Vijayanagara Express

Kannada News Portal

ಸೀತಾರಾಮ ಕಲ್ಯಾಣೋತ್ಸವ ಮತ್ತು ಕರುಣಾಕರರೆಡ್ಡಿ ಷಷ್ಠ್ಯಾಬ್ದಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ, ಭಾಷಣ ಕೇಳಲು ಜನಸ್ತೋಮ

1 min read

ಸೀತಾರಾಮ ಕಲ್ಯಾಣೋತ್ಸವ ಮತ್ತು ಕರುಣಾಕರರೆಡ್ಡಿ ಷಷ್ಠ್ಯಾಬ್ದಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ, ಭಾಷಣ ಕೇಳಲು ಜನಸ್ತೋಮ

 

ಹರಪನಹಳ್ಳಿ: ಏ 10 ಹರಪನಹಳ್ಳಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಬಡವರ ಬಂದು ಕರುಣಾಮಯಿ ದೀನ ದಲಿತರ ಬಂಧು ,ಯುವಕರ ಕಣ್ಮಣಿ ,ಗಣಿಧಣಿ, ಮಾಜಿ ಕಂದಾಯ ಸಚಿವರಾದ ಹರಪನಹಳ್ಳಿ ಕ್ಷೇತ್ರದ ಹಾಲಿ ಶಾಸಕ ಸನ್ಮಾನ್ಯ ಶ್ರೀ ಕರುಣಾಕರ ರೆಡ್ಡಿಯವರ 60ನೇ ವರ್ಷದ ಹುಟ್ಟುಹಬ್ಬ (ಷಷ್ಠ್ಯಾಬ್ದಿ) ಹಾಗೂ ಸೀತಾರಾಮ ಕಲ್ಯಾಣಮಹೋತ್ಸವ ಕಾರ್ಯಕ್ರಮ ಪಟ್ಟಣದ ಹಿರೇಮೇಗಳಗೆರೆ ಪಾಟೀಲ್ ಸಿದ್ದನಗೌಡ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಅದ್ದೂರಿಯಾಗಿ ಜರುಗಿತು.

ರಾಜ್ಯದ ಮುಖ್ಯಮಂತ್ರಿ ಯಾದ ಸನ್ಮಾನ್ಯ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ನೋಡಿ ಸ್ವರ್ಗದಂತೆ ಅಲಂಕರಿಸಿ ಪೂಜೆಯನ್ನು ನೆರವೇರಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು .

ಪ್ರಗತಿಯ ರಿಪೋರ್ಟ್ ಕಾರ್ಡ್ ನೊಂದಿಗೆ ಜನರ ಮುಂದೆ ಮತ್ತೆ ಬರುತ್ತೇವೆ ಎಂದು ಸಿಎಂ ಬೊಮ್ಮಾಯಿನುಡಿದರು
ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು
ಅನುಷ್ಠಾನಗೊಳಿಸುವುದರ ಮೂಲಕ ಆ ಪ್ರಗತಿಯ ರಿಪೋರ್ಟ್ ಕಾರ್ಡ್ ನೊಂದಿಗೆ ಜನರ ಮುಂದೆ
ಹೋಗಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಬಜೆಟ್ ನಲ್ಲಿ ಘೋಷಿಸಲಾಗಿರುವ ಯೋಜನೆಗಳನ್ನು ಈ ತಿಂಗಳಾಂತ್ಯದಲ್ಲಿಯೇ ಅನುಷ್ಠಾನಕ್ಕೆ
ಆದೇಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ಅಭಿವೃದ್ಧಿ ಸುತ್ತಲೂ
ಜನರಿರಬಾರದು;ಜನರ ಸುತ್ತಲೂ ಅಭಿವೃದ್ಧಿ ಇರಬೇಕು ಎನ್ನುವ ಉದ್ದೇಶದಿಂದ ನಮ್ಮ ಸರಕಾರ
ಕಾರ್ಯನಿರ್ವಹಿಸುತ್ತಿದೆ, ಬಜೆಟ್ ನಲ್ಲಿನ ಯೋಜನೆಗಳ ಅನುಷ್ಠಾನದ ಪ್ರಗತಿಯ
ವರದಿಯೊಂದಿಗೆ ಜನರ ಮುಂದೆ ಹೋಗಲಾಗುವುದು.2023ರಲ್ಲಿಯೂ ಜನರು ನಮಗೆ
ಆಶೀರ್ವದಿಸಲಿದ್ದಾರೆ ಮತ್ತು ನಾವೇ ಅಧಿಕಾರಕ್ಕೆ ಬಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ
ಕುಳಿತುಕೊಳ್ಳಲಿದ್ದೇವೆ ಎಂಬ ಅದಮ್ಯ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ರೂಗಳನ್ನು ಕಲ್ಯಾಣ ಕರ್ನಾಟಕ
ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ನಮ್ಮ‌ ಸರಕಾರ 3ಸಾವಿರ ಕೋಟಿ ರೂ.ಗಳ ಅನುದಾನ
ನೀಡುವುದರ ಮೂಲಕ ಈ ಪ್ರದೇಶದ ಮೇಲಿನ ಬದ್ಧತೆ ಪ್ರದರ್ಶಿಸಿದೆ ಎಂದು ಹೇಳಿದ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ತಿಂಗಳೊಳಗೆ 3ಸಾವಿರ ಕೋಟಿ ರೂ.ಗಳ
ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗುವುದು ಮತ್ತು ವರ್ಷಾಂತ್ಯಕ್ಕೆ ಖರ್ಚು
ಮಾಡಲಾಗುವುದು ಎಂದರು.
ಈ ಹಿಂದಿನ ಸರಕಾರ ಕೇವಲ 1500 ಕೋಟಿ ರೂ. ನೀಡುತ್ತಿತ್ತು;ಅದು ಕೂಡ ಖರ್ಚಾಗುತ್ತಿರಲಿಲ್ಲ.
ಅದೆಲ್ಲದಕ್ಕೂ ನಮ್ಮ ಸರಕಾರ ಇತಿಶ್ರೀ ಹಾಡಿದೆ ಎಂದರು.
ಚಿಗಟೇರಿ ಸೇರಿದಂತೆ ಹರಪನಹಳ್ಳಿ ತಾಲೂಕಿನ 107 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು
ಯೋಜನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಮೂರ್ನಾಲ್ಕು ತಿಂಗಳಲ್ಲಿ
ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ನಾನೇ ಬಂದು ಭೂಮಿಪೂಜೆ ‌ನೆರವೇರಿಸುವೆ
ಎಂದರು.
ಕರುಣಾಕರ ರೆಡ್ಡಿ ಅವರದ್ದು ವಿಶಿಷ್ಟ ವ್ಯಕ್ತಿತ್ವ: ಹರಪನಹಳ್ಳಿ ಶಾಸಕ
ಕರುಣಾಕರರೆಡ್ಡಿ ಅವರದ್ದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಎಂತ ಸವಾಲುಗಳು
ಸಮಸ್ಯೆಗಳೇ ಎದುರಾದರೂ ಸಂಯಮ ಕಳೆದುಕೊಳ್ಳದೇ ಸ್ಥಿತಪ್ರಜ್ಞರಾಗಿ ಶಾಂತರೀತಿಯಿಂದ
ಸಮಸ್ಯೆಗಳನ್ನು ಬಗೆಹರಿಸುವಂತ ವ್ಯಕ್ತಿತ್ವ ಎಂದರು.
ಬಳ್ಳಾರಿ ಜಿಲ್ಲೆಯ ಇತಿಹಾಸವನ್ನು ಮೆಲುಕುಹಾಕಿ ನೋಡಿದರೇ ಕೆಲವೇ ಕೆಲವು ಶಕ್ತಿಗಳ
ಕೈಯಲ್ಲಿದ್ದ ಬಳ್ಳಾರಿ ಪ್ರಾಂತ್ಯದಲ್ಲಿನ ಶಕ್ತಿಗಳ ವಿರುದ್ಧ ಧ್ವನಿ ಎತ್ತಿ
ನಮ್ಮ‌ಪಕ್ಷ ಭದ್ರವಾಗಿ ನೆಲೆಯೂರಿಸಿದ ಕೀರ್ತಿ ಜನಾರ್ಧನ ರೆಡ್ಡಿ,ಕರುಣಾಕರರೆಡ್ಡಿ,
ಬಿ.ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರಿಗೆ ಸಲ್ಲುತ್ತದೆ ಎಂದರು.
ಹರಪನಹಳ್ಳಿ ಕ್ಷೇತ್ರವನ್ನು ಸಮಗ್ರವಾಗಿ ಶಾಸಕ ಕರುಣಾಕರರೆಡ್ಡಿ ಅವರು
ಅಭಿವೃದ್ಧಿಪಡಿಸಿದ್ದಾರೆ ಮತ್ತು ಅಭಿವೃದ್ಧಿಪಡಿಸುತ್ತಿದ್ದಾರೆಯೂ ಕೂಡ;ಹರಪನಹಳ್ಳಿ
ಸಮಗ್ರ ಅಭಿವೃದ್ಧಿಗೆ ಕರುಣಾಕರರೆಡ್ಡಿ ಅವರು ಗಟ್ಟಿಯಾಗಿ ನಿಂತಿದ್ದು,ಅವರಿಗೆ
ಮತ್ತೊಮ್ಮೆ ಅಶೀರ್ವದಿಸಬೇಕು ಎಂದು ಅವರು ಮನವಿ ಮಾಡಿದರು.
ಬದುಕಿನಲ್ಲಿ ಬ್ಯಾಲೆನ್ಸ್ ಶೀಟ್ ಬಹಳ ಮುಖ್ಯ ಎಂಬುದನ್ನು ತಮ್ಮ ಭಾಷಣದಲ್ಲಿ
ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ ಅವರು ಈ ಬದುಕಿನಲ್ಲಿ ಪ್ರೀತಿ, ವಿಶ್ವಾಸ, ಸ್ನೇಹ,
ನಾಲ್ಕು ವಿಶೇಷವಾದ ಕೆಲಸಗಳು,ನೆರವು, ದಿನದಲಿತರಿಗೆ ಆಶ್ರಯದಂತ ಪುಣ್ಯ ಕಾರ್ಯಗಳನ್ನು
ಮಾಡುವುದರ ಮೂಲಕ ಬದುಕಿನ ಬುತ್ತಿಯಲ್ಲಿ ಪುಣ್ಯ ತುಂಬುವ ಕೆಲಸ ಮಾಡಿ ಎಂದರು.
ವಿಜಯನಗರ ಸಮಗ್ರ ಅಭಿವೃದ್ಧಿಗೆ ಸೇರಿದಂತೆ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸಲಾಗುವುದು ಎಂದರು.

ಅಚ್ಚುಕಟ್ಟಾದ ಕಾರ್ಯಕ್ರಮದ ಯೋಜನೆ

ಸುಮಾರು ಸುಮಾರು 20 ಸಾವಿರ ಆಸನಗಳ ವ್ಯವಸ್ಥೆಯನ್ನು ಕಾರ್ಯಕ್ರಮದಲ್ಲಿ ಮಾಡಲಾಗಿತ್ತು ನಾಡಿನ ದೊರೆ ಮುಖ್ಯಮಂತ್ರಿಯಾದ ಸನ್ಮಾನ್ಯ ಬಸವರಾಜ್ ಬೊಮ್ಮಾಯಿ ಅವರು ಹರಪನಹಳ್ಳಿ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವ ಕಾರ್ಯಕರ್ತರು ಬಿಸಿಲಿನಲ್ಲಿ ನಿಲ್ಲಬಾರದು ಎಂಬ ಸದುದ್ದೇಶದಿಂದ ಸುಮಾರು 20 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು ಹಾಸನಗಳೆಲ್ಲ ತುಂಬಿ ವೇದಿಕೆಯ ಎರೆಡೂ ಇಕ್ಕೆಲಗಳಲ್ಲಿ ಕಾರ್ಯಕರ್ತರು ನಿಂತುಕೊಂಡೆ ಕಾರ್ಯಕ್ರಮದ ವೈಭವವನ್ನು ಕಣ್ತುಂಬಿಕೊಂಡರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಾತುಗಳನ್ನು ಜನರು ತದೇಕಚಿತ್ತದಿಂದ ಆಲಿಸಿದರು, ಸಹೋದರಲ್ಲಿ ಒಬ್ಬರಾದ ಜನಾರ್ದನ ರೆಡ್ಡಿಯವರು , ಸೋಮಶೇಖರ್ ರೆಡ್ಡಿ ಕರುಣಾಕರ ರೆಡ್ಡಿ ಅವರ ಬಾಲ್ಯದ ದಿನಗಳನ್ನು ನೆನೆದು ಭಾವುಕರಾದರು ವಾಲ್ಮೀಕಿ ನಾಯಕ ಸಮಾಜದ ಮಾಸ್ ಲೀಡರ್ ಎಂದೇ ಖ್ಯಾತಿ ಹೊಂದಿರುವ ಶ್ರೀರಾಮುಲು ಅವರ ಅಬ್ಬರದ ಮಾತುಗಳನ್ನು ಕೇಳಿ ಜನರು ಕೆಕೆ,ಸಿಳ್ಳೇ ಹಾಕಿ ಕರತಾಡನ ಮುಗಿಲು ಮುಟ್ಟುವಂತಿತ್ತು ಆಗ
ಕರತಾಡನದ ಮದ್ದೆ ಮುಖ್ಯ ಮಂತ್ರಿಗಳು ತಲೆದೂಗಿದರು

ಸವಿರುಚಿ ಭೋಜನ ಸವಿದ ಕಾರ್ಯಕರ್ತರು

ಕರುಣಾಕರ ರೆಡ್ಡಿ ಅವರ ಶಕ್ತಿಯಾಗಿ ಕಾರ್ಯಕ್ರಮದ ಅಂಗವಾಗಿ ಹಾಗೂ ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಿಂದಾಗಿ ಕಾರ್ಯಕರ್ತರಿಗೆ ಭೋಜನವನ್ನು ವ್ಯವಸ್ಥೆ ಮಾಡಲಾಗಿತ್ತು ಗಮಗಮಿಸುವ ಗೋಧಿ ಹುಗ್ಗಿ ,ಬೂಂದೆ ಹುಂಡಿ, ಬಾಯೆಲ್ಲೇ ನಿರೂರಿಸುವ ಪಲಾವು, ಹೆಸರು ಕಾಳು ಪಲ್ಲೆ, ಮೊಸರು, ಮಜ್ಜಿಗೆ, ಚಟ್ನೆ, ಶುದ್ಧ ಕುಡಿಯುವ ನೀರಿನ ಬಾಟಲ್, ಒಟ್ಟಾರೆಯಾಗಿ ಹೇಳಬೇಕೆಂದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರಿಗೆ ಮೃಷ್ಟಾನ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು .

ಎಲ್ಲಿ ನೋಡಿದರೂ ಜನಜಂಗುಳಿ

ಜನಪ್ರಿಯ ಶಾಸಕ ಕರುಣಾಕರ ರೆಡ್ಡಿ ಅವರ ಷಷ್ಠ್ಯಾಬ್ದಿ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದುಬಂದಿತ್ತು ಗ್ರಾಮಾಂತರ ಪ್ರದೇಶದಿಂದ ಟ್ರಾಕ್ಟರ್,ಬಸ್,ಲಾರಿ, ಬೈಕ್ ಗಳಲ್ಲಿ ಜನರು ತಂಡೊಪತಂಡವಾಗಿ ಆಗಮಿಸಿದ್ದರು ಹರಪನಹಳ್ಳಿ ಪಟ್ಟಣ ಬೆಳಿಗ್ಗೆ ಯಿಂದ ಸಂಜೆ ವರೆಗೆ ಜನಜಂಗುಳಿ ಗಿಜಿ ಗುಡುತ್ತಿತ್ತು ಯಾವಪ್ರಮುಖರಸ್ತೆಯಲ್ಲಿ ನೋಡಿದರೂ ವಾಹನಗಳ ಕಾರುಬಾರು ಕಂಡುಬಂತು ಮುಖ್ಯಮಂತ್ರಿ ಬೊಮ್ಮಾಯಿ ಬರುವ ರಸ್ತೆಯುದ್ದಕ್ಕೂ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು ,ಪೋಲಿಸ್ ಇಲಾಖೆ ಅಧಿಕಾರಿಗಳು ಹಗಲಿರುಳು ಎನ್ನದೇ ಸಿಎಂ ಭದ್ರತೆಗಾಗಿ ಸಿಬ್ಬಂದಿ ನಿಯೋಜನೆ ಮಾಡಿ ಬಿಗಿ ಕ್ರಮಕೈಗೊಂಡು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.
ಯಾವುದೇ ಅಚಾತುರ್ಯ ಘಟನೆ ನಡೆಯದಂತೆ ಸಂಯಮದಿಂದ ಜನರೊಂದಿಗೆ ವರ್ತಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಕಣ್ಣಾಯಿಸಿದಲ್ಲಲ್ಲ ರಾರಾಜಿಸಿದ ಪ್ಲೆಕ್ಸ್ ಗಳು

ರೆಡ್ಡಿ ಸಹೋದರರ ಹಿರಿಯ ಅಣ್ಣ ಕರುಣಾಕರ ರೆಡ್ಡಿ ಅವರಿಗೆ 60 ವಸಂತಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಅವರ ಜನ್ಮದಿನ ಕ್ಕೆ ಶುಭಕೋರಲು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹರಪನಹಳ್ಳಿ ಪಟ್ಟಣದ ಎಲ್ಲೆಡೆ ಪ್ಲೆಕ್ಸ್ ಗಳನ್ನು ಅಳವಡಿಸಿದ್ದರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ, ಸಚಿವರಾದ ಶ್ರೀ ರಾಮುಲು, ಆನಂದ ಸಿಂಗ್, ಶಶಿಕಲಾ ಜೊಲ್ಲೆ, ಮಾಜಿ ಸಚಿವ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಶಾಸಕ ಸೋಮಶೇಖರ ರೆಡ್ಡಿ, ಸಂಸದರಾದ ವೈ ದೆವೇಂದ್ರಪ್ಪ,ಜಿ.ಎಂ ಸಿದ್ದೇಶ್ವರ, ಸೇರಿದಂತೆ ಮುಂತಾದ ನಾಯಕರುಗಳ ಕಟ್ಔಟ್ ಗಳು ರಾರಾಜಿಸಿದವು ಜೊತೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ಲೆಕ್ಸ್ ಗಳು ಮತ್ತು ಕೇಸರಿ ಬಾವುಟದ ಧ್ವಜಗಳನ್ನು ಮದುವಣಗಿತ್ತಿಯಂತೆ ನಗರವನ್ನು ಸಿಂಗರಿಸಲಾಗಿತ್ತು ಬಿಜೆಪಿ ಕಾರ್ಯಕರ್ತರ ಮೊಗದಲ್ಲಿ ಸಡಗರ ಸಂಭ್ರಮ ಮನೆಮಾಡಿತ್ತು.

ಹರಪನಹಳ್ಳಿ ತಾಲೂಕನ್ನು ಅಭಿವೃದ್ಧಿ ಪಡಿಸಲು ರೆಡ್ಡಿ ಸಹೋದರರು ಶಪಥ

ಅಣ್ಣನ ಹೆಜ್ಜೆ ಯಲ್ಲಿ ಹೆಜ್ಜೆ ಹಾಕುತ್ತಾ ಅವರ ಗೆಲುವಿಗೆ ಶ್ರಮಿಸುವೆ ಎಂದು ಜನಾರ್ದನ ರೆಡ್ಡಿ ಗುಡುಗಿದರು , ಮತ್ತೊಬ್ಬ ಸಹೋದರ ಸೋಮಶೇಖರ ರೆಡ್ಡಿ ಅಣ್ಣನ ಬೆನ್ನಿಗೆ ನಿಂತು ಅವರನ್ನು ಗೆಲ್ಲಿಸುವುದೇ ನನ್ನ ಗುರಿ ಎಂದು ಅಬ್ಬರಿಸಿದರೆ , ಹಿರಿಯ ಅಣ್ಣ ಕರುಣಾಕರ ರೆಡ್ಡಿ ಅವರು ಹರಪನಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಶಪಥ ಗೈದರು ಒಟ್ಟಿನಲ್ಲಿ ರೆಡ್ಡಿ ಸಹೋದರರು ಹರಪನಹಳ್ಳಿ ಕ್ಷೇತ್ರದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಒಂದು ರೀತಿಯ ಹವಾ , ಕ್ರೇಜ್ ಉಂಟು ಮಾಡಿರುವುದು ಸತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ ಹಾಗೂ 2008 ರಲ್ಲಿ ಇವರಿಗೆ ಇದ್ದ ವರ್ಚಸ್ಸು ಮತ್ತೆ ಬಂದು ಹೋಯಿತು ಎಂಬುದು ಸುಳ್ಳಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.

ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಬಿ.ಶ್ರೀರಾಮುಲು,ಸಂಸದರಾದ
ಜಿ.ಎಂ.ಸಿದ್ದೇಶ್ವರ,ವೈ.ದೇವೇಂದ್ರಪ್ಪ,ಮಾಜಿ ಸಚಿವರಾದ ಜಿ.ಜನಾರ್ಧನರೆಡ್ಡಿ
ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ವಿ.ರಾಮಚಂದ್ರ,
ಸೋಮಶೇಖರ್ ರೆಡ್ಡಿ,ಎನ್.ವೈ‌.ಗೋಪಾಲಕೃಷ್ಣ, ಸ್ಥಳೀಯ ಮುಖಂಡರಾದ ಆರ್ ಲೋಕೇಶ್,ಕಣಿವಿಹಳ್ಳಿ ಮಂಜುನಾಥ್, ಇಜಂತ್ಕರ್ ಮಂಜುನಾಥ್, ಶಿವಾನಂದ, ಸಾಹುಕಾರ ಮಂಜುನಾಥ್ ಬಾಗಳಿ, ಹಾಲೇಶ್ ಸತ್ತೂರು, ಎಂ ಪಿ ನಾಯ್ಕ್,ಬಾಗಳಿ ಕೊಟ್ರೇಶಪ್ಪ,ಮೂಲಿಮನಿ ಹನುಮಂತಪ್ಪ , ಉದಯಶಂಕರ್ , ರೊಕ್ಕಪ್ಪ, ಸೇರಿದಂತೆ ಇನ್ನೀತರರು ಇದ್ದರು

ತಾಲೂಕು ಕ್ರೀಡಾಂಗಣಕ್ಕೆ ಬಂದಿಳಿದ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರನ್ನು
ವಿಜಯನಗರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು
ಸ್ವಾಗತಿಸಿದರು. ಈ ಸಂದರ್ಭದಲ್ಲಿ ಐಜಿಪಿ‌ ಮನಿಷ್ ಖರ್ಬಿಕರ್, ಎಸ್ಪಿ ಡಾ.ಅರುಣ್,ಜಿಪಂ
ಸಿಇಒ ಭೋಯರ್ ಹರ್ಷಲ್ ನಾರಾಯಣ ಮತ್ತಿತರರು ಇದ್ದರು

Leave a Reply

Your email address will not be published. Required fields are marked *