ದೂರದೃಷ್ಟಿಯಿಲ್ಲದ ಬಜೆಟ್ – ಶಶಿಧರ್ ಪೂಜಾರ್
1 min readದೂರದೃಷ್ಟಿಯಿಲ್ಲದ ಬಜೆಟ್ – ಶಶಿಧರ್ ಪೂಜಾರ್
ಹರಪನಹಳ್ಳಿ : ಫ್ರೆ – 17 , ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಮಂಡಿಸಿರುವ ಬಜೆಟ್ ನ್ನು ಇದೊಂದು ದೂರದೃಷ್ಟಿಯಿಲ್ಲದ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರ್ ರವರು ವಿಮರ್ಶಿಸಿದ್ದಾರೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಇದು ಅತೀ ಮುಖ್ಯವಾದ ಬಜೆಟ್ ಇದಾಗಿದೆ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ತಮ್ಮ ಎರಡನೇ ಮತ್ತು ಕೊನೆಯ ಬಜೆಟ್ ಅನ್ನು ಅವರು ಮಂಡಿಸಿದ್ದು ಇದು ದೂರದೃಷ್ಟಿಯಿಲ್ಲದ ಬಜೆಟ್ ಇದಾಗಿದೆ’ ಎಂದು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಶಿಧರ್ ಪೂಜಾರ್ ಟೀಕಿಸಿದ್ದಾರೆ.
ಈ ಕುರಿತು ಪ್ರತಿ ಕ್ರಿಯೆ ನೀಡಿದ ಅವರು ಈ ಬಜೆಟ್ ಬಿಸಿಲು ಕುದುರೆಯಿದ್ದಂತೆ. ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದಾಯಕ್ಕಿಂತ 402 ಕೋಟಿ ರೂಪಾಯಿ ಹೆಚ್ಚುವರಿ ಬಜೆಟ್ ಅನ್ನು ಪ್ರಸ್ತಾಪಿಸಿದ್ದಾರೆ ಮತ್ತು ಕಳೆದ ಎರಡು ವರ್ಷಗಳಿಂದ ಕೊರತೆಯ ಬಜೆಟ್‌ಗಳನ್ನು ಮುರಿದರು. ಇದು ರೈತರು, ಕಾರ್ಮಿಕ ವರ್ಗ, ಬಡವರು ಮತ್ತು ಮಹಿಳೆಯರನ್ನು ಕೇಂದ್ರೀಕರಿಸುವ ಧ್ವನಿಯಿಲ್ಲದವರ ಬಜೆಟ್ ಎಂದು ಟೀಕಿಸಿದ್ದಾರೆ .
ಬಿಜೆಪಿಯವರ ಡಬಲ್ ಇಂಜಿನ್ ಕೆಟ್ಟು ನಿಂತು ಹೊಗೆ ಬರುತ್ತಿದೆ ಬೊಮ್ಮಾಯಿ ಅವರು ತಾವೂ ಒಂದು ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿಕೊಳ್ಳಲು ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ ಅದನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು’ ಎಂದು ವ್ಯಂಗ್ಯವಾಡಿದ್ದಾರೆ.
‘ಪ್ರತೀ ಮಹಿಳೆಗೆ ₹2 ಸಾವಿರ ನೀಡುವುದಾಗಿ ದೊಡ್ಡದಾಗಿ ಜಾಹೀರಾತು ನೀಡಿದ್ದ ಬಿಜೆಪಿ ಸರ್ಕಾರ ಅದನ್ನು 500ಕ್ಕೆ ಮೊಟಕುಗೊಳಿಸಿದ್ದು ಏಕೆ? ಉದ್ಯೋಗ ಸೃಷ್ಟಿ, ರೈತರ ಸಬಲೀಕರಣ, ಬೆಲೆ ಏರಿಕೆಗೆ ಪರಿಹಾರ, ಕಾರ್ಮಿಕರು, ಉದ್ಯೋಗದಾತರನ್ನು ಉಳಿಸುವ ಪ್ರಯತ್ನ ಖಂಡಿತ ಮಾಡಿಲ್ಲ. ಒಟ್ಟಿನಲ್ಲಿ ಇದು ಆದಾಯಕ್ಕಿಂತ ಹೆಚ್ಚುವರಿಯ ಬಜೆಟ್ ಎಂದು ಶಶಿಧರ್ ಪೂಜಾರ್ ಟೀಕಿಸಿದ್ದಾರೆ.