Vijayanagara Express

Kannada News Portal

ನಾಡಿನಲ್ಲಿ ರೈತರು ನಕ್ಕರೆ ಜಗವೇ ನಕ್ಕಂತೆ – ಶಾಸಕ ಎಸ್ ವಿ ರಾಮಚಂದ್ರಪ್ಪ

1 min read

ನಾಡಿನಲ್ಲಿ ರೈತರು ನಕ್ಕರೆ ಜಗವೇ ನಕ್ಕಂತೆ – ಶಾಸಕ ಎಸ್ ವಿ ರಾಮಚಂದ್ರಪ್ಪ

ಹರಪನಹಳ್ಳಿ / ಜಗಳೂರು : ಡಿ – 12 ,ನಾಡಿನಲ್ಲಿ ರೈತರು ನಕ್ಕರೆ ಜಗವೇ ನಕ್ಕಂತೆ ಎಂದು ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ನವರು ಹೇಳಿದರು.

ಡಿಸೆಂಬರ್ 23 ನೇ ತಾರೀಖಿನಂದು ಅರಸೀಕೆರೆ ಗ್ರಾಮದಲ್ಲಿ ನಡೆಯುವ ದಂಡಿ ದುರುಗಮ್ಮನ ಜಾತ್ರೆಯ ಅಂಗವಾಗಿ ತಾಲೂಕಿನ ಕಸವನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ಕರೆಯಲಾಗಿದ್ದ ಪೂರ್ವ ಭಾವಿ ಸಭೆ ಯಲ್ಲಿ ಸಾರ್ವಜನಿಕರು ,ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು , ಕಳೆದ ಮೂರು ವರ್ಷಗಳಿಂದ ಕರೋನಾ ಕಾರಣದಿಂದಾಗಿ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲು ಆಗಿರುವುದಿಲ್ಲ ಆ ಸಮಯದಲ್ಲಿ ಅನೇಕ ನಮ್ಮ ಸ್ನೇಹಿತರನ್ನು ಕಳೆದುಕೊಂಡೆವು ಅಮೂಲ್ಯ ಜೀವಗಳು ಬಲಿಯಾದವು ಈ ನಡುವೆ ಆಗಿದ್ದು ಆಗಿ ಹೋಯಿತು ಎಂಬಂತೆ ಹಳೆಯದನ್ನು ಮರೆಯಬೇಕಾಗಿದೆ ಹೊಸದನ್ನು ಸ್ವಾಗತಿಸಬೇಕಾಗಿದೆ ಹಾಗಾಗಿ ಈ ಬಾರಿಯ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಬೇಕು ಎಂದು ತೀರ್ಮಾನಿಸಿದ್ದೇವೆ.


ಅದರಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ ಖ್ಯಾತ ಸಂಗೀತ ನಿರ್ದೇಶಕ ಎಸ್ ಗುರುಕಿರಣ್ ರವರು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಜನರು ವರ್ಷವಿಡೀ ದಣಿವಿನಿಂದ ದುಡಿಯುತ್ತಾರೆ ಹಾಗಾಗಿ ಜನರು ಇಂತಹ ಸಾಂಸ್ಕೃತಿಕ ರಸಮಂಜರಿ ಯು ಸವಿಯನ್ನು ಸವಿಯಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಜಾತ್ರೆಯಲ್ಲಿ ಸಿಸಿ ಟಿವಿ ಮತ್ತು ದ್ರೋಣ್ ಕ್ಯಾಮರಾ ಗಳನ್ನು ಬಳಸಲಾಗುತ್ತದೆ ಯಾರಾದರೂ ಜನರಿಗೆ ಅನಾವಶ್ಯಕ ತೊಂದರೆ ನೀಡಿದರೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸಿದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು .

ಇದು ಅರಸೀಕೆರೆ ಹೋಬಳಿಯ ಜನರ ಜಾತ್ರೆಯಾಗಿದೆ ಈ ಭಾಗದ ಅತಿ ದೊಡ್ಡ ಜಾತ್ರೆ ಇದಾಗಿದ್ದು ಈ ಊರಿನಲ್ಲಿ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಅರಸೀಕೆರೆಯಲ್ಲಿ ಹೋಬಳಿ ಮಟ್ಟದಲ್ಲಿ ಮಾದರಿಯಾಗಿರುವಂತೆ ಅಭಿವೃದ್ಧಿ ಮಾಡಿದ್ದೇನೆ ಈ ಹೋಬಳಿಯು ಮೊದಲು ಬಳ್ಳಾರಿ ಜಿಲ್ಲೆಯಿಂದ ದಾವಣಗೆರೆಗೆ ನಂತರ ಮತ್ತೆ ಬಳ್ಳಾರಿಗೆ ಈಗ ಈ ಹೋಬಳಿಯು ದಾವಣಗೆರೆಯ ವ್ಯಾಪ್ತಿಗೆ ಬಂದಿದೆ ಹಾಗಾಗಿ ಅನುದಾನಗಳು ಬರುವುದು ಸ್ವಲ್ಪ ಕುಂಠಿತವಾಗಿದೆ ಈ ಭಾಗದಲ್ಲಿ ಬಹುತೇಕ ಎಲ್ಲಾ ಕೆರೆಗಳು ತುಂಬಿವೆ ಆದಾಗ್ಯೂ ತುಂಬಿದ ಕೆರೆಗಳು ತುಂಬಿಯೇ ಇರುವಂತೆ ಮತ್ತೆ ನದಿಯಿಂದ ಕೆರೆಗೆ ನೀರನ್ನು ತುಂಬಿಸುವ ಯೋಜನೆಯನ್ನು ಸಹ ಮಾಡುತಿದ್ದೇವೆ ರೈತರು ಸುಖವಾಗಿರಬೇಕು ನಾಡಿನಲ್ಲಿ ರೈತರು ನಕ್ಕರೆ ಜಗವೇ ನಕ್ಕಂತೆ ಎಂದು ಹೇಳಿದರು.

ಯಾರೋ ಬಲ್ಲವರು ನನಗೆ ಹೇಳುತ್ತಿದ್ದರು ಈ ಜಾತ್ರೆ ಉತ್ಸವ ಕಾರ್ತಿಕ ಹಬ್ಬ ಹರಿದಿನಗಳು ಹೆಚ್ಚಾಗಿ ನವಂಬರ್ ಮತ್ತು ಡಿಸೆಂಬರ್ ತಿಂಗಳಿಂದ ಆರಂಭವಾಗುತ್ತವೆ ಎಂದು, ಇದಕ್ಕೆ ಕಾರಣ ಇಷ್ಟೇ ರೈತರು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಎಲ್ಲಾ ಒಕ್ಕಲು ಕಾರ್ಯಗಳನ್ನು ಮುಗಿಸಿ ಕೆಲಸ ಕಾರ್ಯಗಳಿಂದ ಬಿಡುವಿನ ಸಮಯವಿರುತ್ತದೆ ಹಾಗಾಗಿ ಎಲ್ಲಾ ರೈತರುಗಳು ಕೂಡಿ ಖುಷಿಯನ್ನು ಹಂಚಿಕೊಳ್ಳಲು ಮಾಡಿರುವಂತಹ ಕಾರ್ಯಕ್ರಮಗಳೇ ಜಾತ್ರೆ ಕಾರ್ತಿಕ, ಉತ್ಸವ , ತೇರು ಮುಂತಾದವುಗಳಾಗಿವೆ ಎಂದರು ಒಕ್ಕಲು ಮಾಡಿ ಸುಗ್ಗಿಯ ಕಾಲದಲ್ಲಿ ರಾಶಿಯನ್ನ ಹಾಕಿ ಜೀವ ಕಳೆದುಂಬಿ ಇಂತ ಕಾರ್ಯಕ್ರಮಗಳನ್ನ ಮಾಡುತ್ತಿದ್ದರು ಈ ಬಾರಿಯ ಕಾರ್ತಿಕೋತ್ಸವದಂದೇ ದಾವಣಗೆರೆ ಸಂಸದರಾದ ಜಿಎಂ ಸಿದ್ದೇಶ್ವರ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುವುದು ಅಲ್ಲದೆ ಈ ಬಾರಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಸಹ ಬರುತ್ತದೆ ಈ ರಾಮಚಂದ್ರನಿಗೆ ಈ ಕ್ಷೇತ್ರದ ಜನರು ನನಗೆ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಮತ್ತೊಂದು ಬಾರಿ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿದ್ದೇನೆ ಎಂದರು.

ಗ್ರಾಮ ಪಂಚಾಯತಿ ಮಾಜಿ ಸದಸ್ಯ ವೈ ಡಿ ಅಣ್ಣಪ್ಪನವರು ಮಾತನಾಡಿ ಈ ಭಾಗದಲ್ಲಿ ಸುತ್ತಮುತ್ತ ಗ್ರಾಮಗಳಲ್ಲೇ ದಂಡಿನ ದುರುಗಮ್ಮನ ಜಾತ್ರೆಯು ದೊಡ್ಡ ಜಾತ್ರೆ ಯಾಗಿರುತ್ತದೆ ಮೊದಲಿಗೆ ನಾವು ಈ ಜಾತ್ರೆಯನ್ನು ಸರಳವಾಗಿ ಆಚರಿಸುತ್ತಿದ್ದೆವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾಗಲಿ, ಸಂಗೀತ ರಸಮಂಜರಿ ಕಾರ್ಯಕ್ರಮಗಳಾಗಲಿ ಇರಲಿಲ್ಲ ಆದರೆ ಎಸ್ ವಿ ರಾಮಚಂದ್ರಪ್ಪನವರು ಶಾಸಕರಾದ ನಂತರ ಈ ಜಾತ್ರೆಗೆ ಹಬ್ಬ ಉತ್ಸವಕ್ಕೆ ಕಳೆ ಬಂದಿದೆ ಎಂದರಲ್ಲದೆ ದಂಡಿ ದುರ್ಗಮ್ಮನ ಜಾತ್ರೆ ಯಶಸ್ವಿಯಾಗಲು ಜಗಳೂರು ವಿಧಾನಸಭಾ ಕ್ಷೇತ್ರದ ಏಳು ಗ್ರಾಮ ಪಂಚಾಯಿತಿಗಳ ಹಾಗೂ ಹರಪನಹಳ್ಳಿ ತಾಲೂಕಿನ ಸಮಸ್ತ ಜನರ ಸಹಕಾರದ ಕಾರಣದಿಂದಾಗಿಯೇ ಈ ಜಾತ್ರೆ ಪ್ರತಿ ವರ್ಷ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಹಶೀಲ್ದಾರ್ ಶಿವಕುಮಾರ್ ಬಿರಾದರ್ ರವರು ಮಾತನಾಡಿ ಜಾತ್ರೆಯನ್ನು ಸುಸಜ್ಜಿತವಾಗಿ ಜರುಗಲು ಯಾವುದೇ ರೀತಿಯ ತೊಂದರೆಯಾಗದಂತೆ ಕುಂದು ಕೊರತೆಗಳು ಇರದಂತೆ ಮತ್ತು ಸೂಕ್ತವಾದ ಪೋಲಿಸ್ ಬಿಗಿಭದ್ರತೆ ಮೂಲಭೂತ ಸೌಕರ್ಯಗಳನ್ನು ಸೇರಿದಂತೆ ತಾಲೂಕು ಆಡಳಿತ ವತಿಯಿಂದ ವ್ಯವಸ್ಥೆ ಮಾಡಲಾಗುವುದು ಎಂದು ಸಭೆಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪ್ರಶಾಂತ್ ಪಾಟೀಲ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆಂಚನಗೌಡ, ಕವಲಹಳ್ಳಿ ಭರಮಪ್ಪ,ಕೆ .ಆನಂದಪ್ಪ,ಪಣಿಯಾಪುರ ಲಿಂಗರಾಜ್, ಮಂಜುನಾಥಯ್ಯ, ವಿಶ್ವನಾಥಯ್ಯ, ವಕೀಲರಾದ ವೈ.ಟಿ.ಕೊಟ್ರೇಶ್ , ಕಂಬತ್ತಹಳ್ಳಿ ಜಯ್ಯಪ್ಪ,ಸಿದ್ದಪ್ಪ, ಅರಸೀಕೆರೆಯ ಕಂದಾಯ ನಿರೀಕ್ಷಕ ನನ್ಯಸಾಬ್, ಬಸವರಾಜ್ ಇಂಜಿನಿಯರ್, ಕೆಂಚನಗೌಡ,ದ್ಯಾಮನಗೌಡ,ಭರಮನಗೌಡ,ನಿಂಗಜ್ಜ, ಶಿವಯೋಗಿ,ಎಸ್.ಹನುಮಂತಪ್ಪ,ಯರಬಳ್ಳಿ ಸಿದ್ದಪ್ಪ,ಶರಣಪ್ಪ,ಜಾತಪ್ಪ,ಮರಿಯಪ್ಪ, ವೀರೇಶ್ ಕೆರೆಗುಡಿಹಳ್ಳಿ,ಕಲ್ಲಹಳ್ಳಿ ಸುರೇಶ್,ಅಣಜಿಗೇರಿ ಮಲ್ಲಿಕಾರ್ಜುನ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *