Vijayanagara Express

Kannada News Portal

ಹರಪನಹಳ್ಳಿ ಕಾಂಗ್ರೆಸ್ ಅಂಗಳಕ್ಕೆ ದಾಂಗುಡಿ ಇಟ್ಟ ಆಕಾಂಕ್ಷಿಗಳು: ದಂಗಾದ ಕ್ಷೇತ್ರದ ಜನರು

1 min read

ಹರಪನಹಳ್ಳಿ ಕಾಂಗ್ರೆಸ್ ಅಂಗಳಕ್ಕೆ ದಾಂಗುಡಿ ಇಟ್ಟ ಆಕಾಂಕ್ಷಿಗಳು: ದಂಗಾದ ಕ್ಷೇತ್ರದ ಜನರು

 

 

ಹರಪನಹಳ್ಳಿ: ತಾಲೂಕಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸಹಜವಾಗಿಯೇ ಎಲ್ಲಾ ಕ್ಷೇತ್ರಗಳಲ್ಲಿ ಆಕಾಂಕ್ಷಿ ಗಳ ಸಂಖ್ಯೆ ಹೆಚ್ಚುತ್ತಿರುವದು ಸರ್ವೇ ಸಾಮಾನ್ಯ .

ಆದರೆ ಹರಪನಹಳ್ಳಿ ತಾಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ ಆ ಮೂಲಕ ಚುನಾವಣೆ ಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ಅಭ್ಯರ್ಥಿ ಗಳು ನಾನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ಪಕ್ಷದ ಹೆಸರಿನಲ್ಲಿ ವಿಭಿನ್ನವಾಗಿ ಒಬ್ಬರಿಗಿಂತ ಒಬ್ಬರು ಸಂಘಟನೆ ಯಲ್ಲಿ ತೊಡಗಿದ್ದಾರೆ ಅಂತಹ ಆಕಾಂಕ್ಷಿ ಗಳೆಂದರೆ ಶಶಿಧರ್ ಪೂಜಾರ್, ಎಂ ಬಿ ಯಶವಂತ್ ಗೌಡ, ಹೆಚ್.ಬಿ.ಪರಶುರಾಮಪ್ಪ, ಚಂದ್ರಶೇಖರ ಭಟ್, ಉಮೇಶ್ ಬಾಬು, ಅಂಬಾಡಿ ನಾಗರಾಜ್, ಎಂ ಪಿ ವೀಣಾ ಮಹಾಂತೇಶ್, ಎಂ ಪಿ ಲತಾ ಮಲ್ಲಿಕಾರ್ಜುನ, ಐಗೋಳ ಚಿದಾನಂದ , ಇವರೆಲ್ಲರೂ ಹೈಕಮಾಂಡ್ ನಿಂದ ನಮಗೆ ಗ್ರೀನ್ ಸಿಗ್ನಲ್ ನೀಡಿದೆ ಹಾಗಾಗಿ ನಾವು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ .
ಇವರಲ್ಲಿ ಯಾರಿಗೆ ಹೈಕಮಾಂಡ್ ಮಣೆ ಹಾಕುತ್ತದೆ ಎಂಬ ಯಕ್ಷಪ್ರಶ್ನೆ ಕಾರ್ಯಕರ್ತರಲ್ಲಿ ಮನೆಮಾಡಿದೆ ಈ ತರಹದ ಗೊಂದಲದಿಂದಾಗಿ ಕಾರ್ಯಕರ್ತರು ಪಕ್ಷವು ಟಿಕೆಟ್ ಘೋಷಿಸುವವರೆಗೂ ಯಾರ ಹಿಂದೆಯೂ ಗುರುತಿಸಿ ಕೊಳ್ಳುವುದು ಬೇಡ ಎಂದು ಹಿಂದೆ ಸುರಿಯುತ್ತಿದ್ದಾರೆ ಆದರೆ ಅಭ್ಯರ್ಥಿ ಗಳಂತೂ ನಿರಂತರವಾಗಿ ಸಾಮಾಜಿಕ ತಾಣಗಳಲ್ಲಿ ಪ್ರಚಾರಕ್ಕೆ ಪೋಟೊಗಳನ್ನು ಹರಿಬಿಡುತ್ತಿರುವ ಸ್ಪರ್ಧೆ ಯಂತೂ ಜೋರಾಗಿಯೇ ನಡೆದಿದೆ .

ಹರಪನಹಳ್ಳಿ ಕಾಂಗ್ರೆಸ್ ಅಂಗಳದಲ್ಲಿ ಗೊಂದಲ ಏಕೆ ?

2008ರ ವರೆಗೆ ಪರಿಶಿಷ್ಟ ಜಾತಿ ಗೆ ಮೀಸಲಾಗಿದ್ದ ಈ ಕ್ಷೇತ್ರವು , ಕ್ಷೇತ್ರದ ಪುನರ್ ವಿಂಗಡಣೆ ಯಿಂದಾಗಿ ಸಾಮಾನ್ಯ ಕ್ಷೇತ್ರವಾದ ಕಾರಣ ಪಿಟಿ.ಪರಮೇಶ್ವರ್ ನಾಯ್ಕ್ ಅವರು ಪಕ್ಕದ ಹಡಗಲಿ ಕ್ಷೇತ್ರಕ್ಕೆ ಹೋಗಬೇಕಾಯಿತು.
2008ರಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ ಪಿ ಪ್ರಕಾಶ್ ರವರು ಕರುಣಾಕರ ರೆಡ್ಡಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು ನಂತರ 2013 ರಲ್ಲಿ ಎಂ ಪಿ ರವೀಂದ್ರ ರವರರು ಜಿ.ಕರುಣಾಕರ ರೆಡ್ಡಿ ಯವರನ್ನು ಪರಾಭವಗೊಳಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದರು 2018ರಲ್ಲಿ ಅದೇ ಕರುಣಾಕರ ರೆಡ್ಡಿ ಅವರಿಂದ ಪರಾಭವಗೊಂಡಿದ್ದರು . ದುರದೃಷ್ಟವಶಾತ್ 2018ರ ಡಿಸೆಂಬರ್ ತಿಂಗಳಲ್ಲಿ ಅನಾರೋಗ್ಯದಿಂದಾಗಿ ಅಕಾಲಿಕ ಮರಣ ಹೊಂದಿದ ಕಾರಣ ಹರಪನಹಳ್ಳಿ ತಾಲೂಕಿನ ಲ್ಲಿ ಹಾಲಿ ಅಥವಾ ಮಾಜಿ ಶಾಸಕರು ಕಾಂಗ್ರೆಸ್ಸಿಗೆ ಇಲ್ಲದಂತಾಗಿ ಈ ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಾಗಲು ಕಾರಣ ಏನು? ಯಾರು ?

ಮಾಜಿ ಶಾಸಕ ಎಂ ಪಿ ರವೀಂದ್ರ ರವರ ಅಕಾಲಿಕ ಮರಣ ಹೊಂದಿದ ನಿಮಿತ್ತ ಅವರ ಸಹೋದರಿಯರಾದ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಆರಂಭದಲ್ಲಿ ತಾಲೂಕಿನ ಕಾಂಗ್ರೆಸ್ ಪಕ್ಷದ ಹೊಣೆ ಹೊತ್ತು ಕೊಂಡು ತಮ್ಮ ಹಳೆ ಕಛೇರಿಯಲ್ಲಿಯೇ ಸಂಘಟನೆ ಮುಂದುವರೆಸಿದರೆ, ಇತ್ತ ಪಿಟಿಪಿ ರವರು ಹರಪನಹಳ್ಳಿ ತನ್ನ ಮಾತೃ ಕ್ಷೇತ್ರವಾದ್ದರಿಂದ ಕ್ಷೇತ್ರಕ್ಕೆ ಬಂದಾಗ ಜೊತೆಗೆ ಇರಲು ಮತ್ತು ತಮ್ಮ ಪರವಾಗಿ ಪಕ್ಷ ಸಂಘಟನೆ ಮಾಡಲು ಆಕಾಂಕ್ಷಿಗಳನ್ನು ಹುಟ್ಟುಹಾಕಲು ಆರಂಬಿಸಿದರು , ಇನ್ನು ರವೀಂದ್ರ ರವರ ಮತ್ತೊಬ್ಬ ಸಹೋದರಿ ಎಂ ಪಿ ವೀಣಾ ರವರು ಕೌಟುಂಬಿಕ ಕಲಹದಿಂದಾಗಿ ತಾವು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ಎಂ ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹೆಸರಿನಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಮತ್ತೊಬ್ಬ ಅಭ್ಯರ್ಥಿ ಶಂಕರನಹಳ್ಳಿ ಉಮೇಶ್ ಬಾಬು ರವರು ಆಗೊಮ್ಮೆ ಈಗೊಮ್ಮೆ ಕ್ಷೇತ್ರಕ್ಕೆ ಬಂದು ತಾವು ಆಕಾಂಕ್ಷಿ ತಮಗೆ ಹೈಕಮಾಂಡ್ ಟಿಕೆಟ್ ನೀಡುವ ಭರವಸೆ ನೀಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ, ಇನ್ನೊಬ್ಬ ಅಭ್ಯರ್ಥಿ ಅಂಬಾಡಿ ನಾಗರಾಜ್ ಎನ್ನುವ ಹಗರಿಬೊಮ್ಮನಹಳ್ಳಿ ಮೂಲದವರಾದ ಇವರು ಚುನಾವಣೆ ಹತ್ತು ತಿಂಗಳು ಬಾಕಿ ಇರುವಾಗ ಈಗ ಬಂದು ನಾನು ಅಭ್ಯರ್ಥಿ ಎಂದು ಹೇಳುತ್ತಿರುವುದು ತೀರಾ ಹಾಸ್ಯಾಸ್ಪದವಾಗಿ ಕಾಣುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಉಳಿದ ಐದು ಜನ ಅಭ್ಯರ್ಥಿಗಳು ಪಿ ಟಿ ಪರಮೇಶ್ವರ್ ನಾಯ್ಕರವರ ಅಣತೆಯಂತೆ ನಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ (ಶಶಿಧರ್ ಪೂಜಾರ್, ಚಂದ್ರಶೇಖರ ಭಟ್,ಐಗೋಳ್ ಚಿದಾನಂದಪ್ಪ, ಎಂ ಬಿ ಯಶವಂತ್ ಗೌಡ, ಹೆಚ್ ಬಿ ಪರಶುರಾಮಪ್ಪ) ಒಂದು ವೇಳೆ ಪರಮೇಶ್ವರ್ ನಾಯ್ಕ ರವರು ಇವರ ಬಣದ ಪೈಕಿ ಒಬ್ಬರಿಗೆ ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾದರೆ ಯಾರಿಗೆ ಕೊಡಿಸುತ್ತಾರೆ ,ಅದು ಮುಖ್ಯ, ಅದಿರಲಿ ಇವರೆಲ್ಲರೂ ಪರಮೇಶ್ವರ್ ನಾಯ್ಕ ರವರ ಮಾತನ್ನು ಯಾರೂ ಮೀರುವುದಿಲ್ಲ ಆಗಿದ್ದಾಗ ಈ ಐವರ ಪೈಕಿ ಎಲ್ಲಾತರದಲ್ಲೂ ಸಮರ್ಥರಿರುವ ಒಬ್ಬ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಿ ಈತನಿಗೆ ನೀವೆಲ್ಲರೂ ಬೆಂಬಲಿಸಿರಿ ಎಂದು ಹೇಳುತ್ತಿಲ್ಲ , ಹಾಗೇ ಹೇಳಬಹುದಲ್ಲ ಹೀಗೆ ಮಾಡುವುದರಿಂದ ಪರಮೇಶ್ವರ್ ನಾಯ್ಕ ರವರಿಗೆ ಲಾಭವೇನು ಆಗದು ಇದು ಪರಮೇಶ್ವರ್ ನಾಯ್ಕರಿಗೆ ಬೇಡವಾಗಿದೆ ಆದುದರಿಂದ ಗೊಂದಲ ಸೃಷ್ಟಿ ಮಾಡಿದರೆ ಇಲ್ಲಿ ಕಾಂಗ್ರೆಸ್ ಪಕ್ಷದ ಬಣದಲ್ಲಿ ಗೊಂದಲಗಳಾಗಿ ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಇನ್ನಡೆಯಾಗುತ್ತದೆ ಹೀಗೆ ಆಗುವುದರಿಂದ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸೋತು ಹೋಗುತ್ತಾನೆ ಇವರ ಬೆಂಬಲಿಗರಿಗೆ ಟಿಕೆಟ್ ಸಿಗದಿದ್ದರೆ ಬೇರೆ ಯಾವ ಅಭ್ಯರ್ಥಿ ಗೆ ಟಿಕೆಟ್ ಸಿಕ್ಕರೂ ಸೋಲನ್ನು ಖಚಿತ ಮಾಡುವುದೇ ಪರಮೇಶ್ವರ್ ನಾಯ್ಕ ರವರ ಗುರಿ ಇದ್ದಂತಿದೆ ಎಂದು ಕೆಲ ಕಾಂಗ್ರೇಸ್ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ಪರಮೇಶ್ವರ್ ನಾಯ್ಕ ರವರಿಗೆ ಅಂತಹ ಉದ್ದೇಶ ಇಲ್ಲದಿದ್ದರೆ ಹರಪನಹಳ್ಳಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೊಂದಲದಲ್ಲಿ ಕೈ ಹಾಕದೆ ಹಡಗಲಿ ಕ್ಷೇತ್ರದ ರಾಜಕಾರಣ ನೋಡಿ ಕೊಂಡು ಹೋದರೆ ಅದು ಶಿಷ್ಟಾಚಾರ ಮತ್ತು ಅವರನ್ನು ಎರಡು ಬಾರಿ ತಾಲೂಕಿನಿಂದ ಶಾಸಕರನ್ನಾಗಿ ಆಯ್ಕೆ ಮಾಡಿದ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಸಮದಾನವಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ತಾಲೂಕಿನ ಜನರು ಪರಮೇಶ್ವರ್ ನಾಯ್ಕ ರವರಿಗೆ ಗೌರವಪೂರ್ವಕವಾಗಿ ಕಾಣಲು ಸಾಧ್ಯವಾಗುತ್ತದೆ ಎಂದು ಕೆಲ ಕಾಂಗ್ರೇಸ್ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ .

ಪರಮೇಶ್ವರ್ ನಾಯ್ಕರವರ ವಿಷಯ ಬಿಡಿ ನಾನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ತಿರುಗುತ್ತಿರುವ ಅಭ್ಯರ್ಥಿಗಳು ಇವರಿಗಾದರೂ ತಿಳಿಯಬಾರದೇ ಐದು ಜನ ಅಭ್ಯರ್ಥಿಗಳಲ್ಲಿ ಯಾರಿಗೆ ಟಿಕೆಟ್ ಕೊಡಿಸುತ್ತಾರೆ ಪರಮೇಶ್ವರ್ ನಾಯ್ಕ ರವರು ಎಂದು, ಮತ್ತು ಈಗಿರುವ ಒಂಭತ್ತು ಜನ ಅಭ್ಯರ್ಥಿ ಗಳ ಪೈಕಿ ಯಾರು ಅತೀ ಪ್ರಭಾವಶಾಲಿಯಾಗಿದ್ದಾರೆ ಆ ಪ್ರಭಾವಶಾಲಿ ನಮ್ಮ ಐದು ಅಭ್ಯರ್ಥಿಗಳ ಗುಂಪಿನಲ್ಲಿ ಇರುವರೇ ಎಂಬುದನ್ನು ಏಕೆ ಆಲೋಚಿಸುತ್ತಿಲ್ಲ ಅಲ್ಲದೆ ಈ ಎಲ್ಲಾ ಗೊಂದಲಗಳಿಗೆ ಪರಮೇಶ್ವರ್ ನಾಯ್ಕ ರವರೆ ಕಾರಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ .

ಅದೇನೇ ಇರಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜನರು 2008 ರಿಂದಲೂ ಹೊರಗಿನಿಂದ ಬಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕ್ಷೇತ್ರದಲ್ಲಿ ಜನರ ಕಷ್ಟ ಸುಖಗಳಿಗೆ ಸಿಗದೇ ಒಂದು ಬಗೆಯಲ್ಲಿ ಅತಿಥಿ ಶಾಸಕರಾಗಿ ಕ್ಷೇತ್ರಕ್ಕೆ ಬರುತ್ತಿದ್ದಾರೆ ಎಂಬ ಕೂಗು ಎದ್ದಿದೆ 2013ರಲ್ಲಿ ಗೆದ್ದಿದ್ದ ಎಂ ಪಿ ರವೀಂದ್ರ ರವರನ್ನು ಶಾಸಕರು ಜನರ ಕೈಗೆ ಸಿಗುತ್ತಿಲ್ಲ ಎಂದು ಬೈದುದ್ದುಂಟು ಈಗ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಅವರು ಸಹ ಕ್ಷೇತ್ರದ ಬಗ್ಗೆ ಕಾಳಜಿಯೇ ಇಲ್ಲ ಹಾಗೂ ಜನರಿಗೆ ಕೈಗೆ ಸಿಗುತ್ತಿಲ್ಲ ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ ಎಂದು ಜನರು ಹೇಳುತ್ತಿದ್ದಾರಲ್ಲದೇ ಸ್ಥಳೀಯರನ್ನೇ ಈ ಬಾರಿ ಶಾಸಕರಾಗಿ ಆಯ್ಕೆ ಮಾಡಬೇಕು ಎಂದು ಕ್ಷೇತ್ರದ ಜನರು ಚರ್ಚಿಸುತ್ತಿರುವುದು ಕಂಡುಬರುತ್ತದೆ.

ಕಾಂಗ್ರೆಸ್ ಹೈಕಮಾಂಡ್ ನ ದೌರ್ಬಲ್ಯವೇ?
( Is it the weakness of the Congress High Command? )

ಹೌದು ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ವಲಯದಲ್ಲಿ ಬಣ ರಾಜಕೀಯ, ಟಿಕೆಟ್ ಆಕಾಂಕ್ಷಿಗಳ ನಡುವೆ ಉಂಟಾಗಿರುವ ಗೊಂದಲದ ಸಭೆಗಳು
ವಾಗ್ವಾದಗಳು, ಸ್ವಪಕ್ಷದವರಲ್ಲೇ ಪರಸ್ಪರ ಪರೋಕ್ಷವಾಗಿ ನಡೆಯುತ್ತಿರುವ ಟೀಕಾಪ್ರಹಾರಗಳು ,
ಕಾಂಗ್ರೆಸ್ ಪಕ್ಷದ ಕಛೇರಿ ಗೊಂದಲ, ಪದೇ ಪದೇ ಗುಂಪುಗಳು ರಾಜ್ಯ ನಾಯಕರನ್ನು ಕಾಣಲು ರಾಜಧಾನಿಗೆ ದಾಂಗುಡಿ ಇಡುತ್ತಿರುವುದು, ನಾಯಕರು ಸಹ ಸಮಾಧಾನ ಮಾಡಿ ಕಳಿಸುತ್ತಿರುವುದು ಹೀಗೆ ಸಾಗಿ ಚುನಾವಣೆಯೇ ಈಗ ಸಮೀಪಿಸುತ್ತಿದೆ ಇಂತಹ ಸಂದರ್ಭದಲ್ಲಿಯೂ ಇದು ಮುಂದುವರೆದಿರುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನ ದೌರ್ಬಲ್ಯವೇ ಎದ್ದು ಕಾಣುತ್ತದೆ.ಹೈಕಮಂಡ್ ಇದಕ್ಕೆ ಪ್ರಮುಖ ಕಾರಣ ಪಕ್ಷದ ವರಿಷ್ಠರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಈ ರೀತಿ ಗೊಂದಲ ಮುಂದುವರೆಯಲು ಸಾಧ್ಯವಾಗದು ಅಲ್ಲದೆ ಇದೇ ರೀತಿ ಪರಸ್ಪರ ಮುನಿಸು ಮುಂದುವರೆದರೆ ತಾಲೂಕಿನಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಕಾರ್ಯಕರ್ತರೊಬ್ಬರು ಹೇಳುತ್ತಾರೆ .

ಇಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ್ ಚಿದಾನಂದ ಅವರು ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ವಲಯದಲ್ಲೇಕೆ ಪ್ರವೇಶ ?

ಹೌದು ಹರಪನಹಳ್ಳಿ ಕಾಂಗ್ರೆಸ್ ವಲಯದಲ್ಲಿ ಹೀಗೊಂದು ಚರ್ಚೆ ಶುರುವಾಗಿದೆ ಇಷ್ಟು ದಿನ ಇಲ್ಲದೆ ಈಗ ಏಕಾಏಕಿ ನಾನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ ಅಲ್ಲದೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ ನಾನು ಹಡಗಲಿ ತಾಲೂಕಿನಲ್ಲಿ ಎರಡು ಬಾರಿ ತಾಲೂಕು ಪಂಚಾಯಿತಿ ಸದಸ್ಯನಾಗಿ ಒಂದು ಬಾರಿ ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿ ಹಾಗೂ ಶೈಕ್ಷಣಿಕವಾಗಿ ವಿವಿ ಸಂಘದ ಎಡಿಬಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ನಾಗಿ,ವಕೀಲರ ಸಂಘದ ಅಧ್ಯಕ್ಷ ನಾಗಿ, ಪ್ರಸ್ತುತ ಬಿಡಿಸಿಸಿ ಬ್ಯಾಂಕ್ ನ ಹೊಸಪೇಟೆ ವಿಭಾಗದ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದೇನೆ ಆದ್ದರಿಂದ ಪಕ್ಷ ನನ್ನ ಸೇವೆ ಗುರುತಿಸಿ ಟಿಕೆಟ್ ನೀಡಿದರೆ ಹರಪನಹಳ್ಳಿ ಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ ಆದರೆ ಸಾರ್ವಜನಿಕ ವಲಯದಲ್ಲಿ, ಚಿದಾನಂದ ರವರನ್ನು ಸಹ ಪಿಟಿಪಿ ಯವರೇ ಕ್ಷೇತ್ರಕ್ಕೆ ಕರೆತಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ ಅಲ್ಲದೆ ಇವರು ಹಡಗಲಿ ತಾಲೂಕಿನಲ್ಲಿ ಪಕ್ಷಕ್ಕೆ ದುಡಿದರೆ ಹರಪನಹಳ್ಳಿ ತಾಲೂಕಿನಲ್ಲಿ ಟಿಕೆಟ್ ಏಕೆ ಕೊಡಬೇಕು ? ಹಡಗಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಿದ್ದರೆ ಹೊಸಪೇಟೆ ಕ್ಷೇತ್ರದ ಕಡೆ ಮುಖ ಮಾಡುತ್ತಿಲ್ಲ ಏಕೆ ಎಂದು ಕೆಲ ಕಾರ್ಯಕರ್ತರು ಆಕ್ಷೇಪವೆತ್ತಿದ್ದಾರೆ.

ರಾಜಪ್ರಭುತ್ವ ಅಲ್ಲ ಇದು ಪ್ರಜಾಪ್ರಭುತ್ವ
( It is a democracy, not a monarchy )

ಸ್ವಾತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಇದ್ದೇವೆ ರಾಜಪ್ರಭುತ್ವದಲ್ಲಿ ಇಲ್ಲ ,ಅಂದಹಾಗೆ ಒಂದೇ ಕುಟುಂಬದವರೆ ರಾಜಕಾರಣ ಮಾಡಬೇಕು ಎಂಬ ನಿಯಮ ನಮ್ಮ ಸಂವಿಧಾನದಲ್ಲಿ ಇಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇದೆ ಹಾಗಾಗಿ ಯಾರು ಬೇಕಾದರೂ ಚುನಾವಣೆ ಮಾಡಬಹುದು ಯಾವ ಕ್ಷೇತ್ರವನ್ನೂ ಯಾರು ಯಾರ ಹೆಸರಿನಲ್ಲಿಯೂ ಬರೆದು ಕೊಟ್ಟಿಲ್ಲ ಕಾಂಗ್ರೆಸ್ ಹೈಕಮಾಂಡ್ ಪಕ್ಷದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸೂಕ್ತ ವ್ಯಕ್ತಿಗೆ ಟಿಕೆಟ್ ನೀಡಿದರೆ ನಾವು ಅಂತಹ ಅಭ್ಯರ್ಥಿ ಯನ್ನು ಬೆಂಬಲಿಸುತ್ತೇವೆ ಮತ್ತು ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹೋರಾಡುತ್ತೇವೆ ಎಂಬುದು ಅಭ್ಯರ್ಥಿಗಳ ವಾದವಾಗಿದೆ ಎಂದೇ ಹೇಳಲಾಗುತ್ತದೆ .

Leave a Reply

Your email address will not be published. Required fields are marked *