ಕಾಂಗ್ರೆಸ್ ನಲ್ಲಿರುವ ಭಿನ್ನಮತ ಶೀಘ್ರದಲ್ಲೇ ತಿಳಿಯಾಗುವುದು – ಕವಿತಾ ರೆಡ್ಡಿ ವಿಶ್ವಾಸ
1 min readಕಾಂಗ್ರೆಸ್ ನಲ್ಲಿರುವ ಭಿನ್ನಮತ ಶೀಘ್ರದಲ್ಲೇ ತಿಳಿಯಾಗುವುದು – ಕವಿತಾ ರೆಡ್ಡಿ ವಿಶ್ವಾಸ
ಹರಪನಹಳ್ಳಿ;ಕಾಂಗ್ರೆಸ್ ನಲ್ಲಿರುವ ಭಿನ್ನಮತ ಶೀಘ್ರದಲ್ಲೇ ತಿಳಿಯಾಗುವುದು ಎಂದು ಕೆಪಿಸಿಸಿ ವಕ್ತಾರೆ ಹರಪನಹಳ್ಳಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕವಿತಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ನ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಉಮೇಶ್ ಬಾಬು ರವರು ಡಾಕ್ಟರ್ ಭೀಮಪ್ಪ ಚಾರಿಟೇಬಲ್ ಟ್ರಸ್ಟ್ ಮೂಲಕ ಉದ್ಯೋಗ ಮೇಳವನ್ನು ಸೆಪ್ಟೆಂಬರ್ 24ರಂದು ಆಯೋಜಿಸಿರುವ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಬಾವಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು .ಪಕ್ಷಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ ಭಿನ್ನಮತ ಇದ್ದಿದ್ದು ನಿಜ ಅದು ಹೈಕಮಾಂಡ್ ಗಮನಕ್ಕೂ ಸಹ ಬಂದಿದೆ ನಾವು ಸಹ ಅದರ ಬಗ್ಗೆ ಸವಿಸ್ತಾರವಾಗಿ ವರದಿಯನ್ನು ಸಲ್ಲಿಸಿದ್ದೇವೆ ಆದುದರಿಂದ ಶೀಘ್ರದಲ್ಲೇ ಕಾಂಗ್ರೆಸ್ ಪಾಳೆಯದಲ್ಲಿ ಉಂಟಾಗಿರುವ ಭಿನ್ನಮತವು ಕೊನೆಗಾಣಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ತಮ್ಮ ಪಕ್ಷದಲ್ಲಿ ಸಮನ್ವಯತೆ ಕಂಡು ಬರುತ್ತಿಲ್ಲ ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಅವರು ಎಲ್ಲಾ ಪಕ್ಷಗಳಲ್ಲಿಯೂ ಸಹ ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಅದು ನಮ್ಮಲ್ಲೂ ಕೂಡ ಹೊರತೆನಲ್ಲ ಮುಂದಿನ ದಿನಮಾನಗಳಲ್ಲಿ ಅದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು
ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಸುಮಾರು 12 ಜನರು ಆಕಾಂಕ್ಷಿಗಳಿದ್ದಾರೆ ಅವರೆಲ್ಲರೂ ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಸಾಗಿದ್ದಾರೆ ಅವರೆಲ್ಲರ ಆಕಾಂಕ್ಷಿಗಳೆ ಹೊರತು ಅವರಲ್ಲಿ ಯಾರು ಇನ್ನೂ ಅಧಿಕೃತ ಅಭ್ಯರ್ಥಿಯಾಗಿಲ್ಲ ಎಂದರು. ಎಷ್ಟೇ ಜನ ಆಕಾಂಕ್ಷಿಗಳು ಹೆಚ್ಚಾದರೂ ಅದು ಪಕ್ಷಕ್ಕೆ ಬಲವೆ ಹೊರತು ದುರ್ಬಲ ಅಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷರಾದ ಉಮೇಶ್ ಬಾಬು ,ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ ,ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷರಾದ ತಿಪ್ಪನಹಳ್ಳಿ ತಿಮ್ಮಣ್ಣ, ಅಕ್ಷರ ಫೌಂಡೇಶನ್ ನಾ ಕುಮಾರ್ ಉಪ್ಪಾರ, ಒಬಿಸಿ ತಾಲೂಕು ಘಟಕದ ಅಧ್ಯಕ್ಷ ಚಿರಸ್ಥಹಳ್ಳಿ ಬಸವರಾಜ್,ಸಾಶ್ವಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ್ , ನಿಚ್ಚಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೆಂದ್ರಪ್ಪ, ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳ ಸದಸ್ಯರಾದ ದೇವಲನಾಯ್ಕ , ಉಮೇಶ್ ನಾಯ್ಕ, ತೇಜನಾಯ್ಕ್ ಪ್ರಸನ್ನಕುಮಾರ್ , ಪರಶುರಾಮಪ್ಪ , ತೊಗರಿಕಟ್ಟಿ ಶಿವು , ಶ್ರೀಕಾಂತ್ ,ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಮುಂತಾದವರು ಹಾಜರಿದ್ದರು.