ಚಿಗಟೇರಿ ನಾರದ ಮುನಿ ರಥೋತ್ಸವ :ಚಕ್ರಕ್ಕೆ ಸಿಲುಕಿ ಭಕ್ತನ ಸಾವು
1 min readಚಿಗಟೇರಿ ನಾರದ ಮುನಿ ರಥೋತ್ಸವ :ಚಕ್ರಕ್ಕೆ ಸಿಲುಕಿ ಭಕ್ತನ ಸಾವು
ಹರಪನಹಳ್ಳಿ: ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದ ಶ್ರೀ ನಾರದ ಮುನಿ ರಥೋತ್ಸವ ವೇಳೆ ಭಕ್ತನೊರ್ವ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಚಿಗಟೇರಿ ಗ್ರಾಮದ ಲ್ಲಿ ಜರುಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಸಹ ಚಿಗಟೇರಿ ಗ್ರಾಮದ ಶ್ರೀ ನಾರದ ಮುನಿ ರಥೋತ್ಸವ ತಯಾರಿಯು ಅದ್ದೂರಿಯಿಂದ ನಡೆದಿತ್ತು ಇದಕ್ಕೆ ಕಾರಣ ಕಳೆದ ಎರಡು ವರ್ಷಗಳಿಂದ ಕರೋನಾದ ಕರಿನೆರಳಿನಿಂದಾಗಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು ಈ ವರ್ಷ ಜನರು ಮತ್ತು ಆಡಳಿತ ಮಂಡಳಿ ಜೋರಾಗಿ ರಥೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರಿಂದ ವಾಡಿಕೆ ಗಿಂತಲೂ ಈ ಬಾರಿ ಹೆಚ್ಚು ಜನರು ಸೇರಿದ್ದರು ಎಂದು ಹೇಳಲಾಗುತ್ತದೆ.ರಥೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಗಾಲಿ ಕರುಣಾಕರ ರೆಡ್ಡಿ ಪಾಲ್ಗೊಂಡಿದ್ದರು, ರಾಜ್ಯದಲ್ಲಿರುವ ಏಕೈಕ ಶ್ರೀ ನಾರದ ಮುನಿ ದೇವಸ್ಥಾನ ಇದಾಗಿದೆ ಈ ಘಟನೆಯಿಂದಾಗಿ ಭಕ್ತರ ಮನದಲ್ಲಿ ಬೇಸರದ ಭಾವ ಮೂಡಿದೆ.
ಘಟನೆ ವಿವರ
ರಥೋತ್ಸವ ಎಳೆಯುವ ವೇಳೆ ಅಜಾಗರೋಗಕತೆಯಿಂದ ತೇರಿಗೆ ಬಾಳೆಹಣ್ಣುಗಳನ್ನು ಎಸೆಯಲು ನೂಕುನುಗ್ಗಲು ಉಂಟಾಗಿ ದಾವಣಗೆರೆಯ ಆರ್ ಟಿ ಓ ಕಚೇರಿ ಹತ್ತಿರದ ಅಶೋಕನಗರದ ನಿವಾಸಿ ಸುರೇಶ್ ಗೌಡ ತಂದೆ ಬಸವನಗೌಡ ( 48) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ ಬಾಳೆಹಣ್ಣಿನ ಮೇಲೆ ಕಾಲು ಇಟ್ಟು ಜಾರಿ ರಥದ ಚಕ್ರಕ್ಕೆ ಬಿದ್ದ ಪರಿಣಾಮವಾಗಿ ಚಕ್ರ ವ್ಯಕ್ತಿಯ ಮೇಲೆ ಹರಿದು ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದು ಚಿಗಟೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪಿ.ಎಸ್.ಐ ಟಿ ನಾಗರಾಜ್ ತಿಳಿಸಿದ್ದಾರೆ.
1993ರಲ್ಲಿ ಈ ರೀತಿ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು ಸಂಭವಿಸಿತ್ತು ಆದಾದ ನಂತರ ಈ ತರಹದ ಘಟನೆಗಳು ಎಂದೂ ಸಂಭವಿಸಿರಲಿಲ್ಲ ಎಂದು ಹೇಳಲಾಗುತ್ತದೆ.