Vijayanagara Express

Kannada News Portal

ಈಡಿಗ ಸಮುದಾಯದ ಮತಗಳು ನಿರ್ಣಾಯಕ – ಪ್ರಣವಾನಂದ ಸ್ವಾಮಿಜಿ

1 min read

ಈಡಿಗ ಸಮುದಾಯದ ಮತಗಳು ನಿರ್ಣಾಯಕ – ಪ್ರಣವಾನಂದ ಸ್ವಾಮಿಜಿ

ಈಡಿಗ ಸಮುದಾಯದ ಮತಗಳು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಿರ್ಣಾಯಕ ಮತಗಳು ಎಂದು ಪ್ರಣವಾನಂದ ಸ್ವಾಮಿಜಿ ಹೇಳಿದರು .

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ರಾಷ್ಟ್ರೀಯ ಅಧ್ಯಕ್ಷರಾದ ಪ್ರಣವಾನಂದ ಸ್ವಾಮಿಜಿ ಅವರು ಕರ್ನಾಟಕದಲ್ಲಿ ಆರ್ಯ ಈಡಿಗ ಸಮುದಾಯದ ಜನಸಂಖ್ಯೆ ಸುಮಾರು 70ಲಕ್ಷ ಇದೆ ಹಾಗಾಗಿ ಚುನಾವಣೆಯಲ್ಲಿ ನಮ್ಮ ಸಮಾಜದ ಮತಗಳು ನಿರ್ಣಾಯಕ ಎಂದು ಹೇಳಿದರು.
ಕಲ್ಬುರ್ಗಿ ಜಿಲ್ಲಾಧಿಕಾರಿಕಚೇರಿ ಎದುರು ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂನ್ 20 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಪ್ರಣಾವಾನಂದ ಸ್ವಾಮೀಜಿ ಹೇಳಿದ್ದಾರೆ.
ಅವರು ಈಡಿಗ ಸಮುದಾಯದ ಮೂಲ ಕಸಬು ಸೇಂದಿ ಇಳಿಸಿ ಮಾರಾಟ ಮಾಡಿ ಜೀವನ ನಡೆಸುವುದು, ಆದರೆ ಅಂತಹ ಕುಲಕಸಬಿಗೆ 1978 ರಿಂದ 2004 ರ ವರೆಗಿನ ಅವಧಿಯಲ್ಲಿ ನಿದಾನವಾಗಿ ನಿಷೆದ ಏರುತ್ತಾ ಸಾಗಿ ಈಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೊರತುಪಡಿಸಿದರೆ ಉಳಿದಂತೆ ಕರ್ನಾಟಕದಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಇನ್ನೂ ಸೇಂದಿ ಇಳಿಸಿ ಮಾರಾಟ ಮಾಡುತ್ತಾರೆ, ಆಂಧ್ರಪ್ರದೇಶ, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಇನ್ನೂ ಸೇಂದಿ ಇಳಿಸಲಾಗುತ್ತದೆ, ಆದ್ದರಿಂದ ನಮ್ಮ ಕರ್ನಾಟಕದಲ್ಲೂ ಎಲ್ಲಾ ಜಿಲ್ಲೆಗಳಲ್ಲಿ ಸೇಂದಿ ಇಳಿಸಿ ಮಾರಾಟ ಮಾಡಲು ಹಾಗೂ ಬೇರೆ ರಾಜ್ಯಗಳಿಂದ ತಂದು ಇಲ್ಲಿ ಮಾರಾಟ ಮಾಡಲು ಸಹ ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಆರ್ಯ ಈಡಿಗ ಸಮುದಾಯಕ್ಕೆ ರಾಜಕೀಯ ಷಡ್ಯಂತ್ರದಿಂದ ಕುಲಕಸಬನ್ನು ಕಸಿದುಕೊಳ್ಳಲಾಗಿದೆ ರಾಜ್ಯದಲ್ಲಿ ಬೇರೆ ಯಾವ ಸಮುದಾಯದ ಕುಲಕಸಬನ್ನೂ ಸರ್ಕಾರವು ಕಸಿದು ಕೊಂಡಿಲ್ಲ ಉದಾಹರಣೆಗೆ ಮಡಿವಾಳರ ಕುಲಕಸಬನ್ನು ಯಾರೂ ಕಸಿದುಕೊಂಡಿರುವುದಿಲ್ಲಎಂದು ಅವರು ಆರೋಪಿಸಿದರು ಈ ಮಾತಿಗೆ ಸುದ್ದಿಗಾರರು ಪ್ರಶ್ನೆ ಕೇಳಿ ಯಾವ ಸಮುದಾಯದ ಕುಲಕಸಬನ್ನೂ ಸರ್ಕಾರವು ನಿಷೆಧಿಸಬೇಕು ಎಂದು ಬೀದಿಗೆ ಬಂದು ಹೋರಾಟ ಮಾಡಿದ ಉದಾಹರಣೆಗಳು ಇಲ್ಲ ಆದರೆ ಸೇಂದಿ ಸಾರಾಯಿ ಮಾರಾಟ ನಿಷೇಧ ಮಾಡಿ ಎಂದು ದೇಶವ್ಯಾಪಿ ಮುಷ್ಕರ ನಡೆದ ಇತಿಹಾಸ ಗಳು ಸಾಕಷ್ಟು ಇವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸೇಂದಿಯನ್ನು ನಿಷೆದಿಸಿದರೆ ಅದರ ಜೊತೆಗೆ ಮದ್ಯ ಮತ್ತು ಗುಟ್ಕಾ ಮಾರಾಟ ಸಂಪೂರ್ಣ ನಿಷೇಧ ಮಾಡಲಿ ಅದಕ್ಕೆ ನಮ್ಮ ತಕರಾರು ಇಲ್ಲ ಎಂದು ಹೇಳಿದರು .
ಸರ್ಕಾರಕ್ಕೆ ದಮ್ಮು ಇದ್ದರೆ ಬೇರೆ ಸಮುದಾಯಗಳ ಕುಲಕಸಬನ್ನು ನಿಷೇದಿಸಲಿ ಎಂದ ಅವರು ನಮಗೆ ಮಾತ್ರ ಮಲತಾಯಿ ದೋರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಎಂಎಸ್ ಐ ಎಲ್ ಗಳಲ್ಲಿ ಆರ್ಯ ಈಡಿಗ ಸಮುದಾಯದವರಿಗೆ ಶೇ.50 ರಷ್ಟು ಕೆಲಸಗಳನ್ನು ಮೀಸಲಿಡಬೇಕು ಎಂದು ಅವರು ಆಗ್ರಹಿಸಿದರು.
ಆರ್ಯ ಈಡಿಗ ಅಭಿವೃದ್ದಿ ನಿಗಮ ಸ್ಥಾಪಿಸಬೇಕು –
ಆರ್ಯ ಈಡಿಗ ಸಮುದಾಯದ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ 500 ಕೋಟಿ ರೂಗಳ ಅನುದಾನ ನೀಡಬೇಕು ಎಂದು ಅವರು ಹೇಳಿದರು. ಸಣ್ಣ ಸಣ್ಣ ಸಮುದಾಯಗಳಿಗೆ ಅಭಿವೃದ್ದಿ ನಿಗಮ ಸ್ಥಾಪಿಸಲಾಗಿದೆ ನಮ್ಮ ಸಮುದಾಯಕ್ಕೆ ಏಕಿಲ್ಲ ಉದಾಹರಣೆಗೆ ಸವಿತ ಸಮಾಜದ ಜನಸಂಖ್ಯೆ 5ರಿಂದ 10 ಲಕ್ಷ ಜನಸಂಖ್ಯೆ ಇರುವ ಸಮಾಜಗಳಿಗೆ ನಿಗಮ ಮಂಡಳಿ ಸ್ಥಾಪಿಸಲಾಗಿದೆ ಆದರೆ 70 ಲಕ್ಷ ಜನಸಂಖ್ಯೆ ಇರುವ ಸಮುದಾಯ ನಮ್ಮದು ನಮ್ಮ ಸಮುದಾಯಕ್ಕೆ ಏಕೆ ನಿಗಮಸ್ಥಾಪಿಸಿಲ್ಲ ಎಂದು ಅವರು ಪ್ರಶ್ನಿಸಿದರು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಮ್ಮ ಸಮಾಜದ ಮತಗಳು ನಿರ್ಣಾಯಕ ವಾಗಿವೆ ಎಂದು ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರ ತೀರ್ಥ ಒಬ್ಬ ಮಾನಸಿಕ ರೋಗಿ, ಆತನನ್ನು ಒದ್ದು ಒಳಗೆ ಹಾಕಬೇಕು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಅಧ್ಯಕ್ಷ ಪ್ರಣಾವಾನಂದ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ
ಈಡಿಗ ಸಮುದಾಯದ ಕುಲಗುರು ನಾರಾಯಣ ಗುರುಗಳ ಪಾಠವನ್ನು ಸಮಾಜ ವಿಜ್ಞಾನ ಪಠ್ಯ ದಿಂದ ತೆಗೆದು ಕನ್ನಡ ಭಾಷಾ ವಿಷಯದಲ್ಲಿ ಮಾತ್ರ ಸೇರಿಸಿದ್ದಾರೆ ಅಲ್ಲಿ ಎಲ್ಲರೂ ಕನ್ನಡ ಭಾಷೆಯನ್ನು ಅಭ್ಯಾಸ ಮಾಡುವುದಿಲ್ಲ ಅಲ್ಲಿ ಭಾಷೆ ಆಯ್ಕೆ ವಿಚಾರದಲ್ಲಿ ಬೇರೆ ಬೇರೆ ಆಯ್ಕೆ ಗಳುಲಭ್ಯವಿರುತ್ತದೆ ಎಂದರು.

ಅದೇ ರೀತಿ ಪಠ್ಯ ಪುಸ್ತಕದ ಪರಿಷ್ಕರಣೆಯಲ್ಲಿ ಡಾ.ಬಿ.ಆರ್ . ಅಂಬೇಡ್ಕರ್, ಬಸವಣ್ಣ ಮುಂತಾದ ದಾರ್ಶನಿಕರಿಗೆ ಅವಮಾನ ಮಾಡಲಾಗಿದೆ, ತಮಗೆ ಬೇಕಾದ ವಿಚಾರಗಳನ್ನು ಪಠ್ಯದಲ್ಲಿ ಹೇರಲಾಗಿದೆ ಎಂದು ಅವರು ಆರೋಪಿಸಿದರು.
ಈಗಿನ ರಾಜ್ಯ ಸರ್ಕಾರದಲ್ಲಿ ಈಡಿಗ ಸಮುದಾಯದ 7 ಜನ ಶಾಸಕರು, 2 ಜನ ಸಚಿವರಿದ್ದಾರೆ, ನಮಗೆ ಸೌಲಭ್ಯಗಳು ದೊರಕಲು ಅವರ ವೈಪಲ್ಯ ಸಹವಿದೆ, ಅವರಿಗೂ ಎಚ್ಚರಿಕೆ ಕೊಟ್ಟಿದ್ದೇವೆ, ಸಮುದಾಯದ ಮತ ಬೇಕು ಆದರೆ ಸಮುದಾಯದ ಪರವಾಗಿ ಧ್ವನಿ ಎತ್ತಲು ಇವರಿಗೆ ಆಗುತ್ತಿಲ್ಲ ಇವರಿಗೆ ಸಮಾಜದ ಕೋಟಾ ಬೇಕು, ಓಟು ಬೇಕು ಆದರೆ ನಮ್ಮ ಸಮಾಜದ ಉದ್ಧಾರ ಇವರಿಗೆ ಬೇಡವಾಗಿದೆ ಎಂದು ಅಸಮಾದಾನ ವ್ಯಕ್ತ ಪಡಿಸಿದರು.

ಈಡಿಗ ಸಮುದಾಯವನ್ನು ಸರ್ಕಾರ ಕಡೆಗಣಿಸಿದರೆ ಸಮಸ್ಯೆಯಾಗುತ್ತದೆ, ಮುಂಬರುವ ಜಿ.ಪಂ, ತಾ.ಪಂ ಹಾಗೂ ವಿಧಾನಸಭಾ ಚುನಾವಣೆ ಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶಿವಮೊಗ್ಗ ವಿಮಾನನಿಲ್ದಾಣಕ್ಕೆ ಬಿ.ಎಸ್ .ಯಡಿಯೂರಪ್ಪ ನವರ ಬದಲಾಗಿ ದಿ.ಎಸ್ .ಬಂಗಾರಪ್ಪ ನವರ ಹೆಸರನ್ನು ಇಡಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರ್ಯ ಈಡಿಗರ ರಾಷ್ಟ್ರೀಯ ಮಹಾಮಂಡಳಿಯ ವಿಜಯ ನಗರ ಜಿಲ್ಲಾದ್ಯಕ್ಷ ಕಂಚಿಕೇರಿಯ ಈಡಿಗರ ವೆಂಕಟೇಶ, ಹರಪನಹಳ್ಳಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಶೈಲಜ, ಭರತ್ , ಗಂಗಾಧರ, ಗೌರವಾದ್ಯಕ್ಷ ದೇವದಾಸ ಇತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *