September 18, 2024

Vijayanagara Express

Kannada News Portal

ಶಾಸಕ ಕರುಣಾಕರೆಡ್ಡಿ ಮುಂದೆಯೇ ಸೌಲಭ್ಯಕ್ಕಾಗಿ ರಂಪಾಟ ಮಾಡಿದ ಬಿಜೆಪಿ ಕಾರ್ಯಕರ್ತ

1 min read

ಶಾಸಕ ಕರುಣಾಕರೆಡ್ಡಿ ಮುಂದೆಯೇ ಸೌಲಭ್ಯಕ್ಕಾಗಿ ರಂಪಾಟ ಮಾಡಿದ ಬಿಜೆಪಿ ಕಾರ್ಯಕರ್ತ


ಹರಪನಹಳ್ಳಿ : ಬಿಜೆಪಿ ಕಾರ್ಯಕರ್ತನೊಬ್ಬ ಶಾಸಕ ಕರುಣಾಕರೆಡ್ಡಿ ಮುಂದೆಯೇ ವಸತಿ ಸೌಲಭ್ಯಕ್ಕಾಗಿ ರಂಪಾಟ ಮಾಡಿದ ಘಟನೆ ತಾಲೂಕಿನ ಮಾಡ್ಲಿಗೇರಿ ತಾಂಡಾದಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು.

ತಾಲೂಕಿನ ಮಾಡ್ಲಿಗೇರಿ ತಾಂಡಾದಲ್ಲಿ ಗುರುವಾರ ಶಾಸಕ ಜಿ ಕರುಣಾಕರ ರೆಡ್ಡಿ ಅವರು ನೂತನವಾಗಿ ತಾಲೂಕಿನಾದ್ಯಂತ ಜನರ ಕುಂದು ಕೊರತೆಗಳನ್ನು ಆಲಿಸಲು ಶಾಸಕರ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ರೂಪುರೇಷೆ ಮಾಡಿಕೊಂಡಿದ್ದು ಅದರಂತೆ ಪ್ರತಿದಿನ ಒಂದೊಂದು ಗ್ರಾಮ ಪಂಚಾಯಿತಿಯಂತೆ ಜನರನ್ನು ಭೇಟಿ ಮಾಡಿ ಅವರ ಕಷ್ಟ ಸುಖಗಳನ್ನು ವಿಚಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಈ ರೀತಿಯಾಗಿ ಮಾಡ್ಲಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡ್ಲಿಗೇರೆ ತಾಂಡಾದಲ್ಲಿ ಶಾಸಕರು ಬರುತ್ತಿದ್ದಂತೆಯೇ ಸಂತೋಷ್ ನಾಯ್ಕ ತಂದೆ ಪಾಂಡು ನಾಯ್ಕ ಎನ್ನುವ ವ್ಯಕ್ತಿಯೊಬ್ಬ ನಾನು ಪಕ್ಕಾ ಬಿಜೆಪಿ ಕಾರ್ಯಕರ್ತ ಯಾರು ಏನೇ ಮಾಡಿದರು ನಾನು ಬಿಜೆಪಿಗೆ ವೋಟು ಹಾಕಿರುವುದು , ಈಗಲೂ ಓಟು ಹಾಕುವುದು,ನನಗೆ ಬಿಜೆಪಿ ಕಾರ್ಯಕರ್ತರೇ ಗ್ರಾಮ ಪಂಚಾಯಿತಿ ಸದಸ್ಯರು ವಸತಿ ಸೌಲಭ್ಯವನ್ನು ಕೊಡಲು ಹಿಂದೇಟು ಹಾಕುತ್ತಿದ್ದಾರೆ ನನ್ನ ಸಹೋದರಿಯೊಬ್ಬರಿಗೆ ಅಂಗವಿಕಲತೆ ಇದೆ ಅವರಿಗೆ ವಾಸಿಸಲು ಮನೆ ಇರುವುದಿಲ್ಲ ಮನೆ ಹಾಕಿ ಕೊಡಿ ಎಂದು ಗ್ರಾಮ ಪಂಚಾಯತಿ ಸದಸ್ಯರನ್ನು ಕೇಳಿದರೆ ಮೂವತ್ತು ಸಾವಿರ ರೂಪಾಯಿಗಳನ್ನು ನನಗೆ ಕೊಟ್ಟರೆ ಮಾತ್ರ ಮನೆಯನ್ನು ಮಂಜೂರು ಮಾಡಿಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ನಾನು ಮೂವತ್ತು ಸಾವಿರ ರೂಪಾಯಿಗಳನ್ನು ಎಲ್ಲಿಂದ ತರಲಿ ನಾನು ಬಡವ ಈ ಊರಿನಲ್ಲಿ ಒಂದೇ ಒಂದು ಎಕ್ಕರೆ ಹೊಲ ಅಥವಾ ಗದ್ದೆ ಕೂಡ ನನ್ನ ಹೆಸರಿನಲ್ಲಾಗಲಿ ನನ್ನ ಕುಟುಂಬದ ಸದಸ್ಯರ ಹೆಸರಿನಲ್ಲಾಗಲಿ ಇರುವುದಿಲ್ಲ ಹಾಗಾದರೆ ನಾವು ಸೌಲಭ್ಯಕ್ಕಾಗಿ ಯಾರನ್ನು ಕೇಳುವುದು ನಾನು ಪಂಚಾಯಿತಿ ಕಚೇರಿಯಲ್ಲಿ ಏನನ್ನಾದರೂ ಕೇಳಿದರೆ ಏನೂ ಕೇಳಬೇಡ ಎಂದು ಹೇಳುತ್ತಾರೆ,ನಮಗೆ ಪ್ರಶ್ನೆ ಮಾಡುವ ಹಕ್ಕು ಇಲ್ಲವೇ ಎಂದು ಶಾಸಕರನ್ನು ಗಟ್ಟಿ ದ್ವನಿಯಲ್ಲಿ ಕೇಳತೊಡಗಿದರು.

ಆಗ ಬಿಜೆಪಿ ಕಾರ್ಯಕರ್ತರು ಮಧ್ಯಪ್ರದೇಶ ಮಾಡಿ ಹೀಗೆಲ್ಲ ಕೂಗಾಡುವುದು ಸರಿ ಇಲ್ಲ ಶಾಸಕರು ಗ್ರಾಮಕ್ಕೆ ಬಂದಿದ್ದಾರೆ ತಮ್ಮದೇನಾದರೂ ಕುಂದು ಕೊರತೆಗಳಿದ್ದರೆ ಹೇಳಿಕೊ ಎಂದರು .
ಆ ಯುವಕನ ಮಾತಿಗೆ ಉತ್ತರಿಸಿದ ಶಾಸಕರು ಸಾಕು ನಿನ್ನ ಸಮಸ್ಯೆ ನಮಗೆ ಅರ್ಥವಾಯಿತು ನಿಮಗೆ ವಸತಿ ಮಂಜೂರು ಮಾಡಿಕೊಡುತ್ತೇವೆ ಬಿಡು ಎಂದರು .ಆಗ ಸಂತೋಷ್ ನಾಯ್ಕ ನು ನನಗೆ ಮೂವತ್ತು ಸಾವಿರ ರೂಪಾಯಿಗಳನ್ನು ಲಂಚಾ ಕೇಳಿರುತ್ತಾರೆ ಎಂದು ಕರುಣಾಕರ ರೆಡ್ಡಿಯವರಿಗೆ ದೂರು ನೀಡಿದ ಇದಕ್ಕೆ ಪ್ರತಿಕ್ರಿಸಿದ ಶಾಸಕರು ಇನ್ನುಮುಂದೆ ಆ ತರ ದುಡ್ಡು ಕೇಳಿದರೆ ನಮ್ಮ ಗಮನಕ್ಕೆ ತಾ ಎಂದು ಹೇಳುತ್ತಾ ಮುಂದೆ ಸಾಗಿದರು ಇದಕ್ಕೆ ಯುವಕ ಶಾಸಕರ ಹಿಂದೆ ಹಿಂದೆ ಸಾಗುತ್ತಾ ಮಾತನಾಡಲಾರಂಭಿಸಿದನು .

ಶಾಸಕರ ಮಾತಿಗೆ ಪ್ರತಿಯಾಗಿ ಮಾತನಾಡುತ್ತಾ ಹಿಂದೆ ಸಾಗಿದ ಸಂತೋಷ್ ನಾಯ್ಕನು ನಾನು ಮಾತನಾಡುವ ಹಕ್ಕನ್ನು ಹೊಂದಿದ್ದೇನೆ ಆದುದರಿಂದ ಯಾರು ನನಗೆ ಬೇಡ ಎನ್ನಬಾರದು ಯಾರ ಮಾತನ್ನು ನಾನು ಕೇಳುವುದಿಲ್ಲ ಎಂದು ಒಂದೇ ಉಸಿರಲ್ಲಿ ಮಾತನಾಡುತ್ತಾ ಶಾಸಕರ ಎದುರಿಗೆ ಘಟನೆ ಎಲ್ಲವನ್ನು ವಿವರಿಸಿ ಅವರ ಹಿಂದಿಂದೆ ಸಾಗಿದೆ ಅವರ ಹಿಂದೆ ಹಿಂದೆ ಬಿಜೆಪಿ ಕಾರ್ಯಕರ್ತ ನಾನು ಬಿಜೆಪಿ ಕಾರ್ಯಕರ್ತ ಎಂದು ಕೂಗುತ್ತಾ ಹೋಗುತ್ತಿದ್ದುದು ಕಂಡುಬಂದಿತು .

Leave a Reply

Your email address will not be published. Required fields are marked *