Vijayanagara Express

Kannada News Portal

ಹರಪನಹಳ್ಳಿ ಉತ್ಸವಕ್ಕೆ ಶಾಸಕರ ಇಚ್ಚಾ ಶಕ್ತಿಯ ಕೊರತೆಯೇ ಕಾರಣ ? ಜನರು ಆರೋಪ

1 min read

ಹರಪನಹಳ್ಳಿ ಉತ್ಸವಕ್ಕೆ ಶಾಸಕರ ಇಚ್ಚಾ ಶಕ್ತಿಯ ಕೊರತೆಯೇ ಕಾರಣ ? ಜನರು ಆರೋಪ

ವಿಶೇಷ ವರದಿ:ಪಟ್ನಾಮದ ವೆಂಕಟೇಶ್ ಹರಪನಹಳ್ಳಿ

ಹರಪನಹಳ್ಳಿ: ಹೌದು ಹರಪನಹಳ್ಳಿ ಉತ್ಸವಕ್ಕೆ ಶಾಸಕರ ಇಚ್ಛಾಶಕ್ತಿಯ ಕೊರತೆಯೇ ಕಾರಣ ಮತ್ತಿನ್ನೇನು ಅಲ್ಲಎಂದು ಹರಪನಹಳ್ಳಿ ತಾಲೂಕಿನ ಜನರು ಅಪಸ್ವರ ಎತ್ತಿದ್ದಾರೆ .

ಕರ್ನಾಟಕದ ಅನೇಕ ಜಿಲ್ಲಾ ಕೇಂದ್ರಗಳು ತಾಲ್ಲೂಕು ಕೇಂದ್ರಗಳಲ್ಲಿ ಆಯಾ ಊರುಗಳಲ್ಲಿ ಪರಂಪರೆ ಇತಿಹಾಸ ಕಲೆ ವಾಸ್ತುಶಿಲ್ಪ ಸಂಸ್ಕೃತಿ, ಪರಂಪರೆಯನ್ನು ಸಾರುವಂತಹ ಜಾನಪದ ಶೈಲಿಯ ಸೊಗಡನ್ನು ಉಳಿಸಲು ಉತ್ಸವಗಳನ್ನು ಆಚರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಉದಾಹರಣೆಗೆ ಇತ್ತೀಚೆಗೆ ಚಿಕ್ಕಬಳ್ಳಾಪುರ ಉತ್ಸವ ಬೆಂಗಳೂರು ಉತ್ಸವ ಲಕ್ಕುಂಡಿ ಉತ್ಸವ ಬಳ್ಳಾರಿ ಉತ್ಸವ ವಿಜಯನಗರ ಹಂಪಿ ಉತ್ಸವ ಹೀಗೆ ಅನೇಕ ಉತ್ಸವಗಳನ್ನು ನಾಡಿನದ್ಯಂತ ಜನರು ಮಾಡುತ್ತಿರುವಾಗ ಹರಪನಹಳ್ಳಿಯ ಶಾಸಕ ಜಿ ಕರುಣಾಕರ ರೆಡ್ಡಿ ಅವರು ಇವುಗಳೆಲ್ಲವನ್ನು ನೋಡಿದ್ದರೂ, ಕೇಳಿದ್ದರೂ ಇತಿಹಾಸ ಪ್ರೇಮಿಗಳು ಸಾಹಿತಿಗಳು ಬರಹಗಾರರು ಪತ್ರಕರ್ತರು ಇವುಗಳನ್ನು ಗಮನಕ್ಕೆ ತಂದರೂ ಸಹ ಅವರೆಲ್ಲರ ಮಾತನ್ನು ಗಾಳಿಗೆ ತೂರಿ ನಿರ್ಲಕ್ಷ ವಹಿಸಿ ಗುಗ್ಗರ ಒದ್ದುಕೊಂಡು ಮಲಗಿದಂತೆ ಕಾಣುತ್ತಿದೆ ಎಂದು ಜನರು ಚರ್ಚೆ ಆರಂಭಿಸಿದ್ದಾರೆ ಇದಕ್ಕೆ ಶಾಸಕರ ಇಚ್ಛೆ ಶಕ್ತಿಯೇ ಕಾರಣ ಎಂದು ದೂರುತ್ತಿದ್ದಾರೆ.

ಶಾಸಕ ಕರುಣಾಕರ ರೆಡ್ಡಿ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರತಿವರ್ಷಕ್ಕೆ 10 ಬಾರಿಯೂ ಹರಪನಹಳ್ಳಿಗೆ ಬಂದು ಹೋಗಿಲ್ಲ ಎಂದು ಜನ ಆರೋಪಿಸುತ್ತಿದ್ದಾರಲ್ಲದೆ ಹರಪನಹಳ್ಳಿ ಕೇಂದ್ರ ಸ್ಥಾನ ಪಟ್ಟಣಕ್ಕೆ ಇಷ್ಟು ಬಾರಿ ಬಂದಿರುವಾಗ ಇನ್ನ 186 ಹಳ್ಳಿಗಳಲ್ಲಿ ಯಾವ ಹಳ್ಳಿಯನ್ನು ಎಷ್ಟು ಬಾರಿ ನೋಡಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ ಜನರ ಕಷ್ಟ ಸುಖಗಳನ್ನ ಆಲಿಸಲು ತಾಲೂಕು ಪಂಚಾಯಿತಿಯ ಆವರಣದಲ್ಲಿರುವ ಸರ್ಕಾರಿ ಶಾಸಕರ ಜನ ಸಂಪರ್ಕ ಕಚೇರಿಯನ್ನು ಐದು ವರ್ಷದ ಅವಧಿಯಲ್ಲಿ ಒಂದು ಬಾರಿಯೂ ತುಳಿದಿಲ್ಲ ಎಂಬುದು ಜನರ ಬಹುದೊಡ್ಡ ಆರೋಪವಾಗಿದೆ.
ಇವರಿಗಿಂತ ಹಿಂದೆ ಹರಪನಹಳ್ಳಿತಾಲೂಕನ್ನು ಆಳಿದ ಶಾಸಕರೆಲ್ಲರೂ ಈ ಸರ್ಕಾರಿ ಜನಸಂಪರ್ಕ ಕಚೇರಿಯಲ್ಲಿ ಜನರನ್ನು ಸಂಪರ್ಕಿಸುತ್ತಿದ್ದರು ಹೋಗಲಿ ಬಿಡಿ ಇಂತಹ ಸರ್ಕಾರಿ ಕಚೇರಿ ಇದೆ ಎಂಬ ಕನಿಷ್ಠ ಜ್ಞಾನವಾದರೂ ಶಾಸಕರಿಗೆ ಇದೆಯೋ ಇಲ್ಲವೋ ಎಂದು ಹೇಳಲಾಗುತ್ತದೆ.
ತಾವು ಬಂದಾಗ ಹೋದಾಗ ಇರಲಿ ಎಂದು ಉಳಿದುಕೊಳ್ಳಲು ಒಂದು ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದಾರೆ ಈ ಮನೆಯಲ್ಲಿ ಬಿಜೆಪಿ ಪಕ್ಷದ ನಾಲ್ಕು ಬಾವುಟವನ್ನು ಕಟ್ಟಿಕೊಂಡಿದ್ದಾರೆ ಇವೆಲ್ಲವುಗಳನ್ನು ನೋಡಿದರೆ ಹರಪನಹಳ್ಳಿ ತಾಲೂಕಿನ ಜನರನ್ನು ಶಾಸಕ ಕರುಣಾಕರ ರೆಡ್ಡಿ ಅವರು ದಡ್ಡರೆಂದುಕೊಂಡಿರುವರೊ ಏನೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಶಾಸಕ ಕರುಣಾಕರ ರೆಡ್ಡಿಯವರು 5 ವರ್ಷಗಳ ಕಾಲ ಬಳ್ಳಾರಿಯ ತಮ್ಮ ನಿವಾಸದಲ್ಲಿ ಬೆಚ್ಚನೆ ಗುಗ್ಗುರ ಒದ್ದುಕೊಂಡು ಮಲಗಿ ದಿಢೀರನೆ ಚುನಾವಣೆ ಆರು ತಿಂಗಳು ಬಾಕಿ ಇರುವಾಗ ಹರಪನಹಳ್ಳಿಗೆ ಬಂದು ಶಾಸಕರ ನಡೆ ಗ್ರಾಮಗಳ ಕಡೆ ಎಂಬ ಹೊಸ ಯೋಜನೆಯನ್ನು ಆರಂಭಿಸಿದ್ದರು ಇದಕ್ಕೆ ಗ್ರಾಮಗಳಲ್ಲಿ ಜನರ ಪ್ರಬಲವಾದ ಪ್ರತಿರೋಧ ಬಂದಿದ್ದರಿಂದ ಶಾಸಕರು ನಮ್ಮ ಗ್ರಾಮಗಳಿಗೆ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಈಗ ಹಳ್ಳಿ ಕಡೆ ಶಾಸಕರ ನಡೆ ಮುಂತಾದಕಡೆ ,ಆ ಕಡೆ ,ಈ ಕಡೆ ಇಂತಹ ನಾಟಕದ ಈ ಕಡೆಗಳನ್ನು ನಿಲ್ಲಿಸಬೇಕು ಎಂದು ಜನರು ಪರೋಕ್ಷವಾಗಿ ಹೇಳಿರುವವರು ಏನೋ ಗೊತ್ತಿಲ್ಲ ಅದಕ್ಕಾಗಿ ಶಾಸಕರು ಈ ಕಾರ್ಯಕ್ರಮವನ್ನು ಹತ್ತೇ ಪಂಚಾಯಿತಿಗೆ ಸೀಮಿತಗೊಳಿಸಿ ಅಲ್ಲಿಗೆ ನಿಲ್ಲಿಸಿದ್ದು ಎಲ್ಲರಿಗೂ ಗೊತ್ತೇ ಇದೆ .

ಗ್ರಾಮಗಳಲ್ಲಿ ಜನರು ಶಾಸಕರಿಗೆ ಬೈಗುಳದ ಮಳೆಯನ್ನೇ ಸುರಿಸಲು ಆರಂಭಿಸಿದ್ದರಿಂದ ಒಂದೇ ದಿನಕ್ಕೆ 14, 15 ಕಾಮಗಾರಿಗಳ ಭೂಮಿ ಪೂಜೆ ,ಉದ್ಘಾಟನೆಯನ್ನು ಆಯೋಜಿಸಲಾಗಿತ್ತು ಏಕೆಂದರೆ ಗ್ರಾಮಗಳಲ್ಲಿ ಜನರು ಸಮಯ ಸಿಕ್ಕರೆ ತಮಗೆ ತರಾಟೆ ತೆಗೆದುಕೊಳ್ಳುವರು ಎಂಬ ಭಯ ಅವರಿಗೆ ಕಾಡುತ್ತಿತ್ತು ಹಾಗಾಗಿಯೇ ಅವರು ಅತುರಾತರವಾಗಿ ಕಾಮಗಾರಿಗಳನ್ನ ಎದ್ದೆನೋ ಬಿದ್ದೆನೋ ಎಂಬಂತೆ ಭೂಮಿ ಪೂಜೆ ಮಾಡುತ್ತ ಸಾಗಿದರೆ ನಮ್ಮ ಬಳಿ ಯಾರೂ ಸುಳಿಯುವುದಿಲ್ಲ ಕಾರ್ಯಕರ್ತರು ಹಾಗೂ ಜನರು ತಮ್ಮ ಕಷ್ಟವನ್ನು ಹೇಳಿಕೊಳ್ಳಲಾಗುವುದಿಲ್ಲ ಎಂಬ ದೂರಾಲೋಚನೆಯನ್ನು ಹೊಂದಿ ಈ ರೀತಿಯಾಗಿ ಆತುರಾತುರದ ಪೂಜೆಗಳನ್ನು ನೆರವೇರಿಸಿ ಬಳ್ಳಾರಿ ಬೀಳುವಂತೆ ಹೋಗುತ್ತಿದ್ದರು.
ಸ್ವಲ್ಪ ಸಮಯವಾದರೆ ಸಾಕು ಕೊಟ್ಟರು ಸರ್ಕಲ್ ನಲ್ಲಿಯೇ ತಮ್ಮ ಕಾರಿನಲ್ಲಿ ಹತ್ತಿದ್ದ ಕಾರ್ಯಕರ್ತರನ್ನ ಅಲ್ಲಿಯೇ ಇಳಿಸಿ ಬಳ್ಳಾರಿ ಕಡೆ ಮುಖ ಮಾಡುತ್ತಿದ್ದುದು ಎಲ್ಲರೂ ಗೊತ್ತಿರುವ ವಿಚಾರವೇ ಆಗಿದೆ .
ಹೋಗಲಿ ಬಿಡಿ ಅದೇನೇ ಇರಲಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರಿಗೆ ಚುನಾವಣೆ , ಕಾಮಗಾರಿಗಳ ಭೂಮಿ ಪೂಜೆ ,ಆತುರ ಆತುರದ ಉದ್ಘಾಟನೆ, ಚುನಾವಣೆ ಸಂದರ್ಭದಲ್ಲಿ ಚುನಾವಣೆ ಬಿಟ್ಟರೆ ಸಾಹಿತ್ಯ, ಸಂಗೀತ, ಕಲೆ ವಾಸ್ತುಶಿಲ್ಪ ,ಜಾನಪದ ,ಪರಂಪರೆ, ಇತಿಹಾಸ , ಪ್ರಾಚ್ಯವಸ್ತು ಸ್ಥಳಗಳು ,ಐತಿಹಾಸಿಕ ಸ್ಮಾರಕಗಳು ಇತಿಹಾಸ ಪುರುಷರು ಇಂತವುಗಳ ಬಗ್ಗೆ ಒಲವಿನ ಪ್ರಶ್ನೆ ಇರಲಿ ಕನಿಷ್ಠ ಕಾಳಜಿಯೂ ಅವರಿಗಿಲ್ಲ ಎಂದೇ ಹೇಳಬಹುದು ಏಕೆಂದರೆ ತಾವು ಎರಡು ಬಾರಿ ಶಾಸಕರಾಗಿದ್ದಾಗ ಈ ತಾಲೂಕಿಗೆ ಅವರ ಕೊಡುಗೆ ಎಲ್ಲಾ ಕ್ಷೇತ್ರಗಳಿಗೆ ಶೂನ್ಯ ಎಂದು ಹೇಳಿದರೆ ತಪ್ಪಾಗಲಾರದು .

 

 

Leave a Reply

Your email address will not be published. Required fields are marked *