ಎಸ್ ವಿ ರಾಮಚಂದ್ರಪ್ಪ ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯಕ್ತಿ – ಹರಪನಹಳ್ಳಿ ಡಿ ಎಸ್ ಎಸ್ ಮುಖಂಡರು
1 min read
ಎಸ್ ವಿ ರಾಮಚಂದ್ರಪ್ಪ ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯಕ್ತಿ – ಹರಪನಹಳ್ಳಿ ಡಿ ಎಸ್ ಎಸ್ ಮುಖಂಡರು
ಹರಪನಹಳ್ಳಿ : ಜಗಳೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರನವರು ಮಾದಿಗ ಜನಾಂಗದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದು
ಟಿ ಹನುಮಂತಪ್ಪ ಪುಣಬಗಟ್ಟಿ ವಕೀಲರು ತಿಳಿಸಿದ್ದಾರೆ.
ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಎಸ್ ವಿ ರಾಮಚಂದ್ರಪ್ಪ ನವರ ಅಧಿಕಾರ ಅವಧಿಯಲ್ಲಿ ಅನೇಕ ಸರಕಾರಿ ಸೌಲಭ್ಯ ಗಳನ್ನು ಸಮಾಜಕ್ಕೆ ಒದಗಿಸಿಕೊಟ್ಟಂತ ಜನಪ್ರಿಯ ಶಾಸಕರಾಗಿರುತ್ತಾರೆ ಕೆಲ ಪಟ್ಟ-ಭದ್ರಾ ಹಿತಾಸಕ್ತಿಗಳು ಸನ್ಮಾನ್ಯ ಶಾಸಕರಿಂದ ಮಾದಿಗ ಸಮಾಜವನ್ನು ದೂರ ಮಾಡುವಂತಹ ಮತ್ತು ಮಾದಿಗ ಜನಾಂಗಕ್ಕೆ ಮೋಸ ಮಾಡುವಂತಹ ಕುತಂತ್ರ ಮಾಡಿದ್ದು ಇದನ್ನು ನಾವು ಖಡಾ ಖಂಡಿತವಾಗಿ ಖಂಡಿಸುತ್ತೇವೆ ಎಂದರು.
ಹರಪನಹಳ್ಳಿ ತಾಲೂಕು ಅರಸೀಕೆರೆ ಹೋಬಳಿಯ ಏಳು ಗ್ರಾಮ ಪಂಚಾಯತಿಗಳು ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವುದರಿಂದ ಈ ಭಾಗದ ಮಾದಿಗ ಜನಾಂಗಕ್ಕೆ ಯಾವತ್ತೂ ಕೂಡ ಸನ್ಮಾನ್ಯ ಶಾಸಕರು ತಾರತಮ್ಯ ಮಾಡಿಲ್ಲ ಎಲ್ಲಾ ಸಮಾಜದ ವರನ್ನ ಒಂದೇ ರೀತಿಯಲ್ಲಿ ನೋಡಿಕೊಂಡು ಬಂದಿರುವಂತಹ ನಾಯಕರಾಗಿರುತ್ತಾರೆ.
ಮುಂದಿನ ದಿನಗಳಲ್ಲಿ ಶಾಸಕರು ಮಾದಿಗ ಸಮಾಜದ ಬಗ್ಗೆ ಜನಪರ ಕಾಳಜಿ ಹೊಂದಿದ್ದು ಯಾರು ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ .
ಸನ್ಮಾನ್ಯ ಶಾಸಕರು ಮಾದಿಗ ಸಮಾಜದ ಬಗ್ಗೆ ಕಾಳಜಿಯನ್ನೂ, ತುಂಬಾ ಪ್ರೀತಿ ಗೌರವವನ್ನು ಹೊಂದಿದ್ದು ಅದೇ ರೀತಿ ಮಾದಿಗ ಸಮಾಜವು ಕೂಡ ಸನ್ಮಾನ್ಯ ಶಾಸಕರ ಬಗ್ಗೆ ಅಪಾರವಾದ ಪ್ರೀತಿ, ಗೌರವ ಮತ್ತು ವಿಶ್ವಾಸವನ್ನು ಹೊಂದಿರುತ್ತದೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಉಪಾಧ್ಯಕ್ಷ ಕಬ್ಬಳ್ಳಿ
ಮೈಲಪ್ಪ , ಹರಪನಹಳ್ಳಿ ತಾಲೂಕು ಡಿಎಸ್ಎಸ್ ಅಧ್ಯಕ್ಷ
ಆರ್ ಕೆ ಮಂಜಪ್ಪ, ಮುಖಂಡರಾದ ಕಬ್ಬಳ್ಳಿ ಪರಸಪ್ಪ,ಪಣಿಯಾಪುರ ಲಿಂಗರಾಜ್, ಬಾಲೆನಹಳ್ಳಿ ಕೆಂಚನಗೌಡ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.