Vijayanagara Express

Kannada News Portal

ದಲಿತ ಸಾಧಕರ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಹಾಜರು, ಸ್ಥಳೀಯ ಶಾಸಕ ಕರುಣಾಕರ ರೆಡ್ಡಿ ಗೈರು

1 min read

ದಲಿತ ಸಾಧಕರ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಹಾಜರು, ಸ್ಥಳೀಯ ಶಾಸಕ ಕರುಣಾಕರ ರೆಡ್ಡಿ ಗೈರು

 

ಹರಪನಹಳ್ಳಿ: ಮಾ -11, ಪಟ್ಟಣದ ಬಾಬು ಜಗಜೀವನ್ ರಾಮ್ ಭವನ ದಲ್ಲಿ ಆಯೋಜಿಸಲಾಗಿದ್ದ ದಲಿತ ಸಾಧಕ ಪದ್ಮಶ್ರೀ ಪರಸಸ್ತಿ ಪುರಸ್ಕೃತರಾದ ಜನಪದ ತಮಟೆ ಕಲಾವಿದ ಪಿಂಡಿ ಪಾಪನಹಳ್ಳಿ ನಾಡೋಜ ಮುನಿವೆಂಕಟಪ್ಪ ಇವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿಯವರು ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಗೌರವಿಸಲು ಬಂದಿದ್ದರು ಆದರೆ ಸ್ಥಳೀಯ ಶಾಸಕರಾದ ಗಾಲಿ ಕರುಣಾಕರ ರೆಡ್ಡಿ ಅವರು ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಶಿಷ್ಟಾಚಾರವನ್ನು ,ದಲಿತರ ಮೇಲಿನ ಕಾಳಜಿಯನ್ನು ಮರೆತು ದಲಿತರ ಮೇಲಿನ ದ್ವೇಷವನ್ನು ಸಾಬೀತುಪಡಿಸಿ ದಂತಾಗಿದೆ ಎಂದು ಹೇಳಲಾಗುತ್ತದೆ.

ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾದಾಗ ಶಾಸಕ ಕರುಣಾಕರ ರೆಡ್ಡಿ ಅವರು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಮಾತನಾಡಿ ಹರಪನಹಳ್ಳಿಯಲ್ಲಿ ನೆಡೆಯಲಿರುವ ದಲಿತ ಸಾಧಕ ಪುರಸ್ಕೃತರ ಕಾರ್ಯಕ್ರಮಕ್ಕೆ ದಯವಿಟ್ಟು ಬರಬೇಡಿರಿ ಈ ಕಾರ್ಯಕ್ರಮವನ್ನು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತಿರುವುದಿಲ್ಲ ಆದ್ದರಿಂದ ತಾವು ಬರಬೇಡಿ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತದೆ .

ಕಾರ್ಯಕ್ರಮ ಆಯೋಜಕರು ಶಾಸಕರಿಗೂ ಆಹ್ವಾನವನ್ನು ಕೊಟ್ಟು ವಿಶೇಷ ಆಹ್ವಾನಿತರು ಎಂದು ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು ಮತ್ತು ಕಾರ್ಯಕ್ರಮಕ್ಕೆ ಅವರನ್ನು ಪರಿಗಣಿಸಲಾಗಿತ್ತು ಇದು ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಶಾಸಕ ಕರುಣಾಕರ ರೆಡ್ಡಿಯವರು ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ.

ಅದೇನೆಂದರೆ, ಕರುಣಾಕರ ರೆಡ್ಡಿ ಅವರು ಪದೇ ಪದೇ ದಲಿತರ ವಿರೋಧಿ ಅಂಬೇಡ್ಕರ್ ವಿರೋಧಿ ,ಶೋಷಿತರ ವಿರೋಧಿ ಎಂದು ಹಾಗಾಗ ತಾಲೂಕಿನಾದ್ಯಂತ ಹರಿದಾಡಿತ್ತಿರುತ್ತದೆ ಅನೇಕ ಪತ್ರಿಕೆಗಳಲ್ಲಿಯೂ ಸಹ ಪ್ರಕಟವಾಗಿರುತ್ತದೆ ಆ ಮಾತಿಗೆ ಸಾಕ್ಷಿ ಎಂಬಂತೆ ಕರುಣಾಕರ ರೆಡ್ಡಿ ಅವರು ಇಂದು ನಡೆದ ಕಾರ್ಯಕ್ರಮಕ್ಕೆ ಉದ್ದೇಶಪೂರ್ವಕವಾಗಿ ಬಳ್ಳಾರಿ ಕಡೆ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಸ್ಥಳೀಯ ಬಿಜೆಪಿ ಮುಖಂಡರನ್ನು ನಿರ್ಲಕ್ಷಿಸುತ್ತಿರುವ ಕರುಣಾಕರ ರೆಡ್ಡಿ.

ಹೌದು ಇಂತದ್ದೊಂದು ಚರ್ಚೆ ಇತ್ತೀಚಿಗೆ ತಾಲೂಕಿನಾದ್ಯಂತ ನಡೆಯುತ್ತಿದೆ ಬಿಜೆಪಿಯನ್ನು ಕೆಳಮಟ್ಟದಿಂದ ಕಟ್ಟಿ ಬೆಳೆಸಿದ ಅನೇಕ ಸ್ಥಳೀಯ ಮುಖಂಡರು ಇಂದು ಶಾಸಕರೊಂದಿಗೆ ಗುರುತಿಸಿಕೊಂಡಿಲ್ಲ ಆದರೆ ಪಕ್ಷದ ನಿಷ್ಠೆಯನ್ನು ಬಿಟ್ಟಿಲ್ಲ ಇದಕ್ಕೆ ಕಾರಣ ಶಾಸಕರ ಸರ್ವಾಧಿಕಾರತ್ವದ ಧೋರಣೆಯ ಮನೋಭಾವನೆಯೇ ಆಗಿದೆ ಆರಂಭದಲ್ಲಿ ಆರಂಡಿ ನಿಂಗಪ್ಪ ವಕೀಲರು,ಆರುಂಡಿ ನಾಗರಾಜ್, ನಂಜನ ಗೌಡ ಜಗದೀಶ್, ಎಂಪಿ ನಾಯ್ಕ್ ನಂತರದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಲ್ ಮಂಜ ನಾಯ್ಕ್ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ನಿಂಬ್ಯಾನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷರಾದ ಸತ್ತೂರು ಹಾಲೇಶ್ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಓಂಕಾರ ಗೌಡ ಇನ್ನು ಅನೇಕ ಮುಖಂಡರುಗಳನ್ನು ನಿರ್ಲಕ್ಷ್ಯ ಮಾಡಿ ಅವರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನು ನೀಡದೆ ಮೂಲಿ ಗುಂಪು ಮಾಡಿ ಪಕ್ಷಕ್ಕೂ ಪಕ್ಷದ ಶಿಸ್ತಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಮನಬಂದಂತೆ ವರ್ತಿಸುತ್ತಿರುವುದೇ ಶಾಸಕರ ನಡವಳಿಕೆಯಾಗಿದೆ ಎಂದು ಮುಖಂಡರುಗಳು ದೂರುತ್ತಿದ್ದಾರೆ .

ಹೋಗಲಿ ಬಿಡಿ ಅದೇನೇ ಇರಲಿ ಶಾಸಕರ ಬಗ್ಗೆ ಸುದ್ದಿಗಾರರು ಕೇಂದ್ರ ಸಚಿವರನ್ನು ಸರ್ ಶಾಸಕ ಕರುಣಾಕರ ರೆಡ್ಡಿಯವರನ್ನು ದಲಿತ ವಿರೋಧಿ ಅಂಬೇಡ್ಕರ್ ವಿರೋಧಿ ಎನ್ನುವರು ಅಲ್ಲದೆ ದಲಿತ,ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಾರೆ ಎಂಬ ಆರೋಪವಿದೆ ಸರ್ ಇದರ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕ್ಷೇತ್ರದಲ್ಲಿ ಕರುಣಾಕರ ರೆಡ್ಡಿ ಅವರು ಎಲ್ಲಾ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮನಸ್ಸಿನವರಾಗಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು .

ಕರುಣಾಕರ ರೆಡ್ಡಿ ಅವರು ಕಾರ್ಯಕ್ರಮ ಮುಗಿದ ಮರುದಿನ ಬೆಳಗ್ಗೆ ಪಟ್ಟಣದಲ್ಲಿ ಇದ್ದಾರೆ ಕಾರ್ಯಕ್ರಮದ ಹಿಂದಿನ ದಿನ ಸಂಜೆವರೆಗೂ ಪಟ್ಟಣದಲ್ಲಿದ್ದಾರೆ ಹಾಗಾಗಿ ಉದ್ದೇಶಪೂರ್ವಕವಾಗಿ ಕರುಣಾಕರ ರೆಡ್ಡಿ ಅವರು ದಲಿತರ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ ಎಂದು ತಾಲೂಕಿನಾದ್ಯಂತ ಹಿಂದುಳಿದ ದಲಿತ ಮುಖಂಡರು ಹಾಗೂ ತಾಲೂಕಿನ ಜನರು ದೂರುತ್ತಿದ್ದಾರೆ ಎಂದು ಹೇಳಲಾಗುತ್ತದೆ ಹಿಂದುಳಿದ ದಲಿತ ಅಲ್ಪಸಂಖ್ಯಾತರ ಜನರು ಬರುವ ಚುನಾವಣೆಯಲ್ಲಿ ಶಾಸಕರಿಗೆ ಯಾವ ರೀತಿಯಾದಂತ ಪ್ರತಿಕ್ರಿಯೆಯನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

 

 

Leave a Reply

Your email address will not be published. Required fields are marked *