Vijayanagara Express

Kannada News Portal

ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ?

1 min read

ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ?

ಎಂ ಪಿ ಲತಾ ಮಲ್ಲಿಕಾರ್ಜುನ VS ಶಶಿಧರ ಪೂಜಾರ್, ಎನ್ ಕೊಟ್ರೇಶ್

ಹರಪನಹಳ್ಳಿ : ಏ – 2 , ಹೌದು ಹೀಗೊಂದು ಚರ್ಚೆ ಈಗ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಅಂತಿಮವಾಗತೊಡಗಿದೆ ಎಂದು ಹೇಳಲಾಗುತ್ತದೆ .


ಹರಪನಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಸುಮಾರು 17 ಜನ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಇವರ ಪೈಕಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಅಧಿಕೃತ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮ ಮಾಡಿ ಖಚಿತಗೊಳಿಸಬೇಕಾದ ಸಮಯ ಈಗ ಬಂದಿದೆ ಆದುದರಿಂದ ಬೇರೆ ತಾಲೂಕುಗಳಿಂದ ಬಂದು ಹರಪನಹಳ್ಳಿ ತಾಲೂಕು ಸಾಮಾನ್ಯ ಕ್ಷೇತ್ರಕ್ಕೆ ಅರ್ಜಿಯನ್ನು ಸಲ್ಲಿಸಿದವರನ್ನು ಮೊದಲನೇ ಹಂತದಲ್ಲಿ ಹೊರಗಿಡಲಾಗಿದೆ ಎಂದು ತಿಳಿದುಬಂದಿದೆ.

ಏಕೆಂದರೆ ಈ ಬಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕ್ಷೇತ್ರದಲ್ಲಿ ಪ್ರಬಲವಾಗಿ ಕೇಳಿ ಬಂದಿತ್ತು ತದನಂತರ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು ಎಂಬ ಅಂಶಗಳನ್ನು ತೀಕ್ಷ್ಣವಾಗಿ ಇಲ್ಲಿ ಪರಿಗಣಿಸಲಾಗಿದೆ ಎಂದು ವಿಶ್ಲೇಷಿಸಲಾಗಿತ್ತು ಎಂದು ಹೇಳಲಾಗುತ್ತದೆ .

ಸ್ಥಳೀಯ ಅಭ್ಯರ್ಥಿಗಳು ತಾಲೂಕಿನಲ್ಲಿ ಇದ್ದುಕೊಂಡು ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಮೊದಲನೆಯದಾಗಿ ಪರಿಗಣಿಸಲಾಗುತ್ತದೆ ಮತ್ತು ಅವರು ಸ್ಥಳೀಯರಾಗಿರಬೇಕೆಂಬ ನಿಯಮವನ್ನು ಪಾಲಿಸಲಾಗುತ್ತದೆ ಎಂದು ಹೇಳಲಾಗುತ್ತದೆ ಎಂಪಿ ಲತಾ ಮಲ್ಲಿಕಾರ್ಜುನ್ ರವರು ಕಳೆದ ನಾಲ್ಕೂವರೆ ವರ್ಷಗಳಿಂದ ಮಾಜಿ ಶಾಸಕ ದಿವಂಗತ ಎಂ ಪಿ ರವೀಂದ್ರ ರವರು 2018 ರಲ್ಲಿ ಕಾಲವಾದ ನಂತರ ಅಂದಿನಿಂದ ಇಂದಿನವರೆಗೂ ತಾಲೂಕಿನಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಎಂಬುದನ್ನು ಬಲವಾಗಿ ಪರಿಗಣಿಸಲಾಗಿದೆ ಎಂದು ಹೇಳಲಾಗುತ್ತದೆ ಅಲ್ಲದೆ ಇವರಿಗೆ ತಮ್ಮದೇ ಆದ ಕಾರ್ಯಕರ್ತರ ಗುಂಪು ಇದೆ ತಾಲೂಕಿನಲ್ಲಿರುವ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವವರಾಗಿದ್ದಾರೆ ಹಾಗೂ ತಾಲೂಕಿನಲ್ಲಿ ಇದುವರೆಗೂ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಶ್ರಮಿಸಿದ್ದಾರೆ ಅಲ್ಲದೇ ಅವರ ಕಷ್ಟಸುಖಗಳಿಗೆ ಸ್ಪಂದಿಸಿದ್ದಾರೆ ಹೀಗಾಗಿ ಎಂ ಪಿ ಲತಾ ಮಲ್ಲಿಕಾರ್ಜುನ ಅವರಿಗೆ ಬಹುತೇಕ ಟಿಕೆಟ್ ಖಚಿತ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ತದನಂತರ ಶಶಿಧರ್ ಪೂಜಾರ್ ಅವರು ಸುಮಾರು 25 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲೆ ಇದ್ದು ಕಾಂಗ್ರೆಸ್ ಪಕ್ಷಕ್ಕಾಗಿ ವಿದ್ಯಾರ್ಥಿ ದೆಸೆಯಿಂದಲೂ ದುಡಿದಿದ್ದಾರೆ ಎಂಬುದನ್ನು ಪರಿಗಣಿಸಲಾಗಿದೆ ಎನ್ನಲಾಗುತ್ತಿದೆ ಮೇಲಾಗಿ ಅವರು ಸ್ಥಳೀಯರು ಹೂವಿನಹಡಗಲಿ ಶಾಸಕ ಪಿ ಟಿ ಪರಮೇಶ್ವರ್ ನಾಯ್ಕ್ ಅವರ ಕಟ್ಟಾ ಅನುಯಾಯಿ ಇವರು ಹೂವಿನ ಹಡಗಲಿ ತಾಲೂಕಿನಲ್ಲಿರುವ ಪಂಚಮಸಾಲಿ ಮತಗಳನ್ನು ಪಡೆಯಲು ಶಶಿಧರ್ ಪೂಜಾರ್ ರವರಿಗೆ ಹರಪನಹಳ್ಳಿಯಲ್ಲಿ ಟಿಕೆಟ್ ನ್ನು ಕೊಡಿಸಿದರೆ ಹೂವಿನಹಡಗಲಿ ಕ್ಷೇತ್ರದ ಪಂಚಮಸಾಲಿ ಮತಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂಬುದು ಪರಮೇಶ್ವರ್ ನಾಯ್ಕ್ ಅವರ ಲೆಕ್ಕಾಚಾರ ಅಲ್ಲದೆ ಕಳೆದ ಹರಪನಹಳ್ಳಿ ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಪಿ ಟಿ ಪರಮೇಶ್ವರ್ ನಾಯ್ಕ್ ಅವರಿಗೆ ಉಸ್ತುವಾರಿಯನ್ನು ವಹಿಸಿದ್ದರು ಪಿಟಿ ಪರಮೇಶ್ವರ್ ನಾಯ್ಕ್ ಅವರು ಆಗ ಶಶಿಧರ್ ಪೂಜಾರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಅದಿನೈದು ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿತ್ತು ಇದನ್ನು ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿತ್ತು ಅಲ್ಲದೆ ಯಾವ ಪಕ್ಷಗಳಿಗೂ ಹೋಗಿ ಬಂದವರಲ್ಲ ಇವರು ಪಕ್ಷ ನಿಷ್ಠರಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಹೇಳಲಾಗುತ್ತದೆ .
ಅಲ್ಲದೆ ಮೂರ್ನಾಲ್ಕು ಜಿಲ್ಲೆಗಳಲ್ಲಿ ಅಂದರೆ ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಗದಗ ಜಿಲ್ಲೆಗಳಲ್ಲಿ ಪಂಚಮಸಾಲಿ ಅಭ್ಯರ್ಥಿಗಳಿಗೆ ಟಿಕೆಟ್ ಅನ್ನು ನೀಡಿರುವುದಿಲ್ಲ ಮತ್ತು ಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ನಿರ್ಣಾಯಕ ವಾಗಿದ್ದು ಸುಲಭವಾಗಿ ಗೆಲುವಿನ ದಡವನ್ನು ಸರಳವಾಗಿ ಮುಟ್ಟಬಹುದು ಎಂಬ ಲೆಕ್ಕಾಚಾರವನ್ನು ಹೈಕಮಾಂಡ್ ಮಾಡಿದೆ ಎಂದು ಹೇಳಲಾಗುತ್ತದೆ ಈ ಕಾರಣಕ್ಕಾಗಿ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಮಠಾಧೀಶರ ಒತ್ತಡದಿಂದಾಗಿ ಹೈಕಮಾಂಡ್ ಇಲ್ಲಿ ಟಿಕೆಟ್ ನ್ನು ಶಶಿಧರ ಪೂಜಾರ್ ರವರಿಗೆ ನೀಡಲು ಅವರನ್ನು ಪರಿಗಣಿಸಬಹುದು ಎನ್ನಳಲಾಗುತ್ತದೆ .

ಅರಸೀಕೆರೆಯ ಎನ್ ಕೊಟ್ರೇಶ್ ಅವರ ಹೆಸರನ್ನು ಟಿಕೆಟ್ ನೀಡಲು ಪರಿಗಣಿಸಲಾಗಿದೆ ಎಂದು ಸಹ ಬಲಮೂಲಗಳಿಂದ ತಿಳಿದುಬಂದಿದೆ ಏಕೆಂದರೆ ಇವರು ಹರಪನಹಳ್ಳಿ ತಾಲೂಕಿನ ಸ್ಥಳೀಯರು ಇವರ ವ್ಯಾಪ್ತಿ ಅರಸೀಕೆರೆ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತಿದ್ದು ಆದಾಗ್ಯೂ ಇವರನ್ನು ಸ್ಥಳೀಯ ವ್ಯಾಪ್ತಿಗೆ ಪರಿಗಣಿಸಲಾಗಿದೆ ಎಂದೂ ಸಹ ಹೇಳಲಾಗುತ್ತದೆ .

ಅಲ್ಲದೆ ಇವರು ಪಂಚಮಸಾಲಿ ಸಮಾಜದ ಅಭ್ಯರ್ಥಿ ಇದೆಲ್ಲಕ್ಕಿಂತ ಮುಖ್ಯವಾಗಿ ಇವರ ಹತ್ತಿರ ಯಾರೆ ಬಂದರೂ ಸಹ ಸಮಾಧಾನವಾಗಿ ಮಾತನಾಡಿಸುವ ಗುಣವನ್ನು ಹೊಂದಿರುತ್ತಾರೆ ಹಾಗೂ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಇದೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕ್ರಮವಾಗಿ 27ಸಾವಿರ 38 ಸಾವಿರ ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದರು ಆ ಕಾರಣಕ್ಕಾಗಿ ಕೊಟ್ರೇಶ್ ರವರಿಗೆ ಟಿಕೆಟ್ ನ್ನು ನೀಡಿದರೆ ಪಕ್ಷದ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಬಹುದು ಎಂದು ಹೈಕಮಾಂಡ್ ಲೆಕ್ಕಾಚಾರ ಹಾಕಿದೆ ಆದುದರಿಂದ ಇವರನ್ನು ಟಿಕೆಟ್ ಗೆ ಪರಿಗಣಿಸಲಾಗಿದೆ ಎಂದು ಹೇಳಲಾಗುತ್ತದೆ .


ನಂತರ ಎಂ ಪಿ ರವೀಂದ್ರ ರವರ ಮತ್ತೊಬ್ಬ ಸಹೋದರಿ ಎಂ ಪಿ ವೀಣಾ ಮಹಾಂತೇಶ ನಾಲ್ಕು ವರ್ಷಗಳಿಂದ ಎಂ ಪಿ ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಹೆಸರಿನಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದು ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದರೆ ಇವರು ಸಹ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಇವರ ಹೆಸರು ಕೂಡ ಟಿಕೆಟ್ ನ ಅಂತಿಮ ಪಟ್ಟಿಯಲ್ಲಿ ಇದೆ ಎಂದು ಹೇಳಲಾಗುತ್ತದೆ.
ಸ್ಥಳೀಯ ಒಬಿಸಿ ಅಭ್ಯರ್ಥಿಗಳಿಗೆ ಹೈಕಮಾಂಡ್ ಮಣೆಹಾಕುವುದಾದರೆ ಶಂಕರನಹಳ್ಳಿ ಡಾ ಉಮೇಶ್ ಬಾಬು ರವರನ್ನು ಪರಿಗಣಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಉಳಿದಂತ ಸ್ಥಳೀಯ ಅಭ್ಯರ್ಥಿಗಳು ಕಳೆದ ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘಟನೆಗೆ ತಮ್ಮದೇ ರೀತಿಯಲ್ಲಿ ಶ್ರಮಿಸಿದ್ದಾರೆ ಈ ಎಲ್ಲಾ ಅಭ್ಯರ್ಥಿಗಳಿಗೆ ಹೈಕಮಾಂಡ್ ಟಿಕೆಟ್ ನೀಡುವ ವಿಚಾರದಲ್ಲಿ ಮಣೆಹಾಕಲಾಗಿಲ್ಲ ಎಂದು ಹೇಳಲಾಗುತ್ತದೆ.

ಅದೇನೇ ಇರಲಿ ಬಿಡಿ ಕ್ಷೇತ್ರದಲ್ಲಿ ಈಗ ಟಿಕೆಟ್ ಆಕಾಂಕ್ಷಿಗಳು ಎಷ್ಟೇ ಇದ್ದರೂ ಟಿಕೆಟ್ ಒಬ್ಬರಿಗೆ ಮಾತ್ರ ನೀಡಲು ಸಾಧ್ಯ ಅದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತಾಲೂಕಿನ ಆಕಾಂಕ್ಷಿಗಳ ಪೈಕಿ ಯಾವ ಅಭ್ಯರ್ಥಿಯ ಯಾವ ಸೇವೆಗಳಿಗೆ ಮಣೆಹಾಕುವುದೋ ಯಾವ ರೀತಿಯಾದಂತ ತಂತ್ರವನ್ನು ಉಪಯೋಗಿಸಿದರೆ ಪಕ್ಷದಲ್ಲಿ ಅಸಮಾಧಾನ ಮತ್ತು ಗೊಂದಲ ಆಗಲಾರದು ಹಾಗೂ ಚುನಾವಣೆಯಲ್ಲಿ ಗೆಲುವು ಪಡೆಯಹುದು ಎಂಬೆಲ್ಲ ಲೆಕ್ಕಾಚಾರವನ್ನು ಇಟ್ಟುಕೊಂಡು ಟಿಕೆಟ್ ನೀಡುವುದೊ ಏನೋ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *