Vijayanagara Express

Kannada News Portal

ಸಿಸಿ ರಸ್ತೆ ಉದ್ಘಾಟನೆ ನೆರವೇರಿಸಿದ ಸಿರಿಗೆರೆ ಶ್ರೀಗಳು

1 min read

ಸಿಸಿ ರಸ್ತೆ ಉದ್ಘಾಟನೆ ನೆರವೇರಿಸಿದ ಸಿರಿಗೆರೆ ಶ್ರೀಗಳು

 

ಹರಪನಹಳ್ಳಿ/ಜಗಳೂರು ಕ್ಷೇತ್ರದ ಡಗ್ಗಿ ಬಸಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಾರ್ಗದ ಬಸವೇಶ್ವರ ರಥೋತ್ಸವ ಕಾರ್ಯಕ್ರಮವನ್ನು ಡಾ॥ ಶ್ರೀ ಶ್ರೀ ಶಿವಮೂರ್ತಿ ಶಿವಚಾರ್ಯ ಮಹಾ ಸ್ವಾಮಿಜಿಗಳಿಂದ ನೂತನ ರಥೋತ್ಸವದ ಉದ್ಘಾಟನೆ ಮತ್ತು ಚಾಲನೆ ನೀಡಿದರು ಹಾಗೂ ಸಿಸಿ ರಸ್ತೆ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಿದರು.

ಡಗ್ಗಿಬಸಾಪುರದಲ್ಲಿ ಮಾರ್ಗದ ಬಸವೇಶ್ವರರ ನೂತನ ರಥೋತ್ಸವವನ್ನು ಚಾಲನೆ ನೀಡಿ ನಂತರ 45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಗಳೂರಿನ ಶಾಸಕರಾದ ಎಸ್ ವಿ.ರಾಮಚಂದ್ರ,ದಾವಣಗೆರೆ ಜಿಲ್ಲೆಯ ಸಂಸದರಾದ ಜಿ ಎಂ ಸಿದ್ದೇಶ್ವರ್ ರವರು ಭಾಗವಹಿಸಿ ಮಾತನಾಡಿದರು..

ಈ ಸಂದರ್ಭದಲ್ಲಿ ತಾಲ್ಲೂಕು ವೀರ ಶೈವ ಸಮಾಜದ ಅಧ್ಯಕ್ಷರಾದ ಗುಂಡಗತ್ತಿ ಮಂಜುನಾಥ, ಬಿಜೆಪಿ ಮುಖಂಡರಾದ ಮಹಾಬಲ್ಲೇಶ್ವರ ಗೌಡ್ರು, ನಂಜನಗೌಡ್ರು, ಬೇವಿನಹಳ್ಳಿ ಕೆಂಚನಗೌಡ್ರು, ಗುತ್ತಿಗೆದಾರರಾದ ಚಂದ್ರನಾಯ್ಕ, ಬಸವನಗೌಡ್ರು, ಊರಿನ ಮುಖಂಡರಾದ ಯರಿಸ್ವಾಮಿ, ವೀರಬಸಪ್ಪ, ಪೂಜಾರ ಗಂಗಾಧರ, ಬಸವರಾಜ, ಬಣಕಾರ ಪ್ರಭು, ದಾನಪ್ಳ ರಾಜಪ್ಪ, ಕಮ್ಮತ್ತಹಳ್ಳಿ ಸಿದ್ದಪ್ಪ, ಕ್ಯಾರಕಟ್ಟೆ ಶಿವಯೋಗಿ, ತೌಡುರು ಮಂಜಣ್ಣ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *