ನನ್ನನ್ನು ಗೆಲ್ಲಿಸಿದರೆ ಹರಪನಹಳ್ಳಿ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುತ್ತೇನೆ – ಅರಸೀಕೆರೆ ಎನ್ ಕೊಟ್ರೇಶ್
1 min readನನ್ನನ್ನು ಗೆಲ್ಲಿಸಿದರೆ ಹರಪನಹಳ್ಳಿ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುತ್ತೇನೆ – ಅರಸೀಕೆರೆ ಎನ್ ಕೊಟ್ರೇಶ್
ಹರಪನಹಳ್ಳಿ:ಏ- 30,ನನ್ನನ್ನು ಗೆಲ್ಲಿಸಿದರೆ ಹರಪನಹಳ್ಳಿ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅರಸೀಕೆರೆ ಎನ್ ಕೊಟ್ರೇಶ್ ರವರು ಇಂದು ಚುನಾವಣೆ ಪ್ರಚಾರದ ವೇಳೆ ಹೇಳಿದರು.
ತಾಲೂಕಿನ ಚೌಡಾಪುರ,ಜಂಬುಲಿಂಗನಹಳ್ಳಿ, ಸಿಂಗ್ರಿಹಳ್ಳಿ ಲಕ್ಷ್ಮಿಪುರ ಸತ್ತುರು ಲಕ್ಷ್ಮಿಪುರ ತಾಂಡ ಹಿರೇ ಮೇಗಳಗೆರೆ ಹೊಸಳ್ಳಿ ,ಗೊಲ್ಲರಹಟ್ಟಿ ,ವಡ್ಡಿನಹಳ್ಳಿ, ಶ್ರೀಕಂಠಪುರ ಬಸಾಪುರ ಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ತೆಗೆದುಕೊಂಡು ಸರ್ವರಿಗೂ ಸಮಾಬಾಳು ಸಮಪಾಲು ಎಂಬ ತತ್ವದ ಅಡಿಯಲ್ಲಿ ಕೆಲಸ ಮಾಡಿದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷವಾಗಿದೆ ಬುದ್ದ ಬಸವ ಅಂಬೇಡ್ಕರ್ ಸಿದ್ದಾಂತದಂತೆ ಆಡಳಿತವನ್ನು ನಡೆಸುವ ಸರ್ಕಾರ ದೇಶದಲ್ಲಿ ಯಾವುದಾದರೂ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಪಕ್ಷ ಸರ್ಕಾರವಾಗಿದೆ ಎಂದರು .
ಈ ಬಾರಿ ಸ್ಥಳೀಯನಾದ ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಅನ್ನು ಪಡೆದು ಚುನಾವಣೆಗೆ ಬಂದಿದ್ದೇನೆ ಕಳೆದ ಎರಡು ಬಾರಿ ಇದೇ ತಾಲೂಕಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಪರಭವಗೊಂಡಿದ್ದೇನೆ ಈ ಬಾರಿ ನನಗೆ ನಿಮ್ಮ ಅಮೂಲ್ಯವಾದ ಮತವನ್ನು ನನ್ನ ಗುರುತಾದ ಹಸ್ತದ ಗುರುತಿಗೆ ಮತವನ್ನು ಹಾಕುವುದರ ಮೂಲಕ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಈ ಬಾರಿ ನನ್ನನ್ನು ನಿಮ್ಮ ಕ್ಷೇತ್ರದಿಂದ ಗೆಲ್ಲಿಸಿದ್ದೇ ಆದಲ್ಲಿ ಹರಪನಹಳ್ಳಿ ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆಯನ್ನು ಮಾಡುತ್ತೇನೆ ವಿದ್ಯಾವಂತ ನಿರುದ್ಯೋಗ ಯುವಕರಿಗೆ ಉದ್ಯೋಗವನ್ನು ಕಂಡುಕೊಳ್ಳಲು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಕಂಕಣಬದ್ದವಾಗಿ ನಿಲ್ಲುತ್ತೇನೆ ನಮ್ಮ ತಾಲೂಕಿನ ಜನರು ಉದ್ಯೋಗಗಳಿಲ್ಲದೆ ಕೂಲಿಯನ್ನು ಹರಸಿ ದೂರದ ಊರುಗಳಿಗೆ ಹೋಗುವುದನ್ನು ತಡೆದು ಸ್ಥಳೀಯ ಮಟ್ಟದಲ್ಲೇ ಸಣ್ಣ ಕೈಗಾರಿಕೆಗಳು ಗುಡಿ ಕೈಗಾರಿಕೆಗಳು ದೊಡ್ಡ ಕೈಗಾರಿಕೆಗಳನ್ನು ತೆರೆದು ಉದ್ಯೋಗಗಳನ್ನು ನೀಡುವುದರ ಮೂಲಕ ವಲಸೆ ಪ್ರಮಾಣವನ್ನು ನಿಲ್ಲಿಸುತ್ತೇನೆ ಅಲ್ಲದೆ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರಿ ಮಾತನಾಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಆದ ವೋಟ್ ಬ್ಯಾಂಕ್ ಅನ್ನು ಹೊಂದಿದ್ದು ಪ್ರತಿ ಹಳ್ಳಿಗಳಲ್ಲಿಯೂ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಕೆಲಸವನ್ನು ಮಾಡುತ್ತಿದ್ದಾರೆ ಹಿಂದಿನಿಂದಲೂ ಹರಪನಹಳ್ಳಿ ತಾಲೂಕು ಒಂದು ಕಾಂಗ್ರೆಸ್ ನ ಭದ್ರಕೋಟೆಯಾಗಿದೆ ನಮ್ಮ ಅಭ್ಯರ್ಥಿ ಎನ್ ಕೊಟ್ರೇಶ್ ರವರ ಗೆಲುವಿನಲ್ಲಿ ಯಾವುದೇ ಸಂದೇಹವಿಲ್ಲ ಕಾಂಗ್ರೆಸ್ ಪಕ್ಷದ ಟಿಕೆಟ್ ನ ಆಕಾಂಕ್ಷಿಗಳಾಗಿದ್ದ ಉಳಿದ 15 ಜನರು ಅವರ ಜೊತೆಗಿದ್ದೇವೆ ಮಾತ್ರ ಲ್ಲದೇ ಅವರ ಬೆಂಬಲಕ್ಕೆ ನಿಂತಿದ್ದೇವೆ ನಾವೆಲ್ಲರೂ ಕೂಡಿ ಅವರನ್ನು ಗೆಲ್ಲಿಸಲು ಪಣತೊಟ್ಟಿದ್ದೇವೆ ಎಂದು ಹೇಳಿದರಲ್ಲದೆ ಶಾಸಕರು ಈ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದೆ ಐದು ವರ್ಷಗಳ ಕಾಲ ವೃತಕಾಲವನ್ನು ಕಳೆದು ತಾಲೂಕಿಗೆ 2,000 ಕೋಟಿ ಅನುದಾನವನ್ನು ತಂದು ತಾಲೂಕನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಸುಳ್ಳು ಸುಳ್ಳು ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಅದರ ದಾಖಲೆಗಳು ಇದ್ದರೆ ಬಹಿರಂಗಪಡಿಸಿಲಿ ಹಾಗೂ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು .
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ, ಮುಖಂಡರಾದ ಇಜಾರಿ ಮಹಾವೀರಪ್ಪ ,
ಹೆಚ್ ಕೆ ಹಾಲೇಶ್, ಎಬಿ ಹಾಲೇಶ್ ಗೌಡ ,ಹಿರೇಮೇಗಳಗೇರಿ ಪರಶುರಾಮಪ್ಪ , ನಾಗರಾಜ್ ಪಾಟೀಲ್ ,ಪ್ರಕಾಶ್ ಪಾಟೀಲ್, ಪಿ .ಎಲ್.ಪೊಮ್ಯನಾಯ್ಕ್,ಪಾಟೀಲ್ಬೆಟ್ಟನಗೌಡ ,ಆಲದಹಳ್ಳಿಷಣ್ಮುಖಪ್ಪ ,ಮೂಸಸಾಬ್ ,ಜಂಬುಲಿಂಗನಹಳ್ಳಿಕುಬೇರಪ್ಪ ,ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಶ್ ,ಲಕ್ಷ್ಮೀಪುರದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಿ ಮಲ್ಲೇಶ್ ,ಹಲಗೆರ ಮಂಜಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತಪ್ಪ, ತಿಮ್ಮನಾಯ್ಕ್, ಪ್ರವೀಣ್ ನಾಯ್ಕ್, ಬಸವರಾಜಪ್ಪ , ಸೇರಿದಂತೆ ಮುಂತಾದವರು ಹಾಜರಿದ್ದರು.