Vijayanagara Express

Kannada News Portal

ಕುಟುಂಬದ ಅಸ್ತಿತ್ವಕ್ಕಾಗಿ ಸಹೋದರಿಯರ ಸಮಾಗಮ

1 min read

ಕುಟುಂಬದ ಅಸ್ತಿತ್ವಕ್ಕಾಗಿ ಸಹೋದರಿಯರ ಸಮಾಗಮ

 

ಹರಪನಹಳ್ಳಿ : ಏ – 21 , ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ ಪಿ ಪ್ರಕಾಶ್ ರವರ ಮಕ್ಕಳಾದ ಎಂ ಪಿ ಲತಾ ಮಲ್ಲಿಕಾರ್ಜುನ ಮತ್ತು ಎಂ ಪಿ ವೀಣಾ ಮಹಾಂತೇಶ ರವರು ಕೌಟುಂಬಿಕ ಕಲಹದಿಂದಾಗಿ ಬೇರೆ ಬೇರೆ ಯಾಗಿ ಒಂದೇ ತಾಲೂಕಿನಲ್ಲಿ
ಒಂದೇ ಪಕ್ಷದಲ್ಲಿ ಭಿನ್ನ ಗುಂಪುಗಳಾಗಿ ರಾಜಕಾರಣ ಆರಂಭಿಸಿದ್ದರು  ಆದರೆ  ಭಿನ್ನಮತ ಮರೆತು  ಸಮಾಗಮ ಆಗಿದ್ದಾರೆ .

ಎಂ ಪಿ ಪ್ರಕಾಶ್ ರವರ ಪುತ್ರ ಹರಪನಹಳ್ಳಿಯ ಮಾಜಿ ಶಾಸಕ ದಿವಂಗತ ಎಂ ಪಿ ರವೀಂದ್ರ ರವರು 2018 ರಲ್ಲಿ ಕಾಲವಾದ ನಂತರ ಅನಿವಾರ್ಯವಾಗಿ ಕುಟುಂಬದ ಪರವಾಗಿ ರಾಜಕಾರಣ ಆರಂಭಿಸಬೇಕಾಗಿದ್ದುದು ಅವರ ಕುಟುಂಬಕ್ಕಿತ್ತು
ಅದರ ಪರಿಣಾಮವಾಗಿ ಎಂಪಿ ಲತಾ ಮಲ್ಲಿಕಾರ್ಜುನ್ ರವರು 2018 ರ ಡಿಸೆಂಬರ್ 4 ರಿಂದ ಅಧಿಕೃತವಾಗಿ ತಮ್ಮನ ಸ್ಥಾನವನ್ನು ತುಂಬುವ ಸಲುವಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿದರು ಅದಾದ ನಂತರ ಎಂಪಿ ಪ್ರಕಾಶ್ ರವರ ಮತ್ತೊಬ್ಬ ಪುತ್ರಿ ಎಂಪಿ ವೀಣಾ ಮಹಾಂತೇಶ್ ರವರು ಎಂಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಎಂಬ ಎನ್ ಜಿ ಓ ಸಂಸ್ಥೆಯನ್ನು ತೆರೆಯುವ ಮೂಲಕ ಸಮಾಜ ಸೇವೆಯ ಕಾರ್ಯಗಳನ್ನು ಅದರ ಜೊತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದರು .

ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿದ್ದ ಭಿನ್ನಾಭಿಪ್ರಾಯವು ನಾಲ್ಕು ವರ್ಷಗಳ ಕಾಲ ಮುಂದುವರೆದು ಪರಸ್ಪರ ಕಚ್ಚಾಟಕ್ಕೆ ಕಾರಣವಾಗಿ ಅದು ಯಾವ ಹಂತಕ್ಕೆ ತಲುಪಿತಂದರೆ ಸ್ವತಂತ್ರವಾಗಿ ಇಬ್ಬರು ಪ್ರತ್ಯೇಕವಾಗಿ ಹರಪನಹಳ್ಳಿ ಕ್ಷೇತ್ರದಲ್ಲೇ ಮುಖಮುಖಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತ ಹಂತಕ್ಕೆ ತಲುಪಿದ್ದರು .

ಇದನ್ನು ಗಮನಿಸಿದಂತಹ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಿರಿಯರು ಸಹೋದರಿಯರಿಬ್ಬರೂ ಹೊಂದಾಣಿಕೆ ಮಾಡಿಕೊಂಡು ರಾಜಕಾರಣವನ್ನು ಮುಂದುವರಿಸುವಂತೆ ಎಷ್ಟೇ ಸಲಹೆ ನೀಡಿದರೂ ಸಹ ಇದಕ್ಕೆ ಇಬ್ಬರು ಒಪ್ಪುತ್ತಿರಲಿಲ್ಲ ಹೀಗೆ ಚುನಾವಣೆ ಸಮೀಪಕ್ಕೆ ಬಂದು ನಾಮಪತ್ರ ಆರಂಭಿಸಿದರೂ ಪರಸ್ಪರರು ಒಂದಾಗಲಿಲ್ಲ ನಾಮಪತ್ರವನ್ನು ಪ್ರತ್ಯೇಕವಾಗಿ ಸಲ್ಲಿಸಿದರು ಇದಾದ ನಂತರ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಗಳಾಗಿದ್ದ ಸಹೋದರಿಯರು ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು ಇದಕ್ಕೆ ಕಾರಣ ಸಹೋದರಿಯರ ಕಲಹವೇ ಕಾರಣ ಎಂದು ಕ್ಷೇತ್ರದ ಜನರು ಹೇಳುತ್ತಿದ್ದರು ಬೆಂಗಳೂರಿನಲ್ಲಿ ಒಂದು ಬಾರಿ ಕೆಪಿಸಿಸಿ ಮುಖಂಡರೊಬ್ಬರು ಸಹೋದರಿಯರಿಬ್ಬರು ಒಂದಾಗಿ ಬಂದರೆ ನಿಮ್ಮ ಕುಟುಂಬಕ್ಕೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರಂತೆ ಎಂದು ಹೇಳಲಾಗುತ್ತದೆ.


ಹಾಗಾಗಿ ಕ್ಷೇತ್ರದ ಜನರು ,ಕಾಂಗ್ರೆಸ್ ನ ಮುಖಂಡರು ಕಾಂಗ್ರೆಸ್ ಟಿಕೆಟ್ ಸುಲಭವಾಗಿ ಸಿಗುವುದನ್ನು ಸಹೋದರಿಯರೇ ಹಾಳು ಮಾಡಿಕೊಂಡರು ಎಂದು ನಾಮಪತ್ರ ಸಲ್ಲಿಕೆ ವೇಳೆ ಸಾಕಷ್ಟು ಚರ್ಚಿಸುತ್ತಿದ್ದರು. ಹೀಗಾಗಿ ಕೊನೆಗೂ ಎಂಪಿ ಪ್ರಕಾಶ್ ರವರ ಪುತ್ರಿಯರಿಬ್ಬರು ಹೊಂದಾಣಿಕೆ ಮಾಡಿಕೊಂಡು ರಾಜಕಾರಣವನ್ನು ಮುಂದುವರಿಸುವ ಮೂಲಕ ಕುಟುಂಬದ ಅಸ್ತಿತ್ವವನ್ನು ಉಳಿಸಲೇಬೇಕಾದ ಅನಿವಾರ್ಯತೆಗೆ ಮುಂದಾಗಿದ್ದಾರೆ ಇದನ್ನು ಕಂಡಂತ ಕ್ಷೇತ್ರದ ಜನರು, ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಖುಷಿಯಲ್ಲಿ ಮಿಂದೆದ್ದಿದ್ದಾರೆ ಸಹೋದರಿಯರಿಬ್ಬರಿಗೂ ಜೈಕಾರ ಕೂಗಿ ಆನಂದ ವ್ಯಕ್ತಪಡಿಸಿದ್ದಾರೆ .

ಮಠಾಧೀಶರೊಬ್ಬರು ಹೊಂದಾಣಿಕೆ ಮಾಡಿಕೊಂಡು ಇಬ್ಬರು ರಾಜಕಾರಣದಲ್ಲಿ ಮುಂದುವರೆಯಲು ಹೇಳಿದ್ದಾರೆ ಎಂದು ಹೇಳಲಾಗುತ್ತದೆ ಇದರ ಫಲವಾಗಿ ಸಂದಾನ ನೆಡೆದು ಸಹೋದರಿಯರಿಬ್ಬರು ಸಮಾಗಮವಾಗಿದ್ದಾರೆ ನಾಮಪತ್ರವನ್ನು ಪ್ರತ್ಯೇಕವಾಗಿ ಸಲ್ಲಿಸುವ
ಮೊದಲೇ ಸಂಧಾನ ಮಾತುಕತೆ ನಡೆದಿದ್ದರೆ ನಾಮಪತ್ರವನ್ನು ಇಬ್ಬರೂ ಸಲ್ಲಿಸುವ ಪ್ರಮೇಯವೇ ಬರುತ್ತಿರಲಿಲ್ಲ .

ಒಂದಾದ ಸಹೋದರಿಯರಿಂದ ಗೆಲುವಿನ ಭರವಸೆ ಮೂಡಿದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ

ಹೌದು ಎಂ ಪಿ ಪ್ರಕಾಶ್ ರವರ ಪುತ್ರಿಯರಾದ ಇವರು ಸರಳವಾಗಿ ಕ್ಷೇತ್ರವನ್ನು ಉಳಿಸಿಕೊಂಡು ಗೆಲುವನ್ನು ಸಾಧಿಸಬಹುದಾಗಿತ್ತು ಕೌಟುಂಬಿಕ ಕಲಹದಿಂದಾಗಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಲ್ಲದೆ ಅಸ್ತಿತ್ವದ ಪ್ರಶ್ನೆ ಎದುರಾಗಿತ್ತು ಇದರಿಂದ ಬೇರೆಯವರು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದರು ಆದರೆ ಈಗ ಕುಟುಂಬದ ಅಸ್ತಿತ್ವಕ್ಕಾಗಿ ಸಹೋದರಿಯರು ತಮ್ಮ ತಮ್ಮ ನಡುವೆ ಏನೇ ಭಿನ್ನಾಭಿಪ್ರಾಯಗಳು ಕಲಹಗಳೂ ಇದ್ದರೂ ಅವುಗಳೆಲ್ಲವನ್ನು ಮರೆತು ಚುನಾವಣೆಗೆ ಒಂದಾಗಿದ್ದಾರೆ ವೀಣಾ ಮಹಾಂತೇಶ ರವರು ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ಸು ಪಡೆಯಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ
ಚುನಾವಣೆ ಕಣಕ್ಕೆ ಈಗ ಒಂದು ಕಳೆ ಬಂದಿದೆ ಎಂದು ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಈ ಬಾರಿ ಸಹೋದರಿಯರ ಹೊಂದಾಣಿಕೆಯಿಂದಾಗಿ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ರವರು ಗೆದ್ದೇ ಗೆಲ್ಲುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದೇ ಹೇಳಲಾಗುತ್ತದೆ .

Leave a Reply

Your email address will not be published. Required fields are marked *