Vijayanagara Express

Kannada News Portal

ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ರವರಿಂದ ಮತಯಾಚನೆ

1 min read

ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ರವರಿಂದ ಮತಯಾಚನೆ

 

ಹರಪನಹಳ್ಳಿ: ಮೇ -3 ,ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ರವರು ಇಂದು ಸಿಂಗ್ರಿಹಳ್ಳಿ, ಮತ್ತು ರಾಗಿಮಸಲವಾಡ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು .

ತಾಲೂಕಿನ ರಾಗಿ ಮಸಾಲವಾಡ, ಸಿಂಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನಿ ಮೇಗಳ ತಾಂಡ ಸಿಂಗ್ರಿಹಳ್ಳಿ ದೊಡ್ಡ ತಾಂಡ ಸಿಂಗ್ರಿಹಳ್ಳಿ ಸಣ್ಣ ತಾಂಡ ಉದಯಪುರ ಉದಯ್ ಪುರ ತಾಂಡಾ ನಾಗಲಾಪುರ ಕೋಡಿ ತಾಂಡಾ ತುಂಬಿಗೆರೆ ಸಿರೇಗನಹಳ್ಳಿ ಸೇರಿದಂತೆ ಕಣಿವೆ ಕಣಿವಿತಂಡ ವಟ್ಲಹಳ್ಳಿ ಗರ್ಭಗುಡಿ , ನಂದ್ಯಾಲ ನಂದ್ಯಾಲ ಕ್ಯಾಂಪ್ ಸೇರಿದಂತೆ ಈ ಭಾಗದಲ್ಲಿ ಪಕ್ಷೇತರ ಅಭ್ಯರ್ಥಿ ಎಂಪಿ ರಥ ಮಲ್ಲಿಕಾರ್ಜುನ್ ರವರು ತೆರೆದ ವಾಹನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮತಯಾನೆ ಮಾಡುತ್ತಾ ಪ್ರಚಾರವನ್ನು ಮಾಡಿದರು .

ಈ ವೇಳೆ ಮಾತನಾಡಿದ ಅವರು ಅನ್ಯಾಯವಾಗಿದೆ ನನಗೆ ಟಿಕೆಟ್ ಅನ್ನು ನೀಡುತ್ತೇವೆ ಎಂದು ಹೇಳಿ ಸಂಘಟನೆಯನ್ನು ಮಾಡಿಕೊಂಡು ಈಗ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ ಈ ಎಲ್ಲಾ ವಿಷಯವು ನಿಮ್ಮೆಲ್ಲರಿಗೂ ಗೊತ್ತಿದೆ ಈಗ ನನ್ನ ಚಿಹ್ನೆ ಕಾಂಗ್ರೆಸ್ ಪಕ್ಷದ ಹಸ್ತದ ಗುರುತು ಅಲ್ಲ ಬದಲಿಗೆ ಮಹಿಳೆಯರು ಹಾಕಿಕೊಳ್ಳುವ ವ್ಯಾನಿಟಿ ಬ್ಯಾಗ್ ಆಗಿರುತ್ತದೆ ಹಾಗಾಗಿ ನನ್ನ ಗುರುತಾದ ವ್ಯಾನಿಟಿ ಬ್ಯಾಗ್ಗೆ ಮೇ 10ನೇ ತಾರೀಕಿನಂದು ನಡೆಯುವ ಮತದಾನದ ವೇಳೆ ಮತವನ್ನು ಹಾಕುವ ಮೂಲಕ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದರು .

ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಗೆಲ್ಲುವುದು ತುಂಬಾ ಕಷ್ಟ ಆದರೂ ನಾವಿಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಏಕೆಂದರೆ ಈ ಕ್ಷೇತ್ರದಲ್ಲಿ ನಮ್ಮಸಹೋದರ ಮಾಜಿ ಶಾಸಕ ದಿವಂಗತ ಎಂಪಿ ರವೀಂದ್ರರವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಅವರು ಕನಸು ಕಂಡಿದ್ದ ಅನೇಕ ಅಭಿವೃದ್ಧಿ ಕಾಮಗಾರಿಗಳು ಇನ್ನು ನೆನೆಗುದಿಯಲ್ಲೇ ಇವೆ ಹಾಗಾಗಿ ಅವುಗಳೆಲ್ಲವನ್ನು ಪೂರ್ಣಗೊಳಿಸಲು ನಾವು ರಾಜಕಾರಣಕ್ಕೆ ಬಂದಿದ್ದೇವೆ ಹಾಗಾಗಿ ಈ ಬಾರಿ ಗೆದ್ದದ್ದೇ ಆದರೆ ಅವುಗಳೆಲ್ಲವನ್ನು ಪೂರ್ಣಗೊಳಿಸುತ್ತೇವೆ ಎಂದರು .

 

ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಸಾಕಷ್ಟು ತಾಂಡವಾಡುತ್ತಿದೆ ಹಾಗಾಗಿ ಇಲ್ಲಿ ಈ ಬಾರಿ ಗೆದ್ದರೆ ಉದ್ಯೋಗವನ್ನು ಸೃಷ್ಟಿಸಲು ಕಾರ್ಖಾನೆಗಳನ್ನು ತೆರೆದು ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಗಿ ಮಸಾಲವಾಡದ ನರೇಶ್ ವೈ ಕೆ ಬಿ ದುರುಗಪ್ಪ , ಹೆಚ್ ವಸಂತಪ್ಪ,ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಂಪಿ ನಾಯ್ಕ್, ಮುಖಂಡ ಸತ್ತೂರು ಹಾಲೇಶ್ , ನಿಟ್ಟೂರು ಸಣ್ಣಹಾಲಪ್ಪ, ಶಿರಗಾನಹಳ್ಳಿ ಹನುಮಂತಪ್ಪ, ರೇವಣ ನಾಯ್ಕ, ಪಾರ್ವತಿ ಬಾಯಿ, ಸೀತಾಬಾಯಿ, ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *