Vijayanagara Express

Kannada News Portal

ಪಿ ಟಿ ಪರಮೇಶ್ವರ್ ನಾಯ್ಕರ ನಂತರ ಯಾವೊಬ್ಬ ಶಾಸಕರೂ ವಾಲ್ಮೀಕಿ ಸಮಾಜಕ್ಕೆ ಕೊಡುಗೆ ಕೊಟ್ಟಿಲ್ಲ – ಪುರಸಭೆ ಮಾಜಿ ಅಧ್ಯಕ್ಷ ಎಚ್ ಕೆ ಹಾಲೇಶ್

1 min read

ಪಿ ಟಿ ಪರಮೇಶ್ವರ್ ನಾಯ್ಕರ ನಂತರ ಯಾವೊಬ್ಬ ಶಾಸಕರೂ ವಾಲ್ಮೀಕಿ ಸಮಾಜಕ್ಕೆ ಕೊಡುಗೆ ಕೊಟ್ಟಿಲ್ಲ – ಪುರಸಭೆ ಮಾಜಿ ಅಧ್ಯಕ್ಷ ಎಚ್ ಕೆ ಹಾಲೇಶ್

 

ಹರಪನಹಳ್ಳಿ: ಮೇ – 6 , ಪಿ. ಟಿ ಪರಮೇಶ್ವರ್ ನಾಯ್ಕ್ ರ ನಂತರ ಯಾವೊಬ್ಬ ಶಾಸಕರು ತಾಲೂಕಿನ ವಾಲ್ಮೀಕಿ ಸಮಾಜಕ್ಕೆ ಕೊಡುಗೆಯನ್ನು ಕೊಟ್ಟಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಚ್ ಕೆ ಹಾಲೇಶ್ ಹೇಳಿದರು.


ಪಟ್ಟಣದ ತರಳುಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ನ ಪರಿಶಿಷ್ಟ ಪಂಗಡದ ಘಟಕದ ವತಿಯಿಂದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್ ಕೊಟ್ರೇಶ್ ರವರ ಪರವಾಗಿ ಚುನಾವಣೆ ಪ್ರಚಾರ ಸಭೆ ಆಯೋಜಿಸಲಾಗಿದ್ದ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಾಲ್ಮೀಕಿ ಸಮಾಜದ 3600 ಪೊಗರು ಭೂಮಿಯ ಸಾಗುವಳಿದಾರರಿಗೆ ಎಂಪಿ ರವೀಂದ್ರರವರು ಪಟ್ಟವನ್ನು ನೀಡಿಲ್ಲ ಎಂಪಿ ರವೀಂದ್ರ ಮತ್ತು ಗಾಲಿ ಕರುಣಾಕರ ರೆಡ್ಡಿ ಅವರು ನಮ್ಮ ಸಮಾಜವನ್ನು ಒಡೆದ ಆಳುವ ನೀತಿ ಅನುಸರಿಸಿ ಸಮಾಜದ ಏಳಿಗೆಗೆ ಸಹಕಾರ ನೀಡಿಲ್ಲ ಎಂದರು ಹರಪನಹಳ್ಳಿಯನ್ನು ಬಳ್ಳಾರಿಗೆ ಸೇರಿಸಿದ್ದೇವೆ ಎಂದು ಹೇಳುತ್ತಿದ್ದಾರೆ ಹರಪನಹಳ್ಳಿ ಯನ್ನು ಬಳ್ಳಾರಿಗೆ ಸೇರಿಸಲು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯನವರ ಕೊಡುಗೆ ಇದೆ ಎಂದರು .


ಪಿ.ಟಿ ಪರಮೇಶ್ವರ ನಾಯಕರವರಿಂದ ತಾಲೂಕಿನಲ್ಲಿ ಅನವಶ್ಯಕ ರಾಜಕಾರಣದ ಅಸ್ತಕ್ಷೇಪವಾಗುತ್ತಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ ಆದರೆ ಪಿ ಟಿ ಪರಮೇಶ್ವರ್ ನಾಯಕರವರಿಂದ ಯಾರಿಗೂ ಅನ್ಯಾಯವಾಗಿಲ್ಲ ಅನ್ಯಾಯವಾಗಿದ್ದರೆ ದಾಖಲೆ ಇದ್ದರೆ ಕೊಡಿ ಎಂದು ಸವಾಲು ಹಾಕಿದರು .


ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ಅಡಿಗಲ್ಲು ಹಾಕಿ 10 ವರ್ಷಗಳು ಕಳೆದಿವೆ ಇಂದಿಗೂ ಅದು ಪೂರ್ಣವಾಗಿಲ್ಲ ಒಂದು ವೇಳೆ ಪರಮೇಶ್ವರ್ ನಾಯಕ್ ರವರು ಹರಪನಹಳ್ಳಿ ಶಾಸಕರಾಗಿದ್ದಾಗ ಅದನ್ನು ಅಡಿಗಲ್ಲು ಹಾಕಿದಿದ್ದರೆ ಕೇವಲ ಆರೇ ತಿಂಗಳಲ್ಲಿ ಭವನ ಉದ್ಘಾಟನೆಗೊಳ್ಳುತ್ತಿತ್ತು ಎಂದರು .

ಪಿಟಿ ಪರಮೇಶ್ವರ ನಾಯಕ್ ರವರು ಶಾಸಕರಾಗಿದ್ದಾಗ ವಾಲ್ಮೀಕಿ ನಗರದಲ್ಲಿದ್ದ ಗುಡಿಸಿಲುಗಳನ್ನು ಮುಕ್ತಗೊಳಿಸಬೇಕು ಎಂದು ಎಲ್ಲಾ ಗುಡಿಸಿಗಳನ್ನು ಪಕ್ಕಾ ಮನೆಗಳನ್ನು ಕಟ್ಟಿಕೊಳ್ಳಲು ಅನುದಾನವನ್ನು ತಂದು ಕೊಟ್ಟಿದ್ದರು ಅದನ್ನು ಇಲ್ಲಿ ಸ್ಮರಿಸುತ್ತೇನೆ ಎಂದರು .

Leave a Reply

Your email address will not be published. Required fields are marked *