Vijayanagara Express

Kannada News Portal

ಐತಿಹಾಸಿಕ ಶ್ರೀ ಕೋಟೆ ಆಂಜನೇಯ ಸ್ವಾಮಿ ರಥೋತ್ಸವ

1 min read

ಐತಿಹಾಸಿಕ ಶ್ರೀ ಕೋಟೆ ಆಂಜನೇಯ ಸ್ವಾಮಿ ರಥೋತ್ಸವ

ಹರಪನಹಳ್ಳಿ: ಏ – 6 ,ಐತಿಹಾಸಿಕ ಶ್ರೀ ಕೋಟೆ ಆಂಜನೇಯ ಸ್ವಾಮಿ ರಥೋತ್ಸವವು ಇಂದು ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ರಥೋತ್ಸವ ಕಾರ್ಯಕ್ರಮ ವೈಭವದಿಂದ ಜರುಗಿತು ಪ್ರತಿ ವರ್ಷದಂತೆ ಈ ವರ್ಷವೂ ಸಹ ದವನದ ಹುಣ್ಣಿಮೆಯಂದು ಶ್ರೀ ಹನುಮಜಯಂತಿಯ ಪ್ರಯುಕ್ತ ಸ್ವಾಮಿಯ ರಥೋತ್ಸವವನ್ನು ಆಚರಿಸಲಾಗುವುದು ಅದರಂತೆ ಗುರುವಾರ ಸಾಯಂಕಾಲ 6:00 ಗಂಟೆಗೆ ಸಮಯದಲ್ಲಿ ರಥೋತ್ಸವವನ್ನು ನೂರಾರು ಜನರ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ನಂದಿಕೋಲು ಸಮಾಳ ರಥೋತ್ಸವಕ್ಕೆ ಮೆರುಗು ತಂದವು ರಥಕ್ಕೆ ನೆರೆದಿದ್ದ ಭಕ್ತರು ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.

ಬೆಳಿಗ್ಗೆಯಿಂದಲೇ ಭಕ್ತರು ದೀವಟಿಗೆ ನಮಸ್ಕಾರ ಹಾಕುತ್ತಿದುದು ಕಂಡುಬಂದಿತು ದೇವಸ್ಥಾನದ ಸಮಿತಿಯವರು ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದರು ಮಧ್ಯಾಹ್ನದ ವೇಳೆಗೆ ಬಿಸಿಲು ಬಿರುಸುಗೊಳ್ಳುವ ಕಾರಣ ಬೆಳಿಗ್ಗೆ 8 ಗಂಟೆಯಿಂದ ಭಕ್ತರು ದೇವಾಲಯಕ್ಕೆ ಬರುತ್ತಿದ್ದುದು ಕಂಡು ಬಂದಿತು.
ರಥೋತ್ಸವಕ್ಕಿಂತ ಮುಂಚೆ ಸ್ವಾಮಿಯ ಪಟವನ್ನು ಹರಾಜು ಮಾಡಲಾಯಿತು ದ್ಯಾಮಜ್ಜಿ ರೊಕ್ಕಪ್ಪ 52 ಸಾವಿರ ರೂಪಾಯಿಗಳಿಗೆ ಹರಾಜು ಮಾಡಿಕೊಂಡರೆ ಗಂಧದ ಹಾರವನ್ನು ನಿಟ್ಟೂರು ತಿಮ್ಮಣ್ಣ ನು 21 ಸಾವಿರ ರೂಪಾಯಿಗಳಿಗೆ , ಹೂವಿನ ಹಾರ ವನ್ನು ಮಾಜಿ ಸೈನಿಕ ರಾಜ ಪೂಜಾರ್ ರವರುಗಳು ಕೂಗಿಕೊಂಡರು.

ಬೆಲ್ಲದ ಬಂಡಿ ಸಂಪ್ರದಾಯ

ಪಟ್ಟಣದ ವಿವಿಧಕಡೆಗಳಿಂದ ಮತ್ತು ಹಳ್ಳಿಗಳಿಂದ ಬೆಲ್ಲದ ಬಂಡಿಯನ್ನು ಅಂದರೆ ದೊಡ್ಡ ಬಂಡಿಯಲ್ಲಿ ಬೆಲ್ಲದ ಪಾನಕವನ್ನು ತಂದು ಜನರಿಗೆ ನೀಡುವ ಸಂಪ್ರದಾಯ ರೂಢಿಯಲ್ಲಿದ್ದು ಈ ಬಾರಿ ಮಾದಾಪುರ ಗ್ರಾಮದಿಂದ ಬೆಲ್ಲದ ಬಂಡಿಯನ್ನು ತರಲಾಗಿತ್ತು ಜನರು ಮದ್ಯಾಹ್ನನಿಂದ ಬೆಲ್ಲದ ಪಾನಕದ ಸವಿಯನ್ನು ಸವಿದರು .

ದುರ್ಗದ ಆಂಜನೇಯ ಹರಪನಹಳ್ಳಿಗೆ ಬಂದು ನೆಲೆಸಿದ ಹಿನ್ನೆಲೆ

ಹರಪನಹಳ್ಳಿ ಯನ್ನು ಆಳುತ್ತಿದ್ದ ಮಹಾರಾಜರು ಪಟ್ಟಣದ ಕೋಟೆಯಲ್ಲಿ ಆಂಜನೇಯನ ದೇವಸ್ಥಾನವನ್ನು ಕಟ್ಟಿಸಿ ಅದರಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಜಗಳೂರು ತಾಲೂಕಿನ ಕೆಳೆಗೋಟೆ ಎಂಬಲ್ಲಿ ಆಂಜನೇಯ ಮೂರ್ತಿ ವಿಗ್ರಹವನ್ನು ಕೆತ್ತಿಸಿ ತಯಾರಿ ಮಾಡಿಸಿದ್ದರು ಅಲ್ಲಿಂದ ಮೂರ್ತಿಯನ್ನು ದೊಡ್ಡ ಬಂಡಿಯಲ್ಲಿ ತರುತ್ತಿರುವಾಗ ಉಚ್ಚಂಗಿ ದುರ್ಗದ ತಮ್ಮ ಅರಮನೆಯಲ್ಲಿ ಊಟ ಉಪಚಾರ ಮಾಡಿ ರಾತ್ರಿ ತಂಗಿದ್ದರು ನಂತರ ಬೆಳಿಗ್ಗೆ ಎದ್ದು ಹರಪನಹಳ್ಳಿಗೆ ಹೊರಡಲು ತಯಾರಾಗಿ ನಿಂತಿದ್ದರು ಆಗ ದೇವರಿದ್ದ ದೊಡ್ಡ ಬಂಡಿಯು ಎಷ್ಟೇ ಎಳೆದರೂ ಬಂಡಿ ಮುಂದಕ್ಕೆ ಹೊಗದಿದ್ದದ್ದಕ್ಕೆ ದೇವರನ್ನು ಸಮೀಪದಲ್ಲೇ ಇದ್ದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇದರ ಬಗ್ಗೆ ದೇವರನ್ನು ಕೇಳಿದನು ಆಗ ದೇವರು ಅಲ್ಲಿರುವ ಮೂರ್ತಿಯನ್ನು ಇಲ್ಲಿಯೇ ಪ್ರತಿಷ್ಠಾಪಿಸಿ ಉಚ್ಚಂಗಿ ದುರ್ಗಲ್ಲಿರುವ ದೇವರ ಮೂರ್ತಿ ವಿಗ್ರಹವನ್ನು ಹರಪನಹಳ್ಳಿಗೆ ಕೊಂಡೊಯ್ಯುಲು ಅನುಮತಿಸಿದ ಪರಿಣಾಮವಾಗಿ ಆ ವಿಗ್ರಹವನ್ನು ಹರಪನಹಳ್ಳಿಗೆ ತಂದು ಕೋಟೆ ಯಲ್ಲಿ ಪ್ರತಿಷ್ಠಾಪಿಸಿಸಲಾತು ಅಂದಿನಿಂದ ಈ ದೇವರನ್ನು ದುರ್ಗದ ಹನುಮಪ್ಪ ಎಂದು ಕರೆಯಲಾಗುತ್ತದೆ ಮುಂದೆ ಅದು ಕೋಟೆ ಆಂಜನೇಯ ಸ್ವಾಮಿ ಎಂದು ಪ್ರಸಿದ್ದಿ ಪಡೆದಿದೆ.

ಇನ್ನೊಂದು ದಂಥ ಕಥೆಯ ಪ್ರಕಾರ ಹಾವಿನ ಉತ್ತದ ಒಳಗೆ ಆಂಜನೇಯ ಸ್ವಾಮಿಯ ಮೂರ್ತಿ ಇದ್ದಿತ್ತು ದಿನಾಲೂ ಹಸುವೊಂದು ಹಾಲನ್ನು ಕರೆಯುತ್ತಿತ್ತು ನಂತರ ಮಹಾರಾಜರ ಕಣ್ಣಿಗೆ ಬಿದ್ದಾಗ ಮಹಾರಾಜರು ದೇವಸ್ಥಾನವನ್ನು ಕಟ್ಟಿಸಿದರು ಎಂದು ಹೇಳಲಾಗುತ್ತದೆ.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹೆಚ್ ಕೆ ಹಾಲೇಶ್, ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಮುಖಂಡರಾದ ಚಿಕ್ಕೇರಿ ವೆಂಕಟೇಶ್, ದ್ಯಾಮಜ್ಜಿ ದಂಡೆಪ್ಪ , ಮಂಡಕ್ಕಿ ಸುರೇಶ್, ಹೆಚ್ ಎ.ವೇಣುಗೋಪಾಲ್ ,ಮ್ಯಾಕಿ ದೊಡ್ಡ ದುರುಗಪ್ಪ,ರಾಜು ಪೂಜಾರ್,ಕಮ್ಮಾರ ಸಣ್ಣಹಾಲಪ್ಪ,ಜಂಗ್ಲಿ ಅಂಜಿನಪ್ಪ,ದಾಸಪ್ಪ,ಬಾಣದ ಗಂಗಪ್ಪ, ನಿಟ್ಟೂರು ತಿಮ್ಮಣ್ಣ, ಪ್ರಧಾನ ಅರ್ಚಕ ಮಾರುತಿ ಭಟ್ ಪೂಜಾರ್, ಪಟ್ನಾಮದ ಪರಶುರಾಮ,ದರ್ಮಕರ್ತರಾದ ಕಟ್ಟಿ ಹರ್ಷ,ದಂಡಿನ ಹರೀಶ್, ರೈತ ಸಂಘದ ಮುಖಂಡ ದ್ಯಾಮಜ್ಜಿ ಹನುಮಂತಪ್ಪ, ಹೆಚ್ ಎ ಸುರೇಂದ್ರ ಬಾಬು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್ ಬಿ ಪರಶುರಾಮಪ್ಪ, ಪುರಸಭೆ ಸದಸ್ಯ ಭರತೇಶ , ಟಿ.ಹನುಮಂತಪ್ಪ ,ಗಿಡ್ಡಳ್ಳಿ ನಾಗರಾಜ್, ಪಟ್ನಾಮದ ವೆಂಕಟೇಶ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *