Vijayanagara Express

Kannada News Portal

ಹರಪನಹಳ್ಳಿಯಲ್ಲಿ ಮತ್ತೊಮ್ಮೆ ಜಿಕೆಆರ್ ಎನ್ನುವ ಪೋಸ್ಟರ್ಗಳು ಹಾಸ್ಯಸ್ಪದ – ಶಂಕರನಹಳ್ಳಿ ಡಾ. ಉಮೇಶ್ ಬಾಬು

1 min read

ಹರಪನಹಳ್ಳಿಯಲ್ಲಿ ಮತ್ತೊಮ್ಮೆ ಜಿಕೆಆರ್ ಎನ್ನುವ ಪೋಸ್ಟರ್ಗಳು ಹಾಸ್ಯಸ್ಪದ – ಶಂಕರನಹಳ್ಳಿ ಡಾ. ಉಮೇಶ್ ಬಾಬು

ಹರಪನಹಳ್ಳಿ: ಮಾ -20, ಹರಪನಹಳ್ಳಿಯಲ್ಲಿ ಮತ್ತೊಮ್ಮೆ ಜಿಕೆಆರ್ ಎನ್ನುವ ಪೋಸ್ಟರ್ಗಳು ಹಾಸ್ಯಸ್ಪದ ಎಂದು ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷರಾದ ಶಂಕರನಹಳ್ಳಿ ಡಾ. ಉಮೇಶ್ ಬಾಬು ಅವರು ಪತ್ರಿಕೆ ಹೇಳಿಕೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಂಥದೊಂದು ಚರ್ಚೆ ತಾಲೂಕಿನಾದ್ಯಂತ ನಡೆಯುತ್ತಿದೆ ಇದಕ್ಕೆ ಕಾರಣ ಶಾಸಕರು ತಾಲೂಕನ್ನು ಅಭಿವೃದ್ಧಿ ಮಾಡದೆ ರಸ್ತೆಗಳು ಗುಂಡಿ ಗುಂಡಿ ಬಿದ್ದು ಹೊಂಡಗಳಾಗಿ ದಿನಂಪ್ರತಿ ಜನರು ರಸ್ತೆಗಳಲ್ಲಿ ಸಂಚರಿಸುವಾಗ ಸ್ಥಳೀಯ ಶಾಸಕರಿಗೆ ಹಿಡಿ ಶಾಪ ಹಾಕುತ್ತಿರುವುದು ಕಂಡುಬರುತ್ತದೆ ಅಲ್ಲದೇ ವಾಹನ ಸವಾರರು ಕೈಕಾಲುಗಳನ್ನು ಮುರಿದುಕೊಂಡು ಬೈಯುವವರು ಎಷ್ಟು ಜನರೋ, ವೃದ್ಧರು ಮಕ್ಕಳು ರಸ್ತೆಯಲ್ಲಿ ಸಂಚರಿಸುವಾಗ ಆಗುತ್ತಿರುವ ನೋವೇಷ್ಟೋ ?ಇಷ್ಟೆಲ್ಲಾ ಅಭಿವೃದ್ಧಿಯಿಂದ ಪಟ್ಟಣ ವಂಚಿತವಾಗಿದ್ದರೂ ಸಹ ಶಾಸಕ ಕರುಣಾಕರ ರೆಡ್ಡಿ ಅವರು ಹರಪನಹಳ್ಳಿಯಲ್ಲಿ ಮತ್ತೊಮ್ಮೆ ಜಿಕೆಆರ್ ಎಂಬ ಪೋಸ್ಟರ್ಗಳನ್ನು( ಎಲೆಕ್ಟ್ರಿಕಲ್ ಫೋಲ್ ) ವಿದ್ಯುತ್ ಕಂಬಗಳ ಮೇಲೆ ,ಗೋಡೆಗಳ ಮೇಲೆ ,ಸಾರ್ವಜನಿಕ ಮುಕ್ತ ಪ್ರದೇಶಗಳ ಮೇಲೆ ಅಂಟುಸುತ್ತಿರುವುದನ್ನು ನೋಡಿದರೆ ಇದನ್ನು ನೋಡಿ ನಗಬೇಕು ಅಳಬೇಕು ತಿಳಿಯದಾಗಿದೆ ಎಂದು ತಿಳಿಸಿದ್ದಾರೆ .

ಡಾ.ಉಮೇಶ್ ಬಾಬು

 

ಚುನಾವಣೆ ಇನ್ನೊಂದು ತಿಂಗಳು ಬಾಕಿ ಇರುವಾಗ ಮದುವೆ ಸಮಾರಂಭಗಳು ನಾಮಕರಣ ಶುಭ ಸಮಾರಂಭದ ಕಾರ್ಯಕ್ರಮಗಳಿಗೆ ಕರುಣಾಕರ ರೆಡ್ಡಿಯವರು ಭಾರಿ ಬಿರುಸಿನಿಂದ ಓಡಾಡುತ್ತಿರುವುದು ಕಂಡುಬರುತ್ತದೆ ಇಂತಹ ಕಾರ್ಯಕ್ರಮಗಳಿಗೆ ಶಾಸಕರು ಹೋಗುವುದು ಬಿಡುವುದು ಇದು ಅವರ ವೈಯಕ್ತಿಕ ಮತ್ತು ಖಾಸಗೀ ವಿಷಯ ಬಿಡಿ ,ಆದರೆ
ನಾಲ್ಕು ವರ್ಷಗಳ ಕಾಲ ಜನರ ಕಡೆ ,ಕ್ಷೇತ್ರದ ಕಡೆ ತಿರುಗಿಯೂ ನೋಡದ ಶಾಸಕರು ಚುನಾವಣೆ ಇರುವ ಕಾರಣದಿಂದಾಗಿ ಹೆಚ್ಚು ಹೆಚ್ಚು ಈ ರೀತಿ ಮನೆಗಳಲ್ಲಿ ನೆಡೆಯುವ ವಿಶೇಷ ಕಾರ್ಯಕ್ರಮಗಳಿಗೆ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ .

ರಾಷ್ಟ್ರೀಯ ಹಬ್ಬಗಳಿಗೆ ತಾಲೂಕು ಆಡಳಿತದ ವತಿಯಿಂದ ಕಾರ್ಯಕ್ರಮವನ್ನು ಆಚರಿಸುವಾಗಲೂ ಸಹ ಅನೇಕ ಬಾರಿ ಬೇರೆ ಬೇರೆ ಕಾರಣಗಳ ನೆಪ ಹೇಳಿ ಗೈರು ಹಾಜರಾಗಿರುತ್ತಿದ್ದರು .
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ವಾತಂತ್ರ ಹೋರಾಟಕ್ಕೆ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿ ಅವರು ತಂಗಿದ್ದ ನೆನಪಿಗಾಗಿ ನಿರ್ಮಿಸಿರುವ ಕೊಠಡಿಯಲ್ಲಿ ಬೇಕು ಬೇಡಗಳು ಏನು ಇವೆ ಏನು ಇಲ್ಲ ಎಂಬುದನ್ನು ಕನಿಷ್ಠ ಸೌಜನ್ಯಕ್ಕಾದರೂ ಎಂದೂ ನೋಡಿಲ್ಲ ಅಥವಾ ಅದನ್ನು ಉನ್ನತೀಕರಿಸಲು ಏನಾದರೂ ಮಾಡಬೇಕೋ ಬೇಡವೋ ಎಂಬುದನ್ನು ತಿರುಗಿಯೂ ನೋಡಿಲ್ಲ ಪಟ್ಟಣದ ತಾಲೂಕು ಕ್ರೀಡಾಂಗಣದ ಗೋಡೆ ಕುಸಿದು ಹಾಳಾಗಿ ಹೋದರೂ ಅದನ್ನು ತಿರುಗಿಯೂ ನೋಡಿಲ್ಲ ಅಯ್ಯನಕೆರೆ ಗೊಬ್ಬು ದುರ್ನಾಥ ಹೊಡೆಯುತ್ತಿದ್ದರೂ ಅದನ್ನು ಸ್ವಚ್ಛಗೊಳಿಸುವ ಬಗ್ಗೆ ಆಗಲಿ ಅಥವಾ ಅದನ್ನು ಬೇರೆ ರೀತಿ ಮಾರ್ಪಡಿಸುವುದಾಗಲಿ ಅದರ ಬಗ್ಗೆ ಕಿಂಚಿತ್ತು ಯೋಚಿಸಿಲ್ಲ ಇನ್ನೂ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿರುವುದು , ಗರ್ಭಗುಡಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿ ಸ್ಥಗಿತಗೊಂಡು ಇರುವುದು, ಪಟ್ಟಣದ ರಸ್ತೆಗಳ ದುರಾವಸ್ಥೆ ಇವುಗಳ ಪರಿಸ್ಥಿತಿಯಂತೂ ಹೇಳತೀರದು ಇವುಗಳ ಬಗ್ಗೆ ಶಾಸಕರಿಗೆ ಕನಿಷ್ಠ ಕಾಳಜಿಯೂ ಇಲ್ಲವಾಗಿದೆ ಎಂದು ಹೇಳಿದ್ದಾರೆ.

ಎಸ್ ಸಿಪಿ, ಎಸ್ಟಿಪಿ ಅನುದಾನಗಳು ನ್ಯಾಯತವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕಾಲೋನಿಗಳು ಬೀದಿಗಳಲ್ಲಿ ಕಾಮಗಾರಿಗಳು ಆಗದೆ ಎಲ್ಲೆಲ್ಲೂ ಅವರ ಬಿಲ್ಲುಗಳ ತೆಗೆದುಕೊಳ್ಳಲು ಅನುಕೂಲವಾಗುವಂತೆ ಕಾಮಗಾರಿಗಳು ಯಶಸ್ವಿಗೊಂಡಿವೆ .
ಹರಪನಹಳ್ಳಿ ಗಂಡು ಮೆಟ್ಟಿದ ನಾಡು ಇಲ್ಲಿ ಐತಿಹಾಸಿಕ ಘಟನೆಗಳು ಪುರಾವೆಗಳು ಸಾಕಷ್ಟು ನಡೆದಿವೆ ರಾಜ ಮಹಾರಾಜರುಗಳು ಸಾಮ್ರಾಜ್ಯ ಕಟ್ಟಿ ಆಳಿ ಹೋಗಿದ್ದಾರೆ ಸಂತರು,ಸಾಹಿತಿಗಳು ನಾಡನ್ನು ಬೆಳೆಗಿದ್ದಾರೆ ಇವರುಗಳ ನೆನಪಿಗೆ ಈ ಪರಂಪರೆಯ ನೆನಪಿಗೆ ಸೌಜನ್ಯಕ್ಕಾದರೂ ಮಹಾರಾಜರ ಹೆಸರಿನಲ್ಲಿ ಆಗಲಿ, ಮಹಾರಾಣಿಯರ ಹೆಸರಿನಲ್ಲಾಗಲಿ ವಸ್ತುಸಂಗ್ರಹಾಲಯ ಅಥವಾ ಅರಮನೆಯ ನೆನಪಿಗಾಗಿ ಐತಿಹಾಸಿಕ ಸ್ಮಾರಕ ಭವನ ಇಂತವುಗಳನ್ನ ಕನಿಷ್ಠ ಸೌಜನ್ಯಕಾದರೂ ನಿರ್ಮಿಸಿಲ್ಲ ಇದು ಶಾಸಕರು ಈ ನಾಡಿಗೆ ಮಾಡಿದ ಉಪಕಾರವೇ ಎಂದು ಡಾ ಉಮೇಶ್ ಬಾಬು ರವರು ಪ್ರಶ್ನಿಸಿದ್ದಾರೆ .

ಒಟ್ಟಾರೆಯಾಗಿ ಶಾಸಕ ಕರುಣಾಕರ ರೆಡ್ಡಿ ಅವರು ಅಲಂಕಾರಿಕವಾಗಿ ಆಡಳಿತವನ್ನು ಮಾಡುವ ಉದ್ದೇಶದಿಂದ ಹರಪನಹಳ್ಳಿಗೆ ಬಂದು ಅದರ ಉದ್ದೇಶವನ್ನು ಈಡೇರಿಸಿಕೊಂಡಿದ್ದಾರೆ ಎಂದರೆ ಪ್ರಾಯಷ್ಯ ತಪ್ಪಾಗಲಾರದು.
ಕೇವಲ ಚುನಾವಣೆ ,ಬಳ್ಳಾರಿ ,ಬೆಂಗಳೂರು ಗಳಿಗೆ ಓಡಾಡುತ್ತಾ ಕೆಲವು ಕಾಮಗಾರಿಗಳಿಗೆ ಹಸಿರು ನಿಶಾನೆ ತೋರಿಸಿ ಅಭಿವೃದ್ಧಿಯನ್ನು ಬದಿಗೊತ್ತಿ ತಾಲೂಕಿಗೆ ಸ್ವಯಂ ಚಾಲಿತವಾಗಿ ಬಂದ ಅನುದಾನವನ್ನು ಮಾತ್ರ ಬಳಸಿ ಭೂಮಿ ಪೂಜೆ, ಉದ್ಘಾಟನೆಯನ್ನು ನೆರವೇರಿಸಿ ಬಳ್ಳಾರಿ ಕಡೆ ಮುಖ ಮಾಡಿದ್ದನ್ನು ಜನರು ಸೂಕ್ಷ್ಮವಾಗಿ ಐದು ವರ್ಷಗಳ ಕಾಲ ಗಮನಿಸಿದ್ದಾರೆ .
ವಿವಿಧ ಇಲಾಖೆಗಳ ಮಂತ್ರಿಗಳನ್ನು ಸಂಪರ್ಕಿಸಿ ಹೆಚ್ಚುವರಿ ಅನುದಾನವನ್ನು ತಾಲೂಕಿಗೆ ತಂದು ಅಭಿವೃದ್ಧಿ ಕಾಮಗಾರಿಗಳನ್ನು ನೆಡೆಸಿ ಸಂಬಂಧ ಪಟ್ಟ ಇಲಾಖೆಯ ಸಚಿವರುಗಳನ್ನು ತಾಲೂಕಿಗೆ ಕರೆ ತಂದು ಅವುಗಳ ಉದ್ಘಾಟನೆ ಮಾಡಿರುವುದಿಲ್ಲ ಕೇವಲ ಒಂದೇ ಒಂದು ಬಾರಿ ಸಚಿವ ಬಿ ಶ್ರೀರಾಮುಲು ರವರನ್ನು ತಾಲೂಕಿಗೆ ಕರೆಯಿಸಿ ಹಲುವಾಗಲು ಗ್ರಾಮದ ಬಸ್ ನಿಲ್ದಾಣದ ಉದ್ಘಾಟನೆ ಮಾಡಿಸುವ ಮೂಲಕ ಈ ಭಾಗದ ಬಹುಸಂಖ್ಯಾತರಾದ ವಾಲ್ಮೀಕಿ ನಾಯಕ ಸಮಾಜದ ಓಟುಗಳನ್ನು ಓಲೈಸಲು ಪ್ರಯತ್ನಪಟ್ಟಿದ್ದರು ಎಂದಿದ್ದಾರೆ.
ಐದು ವರ್ಷಗಳ ಅವಧಿಯಲ್ಲಿ ವಸತಿ ರಹಿತ ಬಡವರಿಗೆ ವಸತಿಯನ್ನು ಮಂಜೂರು ಮಾಡಿರುವುದಿಲ್ಲ ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಬಂದಂತ ವಸತಿಗಳಿಗೆ ಅನುದಾನವನ್ನು ಇನ್ನುವರೆಗೂ ಬಿಡುಗಡೆಯಾಗಿರುವುದಿಲ್ಲ ಅಲ್ಲದೇ ಗ್ರಾಮ ಪಂಚಾಯತಿಗಳಿಗೆ ಬಂದಂತ ಮನೆಗಳನ್ನು ಫಲಾನುಭವಿಗಳಿಗೆ ನೀಡವಲ್ಲಿ ತಾರತಮ್ಯವನ್ನು ಶಾಸಕ ಕರುಣಾಕರ ರೆಡ್ಡಿಯವರು ಮಾಡಿರುತ್ತಾರೆ ಎಂದು ಉಮೇಶ್ ಬಾಬು ಅವರು ಆರೋಪಿಸಿದ್ದಾರೆ.

ಇಷ್ಟೆಲ್ಲಾ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಈ ಬಾರಿ ತಾಲೂಕಿನಲ್ಲಿ ಎಡವಿದ್ದರು ಸಹ 2023 ಕ್ಕೆ ಹರಪನಹಳ್ಳಿಗೆ ಮತ್ತೊಮ್ಮೆ ಜಿಕೆಆರ್ ಎಂಬ ಪೋಸ್ಟರ್ಗಳನ್ನು ಹಂಟಿಸುತ್ತಿರುವುದು ಹಾಸ್ಯಾಸ್ಪದ ಎಂದು ಜನರು ಸಾಕಷ್ಟು ಚರ್ಚಿಸುತ್ತಿದ್ದಾರೆ ಎಂಬ ಸಂದೇಶ ತಾಲೂಕಿನಲ್ಲಿ ಹರಿದಾಡುತ್ತದೆ ಈ ಬಾರಿ ಶಾಸಕರಿಗೆ ಯಾವ ರೀತಿಯಾದಂತ ಪ್ರತಿಕ್ರಿಯೆಯನ್ನು ನೀಡುವರು ಎಂಬುದನ್ನು ತಾಲೂಕಿನ ಮತದಾರ ಪ್ರಭು ಚುನಾವಣೆಯಲ್ಲಿ
ನಿರ್ಧರಿಸಲಿದ್ದಾನೆ ಎಂಬುದನ್ನು ಕಾದು ನೋಡಬೇಕಾಗಿದೆ.

 

 

.

 

Leave a Reply

Your email address will not be published. Required fields are marked *