Vijayanagara Express

Kannada News Portal

ರಾಜ್ಯದಲ್ಲಿ ಸಂವಿಧಾನದ ಉಳಿವಿಗಾಗಿ ಸಂಘರ್ಷ ನಡೆಯುತ್ತಿದೆ – ಉಗ್ರಪ್ಪ

1 min read

 

ರಾಜ್ಯದಲ್ಲಿ ಸಂವಿಧಾನದ ಉಳಿವಿಗಾಗಿ ಸಂಘರ್ಷ ನಡೆಯುತ್ತಿದೆ – ಉಗ್ರಪ್ಪ

 

ಹರಪನಹಳ್ಳಿ : ಮೇ -6 ,ರಾಜ್ಯದಲ್ಲಿ ಸಂವಿಧಾನ ಉಳಿಸುವವರು ಮತ್ತು ನಾಶಮಾಡುವವರು,ಧರ್ಮ ಮತ್ತು ಅಧರ್ಮ ನೀತಿ ಮತ್ತು ಅನೀತಿ ವಚನ ಪಾಲನ ಮತ್ತು ವಚನ ಭ್ರಷ್ಟ ಇವುಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ಘಟಕದ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಕೊಟ್ರೇಶ್ ರವರ ಪರ ಮತಯಾಚನೆ ಸಭೆಯನ್ನು ಆಯೋಜಿಸಲಾಗಿತ್ತು ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿಯವರು ಮತ್ತೊಮ್ಮೆ ತಮ್ಮ ಸರ್ಕಾರವನ್ನು ತರಲು ಸುಳ್ಳು ಭರವಸೆಗಳನ್ನ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಆದರೆ ತಿಪ್ಪರಲಾಗ ಹಾಕಿದರೂ ಸಹ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

 

 

 

ನಾನು ಕಂಡಂತೆ ನರೇಂದ್ರ ಮೋದಿಯವರು ಒಬ್ಬ ಸಮಯ ಸಾಧಕ ಸುಳ್ಳು ಹೇಳುವ ಯಾರಾದರೂ ಒಬ್ಬ ರಾಜಕೀಯ ನಾಯಕರಿದ್ದರೆ ಅದು ನರೇಂದ್ರ ಮೋದಿ ಎಂದರೆ ತಪ್ಪಾಗಲಾರದು ಎಂದರು, ಆರಂಭದಲ್ಲಿ ಇವರು ನಮಗೆ ಕೇವಲ 100 ದಿನಗಳ ಕಾಲ ಅಧಿಕಾರವನ್ನು ಕೊಡಿ ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಪ್ರತಿಯೊಬ್ಬ ನಾಗರೀಕನ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಹಾಕುತ್ತೇವೆ ಎಂದವರು ಎಂಟು ವರ್ಷಗಳು ಅಧಿಕಾರವನ್ನು ನಡೆಸಿದರೂ ಇಂದಿಗೂ 15 ಪೈಸೆಯನ್ನು ಹಾಕಿಲ್ಲ ಎಂದು ಗುಡುಗಿದರು .
ಅಮೇರಿಕಾದಲ್ಲಿ ಟ್ರಂಪ್ ಪರಿಸ್ಥಿತಿ ಹೇಗಾಗಿದೆಯೋ ಮುಂದಿನ ದಿನಮಾನಗಳಲ್ಲಿ ದೇಶದಲ್ಲಿಯೂ ಮೋದಿ ಪರಿಸ್ಥಿತಿ ಹಾಗೆ ಆಗುತ್ತದೆ ಈ ದೇಶಕ್ಕೆ ಯಾರಾದರೂ ತ್ಯಾಗ ಬಲಿದಾನ ಮಾಡಿದ್ದಾರೆ ಎಂದರೆ ಅದು ಕಾಂಗ್ರೆಸ್ ಪಕ್ಷದವರು ಆರ್ ಎಸ್ ಎಸ್ ಮತ್ತು ಜನಸಂಘದವರ ತ್ಯಾಗ ಬಲಿದಾನ ಈ ದೇಶಕ್ಕೆ ಏನಿದೆ ಇದ್ದರೆ ದಾಖಲೆ ಕೊಡಲಿ ಎಂದರು .


ಇತ್ತೀಚಿಗೆ ನಡೆದ ಪಿಎಸ್ಐ ನೇಮಕಾತಿ ವಿಷಯದಲ್ಲಿ ಎಡಿಜಿಪಿಯೊಬ್ಬರು ಜೈಲಿಗೆ ಹೋಗಿ ಬಂದಿದ್ದಾರೆ ಬಿಜೆಪಿಯವರು ಭ್ರಷ್ಟಾಚಾರ ಎಸೆಗಿದ್ದಾರೆ ಎಂಬುದಕ್ಕೆ ಇನ್ನೆಷ್ಟು ದಾಖಲೆ ಬೇಕು ಎಂದು ಪ್ರಶ್ನಿಸಿದರು ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಸರ್ಕಾರದವರು ರಾಮ ಜನ್ಮ ಭೂಮಿ ಹನುಮಜನ್ಮಭೂಮಿ ಹೀಗೆ ಹತ್ತು ಹಲವು ಕೋಮುವಾದದ ವಿಷ ಬೀಜಗಳನ್ನು ಬಿತ್ತುತ್ತಿದ್ದಾರೆ ಸ್ವಾಮಿ ವಿವೇಕಾನಂದರಿಗಿಂತ ದೊಡ್ಡ ಹಿಂದೂ ಮಹಾಭಕ್ತರು ಇವರೇನಲ್ಲ ಎಂದರು.
ಮೇ 10ನೇ ತಾರೀಖಿನಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್ ಕೊಟ್ರೇಶ್ ರವರ ಹಸ್ತದ ಗುರುತಿಗೆ ಮತವನ್ನು ಚಲಾಯಿಸುವ ಮೂಲಕ ಜಯಶೀಲರನ್ನಾಗಿ ಮಾಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂದರು .

ಮಾಜಿ ಸಚಿವ ಹೂವಿನಹಡಗಲಿ ಹಾಲಿ ಶಾಸಕ ಪಿಟಿ ಪರಮೇಶ್ವರ ನಾಯಕ್ ಮಾತನಾಡಿ ವಾಲ್ಮೀಕಿ ಸಮಾಜವು ತಾಲೂಕಿನಲ್ಲಿ ಬಹುದೊಡ್ಡ ಸಮಾಜವಾಗಿದೆ ನನ್ನನ್ನು ಎರಡು ಬಾರಿ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆ ಮಾಡಲು ಸಮಾಜವೇ ನನಗೆ ಬೆನ್ನಿಗೆ ನಿಂತಿತ್ತು ವಾಲ್ಮೀಕಿ ಗುರುಪೀಠದ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಅವರು ನಾನು ಎರಡನೇ ಬಾರಿ ಚುನಾವಣೆಗೆ ನಿಂತಾಗ ನನಗೆ ಬೆನ್ನು ತಟ್ಟಿ ಸಮಾಜದ ಓಟುಗಳನ್ನು ನನಗೆ ಹಾಕಿಸಲು ಹಾಗೂ ನನ್ನನ್ನು ಗೆಲ್ಲಿಸಲು ಸಹಾಯ ಮಾಡಿದ್ದರು ಅದನ್ನೆಂದೂ ನಾನು ಮರೆಯಲು ಸಾಧ್ಯವಿಲ್ಲ ಎಂದರು .

ಇಂದಿನ ಕಾಲದಲ್ಲಿ ಮತದಾರರು ಯಾರೂ ದಡ್ಡರಲ್ಲ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಂಡಿದ್ದಾರೆ ರಾಜಕಾರಣದಲ್ಲಿ ಅಪಪ್ರಚಾರ ಸಹಜ ಆದರೆ ಅದನ್ನು ಜೀರ್ಣೀಸಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ ವಾಸ್ತವವನ್ನು ತಿಳಿದುಕೊಂಡು ರಾಜಕೀಯ ಜೀವನ ಮಾಡಬೇಕು, ಹರಪನಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವ್ಯಕ್ತಿಯು ತಾಲೂಕಿನಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಜನತೆಗೆ ತೋರಿಸಲಿ ಎಂದರು ತಾಲೂಕು ವಾಲ್ಮೀಕಿ ನಾಯಕ ಸಮಾಜವು ಬಹಳ ವಿಶ್ವಾಸದ ಸಮಾಜವಾಗಿದೆ ಇವರು ಮಾತುಕೊಟ್ಟರೆ ಎಂದೂ ಮಾತಿಗೆ ತಪ್ಪುವುದಿಲ್ಲ ವಿಶ್ವಾಸಕ್ಕೆ ಮತ್ತೊಂದು ಹೆಸರೇ ವಾಲ್ಮೀಕಿ ಸಮಾಜ ಎಂದರು .
ಮೀಸಲಾತಿ ಹೆಚ್ಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಜನಸಂಖ್ಯೆಗೆ ಅನುಗುಣವಾಗಿ ಬಿಜೆಪಿಯವರಿಗೆ ಮೀಸಲಾತಿಯನ್ನು ಹೆಚ್ಚು ಕಡಿಮೆ ಮಾಡುವ ಇಚ್ಛಾ ಶಕ್ತಿ ಇಲ್ಲ ಮೀಸಲಾತಿಯನ್ನು ಹೆಚ್ಚು ಮಾಡಿ ಷಡೂಲ್ 9 ಗೆ ಸೇರಿಸಲು ಮೀನಾ ಮೇಷ ಏಕೆ ಎಣಿಸುತ್ತಿದೆ ಎಂದು ಪ್ರಶ್ನಿಸಿದರು .
ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸುಳ್ಳುಹೇಳುತ್ತಿದೆ ಬಿಜೆಪಿಯವರು ಕೇವಲ ನಾಟಕಮಾಡುತ್ತಿದ್ದಾರೆ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ ಎಂದು ಹೇಳಿದರು .

ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರ್ ರವರು ಮಾತನಾಡಿ ನಾವು ಅದಿನೇಳು ಜನರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಇದ್ದೇವು ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಚುನಾವಣೆ ಮಾಡಬೇಕು ಎಂದು ಹೇಳಿದ್ದೇವು ತಾಲೂಕಿನಲ್ಲಿ 30-40 ವರ್ಷಗಳಿಂದ ದುಡಿದವರಿಗೆ ಸ್ವಾಭಿಮಾನದ ಪ್ರಶ್ನೆ ಕಾಡಲಿಲ್ಲ ನಾಲ್ಕು ವರ್ಷಗಳಿಂದ ದುಡಿದವರಿಗೆ ದಿಡೀರ್ ಸ್ವಾಭಿಮಾನ ಬರುತ್ತದೆ ಎಂದು ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿಗೆ ಕುಟುಕಿದರು .

 

ಚಂದ್ರಶೇಖರ ಭಟ್ ಮಾತನಾಡಿ ಆಡುಮುಟ್ಟದ ಸೊಪ್ಪಿಲ್ಲ ವಾಲ್ಮೀಕಿ ನಾಯಕ ಸಮಾಜವಿಲ್ಲದ ಊರು ಇಲ್ಲ ವಾಲ್ಮೀಕಿ ನಾಯಕ ಸಮಾಜದ ಪರಂಪರೆ ಬಹುದೊಡ್ಡದು ನಾಡು ಕಟ್ಟಿ ಹೋರಾಟ ಮಾಡಿ ರಾಜ್ಯವನ್ನು ಆಳಿದ ಪಾಳೆಯಗಾರರು.
ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದವರು ಕೇಂದ್ರದ ಕಾಂಗ್ರೆಸ್ ಸರ್ಕಾರ ಆಗ ಬೂಟಾ ಸಿಂಗ್ ಕೇಂದ್ರದಲ್ಲಿ ಬಳ್ಳಾರಿಯಲ್ಲಿ ಬಸವರಾಜೇಶ್ವರಿಯವರಿಗೆ ಈ ಕೀರ್ತಿ ಸಲ್ಲುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್ ಬಿ ಪರಶುರಾಮಪ್ಪ ಮಾತನಾಡಿ ದುಡ್ಡು ಹೆಚ್ಚಾದರೆ ಒಮ್ಮೊಮ್ಮೆ ಸ್ವಾಭಿಮಾನ ಬರುತ್ತದೆ ಎಂದು ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯನ್ನು ಪರೋಕ್ಷವಾಗಿ ಲೇವಡಿ ಮಾಡಿದರು .

ಪ್ರಣಿತಿ ಸಿಂಧ್ಯಾ ಮಾತನಾಡಿ ಕರ್ತರು ಮೇ 10ನೇ ತಾರೀಖಿನವರೆಗೆ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕೆಲಸವನ್ನು ಮಾಡಿ ಇನ್ನು ಎರಡೇ ದಿನ ಬಾಕಿ ಇದೆ, ಈ ಎರಡು ದಿನದಲ್ಲಿ ಏನು ಬೇಕಾದರೂ ಮಾಡಬಹುದು ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯಾದ ಎನ್ ಕೊಟ್ರೇಶ್ ರವರಿಗೆ ಮತವನ್ನು ಹಾಕಿ ಮತ್ತು ಹಾಕಿಸಿ ಅವರನ್ನು ವಿಜಯಶೀಲ ರನ್ನಾಗಿ ಮಾಡಬೇಕು ಎಂದು ಹೇಳಿದರು .

ಅಭ್ಯರ್ಥಿ ಎನ್ ಕೊಟ್ರೇಶ್ ಮಾತನಾಡಿ ತಾಲೂಕಿನಲ್ಲಿ ನಾನು ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ ಇದೇ ತಾಲೂಕಿನ ಮನೆ ಮಗನಾದ ರೈತರ ಮಗನಾದ ನನಗೆ ನಿಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಗೆಲ್ಲಿಸಿದ್ದೆ ಆದರೆ ನಾನು ನಿಮ್ಮ ಸೇವೆಯನ್ನು ಮಾಡಲು ಸದಾ ಸಿದ್ದನಾಗಿರುತ್ತಾನೆ ನಾನು ಎಂದು ಜಾತಿ ಭೇದವನು ಮಾಡುವವನಲ್ಲ ಅಂತ ಪರಿಸ್ಥಿತಿಯೇ ನನ್ನ ಮುಂದೆ ಬರುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹೆಚ್ ಕೆ ಹಾಲೇಶ್, ಪುರಸಭೆ ಸದಸ್ಯ ಭರತೇಶ, ಗಿಡ್ಡಳ್ಳಿ ನಾಗರಾಜ್, ಚಿರಸ್ಥಹಳ್ಳಿ ಮರಿಯಪ್ಪ, ಎಡಿಹಳ್ಳಿ ಶೇಖರಪ್ಪ,ಆಲದಹಳ್ಳಿ ಷಣ್ಮುಖಪ್ಪ, ಸಿನಿಮಾ ರಾಜಶೇಖರ್, ಜಾಕೀರ್ ಸರ್ಕವಾಸ್,ಮೂಸಾಸಾಬ್,ಗೋಣಿಬಸಪ್ಪ ವಕೀಲರು, ದ್ಯಾಮಜ್ಜಿ ಹನುಮಂತಪ್ಪ, ದ್ಯಾಮಜ್ಜಿ ದಂಡೆಪ್ಪ, ನೀಲಗುಂದ ವಾಗೀಶ್, ಇಟ್ಟಿಗುಡಿ ಅಂಜಿನಪ್ಪ, ಹಿರೇಮೇಗಳಗೇರಿ ಪರಶುರಾಮಪ್ಪ, ಅರುಣ್ ಪೂಜಾರ್,ಕರೂರು ಹನುಮಂತಪ್ಪ, ಮುತ್ತಿಗಿ ಜಂಬಣ್ಣ, ಮತ್ತಿಹಳ್ಳಿ ಬೆಟ್ಟನಗೌಡ , ಇಟ್ಟಿಗುಡಿ ತಿಮ್ಮಣ್ಣ, ರಾಯದುರ್ಗದ ಮಂಜುನಾಥ್, ಪ್ರಕಾಶ್, ಹಾಲೇಶ್, ಬೇಲೂರು ಸಿದ್ದೇಶ್,ಪೂಜಾರ್ ಮಾರುತಿ ಭಟ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *