ಕೊಲಂಬೋ ಸಮುದಾಯಗಳ ಮೀಸಲಾತಿ ಹೋರಾಟಕ್ಕೆ ಸದಾ ಜೊತೆಗಿರುತ್ತೇನೆ – ಸುಮಂತ್ ರಾಯಸಂ
1 min readಕೊಲಂಬೋ ಸಮುದಾಯಗಳ ಮೀಸಲಾತಿ ಹೋರಾಟಕ್ಕೆ ಸದಾ ಜೊತೆಗಿರುತ್ತೇನೆ – ಸುಮಂತ್ ರಾಯಸಂ
ಹರಪನಹಳ್ಳಿ :ಮಾ – 29 ,ಬಂಜಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಸದಾ ಬೆನ್ನೆಲುಬಾಗಿ ಇರುತ್ತೇನೆ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಸುಮಂತ್ ರಾಯಸಂ ಹೇಳಿದ್ದಾರೆ .
ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಸದಾಶಿವ ಆಯೋಗ ವರದಿ ಪ್ರಕಾರ ಒಳಮೀಸಲಾತಿ ನೀತಿಯನ್ನು ವಿರೋಧಿಸಿ ಬಂಜಾರ ಸಮಾಜವು ನಡೆಸುತ್ತಿರುವ ಹೋರಾಟವು ನ್ಯಾಯ ಸಮ್ಮತ ವಾಗಿದೆ ಹಾಗಾಗಿ ಅವರ ಬೆಂಬಲಕ್ಕೆ ಸದಾ ನಾನು ಇರುತ್ತೇನೆ ಎಂದು ತಿಳಿಸಿದ್ದಾರೆ.
ಬಂಜಾರ ಸಮಾಜದ ಮುಖಂಡರು ಒಳ ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಕ್ರಮವನ್ನು ವಿರೋಧಿಸಿದ್ದಾರೆ ಅಲ್ಲದೆ ಇದೊಂದು ಜಾತಿ ಜಾತಿಗಳನ್ನು ಒಡೆದು ಒಳ ಪಂಗಡಗಳ ನಡುವೆ ಒಡಕು ಮೂಡಿಸುವ ಹುನ್ನಾರ ಇದಾಗಿದೆ ಮತ್ತು ಒಳಮೀಸಲಾತಿ ನೀತಿಯನ್ನು ಅಸಂವಿಧಾನಿಕ ಎಂದು ಮುಖಂಡರುಗಳು ಆರೋಪಿಸಿದ್ದಾರೆ.
ಅವುಗಳನ್ನು ಅನುಭವಿಸಬೇಕಾದವರೆ ಒಳಮೀಸಲಾತಿಯನ್ನು ವಿರೋಧಿಸುತ್ತಿರುವಾಗ ಯಾವ ಪುರುಷಾರ್ಥಕ್ಕೆ ಬಿಜೆಪಿ ಯವರು ಇದನ್ನು ಜಾರಿಗೆ ತಂದಿರುವರು ಎಂದು ಪ್ರಶ್ನಿಸಿದ್ದಾರೆ ಇದು ಆರೋಗ್ಯವಾದ ಸಮುದಾಯಗಳ ಸಂಬಂಧಗಳಲ್ಲಿ ಹುಳಿ ಹಿಂಡಿ ಸಮಾಜವನ್ನು ಒಡೆಯುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ ಎಂದು ಆರೋಪಿಸಿದ್ದಾರೆ.