September 18, 2024

Vijayanagara Express

Kannada News Portal

ಯುವಕರು ದುಶ್ಚಟಗಳಿಂದ ದೂರವಿರಿ -ಎಂಪಿ ವೀಣಾ ಮಹಾಂತೇಶ್

1 min read

ಯುವಕರು ದುಶ್ಚಟಗಳಿಂದ ದೂರವಿರಿ -ಎಂಪಿ ವೀಣಾ ಮಹಾಂತೇಶ್

ಹರಪನಹಳ್ಳಿ: ಪಟ್ಟಣದ ನಟರಾಜಕಲಾಭವನದಲ್ಲಿ ಶ್ರೀ ಸಾಯಿ ಫಿಟ್ನೆಸ್ ಅವರ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಪಿ ವೀಣಾ ಮಹಾಂತೇಶ್ ರವರು ಯುವಕರು ದುಶ್ಚಟಗಳಿಂದ ದೂರವಿರಿ ಎಂದು ಸಲಹೆ ನೀಡಿದರು .

ಶ್ರೀ ಸಾಯಿ ಫಿಟ್ನೆಸ್ ಅವರ ಅಂತರ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಹರಪನಹಳ್ಳಿ ಎಂ.ಪಿ ವೀಣಾ ಮಹಾಂತೇಶ್ ರವರು ಯುವಕರು ಇತ್ತೀಚಿನ ದಿನಗಳಲ್ಲಿ ಕೇವಲ ಓದು ಬರಹ ಕ್ಕೆ ಸೀಮತವಾಗಿ ಪರ್ಸೆಂಟೇಜ್ ಲೆಕ್ಕದಲ್ಲಿ ಇದ್ದಾರೆ ಆದರೆ ವಿಭಿನ್ನವಾದಂತ ಕ್ಷೇತ್ರಗಳಲ್ಲಿ ಸ್ಪರ್ಧೆಯನ್ನು ಮಾಡುವುದು ಕಡಿಮೆಯಾಗಿದೆ ಮಾನಸಿಕವಾಗಿ ತಯಾರಾದಂತೆ ದೈಹಿಕವಾಗಿಯೂ ತಯಾರಾಗಿರಬೇಕು ಅದಕ್ಕೆ ತಕ್ಕಂತಹ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ವೈದ್ಯರ ಸಲಹೆ ಇಲ್ಲದೆ ಆಹಾರವನ್ನು ಸಹ ಸೇವಿಸಬಾರದು ಏಕೆಂದರೆ ಯಾವ ಯಾವ ಆಹಾರಗಳನ್ನು ಯಾವಾಗ ಪಡೆಯಬೇಕು ಮತ್ತು ಅವುಗಳಲ್ಲಿ ಹೊಂದಿರುವ ಪ್ರೋಟೀನು ಅಂಶಗಳನ್ನು ತಿಳಿದುಕೊಳ್ಳಲು ವೈದ್ಯರ ಸಲಹೆ ಅತ್ಯಗತ್ಯ ಎಂದರು ಯುವಕರು ಮದ್ಯವ್ಯಸನದಿಂದ ದೂರವಿರಿ ಎಂದ ಅವರು ಇದರ ಜೊತೆಗೆ ಯೋಗ ಮತ್ತು ಧ್ಯಾನ ಉತ್ತಮವಾದಂತಹ ಅಭ್ಯಾಸಗಳು ಅವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

 

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಶಿಧರ್ ಪೂಜಾರ್ ಕಾಂಗ್ರೆಸ್ ಮುಖಂಡರು ಹರಪನಹಳ್ಳಿ ಮಾತನಾಡಿ ಹರಪನಹಳ್ಳಿಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಇತಿಹಾಸವಿದೆ ಅದಕ್ಕೆ ಸಾಕ್ಷಿ ಎಂದರೆ ಹರಪನಹಳ್ಳಿಯಲ್ಲಿ12 ಗರಡಿ ಮನೆಗಳು ಇವೆ ಒಂದಾನೊಂದು ಕಾಲದಲ್ಲಿ ಹರಪನಹಳ್ಳಿಯಲ್ಲಿ ತಯಾರಾದಂತ ಕುಸ್ತಿಪಟುಗಳು ಮೈಸೂರು ದಸರಾದಂತ ಖ್ಯಾತ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಗೆದ್ದ ಉದಾಹರಣೆಗಳಿವೆ ಆದುದರಿಂದ ಹರಪನಹಳ್ಳಿ ಇಂತಹ ಸ್ಪರ್ಧೆ ಗಳಿಗೆ ಹೆಸರುವಾಸಿಯಾಗಿದೆ.
ಎಲ್ಲ ಯುವಕರು ಗುಟ್ಕಾ ಚಟಗಳಿಂದ ದೂರವಿರಿ ಹಾಗೂ ಈ ಶ್ರೀ ಸಾಯಿ ಫಿಟ್ನೆಸ್ ತಂಡದಲ್ಲಿ ವಿಜಯಿಯಾದಂತವರು ರಾಷ್ಟ್ರಮಟ್ಟದಲ್ಲಿ ಹೆಸರನ್ನು ಮಾಡಿರಿ ಎಂದು ಶುಭ ಹಾರೈಸಿದರು.

ಪಟ್ಟಿಗೆ ಬಾಬಣ್ಣ ಮಾತನಾಡಿ ಆರೋಗ್ಯವೇ ಭಾಗ್ಯ ಉಲ್ಲಾಸವೇ ಜೀವನ ಚಿಂತೆಯೇ ಮುಪ್ಪು ಆದುದರಿಂದ ಪ್ರತಿಯೊಬ್ಬ ಯುವಕರು ಉತ್ತಮವಾದ ಚಿಂತನೆಗಳನ್ನು ಹೊಂದಿರಬೇಕು ಹಾಗೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಎಂದು ಕಿವಿಮಾತನ್ನು ಹೇಳಿದರು.

ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಕೋರಿಶೆಟ್ಟಿ ಉಚ್ಚೇಂಗಪ್ಪ ಮಾತನಾಡಿ ಯುವಕರು ಉತ್ತಮ ರೀತಿಯಲ್ಲಿ ಸಾಗಬೇಕು ಇತ್ತೀಚಿನ ದಿನಗಳಲ್ಲಿ ಯುವ ಸಮೂಹವು ದುಶ್ಚಟಗಳಿಗೆ ಬಲಿಯಾಗಿ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ ಆದುದರಿಂದ ಅಂತಹ ಇರಬೇಕಾದರೆ ವ್ಯಾಯಾಮ ಅತ್ಯಗತ್ಯ ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವುದೇ ಭಾಗ್ಯ ಎಂದರು .
ಕಾರ್ಯಕ್ರಮದಲ್ಲಿ ಪ್ರಥಮ ವಿಜೇತರಾಗಿ ಮಿಸ್ಟರ್ ಹರಪನಹಳ್ಳಿ ಸುಶೀಲ್ ದಾವಣಗೆರೆ ಅವರು ಆಯ್ಕೆಯಾಗಿರುತ್ತಾರೆ ಇವರಿಗೆ 15000ಬಹುಮಾನ , ಮತ್ತು ದ್ವಿತೀಯ ಮೆಹಬೂಬ್ ಭಾಷ ಸಂಡೂರು ವಿಜೇತರಾಗಿ ಬೆಸ್ಟ್ ಮಸ್ಕ್ಯಲರ್ ಆಗಿ 10000 ರೂ ಬಹುಮಾನ ಪಡೆದರು ಹಾಗೂ ತೃತೀಯ ವಿಜೇತರಾಗಿ ಬೆಸ್ಟ್ ಪೋಸ್ಟರ್ ಮಲ್ಲಿಕಾರ್ಜುನ್ ಆಗಿ ಆಯ್ಕೆಯಾಗಿರುತ್ತಾರೆ ಇವರು 5000 ನಗದು ಬಹುಮಾನ ಪಡೆದುಕೊಂಡಿರುತ್ತಾರೆ.

ಈ ಸಂದರ್ಭದಲ್ಲಿ ಗಿಡ್ಡಳ್ಳಿ ನಾಗರಾಜ್ ಕಾಂಗ್ರೇಸ್ ಮುಖಂಡರು , ದ್ಯಾಮಜ್ಜಿ ಆನಂದ ,ಗಿಡ್ಡಳ್ಳಿ ಶಿವಕುಮಾರ್,ಮ್ಯಾಕಿ ಅಜ್ಜಯ್ಯ, ದಾವಣಗೇರಿ ಅಂಜಿನಪ್ಪ,ಹಿರಿಯ ಬಾಡಿಬಿಲ್ಡರ್ ರಂಗನಾಥ ಬಿ, ತಿಮ್ಮಾಪುರದ ನಾಗರಾಜ್,ಮಕರಬ್ಬಿ ದಾದಾಪೀರ್, ಆಯೋಜಕರಾದ ಚೌಡಪ್ಪ ,ಕೃಷ್ಣ .ಜಿ, ಚೌಡಪ್ಪ ಜಿ, ಆದರ್ಶ ಡಿ,
ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *