Vijayanagara Express

Kannada News Portal

ಶಿಕ್ಷಕರು ಶಾಲೆಯ ಶೌಚಾಲಯವನ್ನು ಸ್ವಚ್ಚಗೊಳಿಸುವುದು ತಪ್ಪೇನಲ್ಲ – ಎಂ ಪಿ ಲತಾ ಮಲ್ಲಿಕಾರ್ಜುನ

1 min read

ಶಿಕ್ಷಕರು ಶಾಲೆಯ ಶೌಚಾಲಯವನ್ನು ಸ್ವಚ್ಚಗೊಳಿಸುವುದು ತಪ್ಪೇನಲ್ಲ – ಎಂ ಪಿ ಲತಾ ಮಲ್ಲಿಕಾರ್ಜುನ

 

ಹರಪನಹಳ್ಳಿ : ಸೆ – 5 , ನಾನು ಶಿಕ್ಷಕರ ಮನೆತನದಿಂದ ಬಂದಿದ್ದೇನೆ ನಮ್ಮ ಮನೆಯ ಕೆಲಸವನ್ನು ಹಾಗೂ ಶೌಚಾಲಯವನ್ನು ನಾನೆ ಸ್ವಚ್ಚ ಮಾಡಿಕೊಳ್ಳುತ್ತೇನೆ ಅದರಲ್ಲೇನು ತಪ್ಪಿಲ್ಲ ಶಿಕ್ಷಕರು ಶಾಲೆಯ ಶೌಚಾಲಯವನ್ನು ಸ್ವಚ್ಚಗೊಳಿಸುವುದು ತಪ್ಪೇನಲ್ಲ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ರವರು ಶಿಕ್ಷಕರಿಗೆ ತಮ್ಮ ಶಾಲೆಯ ಆವರಣಗಳಲ್ಲಿ ಇರುವ ಶೌಚಾಲಯಗಳನ್ನು ತಾವೇ ಸ್ವತಃ ಸ್ವಚ್ಚ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪಟ್ಟಣದ ತರಳುಬಾಳು ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರ ವೃತ್ತಿಯು ಪವಿತ್ರವಾದ ವೃತ್ತಿಯಾಗಿದೆ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರ ವೃತ್ತಿಯಲ್ಲಿ ಇದ್ದವರು ದೇಶದ ಉನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಅವರು ಏರಿದ್ದರು. ಸಾಕಷ್ಟು ಜ್ಞಾನವನ್ನು ಹೊಂದಿದ ಅವರನ್ನು ನಡೆದಾಡುವ ವಿಶ್ವಕೋಶ ಎಂದೇ ಜನರು ಕರೆಯುತ್ತಿದ್ದರು ಎಂಥಾ ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುವ ಶಕ್ತಿ ಈ ಶಿಕ್ಷಕ ವೃತ್ತಿಗೆ ಇದೆ ಎಂದು ಹೇಳಿದರು .

ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರು ಸ್ವಚ್ಛತೆಗೆ ಆದ್ಯತೆಯನ್ನು ನೀಡಿದ್ದರು ಸ್ವತಃ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು ಮಹಾತ್ಮ ಗಾಂಧೀಜಿಯವರೇ ಹೀಗೆ ಬದುಕಿರುವಾಗ ನಾವೇಕೆ ನಮ್ಮ ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಾರದು ಎಂದು ಪ್ರಶ್ನಿಸಿದರಲ್ಲದೆ ಶಾಲೆಗಳಲ್ಲಿ ಶೌಚಾಲಯಗಳನ್ನು ಶಿಕ್ಷಕರು , ಶಿಕ್ಷಕಿಯರು ಸ್ವಚ್ಛಗೊಳಿಸಿದರೆ ತಪ್ಪೇನು ಅಲ್ಲ ಎಂದು ಹೇಳಿದರು
ಶಿಕ್ಷಕರು ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಅವರ ಭವಿಷ್ಯ ಉಜ್ವಲವಾಗಿ ಬೆಳಗುತ್ತದೆ ಅಲ್ಲದೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುತ್ತಾರೆ ಎಂದು ಅಭಿಪ್ರಾಯಪಟ್ಟರು .


ಹರಪನಹಳ್ಳಿ ತಾಲೂಕು ವಿದ್ಯಾಸಿರಿ ನಾಡು ಎಂದು ಪ್ರಸಿದ್ಧವಾಗಿದೆ ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಅವಶ್ಯಕತೆ ಇದೆ ಅದನ್ನು ನಾನು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಬಳಿ ಬೇಡಿಕೆ ಇಟ್ಟಿದ್ದೆ ಇಷ್ಟೊಂದು ವಿದ್ಯಾರ್ಥಿ ನಿಲಯಗಳು ನಿಮ್ಮ ತಾಲೂಕಿಗೆ ಏಕೆ ಎಂದು ಅವರು ಕೇಳಿದಾಗ ಇಲ್ಲ ನಮ್ಮಲ್ಲಿ ಬೇರೆ ಬೇರೆ ಜಿಲ್ಲೆಗಳಿಂದಲೂ ತಾಲೂಕಿನ ಕಡೆ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ ಹಾಗಾಗಿ ಸುಮಾರು ಪ್ರತಿದಿನ ಐದು ಸಾವಿರ ವಿದ್ಯಾರ್ಥಿಗಳು ಬೇರೆ ಬೇರೆ ಊರುಗಳಿಂದ ಬಸ್ಸುಗಳಲ್ಲಿ ಓಡಾಡುತ್ತಾರೆ ಈ ಕಾರಣಕ್ಕಾಗಿಯೆ ಹರಪನಹಳ್ಳಿ ತಾಲೂಕನ್ನು ವಿದ್ಯಾಸಿರಿ ನಾಡು ಎಂದು ಕರೆಯುತ್ತಾರೆ ಹಾಗಾಗಿ ವಿದ್ಯಾರ್ಥಿ ನಿಲಯಗಳ ಅವಶ್ಯಕತೆ ಇದೆ ಅದನ್ನು ಮಾಡಿಕೊಡಿ ಎಂದು ವಿವರಣೆ ನೀಡಿದೆ ಎಂದು ತಿಳಿಸಿದರು.

ಶಿಕ್ಷಕರ ಸಂಘದ ವತಿಯಿಂದ ಶಾಸಕಿ ಲತಾ ಮಲ್ಲಿಕಾರ್ಜುನ್ ರವರಿಗೆ ಭಿನ್ನವತ್ತಳೆಯ ಬೇಡಿಕೆಗಳನ್ನ ಮಂಡಿಸಿದರು ಮುಂದಿನ ದಿನಮಾನಗಳಲ್ಲಿ ಇವುಗಳನ್ನು ಈಡೇರಿಸದಿದ್ದರೆ ಧರಣಿ ಸತ್ಯಾಗ್ರಹ ಮತ್ತು ಮುಷ್ಕರವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು ಇದಕ್ಕೆ ಪ್ರತಿಕ್ರಿಸಿದ ಶಾಸಕಿ ಮುಷ್ಕರ ಮಾಡುವವರು ಬೇರೆ ಇದ್ದಾರೆ ಅವರು ಮುಷ್ಕರ ಮಾಡಲಿ ನೀವು ಶಿಕ್ಷಕರು ಶಿಕ್ಷಕ ವೃತ್ತಿಯನ್ನು ಮಾಡಿ ಮುಷ್ಕರವನ್ನು ಮಾಡುವುದು ನಿಮಗೆ ಶೋಭೆ ತರುವಂತದ್ದಲ್ಲ ಬೇಕಿದ್ದರೆ ನೀವು ಕಪ್ಪು ಬಟ್ಟೆಯನ್ನು ಕೊರಳಿಗೆ ಮತ್ತು ಕೈಗೆ ಧರಿಸಿಕೊಂಡು ಶಿಕ್ಷಕ ವೃತ್ತಿಯನ್ನು ಮುಂದುವರಿಸಿದರೆ ಮುಷ್ಕರವಾದಂತೆ ಎಂದು ಹೇಳಿದರು .

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಯು ಪ್ರಾಸ್ತಾನಿಕವಾಗಿ ಮಾತನಾಡಿ ಹರಪನಹಳ್ಳಿ ತಾಲೂಕು, ಭೌಗೋಳಿಕವಾಗಿ ತುಂಬಾ ದೊಡ್ಡದಾದ ತಾಲೂಕ ಆಗಿದೆ ಇಲ್ಲಿ 387 ಶಾಲೆಗಳು ಇವೆ ಅನುದಾನ ರೈತ ಅನುದಾನಿತ ಸರ್ಕಾರಿ ಶಾಲೆಗಳು ಸಾಕಷ್ಟು ಇದ್ದು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಲ್ಲಾ ಶಾಲೆಗಳಲ್ಲಿಯೂ ಸೇರಿ 50,000 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದರು ಶಾಲೆಗಳಿಗೆ ಬರುತ್ತಿದೆ ಎಂದು ಹೇಳಿದರು .

ಈ ವೇಳೆ ಉಪವಿಭಾಗಾಧಿಕಾರಿ ಟಿ ವಿ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ್ ಎರಗುಡಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ನಾಯ್ಕ್ ,,ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳಾದ ಜಿ ಪದ್ಮಲತಾ, ಎಸ್ ರಾಮಪ್ಪ ,ಎಂಜಿ ಮನೋಹರ, ಪಿಕೆ ಶಿವಾನಂದ ,ಪಿ ಗಣೇಶ್ ,ಎಂ ಆಂಜನೇಯ, ಮಕಬುಲ್ ಭಾಷಾ, ಎಚ್.ಕೆ ಚಂದ್ರಪ್ಪ ,ಎಂ ಬಿ ಶಿವಾಜಿ ನಾಯ್ಕ್ ,ಎಂ ಪಂಪನಾಯ್ಕ ,ಅರ್ಜುನ್ ಪರಸಪ್ಪ, ಕೆ ತಿರುಪತಿ ,ಲಕ್ಯ ನಾಯ್ಕ್ ,ಮಂಜಪ್ಪ ,ದಯಾನಂದ ಡಿ ,ಎಂ ರಮೇಶ ,ಓಬಳೇಶ್ ಟಿ ಓ ,ಬೆನಕಪ್ಪ ಕೆ ,ಬಿ ರವೀಂದ್ರನಾಥ್ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಧಿಕಾರಿ ಜಯರಾಜ್ , ಶರೀಫ್ ಮಕರ ಬಿ , ಲತಾ ರಾಥೋಡ್, ಕೆ ಆರ್ ಪ್ರಕಾಶ್ , ಟಿ.ಹೊನ್ನಪ್ಪ, ಪಿ ಸುಬ್ಬಣ್ಣ ,ಬಿ ಸೂರ್ಯ ನಾಯ್ಕ್ ,ಎಸ್ ಎಂ ಕೊಟ್ರಯ್ಯ, ಹನುಮಂತಪ್ಪ ಸೊಪ್ಪಿನ ,ಜಯಣ್ಣ ಪೂಜಾರಿ ಮಂಜ ನಾಯ್ಕ್,ಸಿ ರುದ್ರಪ್ಪ ,ಗುಂಡಿ ಬಸವರಾಜ್ ,ಸಿ ಕೊಟ್ರೇಶ್ ,ಮಲ್ಲಿಕಾರ್ಜುನ ಡಿಪಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಕಂಚಿಕೇರಿ ಜಯಲಕ್ಷ್ಮಿ, ಗುಂಡಗತ್ತಿ ನೇತ್ರಾವತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *