ಬಿಜೆಪಿ ತೊರೆದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗುಂಪಿಗೆ ಸೇರ್ಪಡೆ
1 min readಬಿಜೆಪಿ ತೊರೆದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗುಂಪಿಗೆ ಸೇರ್ಪಡೆ
ಹರಪನಹಳ್ಳಿ : ಏ – 17 , ಬಿಜೆಪಿ ಎಸ್ಸಿ ಮೋರ್ಚಾದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಾಂತಾ ಬಾಯಿಯವರು ಇಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಯಾದ ಎಂಪಿ ಲತಾ ಮಲ್ಲಿಕಾರ್ಜುನ್ ರವರ ಗುಂಪಿಗೆ ನೂರಾರು ಮಹಿಳಾ ಕಾರ್ಯಕರ್ತರೊಂದಿಗೆ ಸೇರ್ಪಡೆಗೊಂಡರು .
ಎಂ ಪಿ ಲತಾ ಮಲ್ಲಿಕಾರ್ಜುನ ರವರು ಶಾಂತಾಬಾಯಿಯನ್ನು ತಮ್ಮ ಗುಂಪಿಗೆ ಸ್ವಾಗತಮಾಡಿಕೊಂಡು ಮಾತನಾಡಿದ ಅವರು ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ನಾಯಕರು ನೋವು ಮಾಡಿದ್ದಾರೆ ನಾನು ನೋಂದವರ ಬಡವರ ದೀನ ದಲಿತರ ಮಹಿಳೆಯರ ಪರವಾಗಿ ಹೋರಾಟ ಮಾಡಿದ್ದೇನೆ ಚುನಾವಣೆಯಲ್ಲಿ ನನಗೆ ಮತವನ್ನು ನೀಡಿ ಗೆಲ್ಲಿಸಿದ್ದೇ ಆದಲ್ಲಿ ನಿಮ್ಮೆಲ್ಲರ ಸಹಕಾರದಿಂದ ಸೇವೆ ಮಾಡುತ್ತೇನೆ ಎಂದು ಹೇಳಿದರು .
ಈ ವೇಳೆ ಮಾತನಾಡಿದ ಶಾಂತ ಬಾಯಿಯವರು ನಾನು ಬಿಜೆಪಿಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ ಅಲ್ಲಿ ನಮಗೆ ಸೂಕ್ತವಾದ ಸ್ಥಾನಮಾನಗಳು ಸಿಗಲಿಲ್ಲ ಅಲ್ಲದೆ ನಮ್ಮನ್ನು ಗೌರವಾನ್ವಿತವಾಗಿ ನಡೆಸಿಕೊಳ್ಳಲು ಬಿಜೆಪಿಯು ವಿಫಲವಾಯಿತು ಹಾಗೂ ಬಿಜೆಪಿಯಲ್ಲಿ ದುಡಿದವರಿಗೆ ಮಾನ್ಯತೆ ನೀಡುವುದಿಲ್ಲ ಬರೀ ಜಾತಿ ಆಧಾರಿತವಾಗಿ ಸ್ಥಾನಮಾನಗಳನ್ನು ನೀಡುತ್ತಾರೆ ಅಲ್ಲದೆ ಪರಿಶಿಷ್ಟ ಜಾತಿ ಪಂಗಡದವರನ್ನು ಬಿಜೆಪಿ ಕಡೆಗಣಿಸುತ್ತದೆ ಹೀಗಾಗಿ ಇದರಿಂದ ಸಾಕಷ್ಟು ಬೇಸತ್ತು ಮತ್ತು ಕರುಣಾಕರ ರೆಡ್ಡಿ ಅವರ ಸರ್ವಾಧಿಕಾರ ಧೋರಣೆ ಮನೋಭಾವನೆ ಇರುವ ಕಾರಣದಿಂದಾಗಿ ನಾನು ಬಿಜೆಪಿಯನ್ನು ತೊರೆದು ಬಂದಿದ್ದೇನೆ ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಯಾದ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಸಾಕಷ್ಟು ಸೇವೆಯನ್ನು ಈ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಾಡಿದ್ದಾರೆ ಆ ಕಾರಣದಿಂದಾಗಿ ಅವರ ಸೇವೆಯಿಂದ ಪ್ರೇರಣೆಗೊಂಡ ನಾನು ಅವರ ಗುಂಪನ್ನು ಸೇರುತ್ತಿದ್ದೇನೆ ಈ ಚುನಾವಣೆಯಲ್ಲಿ ಅವರ ಪರವಾಗಿ ಸಾಕಷ್ಟು ಕೆಲಸ ಮಾಡಲು ನಾನು ನಿರ್ಧರಿಸಿದ್ದೇನೆ ಎಂದರು .
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಶ್ರೀಮತಿ ಜಯಲಕ್ಷ್ಮಿ, ಎಲ್ ಮಂಜನಾಯ್ಕ್, ಗುರುರಾಜ, ಉಮಾಪ್ರಕಾಶ್, ಸುಧಾ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.