ಪಕ್ಷೇತರ ಅಭ್ಯರ್ಥಿಯಾಗಿ ಸುಮಂತ್ ರಾಯಸಂ ನಾಮಪತ್ರ ಸಲ್ಲಿಕೆ
1 min readಪಕ್ಷೇತರ ಅಭ್ಯರ್ಥಿಯಾಗಿ ಸುಮಂತ್ ರಾಯಸಂ ನಾಮಪತ್ರ ಸಲ್ಲಿಕೆ
ಹರಪನಹಳ್ಳಿ :ಏ – 17 ,ಪಕ್ಷೇತರ ಅಭ್ಯರ್ಥಿಯಾಗಿ ಸುಮಂತ್ ರಾಯಸಂ ನಾಮಪತ್ರ ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹರಪನಹಳ್ಳಿ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದ್ದು ಈ ತಾಲೂಕನ್ನು ಆಳಿದ ಜನಪ್ರತಿನಿಧಿಗಳು ಹರಪನಹಳ್ಳಿಯನ್ನು ಅಭಿವೃದ್ಧಿ ಮಾಡದೇ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಕುಂಠಿತಗೊಳಿಸಿದ್ದಾರೆ ಉದ್ಯೋಗಗಳಿಲ್ಲದೆ ಜನರು ತಾಲೂಕಿನಿಂದ ಬೇರೆ ಕಡೆ ವಲಸೆ ಹೋಗುತ್ತಾರೆ ಇದರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ.
ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದೇ ಆದಲ್ಲಿ ತಾಲೂಕಿನಿಂದ ಉದ್ಯೋಗ ಹರಸಿ ಬೇರೇಡೆಗಳಲ್ಲಿ ಹೊಲಸೆ ಹೋಗುವ ಜನರಿಗೆ ಸಣ್ಣ ಕೈಗಾರಿಕೆ ,ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಕ್ರಮ ಕೈಗೊಳ್ಳುತ್ತೇನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುತ್ತೇನೆ ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುತ್ತೇನೆ ಅಲ್ಲದೆ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳುತ್ತೇನೆ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಶತಾಯಗತಾಯ ಪ್ರಯತ್ನ ಮಾಡುತ್ತೇನೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುತ್ತೇನೆ ತಂತ್ರಜ್ಞಾನ ಆಧುನಿಕತೆಯನ್ನು ಬಳಸಿಕೊಂಡು ಯುವಕರಿಗೆ ಹೊಸ ರೀತಿಯ ಉದ್ಯೋಗಗಳನ್ನು ಪಡೆಯಲು ಕೌಶಲ್ಯಾಧಾರಿತ ತರಬೇತಿಗಳನ್ನು ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಮುಖಂಡರಾದ ಅಜಿತ್ ಕುಮಾರ್ ಎಸ್ ,
ಭರತ್ ಎಸ್ ಪಿ, ಬಸವರಾಜ್, ನಿಂಗಪ್ಪ, ಬಸವರಾಜ್ ಹೆಚ್, ಬಸವರಾಜ್ ಎಸ್,ಹಾಲೇಶಪ್ಪ, ಪ್ರಹ್ಲಾದ್, ಮಹಾಂತೇಶ, ಪ್ರಶಾಂತ್,ಅಜ್ಜಯ್ಯ, ಓ ಹಾಲೇಶ್, ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.