Vijayanagara Express

Kannada News Portal

ನನ್ನನ್ನು ಗೆಲ್ಲಿಸಿದರೆ ಹೊಸ ಕನಸು ಭರವಸೆಗಳೊಂದಿಗೆ ತಾಲೂಕನ್ನು ಅಭಿವೃದ್ಧಿಪಡಿಸುತ್ತೇನೆ – ಪಕ್ಷೇತರ ಅಭ್ಯರ್ಥಿ ಸುಮಂತ್ ರಾಯಸಂ

1 min read

ನನ್ನನ್ನು ಗೆಲ್ಲಿಸಿದರೆ ಹೊಸ ಕನಸು ಭರವಸೆಗಳೊಂದಿಗೆ ತಾಲೂಕನ್ನು ಅಭಿವೃದ್ಧಿಪಡಿಸುತ್ತೇನೆ – ಪಕ್ಷೇತರ ಅಭ್ಯರ್ಥಿ ಸುಮಂತ್ ರಾಯಸಂ

 

 

ಹರಪನಹಳ್ಳಿ:ಮಾ -29 , ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಹೊಸ ಕನಸು ಭರವಸೆಗಳೊಂದಿಗೆ ತಾಲೂಕನ್ನು ಮುನ್ನಡೆಸುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಸುಮಂತ್ ರಾಯಸಂ ಹೇಳಿದರು.

ತಾಲೂಕಿನಲ್ಲಿ ಸ್ವತಂತ್ರ ಬಂದು 75 ವರ್ಷಗಳವರೆಗೆ ತಾಲೂಕನ್ನು ಆಡಳಿತ ಮಾಡಿದ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳು ತಾಲೂಕನ್ನು ಹೇಳಿಕೊಳ್ಳುವಷ್ಟು ಅಭಿವೃದ್ಧಿಪಡಿಸಿಲ್ಲ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಈ ಪ್ರತಿನಿಧಿಗಳು ವಿಫಲರಾಗಿದ್ದಾರೆ . ರಸ್ತೆಗಳು ಕುಡಿಯುವ ನೀರು ಶೌಚಾಲಯ ಚರಂಡಿ ಬೀದಿ ದೀಪದ ವ್ಯವಸ್ಥೆ ಮುಂತಾದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪ್ರತಿದಿನ ಜನರು ಪರದಾಡುತ್ತಿದ್ದಾರೆ ಎಂದು ಹೇಳಿದರು .

ತಾಲೂಕಿನಲ್ಲಿ ತುಂಗಭದ್ರ ನದಿಯು ಪಕ್ಕದಲ್ಲಿ ಹರಿದು ಹೋಗಿದ್ದರೂ ನೀರಾವರಿ ಸೌಲಭ್ಯದಿಂದ ತಾಲೂಕು ವಂಚಿತವಾಗಿದೆ ಅನೇಕ ಕೆರೆಗಳು ಇದ್ದರೂ ಮಳೆಯ ಕೊರತೆ ಹಾಗೂ ನದಿ ನೀರು ತುಂಬಿಸುವಿಕೆಯಿಂದಾಗಿ ನೀರಾವರಿಯಿಂದ ತಾಲೂಕು ವಂಚನೆಗೊಳದಾಗಿದೆ ಜನರು ತಮ್ಮ ತುತ್ತು ಹೊತ್ತಿನ ಚೀಲ ತುಂಬಿಸಿಕೊಳ್ಳಲು ಈ ಬಯಲು ನಾಡಲ್ಲಿ ಆಗದೆ ದೂರದ ಊರುಗಳಾದ ಚಿಕ್ಕಮಂಗಳೂರು, ಮಂಗಳೂರು, ಬೆಂಗಳೂರು ,ಮುಂಬೈ ,ಹೈದರಾಬಾದ್ ಮುಂತಾದ ಊರುಗಳ ಕಡೆ ದುಡಿಯಲು ಹೊಲಸೆ ಹೋಗುತ್ತಿದ್ದಾರೆ .

ಈ ಭಾಗದಲ್ಲಿ ಕೈಗಾರಿಕೆಗಳಾಗಲಿ ಉದ್ಯೋಗಗಳನ್ನು ನೀಡುವಂತಹ ಯೋಜನೆಗಳಾಗಲಿ ಇಲ್ಲದೆ ಜನರು ಅನಿವಾರ್ಯವಾಗಿ ಪಟ್ಟಣಗಳಿಗೆ ವಲಸೆ ಹೋಗುತ್ತಿರುವುದು ತೀರ ಖೇದಕರ ಸಂಗತಿ ಆಗಿದೆ ಬೇಸರ ವ್ಯಕ್ತಪಡಿಸಿದರು.

ಜನರು ಅನಾರೋಗ್ಯಕ್ಕೆ ತುತ್ತಾದಾಗ ಅತ್ಯುತ್ತಮವಾದ ಹೈಟೆಕ್ ಆಸ್ಪತ್ರೆಗಳು ಇಲ್ಲದೆ ದೂರದ ಊರುಗಳಲ್ಲಿ ಅಂದರೆ ಮಂಗಳೂರು ಮಣಿಪಾಲ್ ಉಡುಪಿ ಬೆಂಗಳೂರು ಹೈದರಾಬಾದ್ ಮುಂಬೈ ಚೆನ್ನೈ ನಂತಹ ಊರುಗಳಿಗೆ ಆಸ್ಪತ್ರೆಗಾಗಿ ಚಿಕಿತ್ಸೆ ಹೋಗುವುದು ಅನಿವಾರ್ಯವಾಗಿದೆ .
ಅಲ್ಲದೆ ಉನ್ನತ ಶಿಕ್ಷಣಕ್ಕಾಗಿ ಅಥವಾ ಗುಣಮಟ್ಟದ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಹೋಗುವುದು ಅನಿವಾರ್ಯವಾಗಿದೆ 2023ರ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗೆ ಗೆಲ್ಲಿಸಿದ್ದೆ ಆದರೆ ನಿರುದ್ಯೋಗ ಜನರಿಗೆ ಉದ್ಯೋಗವನ್ನು ಕಲ್ಪಿಸಲು, ಉತ್ತಮವಾದಂತ ಆಧುನಿಕವಾದ ಆಸ್ಪತ್ರೆಗಳ ನಿರ್ಮಾಣ, ಗುಣಮಟ್ಟದ ಶಿಕ್ಷಣ, ಪಟ್ಟಣದಲ್ಲಿ (ಪಾರ್ಕ್ )ಉದ್ಯಾನವನಗಳ ಸ್ಥಾಪನೆ ಕೈಗಾರಿಕೆ ಅಲ್ಲದೆ ಮೂಲಭೂತ ಸೌಕರ್ಯಗಳನ್ನು ಅಲ್ಲದೆ ತ್ರಿಡೀ ಇಮೇಜ್ ಸ್, ತ್ರಿಡಿ ವಿಡಿಯೋ ಗಳನ್ನು ಫೇಸ್ ಬುಕ್ ಖಾ ರಿಂದತೆಯಲ್ಲಿ ಅಪ್ಲೋಡ್ ಮಾಡಿ ಜನರನ್ನು ತಲುಪುತ್ತಿದ್ದಾರೆ ಈ ರೀತಿಯಲ್ಲಿ ಹರಪನಹಳ್ಳಿಯನ್ನು ಮಾದರಿ ತಾಲೂಕನ್ನಾಗಿ ಮಾಡುವಲ್ಲಿ ಒದಗಿಸಲು ತಾಲೂಕಿನ ಪರವಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ನಾನು ಹರಪನಹಳ್ಳಿ ಪಟ್ಟಣದ ಮೂಲ ನಿವಾಸಿ ಸ್ಥಳೀಯ ನಿಮ್ಮ ಮನೆ ಮಗ 32 ವರ್ಷದ ಯುವಕ ನಾನು ಕಡು ಬಡತನದಲ್ಲಿ ಹುಟ್ಟಿ ಬೆಳೆದರು ಅದರ ನೋವು ಬಡತನದ ಅರಿವು ನನಗಿದೆ ಕಷ್ಟಕಾರ್ಪಣ್ಯಗಳಿಂದ ಬಂದ ನಾನು ತಾಲೂಕನ್ನು ಅಭಿವೃದ್ಧಿಗೊಳಿಸುವ ಹೊಸ ಕನಸು ಭರವಸೆಗಳನ್ನು ಇಟ್ಟುಕೊಂಡಿದ್ದೇನೆ ಆದುದರಿಂದ ನಾನು ತಾಲೂಕಿನಲ್ಲಿ ಕಳೆದ ಒಂದು ವರ್ಷದ ಆರು ತಿಂಗಳಿಂದ ಸಂಘಟನೆಯನ್ನು ಮಾಡುತ್ತಿದ್ದು ಅಲ್ಲದೇ ಫೇಸ್ ಬುಕ್ ಖಾತೆಯಲ್ಲಿ ನಮ್ಮ ತಾಲೂಕು ನಮ್ಮ ಕನಸು ಹರಪನಹಳ್ಳಿ ಎಂಬ ಖಾತೆಯನ್ನು ತೆರೆದು ಹೊಸ ಕನಸುಗಳೊಂದಿಗೆ ಪವರ್ ಆಫ್ ಯುವ್ತ್ ಎಂಬುದರೊಂದಿಗೆ ಯುವಕರು ಹಿರಿಯರು ಪ್ರಜ್ಞಾವಂತರನ್ನು ಹೋರಾಟಗಾರರನ್ನು ತಲುಪುವಲ್ಲಿ ಪ್ರಯತ್ನ ಮಾಡಿದ್ದೇನೆ ಈ ತಾಲೂಕಿನ ಎಲ್ಲರೂ ಕೈಜೋಡಿಸಿ ನನಗೆ ಈ ಬಾರಿ ಆಶೀರ್ವದಿಸಿದ್ದೆ ಆದರೆ ತಾಲೂಕನ್ನು ಖಂಡಿತ ಮಾದರಿ ತಾಲೂಕನ್ನಾಗಿ ಮಾಡುವಲ್ಲಿ ನಾನು ಹಗಲಿರುಳು ಶ್ರಮಿಸುತ್ತೇನೆ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *