Vijayanagara Express

Kannada News Portal

ಜೆಡಿಎಸ್ ಅಭ್ಯರ್ಥಿ ರಿಂದ ಮನೆ ಮನೆಗೆ ತೆರಳಿ ಮತದಾರನ ಜಾಗೃತ ಅಭಿಯಾನ

1 min read

ಜೆಡಿಎಸ್ ಅಭ್ಯರ್ಥಿ ರಿಂದ ಮನೆ ಮನೆಗೆ ತೆರಳಿ ಮತದಾರನ ಜಾಗೃತ ಅಭಿಯಾನ

 

ಹರಪನಹಳ್ಳಿ : ಮೇ – 9 , ಜೆಡಿಎಸ್ ಅಭ್ಯರ್ಥಿ ನೂರ್ ಅಹಮದ್ ಯಿಂದ ಮನೆ ಮನೆಗೆ ತೆರಳಿ ಮತದಾನ ಜಾಗೃತ ಅಭಿಯಾನ ಮಾಡಿದರು .

ಪಟ್ಟಣದ ವಿವಿಧ ಕಾಲೋನಿಗಳಲ್ಲಿ ಮನೆ ಮನೆಗೆ ತೆರಳಿ ಮತ ಪ್ರಚಾರ ಮಾಡಿದರು.ಟೀಚರ್ಸ ಕಾಲೋನಿ,ಬಾಣಗೇರಿ, ಬಾಪೂಜಿ ನಗರ ಆಚಾರ್ಯ ಬಡಾವಣೆ, ಮುಂತಾದ ಕಡೆಗಳಲ್ಲಿ ಮನೆಮನೆಗೆ ತೆರಳಿ ಮತದಾನ ನೀಡುವಂತೆ ಪ್ರಚಾರ ಮಾಡಿದರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ನಾವು ಮನೆಮನೆಗೆ ತೆರಳಿ ಜನರನ್ನು ಅದರಲ್ಲಿ ಮತದಾರರನ್ನು ಜಾಗೃತಗೊಳಿಸುತ್ತಿದ್ದೇವೆ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳು ಜನರ ಮತಗಳನ್ನು ಮಾರಾಟಕ್ಕೆ ಪಡೆಯಲು ಯತ್ತಿಸುತ್ತಿವೆ ಆ ಕಾರಣದಿಂದಾಗಿ ಇಂತಹ ಮಾರಾಟಗಾರರ ಆಸೆ ಆಮಿಸಿಗಳಿಗೆ ಒಳಗಾಗಬೇಡಿರಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿರಿ ಹಣಕ್ಕಾಗಿ ಹೆಂಡಕ್ಕಾಗಿ ಎಂದು ಜನರನ್ನು ಜಾಗೃತಗೊಳಿಸುತ್ತಿದ್ದೇವೆ ಎಂದರು .

 

 

 

 

ಜನರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮವಾದ ಪ್ರತಿಕ್ರಿಯೆಯನ್ನು ನೀಡುತ್ತಿದ್ದು ನಮ್ಮೊಂದಿಗೆ ಸ್ಪಂದಿಸುತ್ತಿದ್ದಾರೆ ಈ ಬಾರಿ ನನಗೆ ಜನರು ತಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಿದ್ದೇ ಆದಲ್ಲಿ ನಾನು ನಿಮ್ಮೆಲ್ಲರ ಸೇವೆ ಮಾಡುತ್ತೇನೆ ಅಲ್ಲದೆ ತಾಲೂಕನ್ನು ಅಭಿವೃದ್ಧಿ ಪಡಿಸಿ ಈ ‌ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುವಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಳೆದ ಬಾರಿ ಈ ತಾಲೂಕಿನಲ್ಲಿ ನಮ್ಮ ಪಕ್ಷಕ್ಕೆ ಅತ್ಯುತ್ತಮವಾದ ಮತಗಳನ್ನು ಜನರು ನೀಡಿದ್ದರು ಆದರೆ ಆ ವ್ಯಕ್ತಿಯು ಈ ಬಾರಿ ಮತ್ತೊಂದು ಪಕ್ಷಕ್ಕೆ ಹಾರಿ ಆ ಪಕ್ಷದಿಂದ ಚುನಾವಣೆ ನಡೆಸುತ್ತಿದ್ದಾರೆ ಎಂದರು .

ತಾಲೂಕಿನಲ್ಲಿ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಥವಾ ಮಾಜಿ ಪ್ರಧಾನ ಮಂತ್ರಿ ದೇವೇಗೌಡರನ್ನು ಏಕೆ ಕರೆತರಲು ಪ್ರಯತ್ನ ಮಾಡಲಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲಿ ಕರೆಸುವ ಪ್ರಯತ್ನವನ್ನು ಮಾಡಿದೆವು ಆದರೆ ಮೊದಲೇ ಅನೇಕ ಕಾರ್ಯಕ್ರಮಗಳಿಗೆ ಸಮಯವನ್ನು ನಿಯೋಜನೆ ಮಾಡಿಕೊಂಡಿದ್ದರು ಹಾಗಾಗಿ ಸಮಯವಿಲ್ಲದ ಕಾರಣ ಅವರನ್ನು ಕರೆತರಲು ಆಗಲಿಲ್ಲ ಎಂದರು ಸಂಪೂರ್ಣವಾಗಿ ಜೆಡಿಎಸ್ ಪಕ್ಷವು ಬಹುಮತವನ್ನು ಪಡೆಯದಿದ್ದರೆ ನೀವು ಯಾವ ಪಕ್ಷದೊಂದಿಗೆ ಸೇರಿ ಸರ್ಕಾರ ಮಾಡಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದವರು ಇದು ಹೈಕಮಾಂಡ್ ಉತ್ತರಿಸುವ ಪ್ರಶ್ನೆ ಅದರ ಬಗ್ಗೆ ನಾನು ನಿರುತ್ತರ ನೀಡುವೆ ಎಂದರು .
ಕ್ಷೇತ್ರದಲ್ಲಿ ನಿಮ್ಮ ಗೆಲುವಿನ ಬಗ್ಗೆ ಈಗ ನಿಮಗೆ ಎನ್ನಿಸುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ 65 ವರ್ಷ ಆಳ್ವಿಕೆ ನಡೆಸಿದೆ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ ಬಿಜೆಪಿ 40 ಪರ್ಸೆಂಟ್ ಸರ್ಕಾರವಾಗಿದೆ ಹಾಗಾಗಿ ಈ ಬಾರಿ ಮತದಾರರರು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯಗತಾಯ ಪ್ರಯತ್ನ ಮಾಡಿದ್ದಾರೆ ಎಂದು ನಮಗೆ ಅನಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.

Leave a Reply

Your email address will not be published. Required fields are marked *