ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ಎನ್ ಕೊಟ್ರೇಶ್
1 min readಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ಎನ್ ಕೊಟ್ರೇಶ್
ಹರಪನಹಳ್ಳಿ : ಏ – 24 , ತಾಲೂಕಿನ ಈಶಾನ್ಯ ದಿಕ್ಕಿನ ನಂದಿ ಬೇವೂರು ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅರಸೀಕೆರೆ ಎನ್ ಕೋಟ್ರೇಶ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಂದಿಬೆವೂರ ತಾಂಡ ,ಕಣಿವಿಹಳ್ಳಿ ,ಕೊಂಗನ ಹೊಸೂರು ,ಬಾವಿಹಳ್ಳಿ ,ಮೈದೂರು, ಚಿಗಟೇರಿ ಬಾಗದಲ್ಲಿ ಸೋಮವಾರ ಚುನಾವಣಾ ಪ್ರಚಾರವನ್ನು ಆರಂಭಿಸಿದರು.
ಸೋಮವಾರ ಬೆಳಗ್ಗೆ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದವನ್ನು ಪಡೆದು ಪ್ರಚಾರ ಆರಂಭಿಸಿದರು ಈ ವೇಳೆ ಮಾತನಾಡಿದ ಅವರು ನಾನು ಸ್ಥಳಿಯ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿದೆ ಹಾಗಾಗಿ ನಿಮ್ಮ ಅಮೂಲ್ಯ ವಾದ ಮತವನ್ನು ನನಗೆ ನೀಡಿ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ ಅವರು ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಗಾಲಿ ಕರುಣಾಕರರೆಡ್ಡಿ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು ಇವರು ಸ್ಥಳೀಯರಲ್ಲ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದಿರುತ್ತಾರೆ ತಾಲೂಕಿಗೆ ಆಗೊಮ್ಮೆ ಹೀಗೊಮ್ಮೆ ಬಂದು ಹೋಗುವ ಅವರು ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ರೈತರಿಗೆ ಅನುಕೂಲ ಮಾಡಿಕೊಡದೆ ಐದು ವರ್ಷಗಳ ಕಾಲ ಸುಖಾಸುಮ್ಮನೆ ಕಾಲಹರಣ ಮಾಡಿದ್ದಾರೆ ತಾಲೂಕಿನಲ್ಲಿ ತುಂಗಭದ್ರಾ ನದಿ ಹರಿದು ಹೋಗಿದ್ದರೂ ರೈತರ ಹೊಲ ಗದ್ದೆಗಳಿಗೆ ನೀರು ಹರಿಸಲಿಲಿಲ್ಲ ಹಾಗಾಗಿ ನನಗೆ ಒಂದು ಬಾರಿ ಅವಕಾಶ ನೀಡಿದರೆ ಹರಪನಹಳ್ಳಿ ತಾಲೂಕಿಗೆ ನಾನು ಸಂಪೂರ್ಣವಾಗಿ ನೀರಾವರಿ ಸೌಲಭ್ಯ ಒದಗಿಸುತ್ತನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಎಲ್ಲಾ ಸೌಲಭ್ಯಗಳನ್ನು ಈಡೇರಿಸುತ್ತೇನೆ ಆದುದರಿಂದ ಈ ಬಾರಿ ಸ್ಥಳೀಯಅಭ್ಯರ್ಥಿಗೆ ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಂಡರು .
ಮಾಜಿ ಸಚಿವ ಅಲಂ ವೀರಭದ್ರಪ್ಪ ಮಾತನಾಡಿ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ನಭದ್ರಕೋಟೆ ಇಲ್ಲಿನ ಮತದಾರರು ಪ್ರಜ್ಞಾವಂತರು ಸಿದ್ದರಾಮಯ್ಯ ನವರ ಸರ್ಕಾರದ ಸಾಧನೆಗಳು ಹಾಗೂ ನಮ್ಮ ಪಕ್ಷದ ಪ್ರಾಣಿಳಿಕೆಯಂತೆ ಗ್ಯಾರಿಂಟಿ ಕಾರ್ಡ್ ,ಉಚಿತ ವಿದ್ಯುತ್ ಪೂರೈಕೆ , ಗೃಹ ಲಕ್ಷ್ಮೀ ಯೋಜನೆ ಸೇರಿದಂತೆ ಅನೇಕ ಬಡವರ ಪರ ಇರುವ ಪಕ್ಷ ಕಾಂಗ್ರೆಸ್ ಪಕ್ಷ ಬಿಜೆಪಿ ಯವರು ಜಿ ಎಸ್ ಟಿ ಹೇರುವ ಮೂಲಕ ಬಡವರ ರಕ್ತ ಇರುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಹೆಚ್ ಕೆ ಹಾಲೇಶ ಮಾತನಾಡಿ 29 ನೇ ತಾರೀಖು ಮಾಜಿ ಮುಖ್ಯಮಂತ್ರಿಗಳು , ವಿರೋಧ ಪಕ್ಷದ ನಾಯಕ ಗಳಾದ ಸಿದ್ದ ರಾಮಯ್ಯನವರು ಪಕ್ಷದ ಅಭ್ಯರ್ಥಿಯಾದ ಎನ್ ಕೋಟ್ರೇಶ ಪರ ಮತಯಾಚನೆಗೆ ಆಗಮಿಸುತ್ತಾರೆ ಆದುದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು .
ಈ ವೇಳೆ ಕಣಿವಿಹಳ್ಳಿ ಗ್ರಾಮದ ಶ್ಯಾಮನೂರು ಬಸವರಾಜ್,ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಿನಪ್ಪ, ಮುಖಂಡರುಗಳಾದ ಸಿನಿಮಾ ರಾಜಣ್ಣ ,ಶಶಿಧರ್ ಪೂಜಾರ್ ,ಅಂಬಾಡಿ ನಾಗರಾಜ್, ಹಾಲೇಶ ಗೌಡ , ವಕೀಲ ನಾಗರಾಜ್ ಪಾಟೀಲ್ ,ಮುತ್ತಿಗಿ ಜಂಬಣ್ಣ, ಆಲದಹಳ್ಳಿ ಷಣ್ಮುಖಪ್ಪ , ಚಿಕ್ಕೇರಿ ವೆಂಕಟೇಶ್,, ಹೆಚ್ ಬಿ ಪರಶುರಾಮಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಗಿಡ್ಡಳ್ಳಿ ನಾಗರಾಜ್ , ಹಿರೆಮೇಗಳಗೇರಿ ಪರಶುರಾಮ, ಎ ಮೂಸ ಸಾಹೇಬ, ಜಾಕೀರ್ ಹುಸೇನ್ ,ಕೋಡಿಹಳ್ಳಿ ಗುರುಬಸವರಾಜ್ ಚಲುವಾದಿ ಪರಶುರಾಮ, ಶಿರಗಾನಹಳ್ಳಿ ಪರಶುರಾಮ, ವಿಶ್ವನಾಥ್ ಜಂಗಣ್ಣನವರ್, ದುಗ್ಗಾವತಿ ಪರಶುರಾಮ,ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು .