November 6, 2024

Vijayanagara Express

Kannada News Portal

ಸರ್ಕಾರದಿಂದ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಗೈರು .

1 min read

ಸರ್ಕಾರದಿಂದ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಗೈರು .

 

ಹರಪನಹಳ್ಳಿ/ಜಗಳೂರು: ಹರಪನಹಳ್ಳಿ ತಾಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ ಉಚ್ಚಂಗಿದುರ್ಗ ಗ್ರಾಮದಲ್ಲಿರುವ ಶ್ರೀ ಉಚ್ಚೆಂಗೆಮ್ಮ ದೇವಿಯ ಸನ್ನಿಧಿಯಲ್ಲಿ ಮುಜರಾಯಿ ಇಲಾಖೆ ವತಿಯಿಂದ ಪ್ರಥಮ ಬಾರಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬುಧವಾರ ನಡೆಸಲಾಯಿತು ಈ ಕಾರ್ಯಕ್ರಮಕ್ಕೆ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್ .ವಿ.ರಾಮಚಂದ್ರ ಅವರು ಗೈರು ಹಾಜರಾಗಿದ್ದರು .

ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ವಾದ ಉಚಿತ ಸಾಮೂಹಿಕ ವಿವಾಹವನ್ನು ಸರ್ಕಾರವು ಮುಜರಾಯಿ ಇಲಾಖೆ ಮೂಲಕ ಎ ದರ್ಜೆಯ ದೇವಸ್ಥಾನಗಳಲ್ಲಿ ನಡೆಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ ಆ ಪ್ರಕಾರ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನದ ಆವರಣದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು . ಸರ್ಕಾರವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಉದ್ದೇಶ ಬಡವರ್ಗದ ಜನರು ಮದುವೆ ಮಾಡಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸಾಲಶೂಲ ಮಾಡಬೇಕಾಗಿರುತ್ತದೆ ಆದುದರಿಂದ ಕಡುಬಡವರ ಈ ರೀತಿ ಖರ್ಚನ್ನು ತಪ್ಪಿಸುವುದಕ್ಕಾಗಿ ಸರ್ಕಾರ ಇಲಾಖೆಯ ಮೂಲಕ ಇಂಥ ಉತ್ತಮವಾದಂತಹ ಯೋಜನೆಯನ್ನು ಜಾರಿಗೆ ತಂದು ಇದರಿಂದ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ಯೋಜನೆಯ ಆಶಯವಾಗಿದೆ.
ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು .
ಸರ್ಕಾರದ ಪ್ರಾಯೋಜಿತ ಈ ಕಾರ್ಯಕ್ರಮವನ್ನು ಸ್ಥಳೀಯ ಶಾಸಕರಾದ ಎಸ್ ವಿ ರಾಮಚಂದ್ರ ರವರು ತಮ್ಮ ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಡಬೇಕಾಗಿತ್ತು ವಿಪರ್ಯಾಸವೆಂದರೆ ಅಧಿಕಾರಿಗಳ ಮೇಲೆ ಎಲ್ಲಾ ಜವಾಬ್ದಾರಿಯನ್ನು ಬಿಟ್ಟು ಶಾಸಕರು ಇದಕ್ಕೂ ಉಚ್ಚಂಗಿದುರ್ಗ ದೇವಸ್ಥಾನಕ್ಕೂ ಕ್ಷೇತ್ರಕ್ಕೂ ತಮಗೂ ಸರ್ಕಾರ ಉಚಿತ ಸಾಮೂಹಿಕ ವಿವಾಹವನ್ನು ಬಡವರಿಗೆ ನಡೆಸುವಂತೆ ಆದೇಶಿಸಿರುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಆರಾಮವಾಗಿ ಬೆಂಗಳೂರು ಪ್ರವಾಸದಲ್ಲಿದ್ದಾರೆ ಎಂದು ಅವರ ಸರ್ಕಾರಿ ಆಪ್ತ ಸಹಾಯಕರ ದೂರವಾಣಿ ಕರೆ ಮೂಲಕ ತಿಳಿದುಬಂದಿರುತ್ತದೆ.


ಸುದ್ದಿಗಾರರು ಕಾರ್ಯಕ್ರಮಕ್ಕೆ ಶಾಸಕರ ಗೈರು ಮತ್ತು ಯೋಜನೆಯ ಬಗ್ಗೆ ಮಾಹಿತಿ ಕೇಳಲು ಶಾಸಕರ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ
ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವು 50 ರಿಂದ 100 ಜನರು ನಿಲ್ಲಲು ಸರಿಯಾಗಿ ಅಲ್ಲಿ ಸ್ಥಳಾವಕಾಶ ವಿರಲಿಲ್ಲ ಹೆಸರಿಗೆ ಮಾತ್ರವೇ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನ ವಾರ್ಷಿಕ ಸುಮಾರು 1.5ಕೋಟಿರೂಪಾಯಿಗಳಿಂದ 2 ಕೋಟಿ ರೂಪಾಯಿಗಳವರೆಗೆ ಹಣವು ಸಂಗ್ರಹವಾಗುತ್ತದೆ ಎಂದು ಹೇಳಲಾಗುತ್ತದೆ ಇಂತಹ ಮಹಾ ಸ್ಥಳಮಹಿಮೆ ಮತ್ತು ಅಪಾರ ಆದಾಯವನ್ನು ಹೊಂದಿರುವ ದೇವಸ್ಥಾನ ಅಭಿವೃದ್ಧಿ ಕಾರ್ಯಗಳನ್ನು ಕಾಣದೇ ಹಳೆಯ ಸ್ಥಿತಿಯಲ್ಲೇ ಇಕ್ಕಟ್ಟಿನಲ್ಲಿಸಿಲುಕಿಕೊಂಡಿದೆ ಇದನ್ನು ಶಾಸಕರು ಒಂದು ಬಾರಿ ಬಂದು ದೇವಸ್ಥಾನದ ಸುತ್ತ ಮುತ್ತ ನೋಡಿದರೆ ಗೊತ್ತಾಗುತ್ತದೆ ಎಷ್ಟೋಂದು ಇಕ್ಕಟ್ಟಾಗಿದೆ ದೇವಸ್ಥಾನ ಎಂದು, ವಿಶೇಷ ದಿನಗಳಲ್ಲಿ ಮತ್ತು ಹುಣ್ಣಿಮೆಯ ದಿನದಂದು ಭಕ್ತರು ದೇವಾಲಯದ ಒಳಗೆ ಹೋಗಿ ದೇವರ ದರ್ಶನ ಪಡೆದು ಬರುವುದು ಸಾಹಸದ ಕೆಲಸವೇ ಸರಿ.

ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೀರಾ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ರವರನ್ನು ಪ್ರಶ್ನಿಸಿದರೆ ಕಾರ್ಯಕ್ರಮದ ಬಗ್ಗೆ ಶಾಸಕರಿಗೆ ಹೇಳಿದ್ದೇವೆ ಆದರೆ ಅವರು ಯಾವತ್ತೂ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಬಂದಿರುವುದಿಲ್ಲ ಹಾಗೂ ಅವರು ಅಂತಹ ಸಂಪ್ರದಾಯವನ್ನು ಹೊಂದಿದ್ದಾರೆ ಎಂದು ತಿಳಿಸಿದರು .
ಮೌಢ್ಯತೆಯನ್ನು ದೂರ ಮಾಡಿ ಜನರಿಗೆ ಬುದ್ಧಿ ಹೇಳಬೇಕಾದ ಜನಪ್ರತಿನಿಧಿಗಳೇ ಹೀಗಾದರೆ ಇನ್ನೂ ಜನಸಾಮಾನ್ಯರು ನಿರಕ್ಷರಸ್ಥರು ಯಾವ ರೀತಿಯ ಮೌಢ್ಯತೆಯನ್ನು ಜೀವನದಲ್ಲಿ ಅನುಸರಿಸುತ್ತಾರೆ ಎಂಬುದನ್ನು ಜನರೇಯೋಚಿಸಬೇಕಾಗಿದೆ
ಸರ್ಕಾರದ ಯೋಜನೆಗಳು ಜನರನ್ನು ತಲುಪಿ ಸಕಾರಗೊಳ್ಳಬೇಕು ,ಹಳ್ಳಹಿಡಿಯಬಾರದು ಆ ಕಾರಣಕ್ಕಾಗಿಯೇ ಜನಪ್ರತಿನಿಧಿಗಳು ಕುದ್ದು ಹಾಜರಿದ್ದು ಯೋಜನೆಗಳ ಬಗ್ಗೆ ಗಮನಹರಿಸಬೇಕು ಅಂದಾಗ ಮಾತ್ರ ಅವುಗಳು ಯಶಸ್ವಿಯಾಗುತ್ತವೆ.

ತುರ್ತಾಗಿ ದೇವಸ್ಥಾನದ ಸುತ್ತ ಮುತ್ತ ಇರುವ ಕಾಂಪೌಂಡ್ ನನ್ನು ಕೆಡವಿ ಹಿಂದಕ್ಕೆ ಸ್ಥಳವನ್ನು ವಿಸ್ತರಿಸಿಕೊಂಡು ಜನರು ನಿರರ್ಗಳವಾಗಿ ದೇವಲಾಯದ ಒಳಗೆ ಹೋಗಿ ದೇವರ ದರ್ಶನ ಪಡೆದು ಬರಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಮತ್ತು ದೇವಸ್ಥಾನದ ಮುಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು, ನಿರ್ಲಕ್ಷಕ್ಕೆ ಒಳಗಾಗಿರುವ ಕೋಟೆಯ ಒಳಗೆ ಹೊರಗೆ ಶಿಥಿಲಗೊಂಡ ಸ್ಮಾರಕಗಳನ್ನು ಪ್ರಾಚ್ಯವಸ್ತು ಸಂಗ್ರಹಾಲಯ ತೆರೆದು ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಯವರು ಅಲ್ಲಿ ಕೋಟೆಯ ಬಗ್ಗೆ ಪ್ರಚಾರ ಮಾಡಿ ಅದನ್ನೊಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಅರಣ್ಯ ಇಲಾಖೆ ಅಧಿಕಾರಿಗಳು ಮರಗಿಡಗಳನ್ನು ಗುಡ್ಡದಲ್ಲಿ ಬೆಳೆಸಲು ಮುಂದಾಗಬೇಕು .
ಈ ಎಲ್ಲಾ ಕೆಲಸಗಳು ಅಲ್ಲಿ ಆಗಲು ಶಾಸಕರ ಇಚ್ಚಾಶಕ್ತಿಯ ಅವಶ್ಯಕತೆ ಬಹು ಮುಖ್ಯವಾಗಿದೆ ಆದರೆ ಶಾಸಕರು ನೋಡಿದರೆ ದೇವಾಲಯದ ಹತ್ತಿರ ಬಂದು ಒಂದು ಬಾರಿಯಾದರೂ ಇಲ್ಲಿನ ಸ್ಥಿತಿಯನ್ನು ಪ್ರತ್ಯಕ್ಷವಾಗಿ ನೊಡಿರುವುದಿಲ್ಲ ಎಂದು ಹೇಳಲಾಗುತ್ತದೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಆದೇಶಿಸಬೇಕು .
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ
ಸಾಕಮ್ಮ ,ರೇಣುಕಮ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರಾದ ಚಂಚಲಮ್ಮ, ಯಶವಂತ್,ಕೆಂಚಪ್ಪ ಪ್ರಧಾನ ಅರ್ಚಕ , ಗ್ರಾಮದ ಮುಖಂಡರಾದ ರಾಜಶೇಖರ ಗೌಡ, ಮೌನೇಶ್ ಆಚಾರ್ಯ, ಬಾಬು ದಾರರಾದ ವೈಯಾಳಿ ಹನುಮಂತಪ್ಪ, ಸಿಬ್ಬಂದಿ ಗಂಗಾಧರ ಮುಂತಾದವರು ಹಾಜರಿದ್ದರು.

ಶಾಸಕರು ಕೇವಲ ಚುನಾವಣೆ ಪ್ರಚಾರ ಮನೋರಂಜನ ಕಾರ್ಯಕ್ರಮ ಸಭೆ-ಸಮಾರಂಭಗಳಿಗೆ ಮಾತ್ರವೇ ಸೀಮಿತವಾಗಬಾರದು ಇಂಥ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ದೇವಸ್ಥಾನಗಳನ್ನು ರಾಜಮಹಾರಾಜರ ಕುರುಹುಗಳಿರುವ ನಾಯಕರು ಆಳಿದ ಇಂಥ ಸ್ಥಳಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರು ನೀಡಿರುವ ಕೊಡುಗೆಗಳನ್ನು ಪರಿಚಯಿಸಲು ಶಾಸಕರಿಗೆ ಇಚ್ಚಾಶಕ್ತಿ ಇರಬೇಕು ಇದರ ಬಗ್ಗೆ ಅವರು ಮುತುವರ್ಜಿ ವಹಿಸಬೇಕು.

ಮೂಲಿಮನಿ ಹನುಮಂತಪ್ಪ ನಿಟ್ಟೂರು ಬಿಜೆಪಿ ಮುಖಂಡರು ಹರಪನಹಳ್ಳಿ.

 

ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬರುವಂತೆ ಶಾಸಕರಿಗೆ ಆಹ್ವಾನವನ್ನು ನೀಡಿದ್ದೆವು ಆದರೆ ಅವರು ಉಚ್ಚಂಗೆಮ್ಮನ ದೇವಸ್ಥಾನವಿರುವ ಗುಡ್ಡವನ್ನು ಹತ್ತುವ ಸಂಪ್ರದಾಯವಿಲ್ಲ ಎಂದು ಅವರು ನಮಗೆ ಹೇಳಿರುವರು .

ಮಲ್ಲಪ್ಪ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಉಚ್ಚಂಗೆಮ್ಮ ದೇವಸ್ಥಾನ ಉಚ್ಚಂಗಿದುರ್ಗ ಹರಪನಹಳ್ಳಿ ತಾಲೂಕು .

ಇಕ್ಕಟ್ಟಿರುವ ದೇವಸ್ಥಾನದ ಆವರಣದ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಇದನ್ನು ಸರ್ಕಾರದವರು ವಿಸ್ತರಣೆ ಮಾಡಿ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಬೇಕು.

ನಾಗರಾಜ್ ಐಗೂರು ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಒಂದು ಜೋಡಿಯ ಸಂಬಂಧಿಕರು.

Leave a Reply

Your email address will not be published. Required fields are marked *