ದಲಿತ, ದೇವದಾಸಿ, ಬಿಜೆಪಿ ಕಾರ್ಯಕರ್ತೆಗೆ ನಿಂದಿಸಿ ಕಚೇರಿಯಯಿಂದ ಹೊರ ಕಳಿಸಿದ ಶಾಸಕ ಗಾಲಿ ಕರುಣಾಕರ ರೆಡ್ಡಿ
1 min readದಲಿತ, ದೇವದಾಸಿ, ಬಿಜೆಪಿ ಕಾರ್ಯಕರ್ತೆಗೆ ನಿಂದಿಸಿ ಕಚೇರಿಯಯಿಂದ ಹೊರ ಕಳಿಸಿದ ಶಾಸಕ ಗಾಲಿ ಕರುಣಾಕರ ರೆಡ್ಡಿ
ಹರಪನಹಳ್ಳಿ: ಫ್ರೆ -21 ,ದಲಿತ , ದೇವದಾಸಿ, ಹಾಗೂ ಬಿಜೆಪಿ ಕಾರ್ಯಕರ್ತೆಯಾದ ಹಲುವಾಗಲು ಗ್ರಾಮದ ಶ್ರೀಮತಿ ಹಿರಿಯಮ್ಮ ರವರನ್ನು ಹರಪನಹಳ್ಳಿಯ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ದಲಿತೆ ಎಂಬ ಕಾರಣಕ್ಕಾಗಿ ನಿಂದಿಸಿ ಕಚೇರಿಯಯಿಂದ ಹೊರ ಕಳಿಸಿದ ಘಟನೆ ಮಂಗಳವಾರ ಪಟ್ಟಣದ ಶಾಸಕ ಗಾಲಿ ಕರುಣಾಕರ ರೆಡ್ಡಿಯವರ ನಿವಾಸ ಮತ್ತು ಜನಸಂಪರ್ಕ ಕಚೇರಿಯಲ್ಲಿ ನಡೆದಿದೆ ಎಂದು ಆರೋಪಿಸಿರುವ ನೊಂದ ದಲಿತ ದೇವದಾಸಿ ಮಹಿಳೆ ಹಿರಿಯಮ್ಮ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿರುತ್ತಾರೆ.
ಶಾಸಕ ಗಾಲಿ ಕರುಣಾಕರ ರೆಡ್ಡಿ
ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿರುವವರು ಶ್ರೀಮತಿ ಹಿರಿಯಮ್ಮ ದಲಿತ ದೇವದಾಸಿ ಮಹಿಳೆಯಾಗಿದ್ದು ನನ್ನದು ಹರಪ್ಪನಹಳ್ಳಿ ತಾಲೂಕು ,ನನಗೆ ನಮ್ಮ ತಾಲೂಕಿನ ಶಾಸಕರಾದ ಗಾಲಿ ಕರುಣಾಕರಡ್ಡಿಯವರಿಂದ ಬದುಕಲು ತೊಂದರೆಯಾಗುತ್ತಿದ್ದು ಇದಕ್ಕೆ ಕಾರಣ ನಾನು ಎರಬಾಳು ಗ್ರಾಮದ ಸರ್ವೆ ನಂಬರ್ 1/ ಬಿ .ರಲ್ಲಿ 4 ಎಕರೆ ಸರ್ಕಾರಿ ಭೂಮಿಯನ್ನು ಸುಮಾರು 30 ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿರುತ್ತೇನೆ. ಫಾರಂ ನಂಬರ್ 57 ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುತ್ತೇನೆ ಈ ಭೂಮಿಯಲ್ಲಿ ಕೆಲವರಿಗೆ ಹಕ್ಕುಪತ್ರವನ್ನು ನೀಡಿರುತ್ತಾರೆ ಆದರೆ ನಾನು ದಲಿತ ಮಹಿಳೆ ಹಾಗೂ ದೇವದಾಸಿ ಮಹಿಳೆ ಎಂಬ ಕಾರಣದಿಂದ ಶಾಸಕರ ಒತ್ತಡದಿಂದಾಗಿ ಭೂಮಿಯನ್ನು ನನ್ನಿಂದ ಬಿಡಿಸಿ ನನ್ನ ಮೇಲೆ ಗುನ್ನೆ ಸಂಖ್ಯೆ 73/ 2021 ಕಾಲಂ 192 ಎ ರ ಅಡಿಯಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿರುತ್ತಾರೆ ಹಾಗೂ ಶಾಸಕರ ಬಳಿ ನಾನು ಕೊಳವೆಬಾವಿಗೆ ಅರ್ಜಿ ಸಲ್ಲಿಸಿರುವ ಸಲುವಾಗಿ ಅದರ ಬಗ್ಗೆ ಕೇಳಲು ಹೋದಾಗ ಮಾನ್ಯ ಶಾಸಕರು ನನ್ನನ್ನು ತಮ್ಮ ಆಪ್ತ ಸಹಾಯಕರ ಮೂಲಕ ಕಚೇರಿಯಿಂದ ಕತ್ತು ಇಡಿಸಿ ಹೊರಗೆ ದಬ್ಬಿಸಿರುತ್ತಾರೆ.
ನನ್ನ ಹೆಸರಿಗೆ ಶಿಫಾರಸ್ಸು ಮಾಡಿದ ಕೊಳವೆ ಬಾವಿಯನ್ನು ನಮ್ಮ ಗ್ರಾಮದ ಶಾಸಕರ ಬಾಲಂಗೋಚಿಗಳಾದ ಹಾಗೂ ಎರಡು ಮೂರು ಬಾರಿ ಸೌಲಭ್ಯ ಪಡೆದ ಒಂದೇ ಸರ್ವೆ ನಂಬರ್ ಒಂದೇ ಫಲಾನುಭವಿಗಳಿಗೆ ಮಂಜೂರಾತಿಯನ್ನು ಮಾಡಿಕೊಟ್ಟಿರುತ್ತಾರೆ ಆದುದರಿಂದ ಇಂತಹ ಶಾಸಕರಿಂದ ನಮ್ಮಂತ ದಲಿತ ದೇವದಾಸಿ ಮಹಿಳೆಯರು ಜೀವನ ನಡೆಸುವುದು ಕಷ್ಟಕರವಾಗಿದೆ ಆದುದರಿಂದ ನಾನು ದಯಾಮರಣಕ್ಕಾಗಿ ರಾಜ್ಯಪಾಲರ ಹತ್ತಿರ ಮನವಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಾದ ತಮ್ಮಿಂದ ನನಗೆ ಅನುಮತಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಜಿಲ್ಲಾಧಿಕಾರಿಗಳಿಗೆ ನೊಂದ ದಲಿತ ದೇವದಾಸಿ ಮಹಿಳೆ ಹಿರಿಯಮ್ಮ ಪತ್ರವನ್ನು ಬರೆಯುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ .
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನೊಂದ ದಲಿತ ದೇವದಾಸಿ ಮಹಿಳೆ ಹಿರಿಯಮ್ಮ ನಾನು ಬಿಜೆಪಿ ಪಕ್ಷದ ಕಾರ್ಯಕರ್ತೆಯಾಗಿದ್ದು ಪಕ್ಷಕ್ಕಾಗಿ ದುಡಿದಿದ್ದೇನೆ ಅಲ್ಲದೆ 2018 ರಲ್ಲಿ ಕರುಣಾಕರ ರೆಡ್ಡಿ ಅವರ ಗೆಲುವಿಗೆ ಶ್ರಮಿಸಿದ್ದೇನೆ ಆದರೂ ಸಹ ಶಾಸಕರು ನನ್ನ ಮೇಲೆ ಈ ರೀತಿ ದ್ವೇಷದಿಂದ ಪ್ರಕರಣವನ್ನು ದಾಖಲಿಸಿ ವಿನಾ ಕಾರಣ ನನಗೆ ತೊಂದರೆ ನೀಡುತ್ತಿದ್ದಾರೆ ಎಂದರು.
ಸಮಾಜದಲ್ಲಿ ಏನು ತಿಳಿಯಲಾರದವರು ಸಾರ್ವಜನಿಕ ಜೀವನವನ್ನು ಕಾಣದವರು ಸಮಾಜದ ಬಗ್ಗೆ ಕಳಕಳಿ ಇಲ್ಲದವರು ಜವಾಬ್ದಾರಿ ಸ್ಥಾನದಲ್ಲಿರದವರು ಅಕಸ್ಮಾತಾಗಿ ಮಾಡುವಂತಹ ಕೆಲಸವನ್ನು ಒಂದು ಕ್ಷೇತ್ರದ ಹಾಲಿ ಶಾಸಕರಾದ ಗಾಲಿ ಕರುಣಾಕರ ರೆಡ್ಡಿ ಅವರು ಜವಾಬ್ದಾರಿ ಸ್ಥಾನದಲ್ಲಿದ್ದು ನಾಲ್ಕು ಜನರಿಗೆ ಬುದ್ಧಿ ಹೇಳಬೇಕಾದಂತವರು ದಲಿತ ,ದೇವದಾಸಿ ಮಹಿಳೆಗೆ ಈ ರೀತಿಯಾದಂತ ತೊಂದರೆ ಕೊಟ್ಟಿರುವುದು ನಿಜಕ್ಕೂ ಸೂಜಿಗ ಎಂದೆನಿಸುತ್ತದೆ ಏಕೆಂದರೆ ಶಾಸಕರು ಈ ರೀತಿ ವರ್ತನೆ ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಇನ್ನು ಜನಸಾಮಾನ್ಯರು ಹೇಗೆ ವರ್ತಿಸಿಯಾರು ಎಂಬುದು ತಾಲೂಕಿನಲ್ಲಿ ಈಗ ಬಾರಿ ಚರ್ಚೆಯಾಗುತ್ತಿದೆ.
ಅದೇನೇ ಇರಲಿ ಬಿಡಿ ನೊಂದ ದಲಿತ ಮಹಿಳೆಗೆ ಹರಪನಹಳ್ಳಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಈ ರೀತಿ ದುರ್ವರ್ತನೆ ತೋರಿಸಬಾರದಿತ್ತು ನೊಂದು ಬೆಂದು ನ್ಯಾಯ ಕೇಳಲು ಬಂದ ಮಹಿಳೆಗೆ ತಮ್ಮ ನಿವಾಸ ಮತ್ತು ಜನಸಂಪರ್ಕ ಕಚೇರಿಯಲ್ಲಿ ಕೂರಿಸಿಕೊಂಡು ಸಮಾಧಾನವಾಗಿ ಸಂಬಂಧಪಟ್ಟ ಸಮಂಜಸವಾದ ಉತ್ತರವನ್ನು ನೀಡಿ ಕಳಿಸಿದಿದ್ದರೆ ಶಾಸಕಾರಿಗೆ ಒಂದು ಗೌರವ ಸಿಗುತ್ತಿತ್ತು ಹೀಗೆ ಮಾಡಿದ್ದರೆ ಅವರು ಶಿಷ್ಟಾಚಾರ ಮರೆಯುತ್ತಿದ್ದರು ವಿಪರ್ಯಾಸವೆಂದರೆ ಇವರು ನೊಂದು ಬೆಂದು ಬಂದ ಮಹಿಳೆಗೆ ಮತ್ತಷ್ಟು ನೋಯಿಸಿ ಕಣ್ಣೀರು ಹಾಕಿಸಿ ಕಳಿಸಿರುವುದು ಶಾಸಕರಿಗೆ ದಲಿತರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲೆ ಎಷ್ಟೊಂದು ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಜನರು ಮೊದಲಿನಿಂದಲೂ ಕರುಣಾಕರ ರೆಡ್ಡಿಯವರನ್ನು ದಲಿತ ವಿರೋಧಿ ಎಂದು ಕರೆಯುತ್ತಿದ್ದರು ಅದು ಮತ್ತೊಮ್ಮೆ ತಾಲೂಕಿನಲ್ಲಿ ಸಾಬೀತಾದಂತಾಗಿದೆ ಎಂಬುದಂತೂ ಸತ್ಯ.