Vijayanagara Express

Kannada News Portal

ಎಂಪಿ ರವೀಂದ್ರರವರು ಕಾರ್ಯಕರ್ತರಿಂದ ಲಂಚವನ್ನು ಕೇಳುತ್ತಿದ್ದರು – ಪಿ ಟಿ ಪರಮೇಶ್ವರ್ ನಾಯ್ಕ್ ಆರೋಪ

1 min read

ಎಂಪಿ ರವೀಂದ್ರರವರು ಕಾರ್ಯಕರ್ತರಿಂದ ಲಂಚವನ್ನು ಕೇಳುತ್ತಿದ್ದರು – ಪಿ ಟಿ ಪರಮೇಶ್ವರ್ ನಾಯ್ಕ್ ಆರೋಪ

ಹರಪನಹಳ್ಳಿ :ಮೇ -6 , ಮಾಜಿ ಶಾಸಕ ದಿವಂಗತ ಎಂಪಿ ರವೀಂದ್ರರವರು ಕಾರ್ಯಕರ್ತರಿಂದ ಲಂಚವನ್ನು ಕೇಳುತ್ತಿದ್ದರು ಎಂದು ಪಿ ಟಿ ಪರಮೇಶ್ವರ್ ನಾಯ್ಕ್ ಆರೋಪಿಸಿದ್ದಾರೆ.

ಪಟ್ಟಣದ ತರಳುಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್ ಟಿಕೆಟ್ ಕೊಟ್ಟವರಿಗೆ ಮತವನ್ನು ಹಾಕಿರಿ ನನ್ನನ್ನು ನಿಮ್ಮಸಮಾಜದ ಸೇವೆಗಾಗಿ ಯಾವಾಗ ಬೇಕಾದರೂ ಬಂದರೂ ನಾನು ನಿಮ್ಮ ಸೇವೆ ಮಾಡಲು ಸದಾ ಸಿದ್ದನಾಗಿರುತ್ತಾನೆ ಎಂದು ಹೇಳಿದರು.

ಮಾಜಿ ಶಾಸಕ ದಿವಂಗತ ಎಂಪಿ ರವೀಂದ್ರರವರು ಕಾರ್ಯಕರ್ತರಿಂದ ಹಣವನ್ನು ಲಂಚ ಕೇಳುತ್ತಿದ್ದರು ಅದಕ್ಕೆ ಜೀವಂತ ಸಾಕ್ಷಿ ಇದೇ ವೇದಿಕೆಯಲ್ಲಿ ಕುಳಿತಿರುವ ಚಿರಸ್ಥಹಳ್ಳಿ ಮರಿಯಪ್ಪ ರವರು ಎಂ ಎಸ್ ಐ ಎಲ್ ಪರವಾನಗಿ ಪಡೆಯಲು ಐದು ಲಕ್ಷ ರೂಪಾಯಿಗಳನ್ನು ಲಂಚ ಕೇಳಿದ್ದರಂತೆ ಎಂದು ಹೇಳಿದರು.


ಆಗ ವೇದಿಕೆಯಲ್ಲಿ ಕುಳಿತಿದ್ದ ಶಿರಸ್ತಹಳ್ಳಿ ಮರಿಯಪ್ಪರವರು ಹೌದು ನನ್ನಿಂದ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಒಪ್ಪಿಕೊಂಡರು ನಂತರ ಮಾತು ಮುಂದುವರಿಸಿದ ಪಿ ಟಿ ಪರಮೇಶ್ವರ್ ನಾಯಕ್ ರವರು ಇದೇ ವೇದಿಕೆಯಲ್ಲಿ ಕುಳಿತಿರುವ ಮತ್ತೊಬ್ಬ ವ್ಯಕ್ತಿಯಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪರಶುರಾಮಪ್ಪನವರ ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್ ಟಿಕೆಟ್ ಗಾಗಿ 25 ಲಕ್ಷ ಬೇಡಿಕೆ ಇಟ್ಟಿದ್ದರಂತೆ ಎಂದು ಹೇಳಿದರು ಇದಕ್ಕೆ ಸಾಕ್ಷಿ ಬೇಕಿದ್ದರೆ ಅವರನ್ನೇ ಕೇಳಿ ಎಂದರು ಆಗ ಪರಶುರಾಮಪ್ಪ ಕೈ ಎತ್ತಿ ಹೌದು ಎಂದು ಸನ್ನೆ ಮಾಡಿ ಸೂಚಿಸಿದರು .
ಹೀಗೆ ಎಂಪಿ ರವೀಂದ್ರರವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದಲೇ ಈ ಪಾಟಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಕಾರ್ಯಕರ್ತರು ಮತ್ತು ನಾಯಕರ ನಡುವೆ ಉತ್ತಮವಾದ ಬಾಂಧವ್ಯ ಇರಬೇಕು ಆಗ ಮಾತ್ರ ಪಕ್ಷವನ್ನು ಸಂಘಟಿಸಲು ಸಾಧ್ಯ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ಸೇತುವೆಯಂತೆ ಇದ್ದಾಗ ಮಾತ್ರ ಅತ್ಯುತ್ತಮವಾದ ಸಂಘಟನೆ ಸಾಧ್ಯ ಎಂಬುದಾಗಿ ಹೇಳಿದರು.

Leave a Reply

Your email address will not be published. Required fields are marked *