Vijayanagara Express

Kannada News Portal

50 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಎಂಪಿ ರವೀಂದ್ರರವರ ಕೊಡುಗೆ – ಕೆಪಿಸಿಸಿ ವಕ್ತಾರ ಡಿ ಬಸವರಾಜ್

1 min read

50 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಎಂಪಿ ರವೀಂದ್ರರವರ ಕೊಡುಗೆ – ಕೆಪಿಸಿಸಿ ವಕ್ತಾರ ಡಿ ಬಸವರಾಜ್

 

 

ಹರಪನಹಳ್ಳಿ:ಮಾ – 27 ,ತಾಲೂಕಿನ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಎಂಪಿ ರವೀಂದ್ರರವರ ಕೊಡುಗೆ ಎಂದು ಕೆಪಿಸಿಸಿ ವಕ್ತಾರ ಡಿ ಬಸವರಾಜ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿನ್ನೆ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಉದ್ಘಾಟನೆ ಕಾರ್ಯಕ್ರಮವನ್ನು ಹರಪನಹಳ್ಳಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಉದ್ಘಾಟನೆ ಮಾಡಿರುವರು ಐದು ವರ್ಷಗಳ ಕಾಲ ಇಲ್ಲದೆ , ಕಾಮಗಾರಿಯು ಅಪೂರ್ಣಗೊಂಡಿದ್ದರೂ ಸಹ ತ್ವರಿತವಾಗಿ ಚುನಾವಣೆ ಉದ್ದೇಶ ಇಟ್ಟುಕೊಂಡು ಈ ರೀತಿಯಾದಂತ ಆತುರಾತುರದ ಉದ್ಘಾಟನೆ ಕಾರ್ಯಕ್ರಮ ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು .

ತಾಲೂಕಿನಲ್ಲಿ ಎಂಪಿ ರವೀಂದ್ರರವರು ಮಾಡಿದ ಅನೇಕ ಅಭಿವೃದ್ಧಿ ಕೆಲಸಗಳನ್ನು ನಾವೇ ಮಾಡಿದ್ದೇವೆ ನಮ್ಮ ಕಾಲದಲ್ಲಿ ಅನುದಾನವನ್ನು ತಂದಿದ್ದೇವೆ ಎಂದು ಹೇಳುವ ಸಾಹಸಕ್ಕೆ ಕರುಣಾಕರ ರೆಡ್ಡಿ ಅವರು ಕೈ ಹಾಕಿದ್ದಾರೆ . ತಾಲೂಕಿನ ಜನರಿಗೆ ಸತ್ಯ ಏನು ಎಂಬುದು ಎಲ್ಲರಿಗೂ ಗೊತ್ತಿದೆ 5 -8 -2017ರಂದು ತಮ್ಮ ಅವಧಿಯಲ್ಲಿಯೇ 60 ಕೆರೆಗಳಿಗೆ ಎಂಪಿ ರವೀಂದ್ರರವರು ಪ್ರಸ್ತಾವನೆ ಸಲ್ಲಿಸಿದಿದ್ದರೆ ಯಾಕೆ ಆಗ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರನ್ನು ಬಿಡಲಿಲ್ಲ ಎಂದು ವೇದಿಕೆ ಭಾಷಣದ ವೇಳೆ ಶಾಸಕರು ಹೇಳಿದ್ದಾರೆ, ಆದರೆ 2017ರಲ್ಲಿ ಪ್ರಸ್ತಾವನೆ ಸಲ್ಲಿಸಿ 18 ರಲ್ಲಿ ಎಲ್ಲಾ ವೇದಿಕೆ ಸಿದ್ಧವಾಗಿತ್ತು ಆಗ 2018 ರವೀಂದ್ರರವರು ಸೋಲನ್ನು ಕಂಡರು .ಅದಾದ ನಂತರ ಈ ಕಾಮಗಾರಿಯು ಯಥಾಪ್ರಕಾರವಾಗಿ ಸ್ವಯಂ ಚಾಲಿತ ಕಾಮಗಾರಿ ಮುಂದುವರಿದು ಇನ್ನೂ ಕಾಮಗಾರಿಯು ಬಾಕಿ ಇರುವಾಗಲೇ ಕೆರೆಗಳಿಗೆ ನೀರನ್ನು ಹರಿಸದೆ ಈ ರೀತಿಯ ಉದ್ಘಾಟನೆಯ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು .

ತಾಲೂಕಿಗೆ ಸಾಕಷ್ಟು ಅನುದಾನವನ್ನು ತರದೆ ಎಂಪಿ ರವೀಂದ್ರರವರು ತಂದ ಅನುದಾನಗಳಲ್ಲಿ ಕಾಮಗಾರಿಗಳನ್ನು ಮಾಡಿಸಿ ಐದು ವರ್ಷ ಕಾಲ ಕಳೆದು ಈಗ ಚುನಾವಣೆ ಮುಂದಿರುವಾಗ ಈ ರೀತಿಯ ಉದ್ಘಾಟನೆಗೆ ಮುಂದಾಗಿರುವುದು ದುರದೃಷ್ಟಕರ ಸಂಗತಿ ಎಂದರು
ತಾಲೂಕಿನ ಹಾಗೂ ಪಟ್ಟಣದ ರಸ್ತೆಗಳನ್ನು ನೋಡಿದರೆ ಅಭಿವೃದ್ಧಿಯ ವ್ಯವಸ್ಥೆ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಎಂಪಿ ರವೀಂದ್ರರವರ ಕಾಲಾವಧಿಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಎಂಬುದಕ್ಕೆ ನಾವು ದಾಖಲೆಗಳನ್ನು ಬಿಡುಗಡೆ ಮಾಡುತಿದ್ದೇವೆ ಪತ್ರ ವ್ಯವಹಾರ ನಡೆಸಿದ ದಿನಾಂಕವನ್ನು ಪತ್ರದ ಸಂಖ್ಯೆಯನ್ನು ನೀಡುತ್ತಿದ್ದೇವೆ ಕರುಣಾಕರ ರೆಡ್ಡಿಯವರ ಕಾಲಾವಧಿಯಲ್ಲಿಯೇ ಇದನ್ನು ಸಮೀಕ್ಷೆ ಮಾಡಿಸಿ ಕಾಮಗಾರಿಯನ್ನು ನಡೆಸಿ ಅನುದಾನವನ್ನು ತಂದಿದ್ದರೆ ಅವುಗಳ ದಾಖಲೆಗಳು ತಮ್ಮ ಬಳಿ ಇದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು .

ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಂಗಳೂರು ಇವರಿಗೆ ಪತ್ರವನ್ನು ವ್ಯವಹಾರವನ್ನು ಮಾಡಲಾಗಿದೆ . ಪತ್ರ ಸಂಖ್ಯೆ ಕನೀನಿ/ಹರಪನಹಳ್ಳಿ 60 ಕೆರೆಗಳು 2017 – 18 /810 ದಿನಾಂಕ 8 -5 -2018 ಹಾಗೂ ಪತ್ರ ಸಂಖ್ಯೆ 1389 ದಿನಾಂಕ 5-6 -2017 , ಯೋಜನೆಯ ಅನುಷ್ಠಾನಕ್ಕೆ 227 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡುವುದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಇದು ಎಂಪಿ ರವೀಂದ್ರ ಅವರು ಪತ್ರ ವ್ಯವಹಾರವನ್ನು ಈ ಯೋಜನೆಗಾಗಿ ಮಾಡಿದ ದಾಖಲೆಯಾಗಿದೆ ಎಂದು ದಾಖಲೆಯನ್ನು ಬಿಡುಗಡೆ ಮಾಡಿದರು .

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ ವಿ ಅಂಜಿನಪ್ಪ, ಗೊಂಗಡಿ ನಾಗರಾಜ್, ವೆಂಕಟೇಶ್ ವಕೀಲರು , ಲಾಠಿ ದಾದಾಪೀರ್, ಉದ್ದಾರ ಗಣೇಶ, ಮುಖಂಡರಾದ ಚಿಕ್ಕೇರಿ ಬಸಪ್ಪ, ಕಲ್ಲಳ್ಳಿ ಗೋಣಪ್ಪ,ಜೀಶನ್, ಪುರಸಭೆ ಮಾಜಿ ಉಪಾಧ್ಯಕ್ಷ ವಸಂತಪ್ಪ, ಎಲ್ ಮಂಜ್ಯನಆಯ್ಕ್  ಶಂಕರ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *