ಕೆರೆಗಳ ಉಳಿವಿಗಾಗಿ ಬೇಕಾಗಿದೆ ಸರ್ಕಾರದಿಂದ ಕಾಯಕಲ್ಪ
1 min readವಿಶೇಷ ವರದಿ: ಪಟ್ನಾಮದ ವೆಂಕಟೇಶ್ ಹರಪನಹಳ್ಳಿ
ಕೆರೆಗಳ ಉಳಿವಿಗಾಗಿ ಬೇಕಾಗಿದೆ ಸರ್ಕಾರದಿಂದ ಕಾಯಕಲ್ಪ
ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದಾದ್ಯಂತ ಕೆರೆಗಳು ಒಂದಾದ ಮೇಲೆ ಒಂದರಂತೆ ತುಂಬಲು ಆರಂಭಿಸಿವೆ ಪ್ರಾಚೀನ ಕಾಲದಿಂದಲೂ ಜನಜಾನುವಾರಗಳ ಉಪಯೋಗಕ್ಕಾಗಿ ಜನರು ಕೆರೆಯ ನೀರನ್ನೇ ಅವಲಂಬಿಸಿದ್ದರು ಕೆರೆಗಳು ಸಹ ಆಗ ಸ್ವಚ್ಚವಾಗಿರುತ್ತಿದ್ದವು ಮತ್ತು ಕೆರೆಗಳು ಆ ಕಾಲದಲ್ಲಿ ತುಂಬುತ್ತಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಅತಿ ಕಡಿಮೆ ಮಳೆ ಸುರಿದು ಕೆರೆಗಳು ಖಾಲಿ ಖಾಲಿ ಇರುವವವು ಕಳೆದ ಎರಡು ವರ್ಷಗಳಿಂದ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಕೆರೆಗಳಿಗೆ ನೀರು ಬಂದು ತುಂಬುತ್ತಿವೆ ಇಂತಹ ನೀರಿನ ಸದ್ಬಳಕೆ ಆಗಬೇಕಾಗಿದೆ ಅದಕ್ಕೆ ಹಲವಾರು ತೊಂದರೆಗಳು ಗ್ರಾಮಗಳಲ್ಲಿ ಅಡೆತಡೆಗಳಾಗಿವೆ.
ಅವುಗಳು ಒಂದು ಎರಡು ಅಲ್ಲ ಪ್ರತಿಯೊಂದು ಹಳ್ಳಿಗಳು ಬೆಳವಣಿಗೆಗಳಾಗಿವೆ ಕೆಲವು ಗ್ರಾಮಗಳು ನಗರಗಳಾಗಿ ಮಾರ್ಪಟ್ಟಿವೆ ಮತ್ತೆ ಜನರ ಜೀವನ ಶೈಲಿಯು ಕೂಡ ಆಧುನಿಕರಣಗೊಂಡಂತೆಲ್ಲಾ ನಗರ ಪಟ್ಟಣ ಗ್ರಾಮಗಳು ಬೆಳೆಯಲಾರಂಬಿಸಿವೆ ಆಧುನಿಕರಣದಿಂದಾಗಿ ಶೌಚಾಲಯ ಚರಂಡಿ ಮುಂತಾದವುಗಳ ತ್ಯಾಜ್ಯಗಳು ಸಹ ಹೆಚ್ಚಾಗಿವೆ ಎಲ್ಲವುಗಳ ತ್ಯಾಜ್ಯಗಳು ಸಹ ಕೆರೆಗಳಿಗೆ ನೇರವಾಗಿ ಸೇರುತ್ತವೆ ಕೆರೆಗಳು ಅನೇಕ ರೀತಿಯಾದ ಆಧುನಿಕತೆಯಿಂದಾಗಿ ಕೆರೆಗಳನ್ನು ಸ್ಥಳೀಯ ಸರ್ಕಾರಗಳು ಸ್ವಚ್ಛವಾಗಿ ಇಡಲು ವಿಫಲವಾಗಿವೆ ಎಂದೇ ಹೇಳಬಹುದಾಗಿದೆ .
ಇತ್ತೀಚಿನ ದಿನಗಳಲ್ಲಿ ಕೆರೆಗಳನ್ನು ವ್ಯವಸಾಯ ಮಾಡುವ ಉದ್ದೇಶದಿಂದಾಗಿ ಒತ್ತುವರಿ ಮಾಡಿ ರೈತರು ಉಳುಮೆ ಮಾಡುತ್ತಿದ್ದಾರೆ, ಮತ್ತು ರಿಯಲ್ ಎಸ್ಟೇಟ್ ದಂಧೆಕೊರರು, ಸರ್ಕಾರಿ ಭೂಮಿಯ ಭೂಗಳ್ಳರು ಸೇರಿ, ಕೆಲವು ಭ್ರಷ್ಟ ಅಧಿಕಾರಿಗಳೊಂದಿಗೆ ಸೇರಿ ಕೆರೆಗಳನ್ನು ಒತ್ತುವರಿ ಮಾಡಿ ಭೊಮಿಯನ್ನು ಕಬಳಿಸುತ್ತಿದ್ದಾರೆ .
ಅಲ್ಲದೆ ಗ್ರಾಮಗಳಲ್ಲಿ ಜನರು ಉಪಯೋಗಿಸಿದ ಮಲಿನ ನೀರನ್ನು ನೇರವಾಗಿ ಚರಂಡಿಗೆ ಬಿಡುತ್ತಿರುವುದರಿಂದ ಮತ್ತು ಶೌಚಾಲಯದ ತ್ಯಾಜ್ಯ ಹಾಗೂ ಶೌಚಾಲಯದ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ನೀರು ಅಶುದ್ಧವಾಗಿ ಜನಜಾನುವಾರುಗಳು ಬಳಸಲು ಬರದಂತೆ ಆಗಿಹೋಗಿದೆ ,ಇದರಿಂದಾಗಿ ಜಲಚರ ಪ್ರಾಣಿಗಳು ಸಹ ವಾಸಿಸಲು ಈ ನೀರು ಅಯೋಗ್ಯವಾಗುತ್ತಿವೆ ಎಂಬುದು ಗೊತ್ತಾಗುತ್ತದೆ.
ಮಲಿನವಾದ ಚರಂಡಿಯ ನೀರನ್ನು ನೇರವಾಗಿ ಕೆರೆಗಳಿಗೆ ಬಿಡುವ ಮೊದಲು ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಚರಂಡಿ ನೀರನ್ನು ಸಂಸ್ಕರಿಸಿ ನಂತರ ಕೆರೆಗಳಿಗೆ ಬಿಟ್ಟರೆ ಅಪಾಯವಾಗುವ ಸಾಧ್ಯತೆ ಕಡಿಮೆ ಆದರಿಂದ ಇದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಜನರಿಗೆ ತಿಳುವಳಿಕೆ ಹೇಳಿ ಅರಿವು ಮೂಡಿಸುವ ಅಗತ್ಯವಿದೆ ಜೊತೆಗೆ ಕೆರೆಗಳಲ್ಲಿ ಮನೆಯಲ್ಲಿ ಬಳಸಿದ ತ್ಯಾಜ್ಯ ವಸ್ತುಗಳು ಹಳೆಯ ದುಬೂಟಿ (ಬೆಡ್ ಶೀಟ್)ಚಾಪೆ ,ತಟ್ಟು ,ಪ್ಲಾಸ್ಟಿಕ್ ಚೀಲಗಳು , ತೆಂಗಿನಕಾಯಿ, ದೇವರ ಹಳೆಯ ಫೋಟೋಗಳು , ಜನರು ಬಳಸಿದ ಹಳೆಯ ಬಟ್ಟೆ ಬರಿಗಳು , ಮುಂತಾದ ಮನೆಯಲ್ಲಿ ಬಳಸಿದ ವಸ್ತುಗಳನ್ನು ಕೆರೆಗೆ ಎಸೆಯುತ್ತಿರುವುದರಿಂದ ಕೆರೆಯ ನೀರು ಮಲಿನವಾಗಿ ಉಪಯೋಗಿಸಲು ಬಾರದಂತೆ ಆಗುವ ಅಪಾಯವಿರುವುದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕೆರೆಗಳಿಗೆ ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಎಚ್ಚರವಹಿಸಿ ಜನತೆಗೆ ಅರಿವನ್ನು ಮೂಡಿಸುವ ಅವಶ್ಯಕತೆ ಇದೆ .
ಇಲ್ಲವಾದಲ್ಲಿ ಮುಂದೊಂದು ದಿನ ತ್ಯಾಜ್ಯ ವಸ್ತುಗಳ ತಾಣಗಳಾಗಿ ಕೆರೆಗಳ ಅಂಗಳಗಳು ಮಾರ್ಪಡಲಿವೆ. ಇದರಿಂದ ಭವಿಷ್ಯತ್ತಿನಲ್ಲಿ ಅಪಾಯ ಉಂಟಾಗಿ ಎಲ್ಲೆಂದರಲ್ಲಿ ಘನತ್ಯಾಜ್ಯ ವಸ್ತುಗಳೆ ಕಾಣಿಸುವ ಸಾಧ್ಯತೆ ಇದೆ ಹಾಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಗಳಲ್ಲಿ ಶೌಚಾಲಯದ ನೀರನ್ನು ನೇರವಾಗಿ ಚರಂಡಿಯ ಮೂಲಕ ಕೆರೆಗೆ ಬಿಡುತ್ತಿರುವವರನ್ನು ಗುರುತಿಸಿ ತಿಳುವಳಿಕೆ ಹೇಳಿ ಸೂಕ್ತ ಕ್ರಮವನ್ನು ಕೈಗೊಂಡಾಗ ಮಾತ್ರ ಇದರಿಂದ ಆಗುವ ಅಪಾಯ ತಪ್ಪುತ್ತದೆ ಇಲ್ಲವಾದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ .
ಘನ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತವಾದ ಸ್ಥಳದಲ್ಲಿ ಅದನ್ನು ಸಂಗ್ರಹಿಸುವ ಕಟ್ಟಡವನ್ನು ಕಟ್ಟಿ, ಅದರಂತೆ ಕ್ರಮಬದ್ಧವಾಗಿ ಪಾಲಿಸಬೇಕಾಗಿರುತ್ತದೆ ಇಲ್ಲವಾದಲ್ಲಿ ಕೊಳೆಯಲಾರದ ಪ್ಲಾಸ್ಟಿಕ್ ಮುಂತಾದ ಗೃಹ ಉಪಯೋಗಿ ತ್ಯಾಜ್ಯ ವಸ್ತುಗಳನ್ನು ತಂದು ಜನರು ಕೆರೆಯಲ್ಲಿ ಎಸೆಯುವದರಿಂದ ಮುಂದೊಂದು ದಿನ ಕೆರೆಗಳಲ್ಲಿ ಬರೀ ಊಳು ತುಂಬಿ ಕೆರೆಗಳೆ ಇಲ್ಲದಂತೆ ನಾಶವಾಗುವ ಸಾಧ್ಯತೆ ಇರುತ್ತದೆ.
ಮುಂದಿನ ಪೀಳಿಗೆಗೆ ಮುಂದೊಂದು ದಿನ ಕೆರೆಯ ಚಿತ್ರಣವನ್ನು ಹಾಗೂ ಕೆರೆ ತುಂಬಿದ ಚಿತ್ರವನ್ನು ಪೇಪರ್ ನಲ್ಲಿ ಬರೆದು ತೋರಿಸುವ ಪರಿಸ್ಥಿತಿ ಉಂಟಾಗುತ್ತದೆ ಆದುದರಿಂದ ಘನತ್ಯಾಜ್ಯವನ್ನು ಕೆರೆ ಹೊರಗಡೆ ಸಂಗ್ರಹಿಸಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಾಗಿದೆ ಇಲ್ಲವಾದಲ್ಲಿ ಅಂತರ್ಜಲವು ಕಡಿಮೆಯಾಗಿ ಮುಂದಿನ ಪೀಳಿಗೆಗೆ ಹನಿ ನೀರಿಗಾಗಿಯೂ ಪರಿತಪಿಸುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಸ್ಥಳೀಯ ಸರ್ಕಾರಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಮಳೆಯಿಂದ ಜೀವಿಸ್ಪಡುವ ಹಳ್ಳ,ಕೊಳ್ಳ, ಕೆರೆ,ಕಟ್ಟೆ, ಕಾಲುವೆ ,ನದಿಗಳು , ಸರೋವರಗಳು ನಮ್ಮ ನೀರಿನ ಮೂಲಗಳಾಗಿವೆ ಭೂಮಿಯ ಮೇಲೆ ಶೇಕಡ 70ರಷ್ಟು ನೀರಿದ್ದರೂ ಅದು ಉಪಯೋಗಿಸಲು ಬಾರದ ಉಪ್ಪು ನೀರು ಆಗಿರುತ್ತದೆ ಆದುದರಿಂದ ಸ್ವಲ್ಪವೇ ಸ್ವಲ್ಪ ಇರುವಂತಹ ಮಾನವರ ಬಳಕೆಗಾಗಿ ಸಿಗಲ್ಪಡುವ ಮಳೆ ನೀರು ಮತ್ತು ಭೂಮಿ ಒಳಗಿನ ಇರುವಂತಹ ನೀರಿನ್ನು ಕಾಪಾಡಿಕೊಳ್ಳಬೇಕಾಗಿದೆ ಅಂತರ್ಜಲ ಕಡಿಮೆಯಾಗಿ ಕುಡಿಯಲು ಗೃಹಪಯೋಗಕ್ಕಾಗಿ ಬಳಸಲು ನೀರಿಲ್ಲದಂತೆ ಆಗಿ ಕುಡಿಯುವ ಹನಿ ನೀರಿಗಾಗಿ ಬಡಿದಾಟ ಮಾಡುವಂತಹ ಕಾಲ ಬರುತ್ತದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ .
ಪ್ರಾಚೀನ ಕಾಲದಿಂದಲೂ ಹಳ್ಳಕೊಳ್ಳ ಕೆರೆ ಕಟ್ಟೆ ಸರೋವರ ನದಿಗಳೆಲ್ಲವೂ ಪರಿಶುದ್ಧವಾಗಿರುತ್ತಿದ್ದವು ನಗರೀಕರಣದ ಕೈಗಾರಿಕೀಕರಣದ ಪ್ರಭಾವದಿಂದಾಗಿ ಅದರ ಪರಿಶುದ್ಧತೆಗಳು ಮಾಯವಾಗಿ ಹೋಗಿವೆ ಎಲ್ಲೆಂದರಲ್ಲಿ ನಗರೀಕರಣ ಮತ್ತು ಕೈಗಾರಿಕೆ ಕೈಗಾರಿಕೀಕರಣದ ಪರಿಣಾಮವಾಗಿ ನೀರಿನ ಮೂಲಗಳು ಭೂಮಿ ಮೇಲೆ ನೀರು ಎಲ್ಲವೂ ಮಲಿನವಾಗಿ ಹೋಗಿವೆ ಇಂದು ಪ್ರತಿ ಗಲ್ಲಿ ಗಲ್ಲಿಗಳಲ್ಲಿಯೂ ನಗರ ಪಟ್ಟಣ ಗ್ರಾಮಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಕುಡಿಯಲು ಆ ಶುದ್ಧ ನೀರನ್ನೇ ಬಳಸಿದರೂ ಕೂಡ ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ,ಏಕೆಂದರೆ ನೀರೆಂಬುದು ಪ್ರತಿಯೊಬ್ಬರಿಗೂ ಬೇಕಾದಂತ ಜೀವ ಜಲ ಜೀವವನ್ನು ಬದುಕಿಸುವುದೇ ಈ ನೀರು ಹಾಗಾಗಿ ಇಂಥ ಜೀವಜಲವನ್ನು ಸರ್ಕಾರವು ಅಮೂಲ್ಯ ವೆಂದು ಪರಿಗಣಿಸಿ ಅದರ ಉಳಿವಿಗಾಗಿ ಮುಂದಿನ ಭವಿಷ್ಯದ ಜನರ ಬಳಕೆಯ ಅನುಕೂಲಕ್ಕಾಗಿ ಇವುಗಳೆಲ್ಲವನ್ನು ಉಳಿಸುವ ಅಗತ್ಯತೆ ಸರ್ಕಾರದ ಮುಂದಿದೆ .
ಸರ್ಕಾರ ಹೊಸದಾಗಿ ಕೆರೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಆದರೆ ಇರುವ ಕೆರೆಗಳನ್ನು ಜಿರ್ಣೋದ್ದಾರ ಮಾಡಿ ಅವುಗಳ ಉಳುವಿಗಾಗಿ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ,
ಹಿಂದೊಂದು ಕಾಲದಲ್ಲಿ ಯಾವ ಶುದ್ಧೀಕರಿಸದೆಯೂ ಕೆರೆ ಹಳ್ಳ ಕಾಲುವೆ ಬಾವಿ ನದಿಗಳ ನೀರನ್ನು ನೇರವಾಗಿ ಜನರು ಕುಡಿದು ಜೀವಿಸುತ್ತಿದ್ದರು ಆದಾಗ್ಯೂ ಅವರಿಗೆ ಕಾಯಿಲೆ ಕಸಾಲೆಗಳು ಬರುವುದು ಕಡಿಮೆ ಪ್ರಮಾಣವಾಗಿತ್ತು .ಅಲ್ಲದೆ ಮನುಷ್ಯರು ಕೂಡ ದಷ್ಟಪುಷ್ಟವಾಗಿರುತ್ತಿದ್ದರು ಇಂದು ಎಷ್ಟೇ ಶುದ್ದಿಕರೀಸಿದ ನೀರನ್ನು ಕುಡಿದರೂ ಸಹ ಹೆಜ್ಜೆ ಹೆಜ್ಜೆಗೂ ರೋಗ ಗ್ರಸ್ತರಾಗುವ ಸಾಧ್ಯತೆ ಕಾಡುತ್ತಿದೆ ಹಾಗಾಗಿ ಕುಡಿಯುವ ನೀರಿನ ಬೇರೆ ಬೇರೆ ಯೋಜನೆಗಳಿಗೆ ಸರ್ಕಾರವು ಕೋಟಿ ಕೋಟಿ ಹಣವನ್ನು ಕಾಯ್ದೆಡುವ ಬದಲು ಅವುಗಳ ಮೂಲಗಳನ್ನು ಪರಿಶುದ್ಧವಾಗಿ ಕಾಪಾಡುವುದು ಸರ್ಕಾರದ ಮುಂದಿರುವ ಸವಾಲಾಗಿದೆ ಎಂದರೆ ಭವಿಷ್ಯ ತಪ್ಪಾಗಲಾರದು.