Vijayanagara Express

Kannada News Portal

ಏಪ್ರಿಲ್ 10 ರಂದು ಶಾಸಕರ ಷಷ್ಠಿ ಪೂರ್ತಿ , ಕಾರ್ಯಕರ್ತರಿಂದ ಅದ್ದೂರಿ ಕಾರ್ಯಕ್ರಮ ಆಯೋಜನೆೆ

1 min read

ಏಪ್ರಿಲ್ 10 ರಂದು ಶಾಸಕರ ಷಷ್ಠಿ ಪೂರ್ತಿ ,
ಕಾರ್ಯಕರ್ತರಿಂದ ಅದ್ದೂರಿ ಕಾರ್ಯಕ್ರಮ ಆಯೋಜನೆೆ

ಹರಪನಹಳ್ಳಿ: ತಾಲೂಕಿನ ಜನಪ್ರಿಯ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರ 60ನೇ ವರ್ಷದ ಹುಟ್ಟುಹಬ್ಬ ಇದೇ ಏಪ್ರಿಲ್ 10 ರಂದು ಹರಪನಹಳ್ಳಿಯ ಹಿರೇಮೇಗಳಗೇರಿ ಪಾಟಿಲ್ ಸಿದ್ದನಗೌಡ ಕಾಲೇಜು ಆವರಣದಲ್ಲಿ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಗುರುವಾರ ಪಟ್ಟಣದ ಬಾಬು ಜಗಜೀವನರಾಂ ಭವನದಲ್ಲಿ ಬಿಜೆಪಿ ಮುಖಂಡರು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ್ ತಾಲೂಕಿನ ಜನಪ್ರಿಯ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರ 60ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲು ಈ ಸುದ್ದಿ ಗೋಷ್ಠಿ ಕರೆಯಲಾಗಿದೆ ಏಪ್ರಿಲ್ 10 ರಂದು ಶಾಸಕರ ಹುಟ್ಟು ಹಬ್ಬ ಇದೆ ಪ್ರತಿ ವರ್ಷ ಕ್ಕಿಂತ ಈಬಾರಿ ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಏಕೆಂದರೆ ಇದು ಷಷ್ಠಿ ಪೂರ್ತಿ ಕಾರ್ಯಕ್ರಮವಾಗಿರುತ್ತದೆ ಈ ಕಾರ್ಯಕ್ರಮದ ಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ,ದಾವಣಗೆರೆ ಸಂಸದರಾದ ಜಿ.ಎಂ.ಸಿದ್ದೇಶ್ವರ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ,ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಶ್ರೀರಾಮುಲು, ಬಳ್ಳಾರಿ ಜಿಲ್ಲೆಯ ಸಂಸದ ವೈ ದೆವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎನ್.ಸತೀಶ್, ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ,ಮುಂತಾದ ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವರು ಎಂದು ಹೇಳಿದ ಅವರು
ಬೆಳಿಗ್ಗೆ 10ಘಂಟೆಗೆ ದೇವರ ತಿಮ್ಮಲಾಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಗೋಮಾತೆ ಪೂಜೆ ನೆರವೇರಿಸಲಾಗುವುದು,ನಂತರ ಹೆಚ್ ಪಿ ಎಸ್ ಕಾಲೇಜು ಆವರಣದಲ್ಲಿ ವ್ಯವಸ್ಥೆ ಮಾಡಲಾಗಿರುವ ವೇದಿಕೆ ಮೇಲೆ ಸೀತಾರಾಮ ಕಲ್ಯಾಣಮಹೋತ್ಸವ ನಡೆಯುವುದು, ನಂತರ ಶಾಸಕ ಕರುಣಾಕರ ರೆಡ್ಡಿ ಅವರ 60ನೇ ವರ್ಷದ ಷಷ್ಠಿ ಪೂರ್ತಿ ಸಂಭ್ರಮಾಚರಣೆ ನಡೆಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು.

ಎಂ.ಪಿ.ನಾಯ್ಕ ಮಾತನಾಡಿ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಜನರು ಸೇರುವ ನಿರೀಕ್ಷೆಯಿದೆ ಗ್ರಾಮಾಂತರ ಪ್ರದೇಶದಿಂದ ಬರುವ ಜನರ ವಾಹನಗಳನ್ನು ಹೊಸಪೇಟೆ ರಸ್ತೆ ಮೂಲಕ ವಾಹನಗಳನ್ನು ನಿಲುಗಡೆ ಮಾಡಲು ಪೂರ್ವಾಚಾರ್ ಬಡಾವಣೆಯಲ್ಲಿ ವ್ಯವಸ್ಥೆ ಮಾಡಲಾಗಿದೆ,ಹರಿಹರ ರಸ್ತೆ ಮೂಲಕ ಬರುವ ವಾಹನಗಳನ್ನು ಎಡಿಬಿ ಕಾಲೇಜು ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ, ಕೊಟ್ಟೂರು ರಸ್ತೆಯ ಮೂಲಕ ಬರುವ ವಾಹನಗಳನ್ನು ಎಪಿಎಂಸಿ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ, ಹೊಳಲು ರಸ್ತೆ ಮೂಲಕ ಬರುವ ವಾಹನಗಳನ್ನು ಜೂನಿಯರ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ .
ಮುಖ್ಯಮಂತ್ರಿಗಳ ಬಳಿ ತಮ್ಮ ಬೇಡಿಕೆಗಳು ಏನನ್ನಾದರೂ ಈಡೇರಿಕೆಗೆ ಒತ್ತಾಯವಿದೆಯೇ ಎಂದು ಕೇಳಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖಂಡರು ಆ ತರಹದ ಬೇಡಿಕೆಗಳು ಏನೂ ಇಲ್ಲ ಕಟ್ಟಡ ಕಾಮಗಾರಿಯ ಉದ್ಘಾಟನೆ ಹಾಗೂ ಕಾಮಗಾರಿಗಳ ಭೂಮಿಪೂಜೆ ಯಾವುವು ಇಲ್ಲ ಇದು ಶಾಸಕ ಕರುಣಾಕರ ರೆಡ್ಡಿ ಅವರ 60ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ ಅಷ್ಟೇ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಈಜಂತ್ಕರ್ ಮಂಜುನಾಥ್, ಆರ್ ಲೋಕೇಶ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಲಿಂಬೆ ನಾಯ್ಕ್,ಎಸ್.ಪಿ, ಮಂಜ್ಯನಾಯ್ಕ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಕಲ್ಲೇರ ಬಸವರಾಜ , ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ,ರಾಘವೇಂದ್ರ ಶೆಟ್ರು, ಮೂಲಿಮನಿ ಹನುಮಂತಪ್ಪ, ಉದಯಶಂಕರ್ , ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ, ಕೊಮಾರನಳ್ಳಿ ಪ್ರಾಣೇಶ್ ವಕೀಲರು,ಕಣಿವಿಹಳ್ಳಿ ಮಂಜುನಾಥ್, ಈಡಿಗರ ಗಂಗಾಧರ್, ಈಡಿಗರ ಅಂಜಿನಪ್ಪ ತೆಲಿಗಿ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *