Vijayanagara Express

Kannada News Portal

ಶಾಸಕ ಎಸ್ ವಿ ರಾಮಚಂದ್ರಪ್ಪ ಯಾರಿಗೂ ತಾರತಮ್ಯ ಮಾಡಿಲ್ಲ – ಡಿ ಎಸ್ ಎಸ್ ಮುಖಂಡರ ಸ್ಪಷ್ಟನೆ

1 min read

ಶಾಸಕ ಎಸ್ ವಿ ರಾಮಚಂದ್ರಪ್ಪ ಯಾರಿಗೂ ತಾರತಮ್ಯ ಮಾಡಿಲ್ಲ – ಡಿ ಎಸ್ ಎಸ್ ಮುಖಂಡರ ಸ್ಪಷ್ಟನೆ

 

ಹರಪನಹಳ್ಳಿ/ಜಗಳೂರು: ನ – 28 , ಶಾಸಕ ಎಸ್ ವಿ ರಾಮಚಂದ್ರಪ್ಪ ಯಾರಿಗೂ ತಾರತಮ್ಯ ಮಾಡಿಲ್ಲ ಎಂದು ಹರಪನಹಳ್ಳಿ ತಾಲೂಕಿನ ಡಿ ಎಸ್ ಎಸ್ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ವಾರದಲ್ಲಿ ಎಸ್ ವಿ ರಾಮಚಂದ್ರಪ್ಪ ಮಾದಿಗ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಎಲ್ಲಾ ಆಕಾಂಕ್ಷಿಗಳು, ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಲಿ ಶಾಸಕರು, ಮತ್ತು ಜೆಡಿಎಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು
ಬಂಧುಗಳೇ ಅದೇ ದಿನದಲ್ಲಿ ಬೇರೆ ಕಾರ್ಯಕ್ರಮಗಳಿಗೆ ಹೋಗಲು ಜಗಳೂರು ಕ್ಷೇತ್ರದ ಶಾಸಕರಾದ ಮಾನ್ಯ ರಾಮಚಂದ್ರಪ್ಪ ಅವರಿಗೆ ಸಮಯ ಇರುತ್ತದೆ ಆದರೆ ಮಾದಿಗ ಜನಾಂಗದ ಒಂದು ಸಮಾವೇಶದಲ್ಲಿ ಸೌಜನ್ಯಕ್ಕಾದರೂ ಐದು ನಿಮಿಷ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಕೇವಲ ಹಣ ಕೊಟ್ಟು ಬೇರೆ ಕಾರ್ಯಕ್ರಮ ಇದೆ ಎಂದು ಹೇಳಿ ಕಳಿಸಿದ ಶಾಸಕರು ಈ ಜನಾಂಗಕ್ಕೆ ಗೌರವ ಕೊಡದೆ ಸಮಾಜದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಯುವಕರು,ಹಿರಿಯರು, ಮಹಿಳೆಯರು ತಾಯಂದಿರು ,ಮಕ್ಕಳು, ವಿಧ್ಯಾರ್ಥಿಗಳಿಗೆ ತುಂಬಾ ನೋವುಂಟು ಮಾಡಿದ್ದಾರೆ ದಯಮಾಡಿ ಮಾದಿಗ ಸಮಾಜದ ಶಕ್ತಿ ಏನೂ ಎನ್ನುವುದನ್ನು ಚರ್ಚೆ ನಡೆಸಿ ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು
ಎಂದು ಆರೋಪಿಸಿ ವಾಟ್ಸಪ್ ಗ್ರೂಪ್ ಗಳಲ್ಲಿ ಬರೆದು ಹರಿಯಬಿಟ್ಟಿದ್ದಾರೆ ಇದನ್ನು ನಾವು ಖಡಾಖಂಡಿತವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ನಡೆದ ಮಾದಿಗ ಜಾಗೃತ ಸಮಾವೇಶದಲ್ಲಿ ಮೂರು ಜನ ಸ್ವಾಮೀಜಿಗಳು ಭಾಗವಹಿಸಿದ್ದು ಅಲ್ಲದೆ ಸಮಾಜದ ಎಲ್ಲಾ ಮುಖಂಡರ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಆದರೆ ಯಾರೋ ಕಿಡಿಗೇಡಿಗಳು ಎಸ್ ವಿ ರಾಮಚಂದ್ರಪ್ಪನವರು ಉದ್ದೇಶಪೂರ್ವಕವಾಗಿ ಮಾದಿಗ ಸಮಾವೇಶದಲ್ಲಿ ಭಾಗವಹಿಸಿಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಹರಿಯಬಿಟ್ಟಿದ್ದಾರೆ ಆದರೆ ವಾಸ್ತವವೆಂದರೆ ನಮ್ಮ ಕಾರ್ಯಕ್ರಮ ನಿಗದಿಗಿಂತ ಒಂದು ತಿಂಗಳು ಮೊದಲೇ ಶಾಸಕರನ್ನು ಭೇಟಿ ಮಾಡಿ ಕಾರ್ಯಕ್ರಮದ ಬಗ್ಗೆ ತಿಳಿಸಲು ಹೋಗಿದ್ದೆವು ಆಗ ನಮ್ಮ ಜೊತೆ ಮಾತನಾಡಿದ ರಾಮಚಂದ್ರಪ್ಪನವರು ಕಂಬತ್ತಳ್ಳಿಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿರಕ್ತಮಠ ಸ್ವಾಮೀಜಿಗಳು ಕಂಬತ್ತಳ್ಳಿ ಇವರುಗಳ ಜೊತೆ ವೇದಿಕೆ ಕಾರ್ಯಕ್ರಮ ನಿಗದಿಯಾಗಿದೆ ಸಮಾಜದ ಕಾರ್ಯ ಕ್ರಮಕ್ಕೆ ಆಹ್ವಾನಿಸಲು ಹೋಗಿದ್ದ ನಮಗೆ ಈ ವಿಷಯವನ್ನು ತಿಳಿಸಿ ಅದೇ ದಿನಾಂಕದಂದು ಇರುವುದರಿಂದ ಅನ್ಯತಾ ಭಾವಿಸಬೇಡಿ ನಿಮ್ಮ ಮತ್ತು ನಿಮ್ಮ ಸಮಾಜದ ಜೊತೆಗೆ ಸದಾ ನಾನು ಇರುತ್ತೇನೆ ಅಲ್ಲದೆ ಸಮಾಜದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸದಾ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಲ್ಲದೆ ಅನಿವಾರ್ಯ ಕಾರಣದಿಂದಾಗಿ ಕಂಬತಳ್ಳಿ ವೇದಿಕೆ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ದೇಣಿಗೆಯನ್ನು ನೀಡಿ ಕಳುಹಿಸಿರುತ್ತಾರೆ.

ಹೀಗೆ ನಮ್ಮ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ನಮ್ಮ ಜನಪ್ರಿಯ ಶಾಸಕರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದರೆ ಮುಂದಿನ ದಿನಮಾನಗಳಲ್ಲಿ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷ ಕಂಬತ್ತಳ್ಳಿ ಜಯಪ್ಪ ಕೆ.ಡಿ.ಮರಿಯಪ್ಪ ,ಕಬ್ಬಳ್ಳಿ ಪರಸಪ್ಪ ,ಗೌರಿಹಳ್ಳಿ ಮಂಜುನಾಥ ,ಪುಣಬಗಟ್ಟಿ ನಿಂಗಪ್ಪ ವಕೀಲರು, ಕಲ್ಲಳ್ಳಿ ವಿಜಯ್ ,ಹೊಸಕೋಟಿ ನಾಗರಾಜ್, ನಿಚ್ಚವನಹಳ್ಳಿ ಭೀಮಜ್ಜ ಸೇರಿದಂತೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *