Vijayanagara Express

Kannada News Portal

ತಾಲೂಕಿನಲ್ಲಿ ಶಾಂತಿ ಹಾಗೂ ನೆಮ್ಮದಿಯ ಬದುಕಿಗಾಗಿ ಬಿಜೆಪಿಯನ್ನು ಗೆಲ್ಲಿಸಿ -, ಜಿ ಕರುಣಾಕರ ರೆಡ್ಡಿ

1 min read

ತಾಲೂಕಿನಲ್ಲಿ ಶಾಂತಿ ಹಾಗೂ ನೆಮ್ಮದಿಯ ಬದುಕಿಗಾಗಿ ಬಿಜೆಪಿಯನ್ನು ಗೆಲ್ಲಿಸಿ -, ಜಿ ಕರುಣಾಕರ ರೆಡ್ಡಿ

ಹರಪನಹಳ್ಳಿ : ಮೇ- 3, ಈ ಕ್ಷೇತ್ರದಲ್ಲಿ ಕಳೆದು 20 ವರ್ಷಗಳಿಂದ ನನಗೆ ರಾಜಕೀಯ ಭವಿಷ್ಯವನ್ನು ನೀಡಿದ್ದಲ್ಲದೆ ಆಶೀರ್ವಾದವನ್ನು ಮಾಡಿದ್ದೀರಿ ಹಾಗಾಗಿತಾಲೂಕಿನಲ್ಲಿ ಶಾಂತಿ ಹಾಗೂ ನೆಮ್ಮದಿಯ ಬದುಕಿಗಾಗಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಶಾಸಕ ಜಿ ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ವಾಲ್ಮೀಕಿ ನಗರ, ಗಾಜಿಕೇರಿ, ತೆಕ್ಕದ ಗರಡಿಕೇರಿ ಗುಂಡಿನಕೇರಿ ಸೇರಿದಂತೆ ಪುರಸಭೆ ವ್ಯಾಪ್ತಿಯ ಏಳು ವಾರ್ಡ್ ಗಳಲ್ಲಿ ಹಾಗೂ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ಕಡತಿ ಗ್ರಾಮ ಪಂಚಾಯಿತಿ ತೆಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಂಡ ಶಾಸಕ ಜಿ ಕರುಣಾಕರ ರೆಡ್ಡಿಯವರು ಈ ವೇಳೆ ಮಾತನಾಡಿ ಈ ಕ್ಷೇತ್ರವು ಕಾಂಗ್ರೆಸ್ ಆಳ್ವಿಕೆ ಮಾಡುವಾಗ ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದು ನಾನು ಬಂದು ಇಲ್ಲಿ ಅಧಿಕಾರವನ್ನು ಹಿಡಿದ ಮೇಲೆ ಆ ಅಣೆಪಟ್ಟೆಯಿಂದ ಹೊರಗೆ ತಂದಿದ್ದೇನೆ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಡಾಂಬರು ರಸ್ತೆ ,ಕುಡಿಯುವ ನೀರಿನ ವ್ಯವಸ್ಥೆ ಸಮುದಾಯ ಭವನಗಳು ಶಾಲಾ ಕೊಠಡಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ತಾಲೂಕಿನ ಸಮಗ್ರ ನೀರಾವರಿ ಯೋಜನೆಗೆ ಕ್ರಮ ಕೈಗೊಂಡಿದ್ದೇನೆ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ನಂತಹ ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇನೆ ತಾಲೂಕಿನಲ್ಲಿ ಯಾರ ಯಾರ ಮೇಲೆಯೂ ದ್ವೇಷ ರಾಜಕಾರಣ ನಾನೆಂದೂ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ ಹಾಗಾಗಿ ನಮ್ಮ ಕ್ಷೇತ್ರದ ಜನರು ಯಾವಾಗಲೂ ಸುಖ ಸಮೃದ್ಧಿ ನೆಮ್ಮದಿಯಿಂದ ಬದುಕಬೇಕೆಂಬುದೇ ನನ್ನ ಆಸೆ ಹಾಗಾಗಿ ಎಲ್ಲರೂ ಶಾಂತಿ ಸಹ ಬಾಳ್ವೆ ನೆಮ್ಮದಿಯಿಂದ ಬದುಕಲು ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು .
ಈ ಸಂದರ್ಭದಲ್ಲಿ ಪುರಸಭೆ ಜಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾದ ಆರುಂಡಿ ನಾಗರಾಜ್ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಆರ್ ಲೋಕೇಶ್ ಬಾಗಳಿ ಕೊಟ್ರೇಶಪ್ಪ , ಸತ್ತಾರ್ ಸಾಬ್ , ಮನ್ಸೂರ್, ರಾಜು ಚಕ್ಕಲಿ,ಕೆಂಗಳ್ಳಿ ಪ್ರಕಾಶ್, ಗಿಡ್ಡಳ್ಳಿ ಕೃಷ್ಣಪ್ಪ, ಮೂಲಿಮನಿ ಹನುಮಂತಪ್ಪ,ಅರುಣಪ್ಪ, ಕೊಟ್ರೇಶ್ ನಿಟ್ಟೂರು ಹೆಚ್ ಟಿ ಪ್ರಭಾಕರ,ನಾಗಮ್ಮ ಚಲುವಾದಿ , ನಾಗಪ್ಪ ಬಿ, ಬಿ.ಭೀಮಪ್ಪ, ಲಕ್ಷ್ಮಣ್ ಬಡಿಗೇರ, ನಾಗರಾಜ್ ಸಿ.ಮತ್ತೂರು ಶಿವಮೂರ್ತ್ಯಪ್ಪ, ಮಂಜುನಾಥ್, ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *