ ಯಾವುದೇ ಮಾನ್ಯತೆ ನೀಡಿಲ್ಲ,ಎಸ್ ಸಿ ಪಿ, ಎಸ್ಟಿ ಪಿ ಅನುದಾನಗಳು ಪರಿಶಿಷ್ಟರ ಕಾಲೋನಿಗಳ ಉದ್ದಾರಕ್ಕೆ ,ಅಭಿವೃದ್ಧಿಗೆ ಬಳಕೆಯಾಗದೆ ಸಾಮಾನ್ಯ ಜಿಲ್ಲಾ ಮತ್ತು ತಾಲೂಕು ಹೆದ್ದಾರಿ ರಸ್ತೆಗಳು ಹಾಗೂ ಸಾಮಾನ್ಯ ವರ್ಗಗಳ ಜನರು ವಾಸಿಸುವ ಕಾಲೋನಿಗಳು ಮುಂತಾದ ಕಡೆಗಳಲ್ಲಿ ಬಳಕೆಯಾಗಿದೆ ಎಂದು ಹೇಳಲಾಗುತ್ತದೆ ಇದು ಶಾಸಕರು ಪರಿಶಿಷ್ಟ ವರ್ಗ , ಪರಿಶಿಷ್ಟ ಜಾತಿಯವರ ಮೇಲೆ ಇಟ್ಟಿರುವ ನಿರ್ಲಕ್ಷ್ಯ ವನ್ನು ತೋರಿಸುತ್ತದೆ .

ಹರಪನಹಳ್ಳಿಯ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಜನಸಂಖ್ಯೆ ಹೆಚ್ಚಿದಂತೆ ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಹೊಣೆಯಾಗಿರುತ್ತದೆ .ಪ್ರವಾಸಿ ಮಂದಿರ ವೃತ್ತದಿಂದ ಮಹಾರಾಜ ಸೋಮಶೇಖರ ನಾಯಕ ವೃತ್ತದವರೆಗೆ ರಸ್ತೆಯನ್ನು ಎರಡು ಬದಿಗಳಲ್ಲಿ ಅಗಲೀಕರಣ ನಡೆಸಿ ಸುಂದರವಾದ ರಸ್ತೆಯನ್ನು, ಅಲ್ಲದೇ ಹರಿಹರ ವೃತ್ತದಿಂದ ಕೊಟ್ಟೂರು ವೃತ್ತದ ವರೆಗೆ ಇರುವ ಬೈಪಾಸ್ ರಸ್ತೆಯ ತೆಗ್ಗುಗಳನ್ನು ಅಳಿಸಿ, ಸುಂದರ ರಸ್ತೆಯನ್ನು ನಿರ್ಮಿಸಿದರೆ ಪಟ್ಟಣದ ಸೌಂದರ್ಯಕ್ಕೆ ಒತ್ತು ಕೊಟ್ಟಂತೆ ಆಗುತ್ತದೆ ಆದರೆ ಶಾಸಕರಿಗೆ ಸೌಂದರ್ಯ ಮತ್ತು ಯೋಗ್ಯವಾದ ರಸ್ತೆಗಳು ಅಭಿವೃದ್ಧಿ ಶಬ್ದಗಳೆಂದರೆ ಬಹುಶಃ ಆಗುವುದಿಲ್ಲವೆನೋ ಅಂದೆನಿಸುತ್ತದೆ ಎಂದೇ ಹೇಳಬಹುದು. ಮುಂದಿನ ಐದು ವರ್ಷಗಳ ಅವಧಿಯಲ್ಲಾದರೂ ತಾಲೂಕಿನ ಅಭಿವೃದ್ಧಿಯ ಹಣೆಬರಹ ಬದಲಾಗುವುದೊ ಏನೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *