Vijayanagara Express

Kannada News Portal

ನಾರದ ಮುನಿ ರಥೋತ್ಸವ ಚಕ್ರಕ್ಕೆ ಸಿಲುಕಿ ಭಕ್ತನ ಸಾವು

1 min read

ನಾರದ ಮುನಿ ರಥೋತ್ಸವ : ಚಕ್ರಕ್ಕೆ ಸಿಲುಕಿ ಭಕ್ತನ ಸಾವು

 

ಹರಪನಹಳ್ಳಿ: ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದ ಶ್ರೀ ನಾರದ ಮುನಿ ರಥೋತ್ಸವ ವೇಳೆ ಭಕ್ತನೊರ್ವ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಜರುಗಿದೆ.

ಪ್ರತಿ ವರ್ಷ ದಂತೆ ಈ ವರ್ಷವು ಸಹ ಚಿಗಟೇರಿ ಗ್ರಾಮದ ಶ್ರೀ ನಾರದ ಮುನಿ ರಥೋತ್ಸವ ತಯಾರಿಯು ಅದ್ದೂರಿಯಿಂದ ನಡೆದಿತ್ತು ಇದಕ್ಕೆ ಕಾರಣ ಕಳೆದ ಎರಡು ವರ್ಷಗಳಿಂದ ಕರೋನಾದ ಕರಿನೆರಳಿನಿಂದಾಗಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು ಈ ವರ್ಷ ಜನರು ಮತ್ತು ಆಡಳಿತ ಮಂಡಳಿ ಜೋರಾಗಿ ರಥೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ವಾಡಿಕೆ ಗಿಂತಲೂ ಈ ಬಾರಿ ಹೆಚ್ಚು ಜನರು ಸೇರಿದ್ದರು ಎಂದು ಹೇಳಲಾಗುತ್ತದೆ.ರಥೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಗಾಲಿ ಕರುಣಾಕರ ರೆಡ್ಡಿ ಪಾಲ್ಗೊಂಡಿದ್ದರು.

ರಥೋತ್ಸವ ಎಳೆಯುವ ವೇಳೆ ಅಜಾಗರೋಗಕತೆಯಿಂದ ದಾವಣಗೆರೆಯ ಅಶೋಕನಗರದ ನಿವಾಸಿ ಸುರೇಶ್ ತಂದೆ ಬಸವನಗೌಡ ( 42) ಮೃತ ದುರ್ದೈವಿ ಬಾಳೆಹಣ್ಣಿನ ಮೇಲೆ ಕಾಲು ಇಟ್ಟು ಜಾರಿ ರಥದ ಚಕ್ರಕ್ಕೆ ಬಿದ್ದ ಪರಿಣಾಮವಾಗಿ ಚಕ್ರ ವ್ಯಕ್ತಿ ಯ ಮೇಲೆ ಹರಿದು ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದು ಚಿಗಟೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಪಿ.ಎಸ್.ಐ ಟಿ ನಾಗರಾಜ್ ತಿಳಿಸಿದ್ದಾರೆ.

1993ನೇ ಇಸ್ವೀಯಲ್ಲಿ ಈ ರೀತಿಯಾಗಿ ರಥೋತ್ಸವದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು ಸಂಭವಿಸಿತ್ತು ಆ ಘಟನೆ ನಂತರ ಈ ತರದ ದುರಂತ ಎಂದೂ ಸಂಭವಿಸಿರಲಿಲ್ಲ ಎಂದು ಹೇಳಲಾಗುತ್ತದೆ.

 

Leave a Reply

Your email address will not be published. Required fields are marked *